Exit poll ಸಮೀಕ್ಷೆಗಳ ಬಗ್ಗೆ ನಂಬಿಕೆಯಿಲ್ಲ: ಸಚಿವ ಸತೀಶ್ ಜಾರಕಿಹೊಳಿ
ವಾಲ್ಮೀಕಿ ನಿಗಮದ ಹಗರಣ ತನಿಖೆ ಸಿಬಿಐಗೆ ನೀಡುವುದಿಲ್ಲ.. ವರದಿ ಬಂದ ಬಳಿಕ ಮುಂದಿನ ಕ್ರಮ
Team Udayavani, Jun 3, 2024, 6:45 PM IST
ಬೆಳಗಾವಿ : ಲೋಕಸಭೆ ಚುನಾವಣೆ ಫಲಿತಾಂಶ ಕುರಿತ ಸಮೀಕ್ಷೆಗಳ ಬಗ್ಗೆ ನಂಬಿಕೆಯಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಸೋಮವಾರ ಹೇಳಿಕೆ ನೀಡಿದ್ದಾರೆ.
ಚಿಕ್ಕೋಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ‘ಲೋಕಸಭಾ ಚುನಾವಣೆಯ ಕೆಲವು ಸಮೀಕ್ಷೆಗಳಲ್ಲಿ ಕಾಂಗ್ರೆಸ್ ಗೆ ಹಿನ್ನಡೆ ಎಂದು ಹೇಳುತ್ತಿವೆ. ಆದರೆ, ಕೆಲವೊಂದು ಸಮೀಕ್ಷೆಗಳು ಕಾಂಗ್ರೆಸ್‌ಗೆ ಮುನ್ನಡೆ ಆಗಲಿದೆ ಎಂಬ ಸುಳಿವನ್ನೂ ನೀಡಿವೆ.ಈಗಾಗಲೇ ಮತ ಹಾಕಿಯಾಗಿದೆ. ಜನರೇ ಈ ವಿಚಾರದಲ್ಲಿ ಗೊಂದಲ್ಲಿದ್ದಾರೆ. ಫಲಿತಾಂಶಕ್ಕೆ ತುಂಬಾ ಸಮಯ ಉಳಿದಿಲ್ಲ. ಎಲ್ಲರೂ ಕಾದು ನೋಡೋಣ, ಅನಗತ್ಯ ಚರ್ಚೆ ಮಾಡುವ ಅವಶ್ಯಕತೆ ಇಲ್ಲ’ ಎಂದರು.
ಸಿಬಿಐಗೆ ನೀಡುವುದಿಲ್ಲ
ವಾಲ್ಮೀಕಿ ನಿಗಮದ ಹಗರಣ ಸಿಬಿಐಗೆ ನೀಡುವುದಿಲ್ಲ. ಈಗಾಗಲೇ ಪ್ರಕರಣವನ್ನು ಎಸ್ ಐಟಿಗೆ ವಹಿಸಲಾಗಿದೆ. ಆಂತರಿಕ ತನಿಖೆ ಕೂಡ ನಡೆಯುತ್ತಿದೆ. ಯಾವುದೇ ಹೆಜ್ಜೆ ಇಡುವ ಮೊದಲು ತಪ್ಪು ಮಾಡಿದ್ದು ಗೊತ್ತಾಗಬೇಕು. ಆರೋಪ ಮಾಡಿದ್ದಾರೆ ಎಂದು ಸಿಬಿಐ ಗೆ ನೀಡಲು ಆಗುವುದಿಲ್ಲ. ಎಸ್‌ಐಟಿ ಮಧ್ಯಂತರ ವರದಿ ನೀಡಿದರೆ ಮುಖ್ಯಮಂತ್ರಿಗಳು ಗಮನ ಹರಿಸುತ್ತಾರೆ. ಸಚಿವ ನಾಗೇಂದ್ರ ರಾಜೀನಾಮೆ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ಧಾರ ತೆಗೆದುಕೊಳ್ಳಬೇಕು. ಯಾವುದೇ ನಿರ್ಧಾರ ಮಾಡಬೇಕು ಎಂದರೂ ವರದಿ ಬರಬೇಕು. ವರದಿ ಬಂದಾದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ’ ಎಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.