ಗುಣಮಟ್ಟದ ಶಿಕ್ಷಣ ನೀಡಿ: ಜಾರಕಿಹೊಳಿ
Team Udayavani, Oct 7, 2018, 4:12 PM IST
ಮೂಡಲಗಿ: ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ (ಆರ್‌ಎಂಎಸ್‌ಎ) ಯೋಜನೆಯಡಿ ವಲಯದ 151 ಶಾಲಾ ಕೊಠಡಿಗಳ ನಿರ್ಮಾಣಕ್ಕಾಗಿ 12 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು. ತುಕ್ಕಾನಟ್ಟಿ ಗ್ರಾಮದ ಕೆರಿಸಿದ್ಧೇಶ್ವರ ವನದಲ್ಲಿ ಶನಿವಾರ ನಡೆದ ಗುರುಸ್ಮರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, 2004 ರಿಂದ ಇಲ್ಲಿಯವರೆಗೆ ಒಟ್ಟು 45 ಕೋಟಿ ರೂ. ಅನುದಾನದಲ್ಲಿ ಶಾಲಾ ಕೊಠಡಿಗಳನ್ನು ನಿರ್ಮಾಣಗೊಳಿಸಲಾಗಿದೆ ಎಂದರು.
ಮೂಡಲಗಿ ಶೈಕ್ಷಣಿಕ ವಲಯ ರಾಜ್ಯದಲ್ಲಿಯೇ ಮುಂಚೂಣಿಗೆ ತರಲು ಎಲ್ಲ ರೀತಿಯ ಪ್ರಯತ್ನ ಮಾಡಲಾಗುತ್ತಿದೆ. ಸತತ ಮೂರು ವರ್ಷ ರಾಜ್ಯದಲ್ಲಿಯೇ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶದಲ್ಲಿ ಪ್ರಥಮ ಸ್ಥಾನ ಪಡೆದಿರುವ ಹೆಗ್ಗಳಿಕೆ ಮೂಡಲಗಿ ವಲಯದ್ದಾಗಿದೆ. ಪ್ರತಿಯೊಬ್ಬರೂ ಸಾಕ್ಷರರನ್ನಾಗಿ ಪರಿವರ್ತಿಸುವ ಮಹತ್ವಾಕಾಂಕ್ಷೆಯಿಂದ ಶಿಕ್ಷಣಕ್ಕೆ ಪ್ರಥಮ ಪ್ರಾಶಸ್ತ್ಯ ನೀಡಲಾಗುತ್ತಿದೆ. ಮೂಡಲಗಿ ವಲಯವನ್ನು ಶೇ.100ರಷ್ಟು ವಿದ್ಯಾವಂತರನ್ನಾಗಿ ರೂಪಿಸುವ ಜವಾಬ್ದಾರಿಯನ್ನು ಶಿಕ್ಷಕರು ನಿರ್ವಹಿಸಿದರೆ ಪ್ರಯತ್ನಕ್ಕೆ ಫಲ ಸಿಕ್ಕಂತಾಗುತ್ತದೆ. ಶೇ ನೂರರಷ್ಟು ಸಾಕ್ಷರತೆಯಲ್ಲಿ ಸಾಧನೆಗೈದರೆ ಮಾತ್ರ ನನ್ನ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ ಎಂದರು.
ಮೂಡಲಗಿ ವಲಯದಿಂದ ರಾಜ್ಯಕ್ಕೆ ಎಲ್ಲ ವಿಧದಲ್ಲೂ ಕೊಡುಗೆ ನೀಡಲು ಶಿಕ್ಷಕರು ಪ್ರಾಮಾಣಿಕ ಪ್ರಯತ್ನ ನಡೆಸಬೇಕು. ಪ್ರತಿಯೊಬ್ಬರೂ ವಿದ್ಯಾವಂತರಾದರೆ ಮಾತ್ರ ಸಮಾಜ ಸುಧಾರಿಸಲು ಸಾಧ್ಯವಿದೆ. ಅದರಲ್ಲೂ ಶಿಕ್ಷಣದಿಂದ ಹಿಂದುಳಿದಿರುವ ತುಕ್ಕಾನಟ್ಟಿ ಜಿಪಂ ಕ್ಷೇತ್ರವನ್ನು ಸಂಪೂರ್ಣ ಸಾಕ್ಷರರನ್ನಾಗಿ ಮಾಡುವ ಸಂಕಲ್ಪ ಮಾಡಿದೆ ಎಂದರು.
2004ರಿಂದ ಇಲ್ಲಿಯವರೆಗೆ ಒಟ್ಟು 22 ಹೊಸ ಸರ್ಕಾರಿ ಪ್ರೌಢ ಶಾಲೆಗಳನ್ನು ಆರಂಭಿಸಲಾಗಿದೆ. ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿಯೇ ಅತ್ಯಧಿಕ ಸರ್ಕಾರಿ ಪ್ರೌಢ ಶಾಲೆ ಹೊಂದಿರುವ ವಲಯ ನಮ್ಮದಾಗಿದೆ. ಇದರ ಜೊತೆಗೆ ಒಟ್ಟು 9 ವಸತಿ ಶಾಲೆಗಳು ಹಾಗೂ ಒಂದು ವಸತಿ ರಹಿತ ಶಾಲೆಯನ್ನು ಮಂಜೂರು ಮಾಡಿಸಲಾಗಿದೆ. ಸರ್ಕಾರಿ ಶಾಲೆಗಳಲ್ಲಿಯೂ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯುತ್ತಿರುವುದರಿಂದ 50 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವುದು ಹೆಮ್ಮೆಯಾಗಿದೆ. ಕೌಜಲಗಿ, ಬಳ್ಳೋಬಾಳ ಹಾಗೂ ಹಳ್ಳೂರ ಗ್ರಾಮಗಳಲ್ಲಿ ಹೊಸ ಪಿಯುಸಿ ಕಾಲೇಜು ಆರಂಭಿಸಲಾಗಿದೆ ಎಂದರು.
ನಿವೃತ್ತ ಶಿಕ್ಷಕರು, ಸಾಧಕ ಶಿಕ್ಷಕರು-ವಿದ್ಯಾರ್ಥಿಗಳಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಇದೇ ಸಂದರ್ಭದಲ್ಲಿ ಸತ್ಕರಿಸಿ, ಗೌರವಿಸಿದರು. ತುಕ್ಕಾನಟ್ಟಿಯ ಶಾಂತಾನಂದ ಭಾರತಿ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಚಿಕ್ಕೋಡಿ ಉಪನಿರ್ದೇಶಕರ ಕಚೇರಿಯ ಇಒ ಅಜಿತ್ ಮನ್ನಿಕೇರಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುಭಾಶ ಢವಳೇಶ್ವರ, ಜಿಪಂ ಮಾಜಿ ಅಧ್ಯಕ್ಷ ಬಸಗೌಡ ಪಾಟೀಲ, ತಾಪಂ ಅಧ್ಯಕ್ಷೆ ಸುನಂದಾ ಕರದೇಸಾಯಿ, ಉಪಾಧ್ಯಕ್ಷ ಯಲ್ಲಪ್ಪ ನಾಯಿಕ, ಜಿಪಂ ಸದಸ್ಯ ಗೋವಿಂದ ಕೊಪ್ಪದ, ತುಕ್ಕಾನಟ್ಟಿ ಗ್ರಾಪಂ ಅಧ್ಯಕ್ಷೆ ಪಾರ್ವತಿ ನಾವಿ, ತಾಪಂ ಸದಸ್ಯ ಪರಶುರಾಮ ಗದಾಡಿ, ಸಿದ್ದಪ್ಪ ಹಮ್ಮನವರ, ಸುಲೋಚನಾ ಶಿವಪ್ಪ ಮರ್ದಿ, ಪ್ರಕಾಶ ಬಾಗೇವಾಡಿ, ಭರಮಪ್ಪ ಉಪ್ಪಾರ, ಭೀಮಶಿ ಗದಾಡಿ, ಯಲ್ಲವ್ವ ಅಂಬಲಿ, ಶೋಭಾ ಬಬಲಿ, ಅಶೋಕ ಖಂಡ್ರಟ್ಟಿ, ನೀಲಕಂಠ ಕಪ್ಪಲಗುದ್ದಿ, ಶಂಕರ ಬಿಲಕುಂದಿ, ಪರಮೇಶ್ವರ ಹೊಸಮನಿ, ವಿಠ್ಠಲ ಸವದತ್ತಿ, ಸುಧೀರ ಜೋಡಟ್ಟಿ, ಭೀಮಶಿ ಮಗದುಮ್ಮ, ಬಸವಂತ ಕಮತಿ, ರಾಮಣ್ಣಾ ಹುಕ್ಕೇರಿ ಸೇರಿದಂತೆ ಅನೇಕರು ಇದ್ದರು. ಬಿಇಒ ಎ.ಸಿ. ಗಂಗಾಧರ ಸ್ವಾಗತಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi; ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿದ್ದ ಹುಲಿ ಶೌರ್ಯ ಇನ್ನಿಲ್ಲ
Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ
Setback BJP: ಜನರಿಂದ ವಿಜಯೇಂದ್ರ ನಾಯಕತ್ವ ತಿರಸ್ಕಾರ, ರಾಜೀನಾಮೆ ನೀಡಲಿ: ಶಾಸಕ ಯತ್ನಾಳ್
ಮಹಾರಾಷ್ಟ್ರ ಸೋಲಿನ ಬೆನ್ನಲ್ಲೇ ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಸತೀಶ್ ಜಾರಕಿಹೊಳಿ
ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು
IPL Mega Auction: ಮೊದಲ ದಿನದ ಹರಾಜಿನ ಬಳಿಕ ಆರ್ ಸಿಬಿ ತಂಡ ಹೀಗಿದೆ ನೋಡಿ
Arrested: ಹೊಯ್ಸಳ ಪೊಲೀಸ್ ಮೇಲೆ ಹಲ್ಲೆ; ಬಂಧನ
Sambhal Violence: ಮೃತರ ಸಂಖ್ಯೆ ನಾಲ್ಕಕ್ಕೆ, ಇಂಟರ್ನೆಟ್ ಸ್ಥಗಿತ, ನಿಷೇಧಾಜ್ಞೆ ಜಾರಿ
Bengaluru: ಮನೆಯ ಮುಂದೆ ಕುಳಿತು ಮೊಬೈಲ್ ನೋಡುತ್ತಿದ್ದ ವ್ಯಕ್ತಿಗೆ ಕಾರು ಡಿಕ್ಕಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.