ಮಾನಸಿಕ ಸ್ಥಿರತೆ ರಸ್ತೆ ಸುರಕ್ಷತೆಗೆ ಆಧಾರ: ಅಂಬಿಕಾ

75 ಬೈಕ್‌ಗಳ ರ್ಯಾಲಿ ಕಾರ್ಯಕ್ರಮ ; ­ಪಠ್ಯದಲ್ಲಿಯೂ ಸಂಚಾರ ನಿಯಮ ಪಾಲನೆ ವಿಷಯ ಸೇರಿಸಿ: ಡಿಸಿಪಿ

Team Udayavani, Jun 2, 2022, 4:28 PM IST

25

ಬೆಳಗಾವಿ: ಆಂತರಿಕವಾಗಿ ಶೇಖರಣೆಯಾಗಿರುವ ಪಂಚವಿಕಾರಗಳಿಂದ ಮಾನಸಿಕ ಸ್ಥಿರತೆ ಕಡಿಮೆಯಾಗಿದೆ. ಪ್ರತಿ ಸಿಗ್ನಲ್‌ ದೀಪದ ಕೆಳಗೆ ಒಂದೆರಡು ನಿಮಿಷ ಪರಮಾತ್ಮನ ನೆನಪು ಮಾಡಿದಾಗ ಮಾನಸಿಕ ಸ್ಥಿರತೆಗೆ ಅನುಕೂಲವಾಗುತ್ತದೆ. ಮಾನಸಿಕ ಸ್ಥಿರತೆ ರಸ್ತೆ ಸುರಕ್ಷತೆಗೆ ಆಧಾರ ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಬೆಳಗಾವಿ ಉಪವಲಯ ಸಂಚಾಲಕಿ ರಾಜಯೋಗಿನಿ ಬಿ.ಕೆ. ಅಂಬಿಕಾ ಹೇಳಿದರು.

ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವ ನಿಮಿತ್ತ ಬುಧವಾರ ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಲು ಹಮ್ಮಿಕೊಂಡಿದ್ದ 75 ಬೈಕ್‌ಗಳ ರ್ಯಾಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಡಿಸಿಪಿ ಪಿ.ವಿ. ಸ್ನೇಹಾ ಬೈಕ್‌ ರ್ಯಾಲಿಗೆ ಚಾಲನೆ ನೀಡಿ ಮಾತನಾಡಿ, ನಾಗರಿಕ ನಿಯಮಗಳು ಪಾಲನೆಯಾಗಬೇಕು. ಪಠ್ಯಪುಸ್ತಕಗಳಲ್ಲಿಯೂ ಸಂಚಾರ ನಿಯಮ ಪಾಲನೆ ವಿಷಯ ಸೇರಿಸಬೇಕು. ಅಂತಃಕರಣ ಶುದ್ಧಿಯಿಂದ ಅಪಘಾತಗಳ ಸಂಖ್ಯೆ ಕಡಿಮೆ ಮಾಡಲು ಸಾಧ್ಯ. ರಸ್ತೆ ನಿಯಮ ಇರುವುದು ನಾಗರಿಕ ಸುರಕ್ಷತೆಗಾಗಿ. ಪೊಲೀಸರಿಗೆ ನೀಡುವ ಸಹಕಾರ ಉತ್ತಮ ನಗರ ನಿರ್ಮಾಣಕ್ಕೆ ಆಧಾರ ಎಂದರು.

ರಸ್ತೆ ಸಾರಿಗೆ ಸಂಸ್ಥೆ ವಿಭಾಗೀಯ ನಿಯಂತ್ರಕ ಪಿ.ವೈ. ನಾಯಕ್‌ ಮಾತನಾಡಿ, ನಾಗರಿಕ ಸಂಸ್ಕೃತಿ, ಸದ್ಭಾವನೆಗಳು ಸುಗಮ ಜೀವನಕ್ಕೆ ಆಧಾರ. ಮನಸ್ಸಿನ ಏಕಾಗ್ರತೆಯಿಂದ ಗಡಿಬಿಡಿ ಜೀವನಕ್ಕೆ ತಡೆ ನೀಡುತ್ತದೆ. ರಸ್ತೆ ಸುರಕ್ಷತೆಯಿಂದ ಅಪಘಾತ ನಿಯಂತ್ರಣಕ್ಕೆ ಬ್ರಹ್ಮಕುಮಾರಿಯರ ಕೊಡುಗೆ ದೊಡ್ಡದು ಎಂದರು.

ಭಾರತೀಯ ಜೀವ ವಿಮಾ ನಿಗಮದ ಹಿರಿಯ ವಿಭಾಗಾಧಿಕಾರಿ ಅಜಿತ್‌ ವಾರಕೇರಿ ಮಾತನಾಡಿ, ಬೇರೆಯವರಿಗೆ ಹೇಳುವ ಬದಲು ಪ್ರತಿ ಕುಟುಂಬದಲ್ಲಿ ಬದಲಾವಣೆಯಾದರೆ ಜಗತ್ತು ಬದಲಾಗಲು ಸಾಧ್ಯ. ಭವಿಷ್ಯಕ್ಕಾಗಿ ವಿಮೆ ಪಾಲಿಸಿ ಹೊಂದುವುದರಿಂದ ಅನೇಕ ಸಮಸ್ಯೆ ನಿವಾರಣೆಯಾಗುತ್ತವೆ ಎಂದರು.

ರಾಜಯೋಗಿನಿ ಬಿ.ಕೆ. ಮೀರಾಜಿ ಹಾಗೂ ಬಿ.ಕೆ. ಸುಲೋಚನಾ ಮಾತನಾಡಿ, ರಾಜಯೋಗ ಅಭ್ಯಾಸ ಶ್ರೇಷ್ಠ ಹಾಗೂ ಸುರಕ್ಷತಾ ಜೀವನಕ್ಕೆ ಆಧಾರ. ಮುಂದೆ ಬರಲಿರುವ ಸುವರ್ಣ ಯುಗದಲ್ಲಿ ಅಪಘಾತ ಮುಕ್ತ ಪ್ರಪಂಚವಾಗಲಿದೆ ಎಂದರು.

ಬಿ.ಕೆ. ಪ್ರತಿಭಾ ಪ್ರಾಸ್ತಾವಿಕ ಭಾಷಣ ಮಾಡಿದರು. ರ್ಯಾಲಿಯು ಮಹಾಂತೇಶ ನಗರ, ಚನ್ನಮ್ಮ ವೃತ್ತ, ಶಾಸ್ತ್ರಿ ನಗರ, ಶಹಾಪುರ, ಭಾಗ್ಯನಗರ, ಅನಗೋಳ, ಚನ್ನಮ್ಮನಗರ, ಟಿಳಕವಾಡಿ, ವಿಜಯನಗರ, ಹನುಮಾನನಗರ, ಶಾಹೂನಗರ, ರಾಮತೀರ್ಥನಗರ ಭಾಗಗಳಲ್ಲಿ ಸಂಚರಿಸಿ ಜಾಗೃತಿ ಮೂಡಿಸಿತು. ಕಾರ್ಯಕ್ರಮದಲ್ಲಿ ಬಿಕೆ ವಿದ್ಯಾ, ಬಿಕೆ ಮಹಾದೇವಿ, ಬಿಕೆ ರೂಪ, ಬಿಕೆ ಮೀನಾಕ್ಷಿ, ಬಿಕೆ ದತ್ತಾತ್ರೇಯ, ಬಿಕೆ ಮನೋಹರ, ಬಿಕೆ ರಾಜೇಂದ್ರ ಗೋಟಡಕಿ ಇತರರಿದ್ದರು.

ಟಾಪ್ ನ್ಯೂಸ್

DK–BJP-Protest

Mangaluru: ತುಳುನಾಡಿನ ದೈವ-ದೇವರ ಜಾಗ ಉಳಿಸಲು ಹೋರಾಟ: ಸಂಸದ ಚೌಟ

Kharge

Adani ಕುಟುಂಬ ವಶಕ್ಕೆ ಪಡೆದು ತನಿಖೆ ನಡೆಸಲಿ : ಖರ್ಗೆ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚUdupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

ಬೈಡೆನ್‌ “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು

Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Belgavi-Roberry

Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!

ಬೆಳಗಾವಿ-ಐಫೋನ್‌ಗಾಗಿ ನಡೆಯಿತಾ ಯುವಕನ ಹತ್ಯೆ? ಪೊಲೀಸರಿಂದ ತೀವ್ರ ತನಿಖೆ

ಬೆಳಗಾವಿ-ಐಫೋನ್‌ಗಾಗಿ ನಡೆಯಿತಾ ಯುವಕನ ಹತ್ಯೆ? ಪೊಲೀಸರಿಂದ ತೀವ್ರ ತನಿಖೆ

ಬೆಳಗಾವಿ: ಸಿಎಂ ಸಿದ್ದರಾಮಯ್ಯಗೆ ಬೆಳಗಾವಿ ಅಧಿವೇಶನವೇ ಕೊನೆ-ಬಿ.ವೈ ವಿಜಯೇಂದ್ರ

ಬೆಳಗಾವಿ: ಸಿಎಂ ಸಿದ್ದರಾಮಯ್ಯಗೆ ಬೆಳಗಾವಿ ಅಧಿವೇಶನವೇ ಕೊನೆ-ಬಿ.ವೈ ವಿಜಯೇಂದ್ರ

Belagavi: ಮರಕ್ಕೆ ಕ್ರೂಸರ್‌ ಢಿಕ್ಕಿ: ಸ್ಥಳದಲ್ಲೇ ಮೂವರ ಸಾವು

Belagavi: ಮರಕ್ಕೆ ಕ್ರೂಸರ್‌ ಢಿಕ್ಕಿ: ಸ್ಥಳದಲ್ಲೇ ಮೂವರ ಸಾವು

vij

Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Suside-Boy

Karkala: ಬೋಳ ಗ್ರಾಮದ ವ್ಯಕ್ತಿ ಆತ್ಮಹತ್ಯೆ

Suside-Boy

Mudubidre: ಅಂತಿಮ ಬಿಬಿಎಂ ವಿದ್ಯಾರ್ಥಿ ಆತ್ಮಹತ್ಯೆ

Suside-Boy

Belthangady: ಕಲ್ಮಂಜ: ರಿಕ್ಷಾ ಚಾಲಕ ಆತ್ಮಹತ್ಯೆ

DK–BJP-Protest

Mangaluru: ತುಳುನಾಡಿನ ದೈವ-ದೇವರ ಜಾಗ ಉಳಿಸಲು ಹೋರಾಟ: ಸಂಸದ ಚೌಟ

Suside-Boy

Punjalakatte: ಕೊಯಿಲದ ವ್ಯಕ್ತಿ ಹಾಸನದಲ್ಲಿ ನಿಗೂಢ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.