122 ಜನರನ್ನು ರಕ್ಷಿಸಿದ ಎನ್‌ಡಿಆರ್‌ಎಫ್ ತಂಡ
Team Udayavani, Aug 9, 2019, 11:57 AM IST
ಗೋಕಾಕ: ತಾಲೂಕಿನ ಅಕ್ಕತಂಗೇರಹಾಳ ಗ್ರಾಮದಲ್ಲಿ ನೆರೆ ಹಾವಳಿಯಲ್ಲಿ ಸಿಲುಕಿದ ಸಂತ್ರಸ್ತರನ್ನು ಕರೆ ತರಲಾಯಿತು.
ಗೋಕಾಕ: ಘಟಪ್ರಭಾ ನದಿ ಅಷ್ಟೇ ಅಲ್ಲ, ನಗರದ ಹೊರ ವಲಯದಲ್ಲಿ ಹರಿಯುವ ಮಾರ್ಕಂಡೇಯ ನದಿಗೂ ಪ್ರವಾಹ ಬಂದಿದ್ದು ಪ್ರವಾಹದಿಂದಾಗಿ ತೋಟ (ನಡುಗಡ್ಡೆ)ಯಲ್ಲಿ ಸಿಲುಕಿದ ಯುವಕ ಗುರುವಾರದಂದು ಪ್ರವಾಹವನ್ನು ಈಜಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಕಳೆದ 4-5 ದಿನಗಳಿಂದ ನಗರದ ಹೊರವಲಯದಲ್ಲಿರುವ ಯೋಗಿಕೊಳ್ಳ ರಸ್ತೆಯ ಘಟ್ಟಿ ಬಸವಣ್ಣ ದೇವಸ್ಥಾನ ಹತ್ತಿರವಿರುವ ಹೆಜ್ಜೆಗಾರ ಅವರ ತೋಟದ (ನಡುಗಡ್ಡೆ)ಯಲ್ಲಿ ಸಿಲುಕಿರುವ ಯುವಕ ಮಾಧವಾನಂದ (ನಂದು) ದೊಡಮನಿ (23) ಎಂಬ ಯುವಕನು ದನಗಳಿಗೆ ಮೇವುನ್ನು ಹಾಕಿ ಹೊರ ಬರುವಷ್ಟರಲ್ಲಿ ಪ್ರವಾಹದ ಸುಳಿಗೆ ಸಿಲುಕಿದ್ದನ್ನು. ಗುರುವಾರದಂದು ಆತನನ್ನು ಹೊರ ತರಲು ತಾಲೂಕಾಡಳಿತ ಹೆಲಿಕಾಪ್ಟರ್‌ಹಾಗೂ ಯಾಂತ್ರಿಕೃತ ಬೋಟ್ ಮೂಲಕ ಕರೆ ತರುವ ಏರ್ಪಾಟು ಮಾಡುವ ಮೊದಲೇ ಯುವಕನು ಪ್ರವಾಹದಲ್ಲಿ ಸುಮಾರು ಒಂದು ಕಿ.ಮೀ. ಈಜಿ ದಡ ಸೇರಿದ್ದಾನೆ. ಎನ್‌ಡಿಆರ್‌ಎಫ್ ತಂಡ ಹೆಲಿಕಾಪ್ಟರ್ ಹಾಗೂ ಯಾಂತ್ರೀಕೃತ ಬೋಟಗಳನ್ನು ಬಳಿಸಿ ಪ್ರವಾಹದಲ್ಲಿ ಸಿಲುಕಿದ್ದ ಹುಣಶ್ಯಾಳ ಪಿ.ವೈ.ದಲ್ಲಿ 60 ಜನರನ್ನು, ಅಂಕತಂಗೇರಹಾಳದಲ್ಲಿ 30ಜನರನ್ನು, ಸುಣಧೋಳಿಯಲ್ಲಿ ಇಬ್ಬರನ್ನು, ಉದಗಟ್ಟಿಯಲ್ಲಿ 16 ಜನರನ್ನು ರಕ್ಷಿಸಿದ್ದು ಅದರಲ್ಲಿಯ ಉದಗಟ್ಟಿ ಗ್ರಾಮದ 16 ಜನರನ್ನು ಹೆಲಿಕಾಪ್ಟರ್ ರಕ್ಷಿಸಲಾಗಿದೆ ಎಂದು ಎಸಿ ಶಿವಾನಂದ ಭಜಂತ್ರಿ ಪತ್ರಿಕೆ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi Session: ಬರಾಕ್ ಒಬಾಮಾ ಆಹ್ವಾನಕ್ಕೆ ಸರಕಾರ ತೀರ್ಮಾನ
Belagavi: ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದ ಮುಗಿದ ಅಧ್ಯಾಯ: ಸಚಿವ ಎಚ್.ಕೆ. ಪಾಟೀಲ್
Belagavi: ತಹಶೀಲ್ದಾರ್ ಕೊಠಡಿಯಲ್ಲೇ ಸಿಬ್ಬಂದಿ ನೇಣಿಗೆ ಶರಣು, ಸ್ಥಳದಲ್ಲಿ ಡೆತ್ ನೋಟ್ ಪತ್ತೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Bailhongal: ಯುವಕನಿಗೆ ಚಾಕು ಇರಿದು ಬರ್ಬರವಾಗಿ ಕೊ*ಲೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.