ಎಂಇಎಸ್ ಅಭ್ಯರ್ಥಿಗೆ ಮರಾಠಿಗರಿಂದ ತರಾಟೆ
Team Udayavani, May 3, 2018, 7:40 AM IST
ಬೆಳಗಾವಿ: ಬೆಳಗಾವಿ ಉತ್ತರ ಮತಕ್ಷೇತ್ರದಲ್ಲಿ ಮತ ಯಾಚಿಸಲು ಬಂದ ಮಹಾರಾಷ್ಟ್ರ ಏಕೀಕರಣ ಸಮಿತಿ ಅಭ್ಯರ್ಥಿಯನ್ನು ಮರಾಠಿ ಭಾಷಿಕರೇ ತರಾಟೆಗೆ ತೆಗೆದುಕೊಂಡು ವಾಪಸ್ ಕಳುಹಿಸಿದ ಘಟನೆ ಬುಧವಾರ ನಡೆದಿದೆ.
ಉತ್ತರ ಕ್ಷೇತ್ರದ ಶಿವಾಜಿ ನಗರದಲ್ಲಿ ಬುಧವಾರ ಮಧ್ಯಾಹ್ನ ಮತ ಕೇಳಲು ಬಂದ ಎಂಇಎಸ್ ಅಭ್ಯರ್ಥಿ ಬಾಳಾ ಸಾಹೇಬ ಕಾಕತಕರಗೆ ಭಾರೀ ಮುಖ ಭಂಗವಾಗಿದೆ. ಮರಾಠಿ ಭಾಷಿಕರೇ ಹೆಚ್ಚಾಗಿ ಇರುವ ಶಿವಾಜಿ ನಗರಕ್ಕೆ ಬಂದ ಅಭ್ಯರ್ಥಿಯನ್ನು ಜನ ತಡೆದು ಪ್ರಚಾರಕ್ಕೆ ಬರದಂತೆ ತರಾಟೆಗೆ ತೆಗೆದುಕೊಂಡು ಅಲ್ಲಿಂದ ಚಲೇಜಾವ್, ಚಲೇಜಾವ್ ಎಂದು ಘೋಷಣೆ ಕೂಗಿ ವಾಪಸ್ ಕಳುಹಿಸಿದರು.
ಎಂಇಎಸ್ ಅಭ್ಯರ್ಥಿ ಎಂದು ಗಡಿ ವಿಷಯ ತೆಗೆದುಕೊಂಡು ಬಂದು ಜನ ರನ್ನು ಮೂರ್ಖರನ್ನಾಗಿ ಮಾಡುತ್ತಿದ್ದೀರಿ. ಬೆಳಗಾವಿ ನಗರದಲ್ಲಿ ಹಿಂದೂ-ಮುಸ್ಲಿಂ ಗಲಭೆ ನಡೆದಾಗ ನೀವು ಮಲಗಿಕೊಂಡಿ ದ್ದೀರಾ? ಆ ಶಾಸಕ ಸಂಭಾಜಿ ಪಾಟೀಲ ಒಂದು ಸಲವೂ ಹಿಂದೂ ಯುವಕರ ಪರ ಬಂದು ನಿಂತಿಲ್ಲ. ಈಗ ಓಟ್ ಕೇಳ್ಳೋಕೆ ಬಂದಿದ್ದೀರಾ ಎಂದು ತರಾಟೆಗೆ ತೆಗೆದುಕೊಂಡರು.
ಬೆಳಗಾವಿಯ ಶಿವಾಜಿ ನಗರಕ್ಕೆ ಮತಯಾಚಿಸಲು ಬಂದ ಎಂಇಎಸ್ ಅಭ್ಯರ್ಥಿಯನ್ನು ಮರಾಠಿ ಭಾಷಿಕರು ತರಾಟೆಗೆ ತೆಗೆದುಕೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!
ಬೆಳಗಾವಿ: ಮಾನವ ಕಳ್ಳ ಸಾಗಾಣಿಕೆ-ಜೀತ ಪದ್ಧತಿ ದೊಡ್ಡ ಸಮಸ್ಯೆ
Belagavi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ
Belagavi: ಎಸ್‌ಡಿಎ ರುದ್ರಣ್ಣ ಕೇಸ್: ಮೂವರು ಆರೋಪಿಗಳಿಗೆ ನಿರೀಕ್ಷಣಾ ಜಾಮೀನು
Belagavi: ಸಿಎಂ ಮುಟ್ಟೋಕೆ ಆಗುತ್ತಾ…: ಸಿದ್ದರಾಮಯ್ಯ ಹೇಳಿಕೆಗೆ ವ್ಯಂಗ್ಯವಾಡಿದ ಸೋಮಣ್ಣ
MUST WATCH
ಹೊಸ ಸೇರ್ಪಡೆ
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
Kasargod: ನಾಟಕ ತಂಡ ಸಂಚರಿಸುತ್ತಿದ್ದ ಬಸ್ ಮಗುಚಿ ಇಬ್ಬರು ನಟಿಯರ ಸಾವು
Kasaragod: ಎಡನೀರು ಶ್ರೀ ವಿಷ್ಣುಮಂಗಲ ದೇವಸ್ಥಾನದಿಂದ ಕಳವು; ಆರೋಪಿಯ ಬಂಧನ
Kumble: ಕುಂಬಳೆ ಪೇಟೆಯಲ್ಲಿ ವಿದ್ಯಾರ್ಥಿಗಳ ಹೊಡೆದಾಟ
Road mishap: ರಿಕ್ಷಾಗೆ ಕಾರು ಢಿಕ್ಕಿ; ನಾಲ್ವರಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.