ಮಹಾನಗರ ಪಾಲಿಕೆಯಲ್ಲಿ ಹೊಸ ಮನ್ವಂತರದ ಗಾಳಿ


Team Udayavani, Sep 7, 2021, 2:01 PM IST

Metropolitan Policy

ಬೆಳಗಾವಿ: ನಿರೀಕ್ಷೆ ನಿಜವಾಗಿದೆ. ಲೆಕ್ಕಾಚಾರ ಒಳ್ಳೆಯ ಫಲ ಕೊಟ್ಟಿದೆ.ಅಭಿವೃದ್ಧಿ ಮತ್ತು ಹಿಂದುತ್ವದ ಆಧಾರದ ಮೇಲೆ ಮತದಾರರಮನವೊಲಿಸಿದ್ದು ಪರಿಣಾಮ ಬೀರಿದೆ. “ಟಾರ್ಗೆಟ್‌ 45′ ಎಂದು ಘೋಷಿಸಿಕೊಂಡಿದ್ದ ಬಿಜೆಪಿ ಗಡಿ ಹಾಗೂ ಭಾಷಾ ವಿವಾದದಿಂದ ಸುದ್ದಿಯಾಗುತ್ತಿದ್ದ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಹೊಸಇತಿಹಾಸ ನಿರ್ಮಾಣ ಮಾಡಿದೆ.

ಮೊದಲ ಬಾರಿಗೆ ಪಕ್ಷದ ಚಿಹ್ನೆ ಮೇಲೆ ಸ್ಪರ್ಧೆ ಮಾಡಿ55 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ನಿಲ್ಲಿಸಿದ್ದ ಬಿಜೆಪಿ ಎಲ್ಲಲೆಕ್ಕಾಚಾರಗಳನ್ನು ಹುಸಿ ಮಾಡಿ ಅಧಿಕಾರದ ಗದ್ದುಗೆಹಿಡಿದಿದೆ. ಇದರೊಂದಿಗೆ ಸದಾ ಗಡಿ ಮತ್ತು ಭಾಷಾವಿವಾದದ ಮೂಲಕ ಸುದ್ದಿಯಾಗುತ್ತಿದ್ದ ಬೆಳಗಾವಿಮಹಾನಗರ ಪಾಲಿಕೆಯಲ್ಲಿ ಇನ್ನು ಮುಂದೆ ಹೊಸಮನ್ವಂತರದ ಗಾಳಿ ಬೀಸಲಿದೆ. ಅಭಿವೃದ್ಧಿಯ ಹೊಸ ಅಧ್ಯಾಯ ಆರಂಭವಾಗಲಿದೆ.

ಇಲ್ಲಿ ಜಯದ ಸಂಪೂರ್ಣ ಶ್ರೇಯಸ್ಸು ಯಾರಿಗೆ ಸಲ್ಲಬೇಕು ಎಂಬುದುನಂತರದ ಮಾತು. ಆದರೆ ಟಿಕೆಟ್‌ ಹಂಚಿಕೆಯಲ್ಲಿ ತಮ್ಮ ನಿರ್ಧಾರವನ್ನುಪ್ರಶ್ನೆ ಮಾಡಿದ್ದ ಅಸಮಾಧಾನಿತರಿಗೆ ಬಿಜೆಪಿ ಶಾಸಕರಾದ ಅಭಯಪಾಟೀಲ ಮತ್ತು ಅನಿಲ ಬೆನಕೆ ಒಳ್ಳೆಯ ಫಲಿತಾಂಶದ ಮೂಲಕವೇ ದಿಟ್ಟಉತ್ತರವನ್ನೇ ಕೊಟ್ಟಿದ್ದಾರೆ.

ಸವಾಲು ಸ್ವೀಕರಿಸಿ ಟಿಕೆಟ್‌ ಪಡೆದುಕೊಂಡಿದ್ದಅಭ್ಯರ್ಥಿಗಳು ಮತ್ತು ಬಿಜೆಪಿ ಮೇಲೆ ವಿಶ್ವಾಸ ಇಟ್ಟು ಮತಗಳನ್ನು ಹಾಕಿದ್ದಮತದಾರರು ಶಾಸಕದ್ವಯರ ಮಾನ ಕಾಪಾಡಿದ್ದಾರೆ. ತಮ್ಮ ಮೇಲಿನನಂಬಿಕೆ ಉಳಿಸಿಕೊಂಡಿದ್ದಾರೆ. ಅಭಯ ಪಾಟೀಲ ಮತ್ತು ಅನಿಲ ಬೆನಕೆಸ್ಥಳೀಯವಾಗಿ ಪ್ರಬಲ ನಾಯಕರಾಗಿ ಹೊರಹೊಮ್ಮಿದ್ದಾರೆ.ಹಾಗೆ ನೋಡಿದರೆ ಟಿಕೆಟ್‌ ಹಂಚಿಕೆಯಲ್ಲಿ ಶಾಸಕರ ಏಕಪಕ್ಷೀಯ ನಿರ್ಧಾರದ ಆರೋಪ.

ಮಹತ್ವದ ಸಮಯದಲ್ಲಿ ಪಕ್ಷದಿಂದ ಪ್ರಮುಖಲಿಂಗಾಯತ ಸಮಾಜದ ಅಭ್ಯರ್ಥಿಗಳ ಉಚ್ಚಾಟನೆ ಮಹಾನಗರ ಪಾಲಿಕೆಚುನಾವಣೆಯಲ್ಲಿ ಬಿಜೆಪಿಗೆ ದೊಡ್ಡ ಪೆಟ್ಟು ನೀಡಬೇಕಿತ್ತು.ಆದರೆ ಬಿಜೆಪಿಯಲ್ಲಿನ ಅಸಮಾಧಾನದ ಲಾಭವನ್ನುಪಡೆದುಕೊಳ್ಳುವಲ್ಲಿ ಕಾಂಗ್ರೆಸ್‌ ಸಂಪೂರ್ಣ ಹಿಂದೆಬಿದ್ದಿತು.

ಇನ್ನೊಂದು ಕಡೆ ಮಹಾರಾಷ್ಟ್ರ ಏಕೀಕರಣಸಮಿತಿ ತಾನೇ ಮಾಡಿಕೊಂಡ ಎಡವಟ್ಟಿನಿಂದ ಬಿಜೆಪಿಗೆಮತ್ತಷ್ಟು ಅನುಕೂಲ ಮಾಡಿಕೊಟ್ಟಿದ್ದು ಸುಳ್ಳಲ್ಲ.ಈ ಫಲಿತಾಂಶ ಮುಂಬರುವ ವಿಧಾನಸಭೆ ಚುನಾವಣೆದೃಷ್ಟಿಯಿಂದ ಬಿಜೆಪಿಗೆ ದೊಡ್ಡ ಶಕ್ತಿ ನೀಡಿದೆ. ಎಲ್ಲವನ್ನೂ ಬಹಳಹಗುರವಾಗಿ ತೆಗೆದುಕೊಳ್ಳುವ ಕಾಂಗ್ರೆಸ್‌ಗೆ ಇದು ಎಚ್ಚರಿಕೆಯಗಂಟೆ.

ಎಲ್ಲಕ್ಕಿಂತ ಮುಖ್ಯವಾಗಿ ಯಾವಾಗಲೂ ಭಾಷೆ ಮತ್ತು ಗಡಿವಿಷಯ ಮುಂದಿಟ್ಟುಕೊಂಡು ರಾಜಕಾರಣ ಮಾಡುತ್ತಿರುವ ಮಹಾರಾಷ್ಟ್ರಏಕೀಕರಣ ಸಮಿತಿ ಮತ್ತು ಶಿವಸೇನೆಗೆ ಇದರಿಂದ ಮುಂದೆ ಭವಿಷ್ಯ ಇಲ್ಲಎಂಬ ಖಡಕ್‌ ಸಂದೇಶವೂ ರವಾನೆಯಾಗಿದೆ.ಇದೆಲ್ಲಕ್ಕಿಂತ ಮುಖ್ಯವಾಗಿ ಬೆಳಗಾವಿಯ ಪ್ರತಿ ವಿಷಯದಲ್ಲೂ ಮೂಗುತೂರಿಸುವ ಮಹಾರಾಷ್ಟ್ರದ ನಾಯಕರಿಗೆ ಬೆಳಗಾವಿಯ ಮತದಾರರುವಿಶೇಷವಾಗಿ ಮರಾಠಿ ಭಾಷಿಕ ಮತದಾರರು ತಾವು ಯಾವತ್ತೂಕರ್ನಾಟಕ ಹಾಗೂ ಅಭಿವೃದ್ಧಿ ಪರ ಎಂಬ ಎಚ್ಚರಿಕೆ ಕಳಿಸಿದ್ದಾರೆ.

ಪರಿಣಾಮ ಬೀರದ ಉಚಾಟನೆ ಶಿಕ್ಷೆ

ಟಿಕೆಟ್‌ ಹಂಚಿಕೆ ವಿಷಯದಲ್ಲೇ ಬಿಜೆಪಿಯಲ್ಲಿ ದೊಡ್ಡ ಮಟ್ಟದಅಸಮಾಧಾನ ಕಾಣಿಸಿಕೊಂಡಿತ್ತು. ಪಕ್ಷದ ನಾಯಕರು ಅದನ್ನು ಹೇಗೋಸರಿ ಮಾಡಿದ್ದರು ಎನ್ನುವಷ್ಟರಲ್ಲಿ ಲಿಂಗಾಯತ ಅಭ್ಯರ್ಥಿಗಳ ಉಚ್ಚಾಟನೆಶಿಕ್ಷೆ ಮತ್ತೆ ಅಸಮಾಧಾನ ಹೆಚ್ಚುವಂತೆ ಮಾಡಿತ್ತು. ಆಗ ಸಮಾಜದನಾಯಕರೇ ಬಿಜೆಪಿ ಕ್ರಮದ ವಿರುದ್ಧ ಹರಿಹಾಯ್ದಿದ್ದರು. ಟಿಕೆಟ್‌ವಿಷಯದಲ್ಲಿ ಲಿಂಗಾಯತ ಸಮಾಜವನ್ನು ಕಡೆಗಣಿಸಲಾಗಿದೆ ಎಂಬುದುಹಿರಿಯ ನಾಯಕರಾದ ಯಡಿಯೂರಪ್ಪ ಹಾಗೂ ಸಿಎಂ ಬೊಮ್ಮಾಯಿಕಿವಿಗೂ ತಲುಪಿತ್ತು. ಆದರೆ ಈ ಯಾವ ಅಂಶಗಳೂ ಮತದಾರರ ಮೇಲೆಪರಿಣಾಮ ಬೀರಲಿಲ್ಲ.

ಲಿಂಗಾಯತ ಅಭ್ಯರ್ಥಿಗಳ ಮೇಲೆ ಉಚ್ಚಾಟನೆ ಶಿಕ್ಷೆ ವಿಧಿಸಿದ ನಂತರ ಸಮಾಜದ ಕೆಲ ಮುಖಂಡರು ಬಿಜೆಪಿ ಬಿಟ್ಟುಬೇರೆ ಯಾರಿಗಾದರೂ ಮತ ಹಾಕಿ ಎಂಬ ಸಂದೇಶ ರವಾನಿಸಿದ್ದರು.ಆದರೆ ಯಾವ ಆರೋಪಕ್ಕೂ ಪ್ರತಿಕ್ರಿಯೆ ನೀಡದ ಸ್ಥಳೀಯ ಶಾಸಕರುಚುನಾವಣೆಯಲ್ಲಿ ಇದು ಚರ್ಚೆಗೆ ಬರದಂತೆ ನೋಡಿಕೊಂಡರಲ್ಲದೆ ಕೇವಲ ಅಭಿವೃದ್ಧಿ ವಿಷಯ ಮುಂದಿಟ್ಟುಕೊಂಡು ಜನರ ಮುಂದೆ ಹೋದರು.ಮತದಾನದ ಪ್ರಮಾಣ ಕಡಿಮೆಯಾದಾಗ ಆತಂಕ ಶುರುವಾಗಿತ್ತು.

ಬಂಡಾಯ ಅಭ್ಯರ್ಥಿಗಳು ನಮಗೆ ಮುಳುವಾಗುವರೇ ಎಂಬ ಭೀತಿ ಶುರುವಾಗಿತ್ತು. ಆದರೆ ನಾಯಕರು ತಮ್ಮ ರಾಜಕೀಯ ತಂತ್ರಗಾರಿಕೆ ಮೇಲೆನಂಬಿಕೆ ಇಟ್ಟುಕೊಂಡಿದ್ದರು. ಪಕ್ಷದ ಪ್ರಮುಖ ನಾಯಕರು, ಬೆಂಗಳೂರಿನಶಾಸಕರು ಹಾಗೂ ಅಲ್ಲಿನ ಪಾಲಿಕೆ ಸದಸ್ಯರು, ಮಹಾರಾಷ್ಟ್ರದ ಬಿಜೆಪಿಕಾರ್ಯಕರ್ತರು ಪೈಪೋಟಿ ಮೇಲೆ ಪ್ರಚಾರ ಮಾಡಿದ್ದು ವ್ಯರ್ಥವಾಗಲಿಲ್ಲ.

ಕೇಶವ ಆದಿ

ಟಾಪ್ ನ್ಯೂಸ್

SS Rajamouli: ʼಮಹಾಭಾರತʼ ಕಥೆಗೆ ರಾಜಮೌಳಿ ಆ್ಯಕ್ಷನ್ ಕಟ್; ಯಾವಾಗ ಪ್ರಾಜೆಕ್ಟ್‌ ಶುರು?

SS Rajamouli: ʼಮಹಾಭಾರತʼ ಕಥೆಗೆ ರಾಜಮೌಳಿ ಆ್ಯಕ್ಷನ್ ಕಟ್; ಯಾವಾಗ ಪ್ರಾಜೆಕ್ಟ್‌ ಶುರು?

MOsale

Delhi airport; ಮೊಸಳೆ ತಲೆಬುರುಡೆ ಸಾಗಿಸುತ್ತಿದ್ದ ಕೆನಡಾ ಪ್ರಜೆ ಬಂಧನ

Kumbh Mela 2025: ಮಹಾಕುಂಭ ಮೇಳದ ಆಕರ್ಷಣೆಯ ಕೇಂದ್ರ ಬಿಂದು ಅಂಬಾಸಿಡರ್‌ ಬಾಬಾ…ರುದ್ರಾಕ್ಷಾ!

Kumbh Mela 2025: ಮಹಾಕುಂಭ ಮೇಳದ ಆಕರ್ಷಣೆಯ ಕೇಂದ್ರ ಬಿಂದು ಅಂಬಾಸಿಡರ್‌ ಬಾಬಾ…ರುದ್ರಾಕ್ಷಾ!

1-TTD

Tirupati; ಗಾಯಾಳುಗಳನ್ನು ಭೇಟಿಯಾದ ಸಿಎಂ ನಾಯ್ಡು: ಟಿಟಿಡಿ ಅಧಿಕಾರಿಗಳಿಗೆ ಛೀಮಾರಿ!

web

Winter Health Tips: ಚಳಿಗಾಲದಲ್ಲಿ ಆರೋಗ್ಯವಾಗಿರಲು 10 ಅತ್ಯುತ್ತಮ ಮಾರ್ಗಗಳು

Toxic Movie: ʼಟಾಕ್ಸಿಕ್‌ʼನಲ್ಲಿ ನಟಿಸಲು ಯಶ್‌ ಪಡೆದ ಸಂಭಾವನೆ ಎಷ್ಟು?

Toxic Movie: ʼಟಾಕ್ಸಿಕ್‌ʼನಲ್ಲಿ ನಟಿಸಲು ಯಶ್‌ ಪಡೆದ ಸಂಭಾವನೆ ಎಷ್ಟು?

tirupati

Tirupati;ದುರಂತಕ್ಕೆ ಸಿಎಂ ನಾಯ್ಡು,ಆಡಳಿತ ಮಂಡಳಿ,ಪೊಲೀಸರು ಕಾರಣ: ಮಾಜಿ ಟಿಟಿಡಿ ಮುಖ್ಯಸ್ಥರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Birth-Certi

Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!

ಅಂತಾರಾಜ್ಯ ಮಕ್ಕಳ ಮಾರಾಟ ಜಾಲ ಪತ್ತೆ… 4.50 ಲಕ್ಷಕ್ಕೆ ಗೋವಾಕ್ಕೆ ಮಾರಿದ್ದ ಮಗುವಿನ ರಕ್ಷಣೆ

ಅಂತಾರಾಜ್ಯ ಮಕ್ಕಳ ಮಾರಾಟ ಜಾಲ ಪತ್ತೆ… 4.50 ಲಕ್ಷಕ್ಕೆ ಗೋವಾಕ್ಕೆ ಮಾರಿದ್ದ ಮಗುವಿನ ರಕ್ಷಣೆ

2-belagavi

Belagavi: ತಹಶೀಲ್ದಾರ್ ಮನೆ ಮೇಲೆ ಲೋಕಾಯುಕ್ತ ದಾಳಿ

MONEY (2)

Belagavi; ಸಂಘದ ಹೆಸರಲ್ಲಿ ಮಹಿಳೆಯರಿಗೆ 19.35 ಕೋಟಿ ರೂ. ಮಹಾ ವಂಚನೆ!

1-dm

Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

SS Rajamouli: ʼಮಹಾಭಾರತʼ ಕಥೆಗೆ ರಾಜಮೌಳಿ ಆ್ಯಕ್ಷನ್ ಕಟ್; ಯಾವಾಗ ಪ್ರಾಜೆಕ್ಟ್‌ ಶುರು?

SS Rajamouli: ʼಮಹಾಭಾರತʼ ಕಥೆಗೆ ರಾಜಮೌಳಿ ಆ್ಯಕ್ಷನ್ ಕಟ್; ಯಾವಾಗ ಪ್ರಾಜೆಕ್ಟ್‌ ಶುರು?

MOsale

Delhi airport; ಮೊಸಳೆ ತಲೆಬುರುಡೆ ಸಾಗಿಸುತ್ತಿದ್ದ ಕೆನಡಾ ಪ್ರಜೆ ಬಂಧನ

Kumbh Mela 2025: ಮಹಾಕುಂಭ ಮೇಳದ ಆಕರ್ಷಣೆಯ ಕೇಂದ್ರ ಬಿಂದು ಅಂಬಾಸಿಡರ್‌ ಬಾಬಾ…ರುದ್ರಾಕ್ಷಾ!

Kumbh Mela 2025: ಮಹಾಕುಂಭ ಮೇಳದ ಆಕರ್ಷಣೆಯ ಕೇಂದ್ರ ಬಿಂದು ಅಂಬಾಸಿಡರ್‌ ಬಾಬಾ…ರುದ್ರಾಕ್ಷಾ!

9

Shirva: ಮೂಡುಬೆಳ್ಳೆ ಪೇಟೆ; ನಿತ್ಯ ಟ್ರಾಫಿಕ್‌ ಜಾಮ್‌

1-TTD

Tirupati; ಗಾಯಾಳುಗಳನ್ನು ಭೇಟಿಯಾದ ಸಿಎಂ ನಾಯ್ಡು: ಟಿಟಿಡಿ ಅಧಿಕಾರಿಗಳಿಗೆ ಛೀಮಾರಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.