Nandikoor-Kasaragod ವಿದ್ಯುತ್‌ ಲೈನ್‌ ರಾಜ್ಯ ಸರಕಾರದ ವ್ಯಾಪ್ತಿಗೆ ಬರುವುದಿಲ್ಲ: ಜಾರ್ಜ್‌

Team Udayavani, Dec 17, 2024, 6:50 AM IST

Nandikoor-Kasaragod ವಿದ್ಯುತ್‌ ಲೈನ್‌ ರಾಜ್ಯ ಸರಕಾರದ ವ್ಯಾಪ್ತಿಗೆ ಬರುವುದಿಲ್ಲ: ಜಾರ್ಜ್‌

ಬೆಳಗಾವಿ: ನಂದಿಕೂರು-ಕಾಸರ ಗೋಡು ವಿದ್ಯುತ್‌ ಲೈನ್‌ ಮಾರ್ಗ ಬದಲಾವಣೆ, ತಾಂತ್ರಿಕ ಕಾರ್ಯ ಸಾಧ್ಯತೆ ಮತ್ತು ಆರ್ಥಿಕ ಪರಿಣಾಮಗಳ ಸಾಧ್ಯಾಸಾಧ್ಯತೆಗಳ ಬಗ್ಗೆ ಕೇಂದ್ರ ಸರಕಾರವು ಪರಾಮರ್ಶಿಸಿ ನಿರ್ಧರಿಸಬೇಕಾಗಿದ್ದು ಯೋಜನೆಯ ಯಾವುದೇ ಬದಲಾವಣೆಯ ಬಗ್ಗೆ ನಿರ್ಧರಿಸುವುದು ರಾಜ್ಯ ಸರಕಾರದ ವ್ಯಾಪ್ತಿಗೆ ಬರುವುದಿಲ್ಲ ಎಂದು ಇಂಧನ ಸಚಿವ ಕೆ. ಜಾರ್ಜ್‌ ಹೇಳಿದರು.

ವಿಧಾನ ಪರಿಷತ್ತಿನಲ್ಲಿ ಶೂನ್ಯ ವೇಳೆಯಲ್ಲಿ ಕಾಂಗ್ರೆಸ್‌ ಸದಸ್ಯ ಮಂಜುನಾಥ್‌ ಭಂಡಾರಿ ಅವರು “ಉದಯವಾಣಿ’ಯಲ್ಲಿ ಪ್ರಕಟವಾದ ವರದಿ ಪ್ರಸ್ತಾವಿಸಿ ಸದನದ ಗಮನ ಸಳೆದರು. ಇದಕ್ಕೆ ಉತ್ತರ ನೀಡಿದ ಸಚಿವ ಜಾರ್ಜ್‌, 400 ಕೆ.ವಿ. ಡಬಲ್‌ ಸರ್ಕ್ನೂಟ್‌ ಉಡುಪಿ-ಕಾಸರಗೋಡು ವಿದ್ಯುತ್‌ ಪ್ರಸರಣ ಮಾರ್ಗವು ಅಂತಾರಾಜ್ಯ ಪ್ರಸರಣ ಮಾರ್ಗವಾಗಿದ್ದು ಕೇಂದ್ರ ಸರಕಾರ ಟಿಬಿಸಿಬಿ ಆಧಾರದಲ್ಲಿ ಅನುಷ್ಠಾನಗೊಳಿಸುತ್ತಿದೆ. ಅದು ಕೇರಳ ಮತ್ತು ಕರ್ನಾಟಕ ರಾಜ್ಯಗಳಲ್ಲಿ ಹಾದುಹೋಗುತ್ತಿದ್ದು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ 68 ಕಿ.ಮೀ. ಮಾರ್ಗ ರಚನೆಯಾಗಬೇಕಾಗಿರುತ್ತದೆ. ಈ ಮಾರ್ಗವು ಕೇಂದ್ರ ಸರಕಾರದ ಪ್ರಸರಣ ಮಾರ್ಗವಾಗಿದ್ದರೂ ಸಹ ಮಾರ್ಗ ರಚನೆ ಅಗತ್ಯವಿರುವ ರಹದಾರಿ ಸಮಸ್ಯೆಗಳನ್ನು ಇತ್ಯರ್ಥಪಡಿಸುವುದನ್ನು ಮತ್ತು ಪರಿಹಾರ ನಿಗದಿಪಡಿಸುವುದು ಇತ್ಯಾದಿಗಳ ಆಡಳಿತಾತ್ಮಕ ಸಹಕಾರವನ್ನು ರಾಜ್ಯ ಸರಕಾರ ನೀಡಬೇಕಾಗಿರುತ್ತದೆ ಎಂದರು.

ಭೂಮಾಲಕರಿಗೆ ಅನುಕೂಲವಾಗುವಂತೆ ಮತ್ತು ಹೆಚ್ಚಿನ ಮರಗಳಿಗೆ ಹಾನಿಯಾಗುವುದನ್ನು ತಪ್ಪಿಸಲು ಇತ್ತೀಚೆಗೆ ಪ್ರಸರಣ ಮಾರ್ಗ ಅನುಷ್ಠಾನಗೊಳಿಸುತ್ತಿರುವ ಸಂಸ್ಥೆಯು ಕೇಂದ್ರ ಸರಕಾರದ ಅನುಮೋದನೆಯೊಂದಿಗೆ ನವೀನ ತಂತ್ರಜ್ಞಾನ ಕ್ರಮಗಳನ್ನು ಕೈಗೊಳ್ಳುತ್ತಿದೆ. ಗೋಪುರಗಳ ಎತ್ತರವನ್ನು ಹೆಚ್ಚಿಸುವುದು, ಪ್ರಸರಣ ಮಾರ್ಗದ ಅಂತರವನ್ನು ಕಡಿಮೆಗೊಳಿಸುವುದು ಹಾಗೂ ಮಾರ್ಗ ಅಳವಡಿಸಲು ಡ್ರೋನ್‌ ತಂತ್ರಜ್ಞಾನ ಕ್ರಮಗಳನ್ನು ಬಳಕೆ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.

ನವೀನ ತಂತ್ರಜ್ಞಾನ ಕಾರ್ಯದ ಹಿನ್ನೆಲೆಯಲ್ಲಿ ಈ ಹಿಂದೆ ಪ್ರಸ್ತಾಪಿಸಿದ್ದ 1,78,356 ಮರಗಳ ಬದಲಿಗೆ 1,28,913 ಮರಗಳನ್ನು ತೆರವುಗೊಳಿಸಬೇಕಾಗಿದ್ದು ಒಟ್ಟು 48,443 ಮರಗಳು ರಕ್ಷಿಸಲ್ಪಟ್ಟಿವೆ ಎಂದರು.

ಇದಕ್ಕೂ ಮೊದಲು ಯೋಜನೆ ವಿರೋಧಿಸಿ ಇನ್ನಾ ಗ್ರಾ.ಪಂ. ವ್ಯಾಪ್ತಿಯಲ್ಲಿ ರೈತರು ಅಹೋ ರಾತ್ರಿ ಧರಣಿ ನಡೆಸುತ್ತಿದ್ದಾರೆ. ಜನರ
ವಿರೋಧ ಲೆಕ್ಕಿಸದೆ ಟವರ್‌ ನಿರ್ಮಾಣಕ್ಕೆ ಮುಂದಾದಲ್ಲಿ ಯಾವುದೇ ಕಾರಣಕ್ಕೂ ನಾವು ಬಿಡುವುದಿಲ್ಲ ಎಂದು ಮಂಜುನಾಥ ಭಂಡಾರಿ ಗಮನ ಸೆಳೆದಿದ್ದರು. ಇದಕ್ಕೆ ಇಂಧನ ಸಚಿವರು ಉತ್ತರ ನೀಡಿದ್ದಾರೆ.

ಕಾನ್‌ಸ್ಟೆಬಲ್‌ ದಂಪತಿ ಅಂತರ ಜಿಲ್ಲಾ ವರ್ಗಾವಣೆಗೆ ಒತ್ತಾಯ ಪೊಲೀಸ್‌ ಇಲಾಖೆಯಲ್ಲಿ ಪತಿ-ಪತ್ನಿ ವರ್ಗಾವಣೆ ಪ್ರಕರಣದಲ್ಲಿ ಏಳು ವರ್ಷ ಪೂರೈಸಿದವರನ್ನು ಅಂತರ ಜಿಲ್ಲಾ ವರ್ಗಾವಣೆ ಮಾಡುವ ಮೂಲಕ ಪತಿ-ಪತ್ನಿ ಒಂದೇ ಕಡೆ ಕರ್ತವ್ಯ ನಿರ್ವಹಿಸಲು ಅವಕಾಶ ಕಲ್ಪಿಸಬೇಕೆಂದು ಮಂಜುನಾಥ ಭಂಡಾರಿ ಆಗ್ರಹಿಸಿದರು.

ಇಲಾಖೆಯಲ್ಲಿ ಪತಿ-ಪತ್ನಿ ಪರಸ್ಪರ ವರ್ಗಾವಣೆ ಪ್ರಕರಣದಲ್ಲಿ ಏಳು ವರ್ಷ ಪೂರೈಸಬೇಕೆಂಬ ನಿಯಮ ಪಾಲಿಸಿದವರ ವರ್ಗಾವಣೆ ಬಗ್ಗೆ ಸರಕಾರ ಗಮನ ಹರಿಸುತ್ತಿಲ್ಲ ಎಂಬ ಆಕ್ರೋಶ ಇದ್ದು, ಈ ಬಗ್ಗೆ ಪ್ರತಿ ಭಟನೆ ನಡೆಸಲು ಪೊಲೀಸ್‌ ಕುಟುಂಬಗಳು ಸಿದ್ಧತೆ ನಡೆಸಿವೆ ಎಂದರು.

ಸಭಾನಾಯಕ ಎನ್‌.ಎಸ್‌. ಬೋಸರಾಜ ಸಚಿವರಿಂದ ಉತ್ತರ ಕೊಡಿಸುವ ಭರವಸೆ ನೀಡಿ ದರು.

ಟಾಪ್ ನ್ಯೂಸ್

Hush Money Case: ಪ್ರಮಾಣವಚನಕ್ಕೂ ಮುನ್ನ ಟ್ರಂಪ್ ಗೆ ಶಾಕ್…! ಏನಿದು ಪ್ರಕರಣ

Hush Money Case: ಪ್ರಮಾಣವಚನಕ್ಕೂ ಮುನ್ನ ಟ್ರಂಪ್ ಗೆ ಶಾಕ್…! ಏನಿದು ಪ್ರಕರಣ

Tabla Maestro; ಉಸ್ತಾದ್‌ ಜಾಕೀರ್‌ ಹುಸೇನ್‌ ದೈವೀ ಪುರುಷ

Tabla Maestro; ಉಸ್ತಾದ್‌ ಜಾಕೀರ್‌ ಹುಸೇನ್‌ ದೈವೀ ಪುರುಷ

Zakir Hussain; ನಾದಯೋಗಿಯ ನಿನಾದ ಸ್ತಬ್ಧ

Zakir Hussain; ನಾದಯೋಗಿಯ ನಿನಾದ ಸ್ತಬ್ಧ

Karnataka: ಕೊಳವೆ ಬಾವಿ ಮುಚ್ಚದಿದ್ದರೆ 1 ವರ್ಷ ಜೈಲು ಶಿಕ್ಷೆ

Karnataka: ಕೊಳವೆ ಬಾವಿ ಮುಚ್ಚದಿದ್ದರೆ 1 ವರ್ಷ ಜೈಲು ಶಿಕ್ಷೆ

CM-teach

Suvarna Soudha: ಅನುಭವ ಮಂಟಪದ ಪಾಠ ಮಾಡಿದ ಸಿಎಂ ಸಿದ್ದರಾಮಯ್ಯ

ಏಲಕ್ಕಿ ನಾಡಿಗಿಂತ ಸಕ್ಕರೆ ನಾಡು ಸಮ್ಮೇಳನ ಭಿನ್ನ: ಡಾ| ಮಹೇಶ್‌ ಜೋಶಿ

ಏಲಕ್ಕಿ ನಾಡಿಗಿಂತ ಸಕ್ಕರೆ ನಾಡು ಸಮ್ಮೇಳನ ಭಿನ್ನ: ಡಾ| ಮಹೇಶ್‌ ಜೋಶಿ

ಕಾಣದ ಕಾನನಕ್ಕೆ ಹಂಬಲಿಸಿದ ಮನ! ಸಾವಿರಾರು ಸಸಿಗಳನ್ನು ಮಕ್ಕಳಂತೆ ಜೋಪಾನ ಮಾಡಿದ್ದ ತುಳಸಿ ಗೌಡ

ಕಾಣದ ಕಾನನಕ್ಕೆ ಹಂಬಲಿಸಿದ ಮನ! ಸಾವಿರಾರು ಸಸಿಗಳನ್ನು ಮಕ್ಕಳಂತೆ ಜೋಪಾನ ಮಾಡಿದ್ದ ತುಳಸಿ ಗೌಡ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Tabla Maestro; ಉಸ್ತಾದ್‌ ಜಾಕೀರ್‌ ಹುಸೇನ್‌ ದೈವೀ ಪುರುಷ

Tabla Maestro; ಉಸ್ತಾದ್‌ ಜಾಕೀರ್‌ ಹುಸೇನ್‌ ದೈವೀ ಪುರುಷ

Karnataka: ಕೊಳವೆ ಬಾವಿ ಮುಚ್ಚದಿದ್ದರೆ 1 ವರ್ಷ ಜೈಲು ಶಿಕ್ಷೆ

Karnataka: ಕೊಳವೆ ಬಾವಿ ಮುಚ್ಚದಿದ್ದರೆ 1 ವರ್ಷ ಜೈಲು ಶಿಕ್ಷೆ

CM-teach

Suvarna Soudha: ಅನುಭವ ಮಂಟಪದ ಪಾಠ ಮಾಡಿದ ಸಿಎಂ ಸಿದ್ದರಾಮಯ್ಯ

ಏಲಕ್ಕಿ ನಾಡಿಗಿಂತ ಸಕ್ಕರೆ ನಾಡು ಸಮ್ಮೇಳನ ಭಿನ್ನ: ಡಾ| ಮಹೇಶ್‌ ಜೋಶಿ

ಏಲಕ್ಕಿ ನಾಡಿಗಿಂತ ಸಕ್ಕರೆ ನಾಡು ಸಮ್ಮೇಳನ ಭಿನ್ನ: ಡಾ| ಮಹೇಶ್‌ ಜೋಶಿ

ಕಿತ್ತೂರಿಗೂ ಕಲ್ಯಾಣ ಕರ್ನಾಟಕ ಸ್ಥಾನ ನೀಡಿ: ಶಾಸಕರ ಆಗ್ರಹ

ಕಿತ್ತೂರಿಗೂ ಕಲ್ಯಾಣ ಕರ್ನಾಟಕ ಸ್ಥಾನ ನೀಡಿ: ಶಾಸಕರ ಆಗ್ರಹ

MUST WATCH

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

udayavani youtube

ಅಯ್ಯಪ್ಪ ಸ್ವಾಮಿ ಪವಾಡ | ಮಾತು ಬಾರದ ಬಾಲಕನಿಗೆ ಮಾತು ಬಂತು!

udayavani youtube

CCTV Footage | Udupi; ಹೆದ್ದಾರಿಯಲ್ಲೇ ಶರವೇಗದಲ್ಲಿ ಬಂದು ಅಪ್ಪಳಿಸಿದ ಕಾರು.

ಹೊಸ ಸೇರ್ಪಡೆ

Hush Money Case: ಪ್ರಮಾಣವಚನಕ್ಕೂ ಮುನ್ನ ಟ್ರಂಪ್ ಗೆ ಶಾಕ್…! ಏನಿದು ಪ್ರಕರಣ

Hush Money Case: ಪ್ರಮಾಣವಚನಕ್ಕೂ ಮುನ್ನ ಟ್ರಂಪ್ ಗೆ ಶಾಕ್…! ಏನಿದು ಪ್ರಕರಣ

Tabla Maestro; ಉಸ್ತಾದ್‌ ಜಾಕೀರ್‌ ಹುಸೇನ್‌ ದೈವೀ ಪುರುಷ

Tabla Maestro; ಉಸ್ತಾದ್‌ ಜಾಕೀರ್‌ ಹುಸೇನ್‌ ದೈವೀ ಪುರುಷ

Zakir Hussain; ನಾದಯೋಗಿಯ ನಿನಾದ ಸ್ತಬ್ಧ

Zakir Hussain; ನಾದಯೋಗಿಯ ನಿನಾದ ಸ್ತಬ್ಧ

Karnataka: ಕೊಳವೆ ಬಾವಿ ಮುಚ್ಚದಿದ್ದರೆ 1 ವರ್ಷ ಜೈಲು ಶಿಕ್ಷೆ

Karnataka: ಕೊಳವೆ ಬಾವಿ ಮುಚ್ಚದಿದ್ದರೆ 1 ವರ್ಷ ಜೈಲು ಶಿಕ್ಷೆ

CM-teach

Suvarna Soudha: ಅನುಭವ ಮಂಟಪದ ಪಾಠ ಮಾಡಿದ ಸಿಎಂ ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.