ಬೆಳಗಾವಿ ಪಾಲಿಕೆಗೆ ಕನ್ನಡಿಗ ಮೇಯರ್
Team Udayavani, Mar 2, 2018, 6:00 AM IST
ಬೆಳಗಾವಿ: ಮರಾಠಿ ಭಾಷಿಕ ಸದಸ್ಯರ ಬಹುಮತವಿದ್ದರೂ ಮೀಸಲು ಭಾಗ್ಯ ಒಲಿದು ಬಂದಿದ್ದರಿಂದ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಕನ್ನಡಿಗರಾದ ಬಸಪ್ಪ ಸಿದ್ದಪ್ಪ ಚಿಕ್ಕಲದಿನ್ನಿ ಮೇಯರ್ ಆಗಿ ಅವಿರೋಧ ಆಯ್ಕೆಯಾಗಿದ್ದಾರೆ. ಮರಾಠಿ ಭಾಷಿಕ ಸದಸ್ಯೆಯಾಗಿದ್ದರೂ ಮೂಲತಃ ಕನ್ನಡದವರಾದ ಮಧುಶ್ರೀ ಅಪ್ಪಾಸಾಹೇಬ ಪೂಜಾರಿ 8 ಮತಗಳ ಅಂತರದಿಂದ ಉಪಮೇಯರ್
ಆಗಿ ಆಯ್ಕೆಯಾದರು. ಪಾಲಿಕೆ ಸಭಾಂಗಣದಲ್ಲಿ ಗುರುವಾರ ನಡೆದ 20ನೇ ಅವಧಿಯ ಮೇಯರ್-ಉಪಮೇಯರ್ ಚುನಾವಣೆಯಲ್ಲಿ ಪ್ರಾದೇಶಿಕ ಆಯುಕ್ತ ಪಿ.ಎ. ಮೇಘನ್ನವರ ಈ ಇಬ್ಬರ ಹೆಸರನ್ನು ಘೋಷಿಸಿದರು. ಮೇಯರ್ ಸ್ಥಾನ ಎಸ್‌ಟಿ ಮೀಸಲು ಹಾಗೂ ಉಪಮೇಯರ್ ಸ್ಥಾನಕ್ಕೆ ಪ್ರವರ್ಗ ಆ ಮಹಿಳೆಗೆ ನಿಗದಿ ಪಡಿಸಲಾಗಿತ್ತು. ಎಸ್‌ಟಿ ಮೀಸಲು ಕನ್ನಡ ಸದಸ್ಯರಲ್ಲಿ ಬಸಪ್ಪ ಚಿಕ್ಕಲದಿನ್ನಿ ಹಾಗೂ ಸುಚೇತಾ ಗಂಡಗುದರಿ ಇದ್ದರು.
ಚಿಕ್ಕಲದಿನ್ನಿ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆಯಾಯಿತು. ಉಪಮೇಯರ್ ಸ್ಥಾನಕ್ಕೆ ಐವರು ನಾಮಪತ್ರ ಸಲ್ಲಿಕೆ ಮಾಡಿದ್ದು, ಇಬ್ಬರು ಮರಾಠಿ ಭಾಷಿಕ ಸದಸ್ಯರು ಹಿಂಪಡೆದರು. ನಂತರ ಕನ್ನಡದ ಶಾಂತಾ ಉಪ್ಪಾರ ಹಾಗೂ ಮರಾಠಿಯ ಮಧುಶ್ರೀ ಪೂಜಾರಿ ಮಾತ್ರ ಕಣದಲ್ಲಿ ಉಳಿದರು. ಹೀಗಾಗಿ ಮತದಾನ ನಡೆದು ಶಾಂತಾ 23 ಮತ ಪಡೆದರೆ, ಮಧುಶ್ರೀ 31 ಮತ ಪಡೆಯುವ ಮೂಲಕ ಗೆಲುವು ಸಾಧಿಸಿದರು. ಮತ ಚಲಾಯಿಸಬೇಕಾದ ಸಂಸದರಾದ ಸುರೇಶ ಅಂಗಡಿ, ಪ್ರಕಾಶ ಹುಕ್ಕೇರಿ, ಶಾಸಕರಾದ ಸತೀಶ ಜಾರಕಿಹೊಳಿ, ಫಿರೋಜ ಸೇಠ ಹಾಗೂ ಸಂಜಯ ಪಾಟೀಲ ಗೈರು ಹಾಜರಾಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belagavi: ತಹಶೀಲ್ದಾರ್ ಮನೆ ಮೇಲೆ ಲೋಕಾಯುಕ್ತ ದಾಳಿ
ISRO: ಇಸ್ರೋ ನೂತನ ಅಧ್ಯಕ್ಷರಾಗಿ ವಿ.ನಾರಾಯಣನ್ ನೇಮಕ: ಚಿನ್ನದ ಪದಕ ವಿಜೇತ VN ಪರಿಚಯ…
Sandalwood: ಸ್ಪಾನ್ಸರ್ಸ್ ಇದಿದ್ರೆ ನಾನ್ಯಾಕೆ 12 ವರ್ಷ ಕಷ್ಟಪಡಬೇಕಿತ್ತು: ರಚಿತಾ ರಾಮ್
Bengaluru: ಪಾಲುದಾರನ ಕಿರುಕುಳ: ಉದ್ಯಮಿ ಆತ್ಮಹತ್ಯೆ
Atul Subhash Case: ಮೊಮ್ಮಗನನ್ನು ಟೆಕಿ ಅತುಲ್ ತಾಯಿಯ ಸುಪರ್ದಿಗೆ ವಹಿಸಲು ಸುಪ್ರೀಂ ನಕಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.