ಬೆಳಗಾವಿ: ಪತಿಯನ್ನು ಹತ್ಯೆಗೈದು ಎಮ್ಮೆ ಕರು ಸತ್ತಿತೆಂದು ಜೆಸಿಬಿಯಿಂದ ಹೂತು ಹಾಕಿದ ಪತ್ನಿ!
ಅಕ್ರಮ ಸಂಬಂಧ ಪ್ರಶ್ನಿಸಿದ್ದಕ್ಕೆ ಕೊಲೆ
Team Udayavani, Sep 5, 2020, 9:47 PM IST
ಸಾಂದರ್ಭಿಕ ಚಿತ್ರ
ಚಿಕ್ಕೋಡಿ: ಅಕ್ರಮ ಸಂಬಂಧದ ಬಗ್ಗೆ ಪ್ರಶ್ನೆ ಮಾಡಿದ ಗಂಡನನ್ನು ಪತ್ನಿ ಕೊಲೆ ಮಾಡಿ ಎಮ್ಮೆ ಕರು ಸತ್ತಿದೆಂದು ಜೆಸಿಬಿ ಮೂಲಕ ಮನೆ ಅಂಗಳದಲ್ಲಿ ಹೂತು ಹಾಕಿದ ಘಟನೆ ನಿಪ್ಪಾಣಿ ತಾಲೂಕಿನ ಹಂಚನಾಳ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಮಹಾರಾಷ್ಟ್ರ ಕೊಲ್ಲಾಪೂರ ಜಿಲ್ಲೆಯ ಕಾಗಲ ತಾಲೂಕಿನ ನೇರ್ಲಿ ಗ್ರಾಮದ ಸಚಿನ ಸದಾಶಿವ ಭೋಪಳೆ(35). ಕೊಲೆಯಾದ ವ್ಯಕ್ತಿ.
ಪತಿ ಸಚಿನ ಹಾಗೂ ಪತ್ನಿ ಅನಿತಾ ನಡುವೆ ಆಗಾಗ ಅಕ್ರಮ ಸಂಬಂಧದ ಬಗ್ಗೆ ಗಲಾಟೆ ನಡೆಯುತ್ತಿತ್ತು. ಕಳೆದ ಎರಡು ದಿನಗಳ ಹಿಂದೆ ಇಬ್ಬರ ನಡುವೆ ಜಗಳ ನಡೆದು ವಿಕೋಪಕ್ಕೆ ಹೋದಾಗ ಪತ್ನಿ ಕಟ್ಟಿಗೆಯಿಂದ ಹೊಡೆದು ಪತಿಯನ್ನು ಕೊಲೆ ಮಾಡಿದ್ದಾಳೆ.
ಎಮ್ಮೆ ಕರು ಸತ್ತಿದೆಂದು ರಾತ್ರೋರಾತ್ರಿ ಜೆಸಿಬಿ ಚಾಲಕನನ್ನು ಕರೆಯಿಸಿಕೊಂಡು ತಗ್ಗಾ ತೆಗೆಯಿಸಿಕೊಂಡು ಬೆಳಿಗ್ಗೆ ಎಮ್ಮೆ ಕರು ತಗ್ಗಿನಲ್ಲಿ ಮುಚ್ಚುತ್ತೇನೆ ಎಂದು ಜೆಸಿಬಿ ಚಾಲಕನನ್ನು ಕಳಿಸಿಕೊಟ್ಡಿದ್ದಾರೆ. ಈಕೆಗೆ ಸಹಾಯ ಮಾಡಿದ ಸಹೋದರ ಕೃಷ್ಣಾ ಘಾಟಗೆ, ಸಹೋದರಿ ವನಿತಾ ಮತ್ತು ಕೊಲೆ ಮಾಡಿದ ಪತ್ನಿ ತಲೆ ಮರೆಯಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೂರು ದಿನ ಆದ ಬಳಿಕ ವ್ಯಕ್ತಿ ಕಾಣದೇ ಇದ್ದಾಗ ಸಂಶಯ ಮೂಡಿದ ಜೆಸಿಬಿ ಚಾಲಕ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಪೊಲೀಸರು ಮತ್ತು ಕಂದಾಯ ಅಧಿಕಾರಿಗಳು ಗುಂಡಿ ತೆರೆದಾಗ ವ್ಯಕ್ತಿಯ ಶವ ಸಿಕ್ಕಿದೆ. ಸ್ಥಳದಲ್ಲಿ ಪಂಚನಾಮೆ ನಡೆಸಿ ಕೊಲೆ ಮಾಡಿ ತಲೆ ಮರೆಯಿಸಿಕೊಂಡಿರುವ ಮೂವರ ಪತ್ತೆಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ. ನಿಪ್ಪಾಣಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belgavi; ಹೆರಿಗೆ ಬಳಿಕ ಮತ್ತೋರ್ವ ಬಾಣಂತಿ ಸಾವು
Belagavi; ಅಗಲಿದ ಮನಮೋಹನ್ ಸಿಂಗ್ ಅವರಿಗೆ ಕಾಂಗ್ರೆಸ್ ಭಾವಪೂರ್ಣ ಶ್ರದ್ಧಾಂಜಲಿ
Congress: ಪಕ್ಷದೊಳಗೆ ಹೊಸ ನಾಯಕತ್ವಕ್ಕೆ ಅವಕಾಶ ಸಿಗಬೇಕು: ಮಲ್ಲಿಕಾರ್ಜುನ ಖರ್ಗೆ
Belagavi Congress Session: ಗಾಂಧೀಜಿ ಪರಂಪರೆ ಮುಂದುವರಿಸಲು ಬದ್ಧರಾಗಬೇಕು: ಸೋನಿಯಾ
Belagavi: ಬಿಮ್ಸ್ ಆಸ್ಪತ್ರೆಯಲ್ಲಿ ಮತ್ತೊರ್ವ ಬಾಣಂತಿ ಮೃತ್ಯು; ಕುಟುಂಬಸ್ಥರ ಆಕ್ರಂದನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.