ನೊಂದವರ ಬಾಳಿನಲ್ಲಿ ‘ಲಕ್ಷ್ಮೀ’ ಬೆಳಕು
ಕ್ಷೇತ್ರದ ಜನರ ನೆರವಿಗೆ ನಿಂತ ಲಕ್ಷ್ಮೀ ತಾಯಿ ಫೌಂಡೇಶನ್, ಆಟೋ ಚಾಲಕರು-ರೋಗಿಗಳಿಗೆ ಸಹಾಯ
Team Udayavani, May 26, 2021, 8:10 PM IST
ವರದಿ : ಕೇಶವ ಆದಿ
ಬೆಳಗಾವಿ: ಜನಸೇವೆ ಎಂದಾಕ್ಷಣ ಒಂದು ಹೆಜ್ಜೆ ಮುಂದಿಡುವ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಟಾಳಕರ ಈಗ ಕೊರೊನಾ ಸೋಂಕಿತರು, ಅವರ ಕುಟುಂಬ ಸದಸ್ಯರು, ಕೋವಿಡ್‌ನಿಂದ ತೊಂದರೆಗೆ ಸಿಲುಕಿರುವ ಜನರ ಸಹಾಯಕ್ಕೆ ನಿಂತಿದ್ದಾರೆ. ಅಗತ್ಯ ನೆರವು ನೀಡುವುದರ ಮೂಲಕ ನೊಂದವರ ಜೀವನದಲ್ಲಿ ಭರವಸೆಯ ಬೆಳಕು ತುಂಬಿದ್ದಾರೆ.
ಹೆಬ್ಟಾಳಕರ ಇದರಲ್ಲಿ ರಾಜಕೀಯ ನೋಡಲು ಹೋಗಿಲ್ಲ. ಪ್ರಕೃತಿ ವಿಕೋಪ ಸಂದರ್ಭದಲ್ಲಿ ಎಲ್ಲ ರೀತಿಯ ನೆರವು ನೀಡಿದ್ದ ಶಾಸಕಿ ಹೆಬ್ಟಾಳಕರ ಈಗ ಕೊರೊನಾ ಸೋಂಕಿತರ ಕುಟುಂಬಗಳು ಮತ್ತು ಲಾಕ್ ಡೌನ್‌ದಿಂದ ತೊಂದರೆಗೆ ತುತ್ತಾಗಿರುವ ಜನರ ನೆರವಿಗೆ ಬಂದಿದ್ದಾರೆ. ತಮ್ಮ ಲಕ್ಷ್ಮೀ ತಾಯಿ ಫೌಂಡೇಶನ್ ಮೂಲಕ ಆಟೋ ಚಾಲಕರಿಗೆ ಪಡಿತರ ಕಿಟ್ ಹಾಗೂ ಜಿಲ್ಲಾಸ್ಪತ್ರೆಯಲ್ಲಿರುವ ರೋಗಿಗಳಿಗೆ ಆಹಾರದ ಕಿಟ್ ವಿತರಿಸಿದ್ದಾರೆ.
ಕೊರೊನಾ ಸಂದರ್ಭದಲ್ಲಿ ಯಾವುದೇ ದುಡಿಮೆ ಇಲ್ಲದೇ ಪರಿತಪಿಸುತ್ತಿರುವ ಜನರಿಗೆ ನಮ್ಮಿಂದ ಕಿಂಚಿತ್ ಸಹಾಯವಾಗಲೆಂಬ ಉದ್ದೇಶದಿಂದ ಪ್ರತಿಷ್ಠಾನದಿಂದ ಈ ನೆರವು ನೀಡುತ್ತಿದ್ದೇವೆ. ಆಸ್ಪತ್ರೆಯಲ್ಲಿರುವ ಎಷ್ಟೋ ರೋಗಿಗಳಿಗೆ, ಅವರ ಸಹಾಯಕರಿಗೆ ಆಹಾರ, ನೀರು ಸಿಗುತ್ತಿಲ್ಲ. ಹಾಗಾಗಿ ಅವರಿಗೆ ಆಹಾರದ ಕಿಟ್, ನೀರಿನ ಬಾಟಲ್, ಮಾತ್ರೆ ಕಿಟ್‌ಗಳು, ಮಾಸ್ಕ್- ಸ್ಯಾನಿಟೈಸರ್ ಮುಂತಾದ ವಸ್ತು ವಿತರಿಸಿ ಅವರ ನೋವಿಗೆ ಸ್ಪಂದಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂಬುದು ಲಕ್ಷ್ಮೀ ಹೆಬ್ಟಾಳಕರ ಮಾತು.
ಯಾವುದೇ ರಾಜಕಾರಣ, ಪ್ರತಿಷ್ಠೆ, ಸ್ವಾರ್ಥವಿಲ್ಲದೇ ಬಡವರ ಕಣ್ಣೀರು ಒರೆಸುವ ಏಕೈಕ ಉದ್ದೇಶದಿಂದ ಈ ಸೇವೆ ಮಾಡಲಾಗುತ್ತಿದೆ. ಎಲ್ಲರೂ ಕೈಲಾದಷ್ಟು ಸಹಾಯ ಮಾಡಲು ಮುಂದೆ ಬರಲಿ, ಅಂಥವರಿಗೆ ಪ್ರೇರಣೆಯಾಗಲಿ ಎಂಬುದು ಶಾಸಕರ ಆಸೆ. ಈ ಹಿಂದೆ ಪ್ರವಾಹ ಹಾಗೂ ಕೊರೊನಾ ಮೊದಲ ಅಲೆಯ ಸಂದರ್ಭದಲ್ಲಿ ಲಕ್ಷ್ಮೀ ತಾಯಿ ಫೌಂಡೇಶನ್ ಮಾಡಿದ ಜನಸೇವೆಯನ್ನು ಲಕ್ಷಾಂತರ ಜನ ಪ್ರಶಂಸಿಸಿ ಪ್ರೋತ್ಸಾಹಿಸಿದ್ದಾರೆ.
ನೂರಾರು ಜನರಿಗೆ ಊಟ: ಇನ್ನು ವಿಧಾನಸಭಾ ಚುನಾವಣೆಯಲ್ಲಿ ಗೆದ್ದ ದಿನವನ್ನೇ ತಮ್ಮ ಜನ್ಮದಿನವನ್ನಾಗಿ ಆಚರಿಸಿಕೊಳ್ಳುತ್ತಿರುವ ಲಕ್ಷ್ಮೀ ಹೆಬ್ಟಾಳಕರ ಕೊರೊನಾ ಸಂಕಷ್ಟ ಸಮಯದಲ್ಲಿ ಜನರ ಸೇವೆಗಾಗಿ ಎರಡು ಆಂಬ್ಯುಲೆನ್ಸ್ ಸಮರ್ಪಿಸಿದ್ದಾರೆ. ಅಷ್ಟೇ ಅಲ್ಲ ಗ್ರಾಮೀಣ ಕ್ಷೇತ್ರದ ಜನರು ಪಕ್ಷಾತೀತವಾಗಿ ಎರಡು ಆಂಬ್ಯುಲೆನ್ಸ್ ಗಳ ಸೇವೆ ಸದುಪಯೋಗ ಪಡೆಯಬೇಕು ಎಂಬುದು ಅವರ ಕಳಕಳಿ. ಇದರ ಜತೆಗೆ ಕೊರೊನಾದಿಂದ ಜನರು ಹಲವಾರು ರೀತಿಯ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂಬುದನ್ನು ಮನಗಂಡ ಹೆಬ್ಟಾಳಕರ ದಿನನಿತ್ಯ ದೂರವಾಣಿ ಕರೆ ಮಾಡುವ ಮೂಲಕ ಅಥವಾ ಮನೆಗೆ ಬರುವ ಕ್ಷೇತ್ರದ ಜನರಿಗೆ ಆಸ್ಪತ್ರೆಯಲ್ಲಿ ಹಾಸಿಗೆಗಳ, ಇಂಜೆಕ್ಷನ್ ಹಾಗೂ ಆಕ್ಸಿಜನ್ ನೆರವು ದೊರಕಿಸಿಕೊಡುತ್ತಿದ್ದಾರೆ. ದಿನನಿತ್ಯ ಸುಮಾರು 10 ಜನ ಈ ರೀತಿ ನೆರವು ಪಡೆಯುತ್ತಿದ್ದಾರೆ. ಸೋಂಕಿತರಿಗೆ ಹಾಸಿಗೆ, ಆಕ್ಸಿಜನ್ ನೆರವಿನ ಜತೆಗೆ ಜಿಲ್ಲಾಸ್ಪತ್ರೆಯಲ್ಲಿ ಪ್ರತಿನಿತ್ಯ 800-1000 ಜನರಿಗೆ ಬೆಳಗ್ಗೆ, ಮಧ್ಯಾಹ್ನ-ರಾತ್ರಿ ಊಟ-ಉಪಹಾರದ ವ್ಯವಸ್ಥೆಯನ್ನು ಲಕ್ಷ್ಮೀ ತಾಯಿ ಪ್ರತಿಷ್ಠಾನ ಮೂಲಕ ಮಾಡುತ್ತ ಬಂದಿದ್ದಾರೆ.
ಶಾಸಕರು ತಾವೇ ಸ್ವತಃ ಕೊರೊನಾ ಪೀಡಿತರಾಗಿದ್ದರಿಂದ ಆಸ್ಪತ್ರೆಗಳಿಗೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಲು ಸಾಧ್ಯವಾಗಿಲ್ಲ. ಆದರೆ ಆಸ್ಪತ್ರೆ ವೈದ್ಯರ ಜತೆ ನಿರಂತರ ಸಂಪರ್ಕದಲ್ಲಿದ್ದಾರೆ. ಡಿಸಿ ಜತೆ ಸಭೆ ನಡೆಸಿ ಸೋಂಕಿತರ ಚಿಕಿತ್ಸೆ ಕುರಿತು ಸಲಹೆ ನೀಡಿದ್ದಾರೆ. ಇಂಜೆಕ್ಷನ್ ಕೊರತೆ ಕಾಣದಂತೆ ಕ್ರಮ ವಹಿಸಿದ್ದಾರೆ.
10 ಸಾವಿರ ಜನರಿಗೆ ಮಾತ್ರೆ: ಕೊರೊನಾ ಸೋಂಕಿನಿಂದ ಸಮಸ್ಯೆಗೆ ಸಿಲುಕಿರುವ ತಮ್ಮ ಕ್ಷೇತ್ರದ ಜನರಿಗೆ ಸಕಾಲಕ್ಕೆ ಔಷಧಗಳು ಸಿಗಬೇಕೆಂಬ ಉದ್ದೇಶದಿಂದ ಶಾಸಕಿ ಹೆಬ್ಟಾಳಕರ ಬರುವ ಶುಕ್ರವಾರದಿಂದ 10 ಸಾವಿರ ಜನರಿಗೆ ವೈದ್ಯರ ಸಲಹೆಯೊಂದಿಗೆ ಮಾತ್ರೆಗಳನ್ನು ವಿತರಿಸಲು ನಿರ್ಧರಿಸಿದ್ದಾರೆ. ಇದಕ್ಕಾಗಿ ಎಲ್ಲ ಮಾಹಿತಿ ಸಂಗ್ರಹಿಸಿ ಗುಳಿಗೆಗಳನ್ನು ಸಿದ್ಧಮಾಡಿಕೊಂಡಿದ್ದಾರೆ. ಇದರ ಜತೆಗೆ 10 ಸಾವಿರ ಜನರಿಗೆ ಥರ್ಮಾಮೀಟರ್ ಮತ್ತು ಆಕ್ಸಿಮೀಟರ್ ಸಹ ಕೊಡುವ ಉದ್ದೇಶ ಸಹ ಶಾಸಕರು ಹೊಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Controversy: ಕಾಂಗ್ರೆಸ್ ಪೋಸ್ಟರ್‌ನಲ್ಲಿ ಪಿಒಕೆ ತಪ್ಪಾಗಿ ಚಿತ್ರಣ; ಬಿಜೆಪಿ ತೀವ್ರ ಆಕ್ರೋಶ
Kambala: ಡಿ.28-29ರಂದು 8ನೇ ವರ್ಷದ ‘ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ
Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ
Ullala: ಗ್ಯಾಸ್ ಸಿಲಿಂಡರ್ ಸ್ಫೋ*ಟ ಪ್ರಕರಣ: ಸಾವಿನ ಸಂಖ್ಯೆ 2ಕ್ಕೆ ಏರಿಕೆ
Nyamathi: ಕಾಡುಪ್ರಾಣಿಗಳಿಗೆ ಇರಿಸಿದ್ದ 32 ನಾಡ ಬಾಂಬ್ ಗಳು ಪತ್ತೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
RSS: ಮೋಹನ್ ಭಾಗವತರ ಮಂದಿರ,ಮಸೀದಿ ಹೇಳಿಕೆಗೆ ಈಗ ಆರೆಸ್ಸೆಸ್ ಪತ್ರಿಕೆ ಆಕ್ಷೇಪ
Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್ ಮಾತು
Controversy: ಕಾಂಗ್ರೆಸ್ ಪೋಸ್ಟರ್‌ನಲ್ಲಿ ಪಿಒಕೆ ತಪ್ಪಾಗಿ ಚಿತ್ರಣ; ಬಿಜೆಪಿ ತೀವ್ರ ಆಕ್ರೋಶ
Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್
Kambala: ಡಿ.28-29ರಂದು 8ನೇ ವರ್ಷದ ‘ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.