ಜಂಜಾಟದಿಂದ ಮುಕ್ತರಾಗಲು ಸಂಗೀತ ಜೀವಾಮೃತ
ಎಲ್ಲಾ ಕಲೆಗಳಿಗಿಂತ ಸಂಗೀತವು ಅತ್ಯಂತ ಶ್ರೇಷ್ಠವಾದ ಕಲೆ
Team Udayavani, Apr 11, 2022, 6:51 PM IST
ಗೋಕಾಕ: ಸಂಗೀತವು ಸಮಸ್ತ ಜೀವರಾಶಿಗಳಿಗೆ ಜೀವಾಮೃತವನ್ನು ನೀಡುತ್ತದೆ. ಮನುಷ್ಯ ಬದುಕಿನ ಜಂಜಾಟದಿಂದ ಸಲೀಸಾಗಿ ಹೊರಬರಲು ಸಂಗೀತವು ದಿವ್ಯವಾದುದು ಎಂದು ಕುಂದರಗಿ ಅಡವಿಸಿದ್ದೇಶ್ವರ ಮಠದ ಶ್ರೀ ಅಮರಸಿದ್ದೇಶ್ವರ ಸ್ವಾಮಿಗಳು ನುಡಿದರು.
ನಗರದ ನ್ಯೂ ಇಂಗ್ಲಿಷ್ ಸ್ಕೂಲ್ ಆವರಣದಲ್ಲಿ ಶನಿವಾರ ಗೋಕಾಕ ತಾಲೂಕು ಪತ್ರಕರ್ತ ಸಂಘ ಹಾಗೂ ರಾಹುಲ್ ಸೊಂಟಕ್ಕಿ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಸಂಗೀತ ಸಂಭ್ರಮ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ನೋವುಗಳನ್ನು ಮರೆಸುವ ಔಷಧ ಸಂಗೀತದಲ್ಲಿದೆ. ಸರ್ವ ರೋಗಕ್ಕೂ ಸಂಗೀತ ಮದ್ದು ಎನ್ನುವುದು ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿದೆ, ತುಂಬಾ ನೋವಾದಾಗ, ಜೀವನದಲ್ಲಿ ಜಿಗುಪ್ಸೆಯಾದಾಗ ಸಂಗೀತ ಕೇಳಿದರೆ ಮನಸ್ಸು ಪ್ರಫುಲ್ಲ ಆಗುತ್ತದೆ ಎಂದರು.
ಗೋಕಾಕ ಶೂನ್ಯ ಸಂಪಾದನಾ ಮಠದ ಶ್ರೀ ಮುರುಘರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಸಂಗೀತಕ್ಕೆ ಇನ್ನೊಂದು ಹೆಸರು ದೇವಭಾಷೆ. ಎಲ್ಲಾ ಕಲೆಗಳಿಗಿಂತ ಸಂಗೀತವು ಅತ್ಯಂತ ಶ್ರೇಷ್ಠವಾದ ಕಲೆ ಎಂದರು. ಕಾರ್ಮಿಕ ಮುಖಂಡ ಅಂಬಿರಾವ್ ಪಾಟೀಲ ಮಾತನಾಡಿ, ನಗರದಲ್ಲಿ ಸಂಗೀತ ಸಂಭ್ರಮದಂಥ ಕಾರ್ಯಕ್ರಮಗಳು ಇನ್ನೂ ಹೆಚ್ಚೆಚ್ಚು ನಡೆಯಲಿ ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ. ಬಳಿಗಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿಜೆಪಿ ನಗರ ಘಟಕ ಅಧ್ಯಕ್ಷ, ಪತ್ರಕರ್ತರ ಸಂಘದ ಗೌರವಾಧ್ಯಕ್ಷ ಭೀಮಶಿ ಭರಮಣ್ಣವರ, ಗೋಕಾಕ ಪತ್ರಕರ್ತರ ಸಂಘದ ಅಧ್ಯಕ್ಷ ಮನೋಹರ ಮ್ಯಾಗೇರಿ, ರಾಹುಲ ಸೊಂಟಕ್ಕಿ ಟ್ರಸ್ಟ್ ಅಧ್ಯಕ್ಷ ಲಕ್ಷ್ಮಣ ಸೊಂಟಕ್ಕಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ವಿವಿಧ ಕ್ಷೇತ್ರದ ಸಾಧಕರಾದ ನಿರಂಜನ ಬನ್ನಿಶೆಟ್ಟಿ,ಮೋಹನ ಡಿ.ಆರ್., ರಾಘು ಹೊಸಮನಿ, ಸಚೀನ ಸಮಯ, ಸಂಜು ಖನಗಾಂವಿ, ಶ್ರೀಕಾಂತ ರತನ್, ಶ್ರವಣ ಮನ್ನಿಕೇರಿ, ಪ್ರಶಾಂತ ಕುರಬೇಟ, ಬಾಬುಲಾಲ, ಜಾವೇದ ಗೋಕಾಕ, ಸುನೀಲ ಮಾಂಗಲೇಕರ, ಯುಸೂಫ ಫಿರಜಾದೆ, ಪವನ ಮಹಾಲಿಂಗಪುರ ಅವರನ್ನು ಸನ್ಮಾನಿಸಲಾಯಿತು. ರಮೇಶ ಸಾವಳಗಿ, ಯಲ್ಲೇಶಕುಮಾರ ನಿರೂಪಿಸಿದರು. ನಾಡಿನ ಖ್ಯಾತ ಕಲಾವಿದರಾದ ಕುರಿಗಾಹಿ ಹನುಮಂತ, ಶ್ರೀರಾಮ ಕಾಸರ, ಶೀಲಾ ಹಿರೇಮಠ, ಅಜಯ ಸಾರಾಪುರ, ಸೇರಿದಂತೆ ಅನೇಕ ಕಲಾವಿದರು ತಮ್ಮ ಹಾಡಿನ ಮೂಲಕ ಮನಸೂರೆಗೊಂಡರು.
ಗೋಕಾಕ ಜಿಲ್ಲೆ ಅಥವಾ ಪ್ರತ್ಯೇಕ ರಾಜ್ಯ
ಸರ್ಕಾರವೇ ಗೋಕಾಕನ್ನು ಜಿಲ್ಲೆಯನ್ನಾಗಿ ಘೋಷಣೆ ಮಾಡಿದರೆ ಗೋಕಾಕ ಜಿಲ್ಲೆ ಮಾತ್ರ ಆಗುತ್ತದೆ. ನಾವಾಗಿಯೇ ಹೋರಾಟಕ್ಕಿಳಿದರೆ ಗೋಕಾಕನ್ನು ಜಿಲ್ಲೆಯಾಗಿ ಪಡೆಯುವುದರ ಜೊತೆಗೆ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವನ್ನೂ ಪಡೆಯುತ್ತೇವೆ ಎಂದು ಕುಂದರಗಿ ಅಡವಿಸಿದ್ದೇಶ್ವರ ಮಠದ ಶ್ರೀ ಅಮರಸಿದ್ದೇಶ್ವರ ಸ್ವಾಮಿಗಳು ಎಚ್ಚರಿಕೆ ನೀಡಿದರು. ಗೋಕಾಕ ತಾಲೂಕಿಗೆ ಜಿಲ್ಲೆ ಆಗುವ ಎಲ್ಲ ಅರ್ಹತೆ ಇದೆ. ಆದಷ್ಟು ಬೇಗ ಗೋಕಾಕ ಜಿಲ್ಲೆಯಾಗಿ ಸರ್ಕಾರ ಘೋಷಣೆ ಮಾಡಬೇಕು. ಬೆಳಗಾವಿ ಜಿಲ್ಲೆ ವಿಭಜನೆ ಮಾಡಿ ಗೋಕಾಕಿಗೆ ಜಿಲ್ಲೆಯ ಸ್ಥಾನಮಾನ ನೀಡಬೇಕು ಎಂದು ಕುಂದರಗಿ ಸ್ವಾಮೀಜಿ ಆಗ್ರಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress Session: ನಾನಿನ್ನೂ ಸತ್ತಿಲ್ಲ, ಅಧ್ಯಕ್ಷನಾಗಿ ಇನ್ನೂ ಬದುಕಿದ್ದೇನೆ: ಡಿಕೆಶಿ
Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
Belagavi; ಬಹಳ ನೋವಾಗಿದೆ, ನೂರು ಸಿ.ಟಿ.ರವಿ ಬಂದರೂ ಹೆದರುವುದಿಲ್ಲ: ಲಕ್ಷ್ಮೀ ಹೆಬ್ಬಾಳಕರ
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Mrinal Hebbalkar: ನನ್ನ ತಾಯಿಗೆ ರವಿ ಬಳಸಿದ ಪದದಿಂದ ನೋವಾಗಿದೆ: ಮೃಣಾಲ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Drone Prathap: ಕೃಷಿ ಹೊಂಡದಲ್ಲಿ ಸ್ಫೋಟ ಪ್ರಕರಣ; ಡ್ರೋನ್ ಪ್ರತಾಪ್ ಜಾಮೀನು ಮಂಜೂರು
Revival: ಭಾರತಕ್ಕೆ ಬಾಂಗ್ಲಾದೇಶ ಸೆಡ್ಡು: ಪಾಕಿಸ್ಥಾನ ಜತೆ ವಹಿವಾಟಿಗೆ ಸಜ್ಜು!
Derogatory Term: ಸಿ.ಟಿ.ರವಿ ಪ್ರಕರಣ ಮುಗಿದ ಅಧ್ಯಾಯ, ತನಿಖೆ ಬೇಕಿಲ್ಲ: ಸಭಾಪತಿ ಸ್ಪಷ್ಟನೆ
Language Communication: ನಾಪತ್ತೆಯಾಗಿದ್ದ ಮಹಿಳೆ “ಕನ್ನಡ’ದಿಂದಾಗಿ ಪತ್ತೆ!
ವಾಯು ಮಾಲಿನ್ಯಕ್ಕೆ ನಗರ ಪ್ರದೇಶ ಮನೆಗಳೇ ಕಾರಣ! ಬೆಂಗಳೂರಿನ ಐಐಎಸ್‌ಸಿ ಸೇರಿ 2 ಅಧ್ಯಯನ ವರದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.