ಮರಡಿ ಬಸವೇಶ್ವರ ಮಹಾರಥೋತ್ಸವ
ಶಿವಲಿಂಗ ದೇವರು, ವೇದಮೂರ್ತಿ ವಿಶ್ವನಾಥ ಹಿರೇಮಠ ರಥಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು.
Team Udayavani, Nov 23, 2021, 6:13 PM IST
ಬೈಲಹೊಂಗಲ: ಉತ್ತರ ಕರ್ನಾಟಕದ ಅತೀ ದೊಡ್ಡ ಜಾತ್ರೆಗಳಲ್ಲಿ ಒಂದಾದ ಪಟ್ಟಣದ ಇತಿಹಾಸ ಪ್ರಸಿದ್ದ ಮರಡಿ ಬಸವೇಶ್ವರ ದೇವಸ್ಥಾನದ ಮಹಾರಥೋತ್ಸವ 50 ಸಾವಿರಕ್ಕೂ ಅಧಿಕ ಭಕ್ತ ಸಮೂಹ ಮಧ್ಯೆ ಸೋಮವಾರ ಸಂಜೆ ವಿಜೃಂಭಣೆಯಿಂದ ನೆರವೇರಿತು.
ಪಟ್ಟಣದ ಜವಳಿ ಕೂಟದಿಂದ ಹರ, ಹರ ಮಹಾದೇವ, ಬಸವೇಶ್ವರ ಮಹಾರಾಜಕೀ ಜೈ ಎಂಬ ಜಯ ಘೋಷಗಳೊಂದಿಗೆ ಆರಂಭವಾದ 80 ಅಡಿ ಎತ್ತರದ ಮಹಾರಥೋತ್ಸವ ಬಜಾರ ರಸ್ತೆ, ಬೆಲ್ಲದ ಕೂಟ, ಉಪ್ಪಿನ ಕೂಟ ನಂತರ ಮೇದಾರ ಗಲ್ಲಿ ಮಾರ್ಗವಾಗಿ 2 ಕೀ.ಮೀ. ಸಂಚರಿಸಿ ದೇವಸ್ಥಾನಕ್ಕೆ ಬಂದು ತಲುಪಿತು. ದಾರಿಯುದ್ದಕ್ಕೂ ಭಕ್ತ ಸಮೂಹ ತುಂಬಿ ತುಳುಕುತ್ತಿತ್ತು. ಕರೊನಾ ಹಾವಳಿ ಇಳಿಮುಖವಾಗಿದ್ದರಿಂದ ಜಾತ್ರೆಯ ವೈಭವ ಇಮ್ಮಡಿಸಿತ್ತು.
ಬಸವೇಶ್ವರರು, ಮಹಾನ್ ಪುರುಷರ ಭಾವಚಿತ್ರ, ತೆಂಗು, ಬಾಳೆ, ಕಬ್ಬು, ಕೇಸರಿ, ಬಿಳಿ ಧ್ವಜ, ರುದ್ರಾಕ್ಷಿ, ಶೆಂಗಾ, ಹತ್ತಿ, ಬಣ್ಣದ ಹಾಳೆ, ವಿವಿಧ ಪುಷ್ಪಮಾಲೆ, ಮುತ್ತಿನ ಹಾರದಿಂದ ರಥವು ಕಂಗೊಳಿಸುತ್ತಿತ್ತು. ರಥೋತ್ಸವಕ್ಕೆ ಭಕ್ತರು ಶ್ರದ್ಧೆ, ಭಕ್ತಿಯಿಂದ ಕೈ ಮುಗಿದು ಹೂವು, ಬಾಳೆಹಣ್ಣು, ಖಾರೀಕ್ ಸಮರ್ಪಿಸಿದರು. ರಥೋತ್ಸವ ಸಾಗಿದ ಮಾರ್ಗದಲ್ಲಿ ಭಕ್ತರು ನೀರುಣಿಸಿ ಗೌರವ ಸಲ್ಲಿಸಿದರು. ರಥದಲ್ಲಿ ಬಸವಣ್ಣ ಹಾಗೂ ಅಕ್ಕಮಹಾದೇವಿ ಮೂರ್ತಿಗಳು, ಶರಣರ ವಚನಗಳನ್ನು
ಇರಿಸಲಾಗಿತ್ತು.
ಜಿಲ್ಲೆ, ರಾಜ್ಯ, ಹೊರ ರಾಜ್ಯಗಳಿಂದ ದೇವಸ್ಥಾನಕ್ಕೆ ಬಂದ ಅಪಾರ ಸಂಖ್ಯೆಯ ಭಕ್ತರು ಬೆಳಗ್ಗೆಯಿಂದ ರಾತ್ರಿಯವರಿಗೆ ದೇವಸ್ಥಾನಕ್ಕೆ ತೆರಳಿ ಶ್ರೀ ಮರಡಿಬಸವೇಶ್ವರರ ದರ್ಶನ ಪಡೆದುಕೊಂಡರು. ಗಾಳಿಮರಡಿ ಕುಟುಂಬದ ಅರ್ಚಕರಾದ ರುದ್ರಯ್ಯ, ಶಿವಲಿಂಗಯ್ಯ ಪೂಜಾ ವಿಧಿ ವಿಧಾನ ನಡೆಸಿದರು. ಶಾಖಾ ಮೂರುಸಾವಿರಮಠದ ಪ್ರಭುನೀಲಕಂಠ ಸ್ವಾಮೀಜಿ, ಶಿವಲಿಂಗ ದೇವರು, ವೇದಮೂರ್ತಿ ವಿಶ್ವನಾಥ ಹಿರೇಮಠ ರಥಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು.
ಮಹಾಂತೇಶ ಮೆಟಗುಡ್ಡ ಕುಟುಂಬಸ್ಥರು ಪದ್ಧತಿಯಂತೆ ಪೂಜೆ ಸಲ್ಲಿಸಿದರು. ಕಾಡಾ ಅಧ್ಯಕ್ಷ ಡಾ. ವಿಶ್ವನಾಥ ಪಾಟೀಲ, ಶಾಸಕ ಮಹಾಂತೇಶ ಕೌಜಲಗಿ, ಪುರಸಭೆ ಅಧ್ಯಕ್ಷ ಬಾಬು ಕುಡಸೋಮಣ್ಣವರ, ಸಣ್ಣಬಸಪ್ಪ ಕುಡಸೋಮಣ್ಣವರ, ಗುರುಪುತ್ರಪ್ಪ ಹೊಸಮನಿ, ಜಗದೀಶ ಕೋತಂಬ್ರಿ, ಶಿವಪುತ್ರಪ್ಪ ತಟವಟಿ, ಶಂಕರೆಪ್ಪ ತುರಮರಿ, ಶಂಕರೆಪ್ಪ ಯಡಳ್ಳಿ, ಮಹಾಂತೇಶ ಅಕ್ಕಿ, ಮಹಾಂತೇಶ ಹೊಸಮನಿ, ಮಹೇಶ ಹರಕುಣಿ ಈಶ್ವರ ಕೊಪ್ಪದ, ಸುಭಾಷ ತುರಮರಿ,
ವೀರುಪಾಕ್ಷ ವಾಲಿ, ಅಜ್ಜಪ್ಪ ಹೊಸೂರ, ಮಹಾಂತೇಶ ತೋಟಗಿ, ಶಿವಾನಂದ ಇಂಚಲ, ಮಲ್ಲಿಕಾರ್ಜುನ ಕಮತಗಿ, ಬಸವರಾಜ ಇಂಚಲ, ರವಿ ಲಕ್ಕನ್ನವರ, ಬಸವರಾಜ ಜವಳಿ, ಬಾಬುಸಾಬ ಸುತಗಟ್ಟಿ ಸೇರಿದಂತೆ ಸಹಸ್ರಾರು ಜನ ಸಂಖ್ಯೆಯಲ್ಲಿ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.
ಡಿವೈಎಸ್‌ಪಿ ಶಿವಾನಂದ ಕಟಗಿ, ಸಿಪಿಐ ಉಳವಪ್ಪ ಸಾತೆನಹಳ್ಳಿ ನೇತೃತ್ವದಲ್ಲಿ ಬೈಲಹೊಂಗಲ: ಶ್ರೀ ಮರಡಿ ಬಸವೇಶ್ವರ ಜಾತ್ರಾ ಮಹೋತ್ಸವದ ಮಹಾರಥೋತ್ಸವ ಅದ್ದೂರಿಯಾಗಿ ಜರುಗಿತು. 50 ಸಿಬ್ಬಂದಿ ಬಿಗಿ ಪೊಲೀಸ್ ಬಂದೊಬಸ್ತಿ ಮಾಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬೆಳಗಾವಿ: ಮಾನವ ಕಳ್ಳ ಸಾಗಾಣಿಕೆ-ಜೀತ ಪದ್ಧತಿ ದೊಡ್ಡ ಸಮಸ್ಯೆ
Belagavi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ
Belagavi: ಎಸ್‌ಡಿಎ ರುದ್ರಣ್ಣ ಕೇಸ್: ಮೂವರು ಆರೋಪಿಗಳಿಗೆ ನಿರೀಕ್ಷಣಾ ಜಾಮೀನು
Belagavi: ಸಿಎಂ ಮುಟ್ಟೋಕೆ ಆಗುತ್ತಾ…: ಸಿದ್ದರಾಮಯ್ಯ ಹೇಳಿಕೆಗೆ ವ್ಯಂಗ್ಯವಾಡಿದ ಸೋಮಣ್ಣ
Assembly Election: “ಮಹಾ’ ಅಖಾಡದಲ್ಲಿ ಕರುನಾಡ ನಾಯಕರ ಹವಾ!
MUST WATCH
ಹೊಸ ಸೇರ್ಪಡೆ
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.