NEP ರದ್ದು ಮಾಡಿಲ್ಲ: ಸಚಿವ ಡಾ| ಎಂ.ಸಿ.ಸುಧಾಕರ್
Team Udayavani, Dec 11, 2023, 11:17 PM IST
ಬೆಳಗಾವಿ: ಕೇಂದ್ರ ಸರಕಾರ ಜಾರಿಗೊಳಿಸಿದ ರಾಷ್ಟ್ರೀಯ ನೂತನ ಶಿಕ್ಷಣ ನೀತಿಯನ್ನು ರದ್ದುಪಡಿಸಲಾಗಿದೆ ಎಂದು ಹೇಳಲಾಗುತ್ತಿದೆ. ಅದನ್ನು ನಾವು ರದ್ದುಪಡಿಸಿಲ್ಲ. ಪ್ರಸ್ತುತ ಎನ್‌ಇಪಿ ಅಡಿಯಲ್ಲಿ ವ್ಯಾಸಂಗ ಕಲಿಯುತ್ತಿರುವವರಿಗೆ ಯಾವುದೇ ತೊಂದರೆ ಆಗದಂತೆ ರಾಜ್ಯ ಶಿಕ್ಷಣ ನೀತಿಯನ್ನು ಜಾರಿಗೊಳಿಸುತ್ತೇವೆ ಎಂದು ಉನ್ನತ ಶಿಕ್ಷಣ ಸಚಿವ ಡಾ| ಎಂ.ಸಿ.ಸುಧಾಕರ್ ಹೇಳಿದ್ದಾರೆ.
ವಿಧಾನ ಪರಿಷತ್‌ನಲ್ಲಿ ಎನ್‌ಇಪಿ-ಎಸ್‌ಇಪಿ ಕುರಿತಾಗಿ ನಿಯಮ 330ರ ಅಡಿಯಲ್ಲಿ ನಡೆದ ಚರ್ಚೆಗೆ ಉತ್ತರಿಸಿದ ಅವರು, ಈ ಮಾತು ಹೇಳಿದರು. ಪ್ರಸ್ತುತ ಐದನೇ ಸೆಮ್‌ನಲ್ಲಿ ಇರುವ ವಿದ್ಯಾರ್ಥಿಗಳ ವ್ಯಾಸಂಗ ಮುಂದುವರಿಕೆಗೆ ತೊಂದರೆಯಾಗದು. ರಾಜ್ಯ ಶಿಕ್ಷಣ ನೀತಿ ಇನ್ನೂ ಸ್ಪಷ್ಟ ರೂಪ ತಾಳದ ಹೊರತು ಎನ್‌ಇಪಿ ರದ್ದು ಹೇಗೆ ಸಾಧ್ಯ ಎಂದು ಸಚಿವರು ಹೇಳಿದರು.
ಡಾ| ಕಸ್ತೂರಿ ರಂಗನ್ 2016ರಲ್ಲಿ ಕರ್ನಾಟಕ ಸರಕಾರಕ್ಕೆ ನೀಡಿದ ವರದಿಯ ಹಲವು ಅಂಶಗಳನ್ನೇ ಉಲ್ಲೇಖವಾಗಿ ತೆಗೆದು ಕೊಳ್ಳಲಾಗಿದ್ದು, ವಿದೇಶಗಳ ವಿಶ್ವ ವಿದ್ಯಾನಿಲಯಗಳ ಹಲವು ವಿಷಯಗಳನ್ನು ನಕಲು ಮಾಡಿ ಎನ್‌ಇಪಿ ರೂಪಿಸಿ ಅದನ್ನೇ ಕ್ರಾಂತಿಕಾರಕ ಎಂದು ಬಿಂಬಿಸಲಾಗುತ್ತಿದೆ. ನಮ್ಮ ರಾಜ್ಯದ ವಿದ್ಯಾರ್ಥಿಗಳಿಗೆ ಇಲ್ಲಿನ ಸಂಸ್ಕೃತಿಗೆ ಏನು ಶಿಕ್ಷಣಬೇಕೋ ಅದನ್ನು ನೀಡುವುದಕ್ಕಾಗಿ ನಾವು ಎಸ್‌ಇಪಿ ಜಾರಿಗೆ ಮುಂದಾಗಿದ್ದೇವೆ ಎಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.