ಮಹದಾಯಿ ವಿಚಾರದಲ್ಲಿ ಮೋದಿ ನಿರಾಸಕ್ತಿ: ಎಚ್‌ಡಿಕೆ
Team Udayavani, Apr 19, 2019, 3:54 PM IST
ಎಂ.ಕೆ.ಹುಬ್ಬಳ್ಳಿ: ಮಹದಾಯಿ ಕುರಿತ ತೀರ್ಪು ಈಗಾಗಲೇ ಬಂದಾಗಿದೆ. ಸಿಕ್ಕಿರುವ ನೀರು ಬಳಸುವ ಗೆಜೆಟ್ ನೋಟಿಫಿಕೇಶನ್ ಕೊಡಿ ಎಂದು ಈಗಾಗಲೇ ಮೋದಿ, ಗಡ್ಕರಿ ಅವರಲ್ಲಿ ಮನವಿ ಮಾಡಿಕೊಂಡರೂ, ಅವರು ನೋಟಿಫಿಕೇಶನ್ ಹೊರಡಿಸಿಲ್ಲ. ರಾಜ್ಯದ ಬಿಜೆಪಿ ಸಂದಸರು ಈ ಬಗ್ಗೆ ಸಂಸತ್‌ನಲ್ಲಿ ಧ್ವನಿಯೆತ್ತಿಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದರು.
ಪಟ್ಟಣದಲ್ಲಿ ಗುರುವಾರ ಸಂಜೆ ಹಮ್ಮಿಕೊಳ್ಳಲಾಗಿದ್ದ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಜೆಡಿಎಸ್ ಅಭ್ಯರ್ಥಿ ಆನಂದ ಅಸ್ನೋಟಿಕರ್ ಪರ ಬಹಿರಂಗ ಮತಯಾಚನೆ ಸಭೆ ಉದ್ಘಾಟಿಸಿ ಅವರು ಮಾತನಾಡಿ, ಮೋದಿ ಉದ್ಯೋಗ ಕೊಡುವ ಬದಲಿಗೆ ಇದ್ದ ಉದ್ಯೋಗವನ್ನು ಯುವಕರಿಂದ ಕಸಿದುಕೊಂಡಿದ್ದಾರೆ. 50 ಲಕ್ಷ ಉದ್ಯೋಗಿಗಳನ್ನು ಮನೆಗೆ ಕಳಿಸಿದ್ದಾರೆ. ಚುನಾವಣೆ ಮುಗಿದ ನಂತರ ನಾನು ನೆಗೆದು ಬಿಳ್ಳುತ್ತೇನೆ ಅಂತ ಈಶ್ವರಪ್ಪ ಹೇಳ್ತಾರೆ. ನಾನ್ಯಾಕೆ ನೆಗೆದು ಹೋಗಬೇಕು? ರೈತರ ಸಾಲಮನ್ನಾ ಮಾಡಿದ್ದಕ್ಕೆ ನಾನು ನೆಗೆದು ಹೋಗಬೇಕಾ. ನಾನು ರೈತರಿಗಾಗಿ ಇರುವ ಸಿಎಂ ಎಂದರು.
ವಿಧಾನ ಪರಿಷತ್ ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಜೈನ್ ಸಮುದಾಯದ ಗೋಮಟೇಶ್ವರ ಬಗ್ಗೆ ಅನಂತಕುಮಾರ ಹೆಗಡೆ ಕೆಟ್ಟದಾಗಿ ಮಾತನಾಡಿದ್ದಾರೆ. ಇವರಿಗೆ ಅನ್ಯ ಧರ್ಮಗಳ ಬಗ್ಗೆ ಕಾಳಜಿ ಇಲ್ಲ. ಪ್ರತಾಪ ಸಿಂಹ ಹಾಗೂ ಅನಂತಕುಮಾರ ಅವರನ್ನು ಮೈಸೂರು ಮೃಗಾಲಯದಲ್ಲಿ ಇರಬೇಕಾದವರು ಇಲ್ಲಿ ಇದ್ದಾರೆ. ಇದು ನಮ್ಮ ದುರ್ದೈವ ಎಂದರು.
ಉತ್ತರ ಕನ್ನಡ ಮತಕ್ಷೇತ್ರದ ಮೈತ್ರಿ ಅಭ್ಯರ್ಥಿ ಆನಂದ ಅಸ್ನೋಟಿಕರ, ವಿಧಾನ ಪರಿಷತ್ ಮಾಜಿ ಸಭಾಪತಿ ಬಸವರಾಜ ಹೊರಟಿ, ಶಾಸಕ ಮಹಾಂತೇಶ ಕೌಜಲಗಿ, ಎನ್.ಎಚ್.ಕೋನರೆಡ್ಡಿ, ಮಾಜಿ ಶಾಸಕ ಡಿ.ಬಿ. ಇನಾಮದಾರ, ಜಿಪಂ ಸದಸ್ಯೆ ರೋಹಿಣಿ ಪಾಟೀಲ, ಬಾಬಾಸಾಹೇಬ, ರಾಧಾ ಶಾಮ ಕಾದ್ರೋಳ್ಳಿ, ಪಪಂ ಅಧ್ಯಕ್ಷ ಸಿದ್ದಪ್ಪ ಗೊರಕೊಳ್ಳಿ, ನಾಸೀರ ಬಾಗವಾನ, ವಿಕ್ರಂ ಇನಾಮದಾರ, ಶಂಕರ ಹೊಳಿ, ಮೇಘಾ ಕುಂದರಗಿ, ಎಂ.ಟಿ.ಸಂಬಣ್ಣವರ, ಶಂಕರ ಮಾಡಲಗಿ ಹಾಗೂ ಇತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mrinal Hebbalkar: ನನ್ನ ತಾಯಿಗೆ ರವಿ ಬಳಸಿದ ಪದದಿಂದ ನೋವಾಗಿದೆ: ಮೃಣಾಲ್
Belgavi: ಸಿ.ಟಿ.ರವಿ ಪ್ರಕರಣ ಮುಂದುವರಿಸುವಲ್ಲಿ ಅರ್ಥವೇ ಇಲ್ಲ: ಸಚಿವ ಸತೀಶ್ ಜಾರಕಿಹೊಳಿ
Belagavi: ನ್ಯಾಯಾಧೀಶರ ಮುಂದೆ ಪೊಲೀಸ್ ದೌರ್ಜನ್ಯ ಬಿಚ್ಚಿಟ್ಟ ಸಿ.ಟಿ. ರವಿ
Belagavi: ಎಲ್ಲದಕ್ಕೂ ಪೂರ್ಣವಿರಾಮ ಬೀಳಲಿದೆ, ನನಗೂ ಒಂದು ಕಾಲ ಬರುತ್ತದೆ….. : ಸಿ.ಟಿ.ರವಿ
Belagavi: ಸಿ.ಟಿ.ರವಿ ಬಂಧನ ಪ್ರಕರಣ ಬೆಂಗಳೂರಿಗೆ ಸ್ಥಳಾಂತರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.