ನೆರೆ ನಿಂತರೂ ನೆಲೆ ಕಾಣದ ಬದುಕು
Team Udayavani, Dec 17, 2019, 3:45 PM IST
ಬೆಳಗಾವಿ: ನಾಲ್ಕು ತಿಂಗಳ ಹಿಂದೆ ಜಿಲ್ಲೆಯಲ್ಲಿ ಎದುರಾಗಿದ್ದ ಪ್ರವಾಹ ಶಾಂತವಾಗಿದ್ದರೂ ಜೀವನ ಯಥಾಸ್ಥಿತಿಗೆ ಬಂದಿಲ್ಲ. ಪರಿಹಾರದ ಚಿಂತೆ ಮನಸ್ಸಿನಲ್ಲಿ ಉಳಿದುಕೊಂಡಿದೆ.
ನೆರೆ ಪೀಡಿತ ಪ್ರದೇಶಗಳಲ್ಲಿನ ಜನರು ಹಲವು ಸಮಸ್ಯೆಗಳನ್ನು ಇನ್ನೂವರೆಗೆ ಎದುರಿಸುತ್ತಿದ್ದಾರೆ. ಸಂತ್ರಸ್ತರಿಗೆ ಸರಕಾರದಿಂದ ಸಮರ್ಪಕ ಪರಿಹಾರ ಸಿಗದೇ ಇರುವುದರಿಂದ ಹಲವಾರು ಕಾನೂನುಗಳ, ಹಕ್ಕು ಹಾಗೂ ನೀತಿಗಳ ಉಲ್ಲಂಘನೆಯಾಗುತ್ತಿದೆ ಎಂಬ ಅಸಮಾಧಾನ ವಿವಿಧ ಸರಕಾರೇತರ ಸಂಘ ಸಂಸ್ಥೆಗಳಿಂದ ವ್ಯಕ್ತವಾಗಿದೆ.
ಮಕ್ಕಳ ಹಕ್ಕುಗಳ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಬೆಂಗಳೂರಿನ ದಿ ಕನ್ಸರ್ನ್ಡ್ ಫಾರ್ ವರ್ಕಿಂಗ್ ಚಿಲ್ಡ್ರನ್ ಸಂಸ್ಥೆಯ ಪ್ರತಿನಿಧಿಗಳು ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ಕೂಲಿ ಕಾರ್ಮಿಕರು ಮತ್ತು ಸಮುದಾಯದವರ ಹಕ್ಕುಗಳಿಗಾಗಿ ಹೋರಾಟ ಮಾಡುತ್ತಿರುವ ಜಾಗೃತಿ ಮಹಿಳಾ ಒಕ್ಕೂಟ ಹಾಗೂ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆಯ ಸದಸ್ಯರ ಜೊತೆ ನಡೆಸಿದ ಸಮೀಕ್ಷೆಯಲ್ಲಿ ಈ ಅಸಮಾಧಾನ ವ್ಯಕ್ತವಾಗಿದೆ.
ನೆರೆ ಬಂದು ಹೋದ ನಂತರ ಸರಕಾರದಿಂದ ತಾತ್ಕಾಲಿಕವಾಗಿ ಪರಿಹಾರ ಬಂತು. ಆದರೆ ಮುಂದೆ ಆಗತ್ಯವಾಗಿ ಆಗಬೇಕಾದ ಪರಿಹಾರ ಕಾರ್ಯ ಹಾಗೂ ಶಾಶ್ವತ ಯೋಜನೆಗಳ ಬಗ್ಗೆ ಏನೂ ಆಗುತ್ತಿಲ್ಲ. ಹೀಗಾಗಿ ಬಿದ್ದಿರುವ ಮನೆಗಳ ಅವಶೇಷದಲ್ಲಿ ಈಗಲೂ ಆತಂಕದಿಂದಲೇ ಜೀವನ ಕಳೆಯವಂತಾಗಿದೆ. ನೆರೆ ಪೀಡಿತ ಯಾವುದೇ ಗ್ರಾಮಕ್ಕೆ ಹೋದರೂ ಸಂತ್ರಸ್ತರ ನೋವಿನ ಮಾತು ಕೇಳಿಬರುತ್ತದೆ. ಬಿದ್ದಿರುವ ಮನೆಗಳಿಗೆ ಸಂಪೂರ್ಣ ಪರಿಹಾರ ಸಿಗಲಿದೆಯೇ. ಮುಂದಿನ ವರ್ಷ ಪ್ರವಾಹ ಬಂದರೆ ಏನು ಗತಿ. ಶಾಲಾ ಕಟ್ಟಡಗಳ ಗತಿ ಏನು ಎಂಬ ಆತಂಕ ಎಲ್ಲರಲ್ಲಿ ಕಾಣುತ್ತಿದೆ.
ಜಿಲ್ಲೆಯ ನೆರೆ ಸಂತ್ರಸ್ತರ ಈಗಿನ ಬದುಕು ಹಾಗೂ ಸರಕಾರದಿಂದ ಯಾವ ರೀತಿಯ ಹಾಗೂ ಎಷ್ಟು ಪ್ರಮಾಣದಲ್ಲಿ ಪರಿಹಾರ ಬಂದಿದೆ ಎಂದು ಸಮೀಕ್ಷೆ ಮಾಡಿದ ಗ್ರಾಮೀಣ ಕೂಲಿಕಾರ್ಮಿಕರ ಸಂಘ, ಜಾಗೃತಿ ಮಹಿಳಾ ಒಕ್ಕೂಟ ಹಾಗೂ ದಿ ಕನ್ಸರ್ನ ಫಾರ್ ವರ್ಕಿಂಗ್ ಚಿಲ್ಡ್ರನ್ ಸಂಸ್ಥೆಯ ಪ್ರತಿನಿಧಿಗಳಿಗೆ ಪರಿಹಾರದ ವಿಷಯದಲ್ಲಿ ಸರಕಾರದ ನಿರ್ಲಕ್ಷವೇ ಎದ್ದುಕಂಡಿದೆ. ಈ ಸಂಬಂಧ ಜಿಲ್ಲಾಧಿಕಾರಿಗೆ ತಮ್ಮ ಸಮೀಕ್ಷೆ ವರದ ಸಲ್ಲಿಸಿದ ಪದಾಧಿಕಾರಿಗಳು ಪರಿಹಾರ ವಿತರಣೆ ಹಾಗೂ ಸಮೀಕ್ಷೆಯಲ್ಲಿ ಆಗುತ್ತಿರುವ ಲೋಪಗಳಬಗ್ಗೆ ಸರಕಾರಕ್ಕೆ ಆಗಬೇಕಾದ ತುರ್ತು ಕಾರ್ಯಗಳ ಪಟ್ಟಿಯನ್ನೇ ಮಾಡಿಕೊಟ್ಟಿದ್ದಾರೆ.
ಜಿಲ್ಲಾಧಿಕಾರಿಗೆ ಹಾಗೂ ಸ್ಥಳೀಯವಾಗಿ ಅಲ್ಲಿನ ಸರಕಾರ (ಗ್ರಾಮ ಪಂಚಾಯತ್)ಗಳಿಗೆ ಸಂಪೂರ್ಮಾ ಹಿತಿ ಇರುತ್ತದೆ. ಅದರಲ್ಲೂ ಪಂಚಾಯತ್‌ಗಳಲ್ಲಿ ಮನೆ ಮನೆ ಮಾಹಿತಿ ಲಭ್ಯವಿರುತ್ತದೆ. ಹೀಗಿರುವಾಗ ಮನೆ ಬಿದ್ದಿರುವುದಕ್ಕೆ ಪರಿಹಾರ ನೀಡಲು ಇದಕ್ಕಿಂತ ಬೇರೆ ದಾಖಲೆಗಳು ಬೇಕೆ. ಸಂತ್ರಸ್ತರನ್ನು ಇದೇ ವಿಷಯದಲ್ಲಿ ಬಹಳ ಸತಾಯಿಸಲಾಗುತ್ತಿದೆ ಎಂಬುದು ಜಾಗೃತಿ ಮಹಿಳಾ ಒಕ್ಕೂಟದ ಸದಸ್ಯರ ಆರೋಪ. ಹುಕ್ಕೇರಿ ತಾಲೂಕಿನ ಪಾಶ್ಚಾಪುರದಲ್ಲಿ 280 ಕ್ಕೂ ಅಧಿಕ ಮನೆಗಳು ಬಿದ್ದಿವೆ. ಬಿದ್ದಿರುವ ಮನೆಗಳಿಗೆ ಸರಿಯಾದ ದಾಖಲೆಗಳು ಇಲ್ಲದ ಕಾರಣ ಮನೆ ಮಾಲೀಕರಿಗೆ ಪರಿಹಾರ ಪಡೆದುಕೊಳ್ಳಲು ಸಾಧ್ಯವಾಗಿಲ್ಲ. ಅವರಿಗೆ ಯಾವುದೇ ಕಾನೂನಾತ್ಮಕ ಸಲಹೆ ಹಾಗೂ ಮಾರ್ಗದರ್ಶನ ಸಿಗುತ್ತಿಲ್ಲ. ಈ ಸಂತ್ರಸ್ತರಿಗೆ ಪ್ರತಿ ಹೆಜ್ಜೆಗೂ ಸಹಾಯ ಹಾಗೂ ಬೆಂಬಲದ ಅಗತ್ಯವಿದೆ ಎಂಬುದು ಸಾಮಾಜಿಕ ಹೋರಾಟಗಾರ ಹಾಗೂ ಪರಿಸರವಾದಿ ಶಿವಾಜಿ ಕಾಗಣೀಕರ ಅಭಿಪ್ರಾಯ.
ಮನೆ ಕಳೆದುಕೊಂಡವರಲ್ಲಿ ಅನೇಕರು ವಯಸ್ಸಾದವರಿದ್ದಾರೆ. ಅವರಿಗೆ ಐದು ಲಕ್ಷ ಅಲ್ಲ 10 ಲಕ್ಷ ರೂ ಪರಿಹಾರ ಕೊಟ್ಟರೂ ಏನು ಪ್ರಯೋಜನ. ಅದರ ಬದಲಾಗಿ ಒಬ್ಬರು ನಿಂತು ಮನೆ ಕಟ್ಟಿಸಿಕೊಡುವ ವ್ಯವಸ್ಥೆಯಾಗಬೇಕು. ಇದು ಸ್ಥಳೀಯ ಸರಕಾರದ ಜವಾಬ್ದಾರಿ ಎನ್ನುತ್ತಾರೆ ದಿ ಕನ್ಸರ್ನ ಫಾರ್ ವರ್ಕಿಂಗ್ ಚಿಲ್ಡ್ರನ್ ಸಂಸ್ಥೆಯ ನಿರ್ದೇಶಕಿ ಕವಿತಾ ರತ್ನಾ. ಮನೆಗಳ ಸಮೀಕ್ಷೆ ಎಲ್ಲಿಯೂ ಸಮರ್ಪಕವಾಗಿ ಆಗಿಲ್ಲ. ಪರಿಹಾರ ನೀಡುವಲ್ಲಿ ಮಾಡಲಾಗಿರುವ ವರ್ಗಿಕರಣದಲ್ಲೂ ಅನೇಕ ತೊಡಕುಗಳಿವೆ. ಹೆಚ್ಚಿನ ಜನರಿಗೆ ತಮ್ಮ ಮನೆಗಳನ್ನು ಯಾವ ವರ್ಗಿಕರಣದಲ್ಲಿ ಹಾಕಿದ್ದಾರೆ. ಅದಕ್ಕೆ ಯಾವ ಮಾನದಂಡ ಅನುಸರಿಸಲಾಗಿದೆ ಎಂಬುದರ ಬಗ್ಗೆ ಮಾಹಿತಿಯೇ ಇಲ್ಲ. ಸಮೀಕ್ಷೆ ಮಾಡುವಾಗ ಸ್ಥಳೀಯ ಸರಕಾರದ ಪ್ರತಿನಿಧಿಗಳಿಗಿಂತ ಮಹಿಳೆಯರು ಹಾಗೂ ಮಕ್ಕಳನ್ನು ಮುಂದಿಟ್ಟುಕೊಂಡು ಸಮೀಕ್ಷೆ ಮಾಡಬೇಕು.
ಅವರಿಂದಲೇ ನಿಜವಾದ ಮಾಹಿತಿ ಸಿಗುತ್ತದೆ. ಎಲ್ಲಿ ಯಾರ ಮನೆ ಎಷ್ಟು ಪ್ರಮಾಣದಲ್ಲಿ ಬಿದ್ದಿದೆ ಎಂದು ಅವರೇ ಹೇಳುತ್ತಾರೆ ಎಂಬುದು ನಿರ್ದೇಶಕಿ ಕವಿತಾ ರತ್ನಾ ಅವರ ಹೇಳಿಕೆ. ಎ ಕೆಟಗರಿಯಲ್ಲಿ ಗುರುತಿಸಲಾದ ಮನೆಗಳ ಪೈಕಿ ಕೆಲವರಿಗೆ ಈಗಾಗಲೇ ಮೊದಲ ಕಂತಿನಲ್ಲಿ ಒಂದು ಲಕ್ಷ ರೂ. ಜಮಾ ಆಗಿದೆ. ಆದರೆ ಸರಿಯಾದ ದಾಖಲಾತಿ ಇಲ್ಲ ಎಂಬ ಕಾರಣಕ್ಕೆ ಹಲವರಿಗೆ ಈ ಪರಿಹಾರದ ಹಣ ಸಿಕ್ಕಿಲ್ಲ. ನೆರೆಯಿಂದ ಶಿಥಿಲವಾಗಿರುವ ಮನೆಗಳನ್ನು ಪರಿಹಾರದ ಹಣ ನೀಡಲು ಪರಿಗಣಿಸಬೇಕು. ಕಾನೂನಿನ ತೊಡಕು ಎದುರಿಸುತ್ತಿರುವ ಸಂತ್ರಸ್ತರಿಗೆ ಅಗತ್ಯ ಮಾರ್ಗದರ್ಶನ ನೀಡಬೇಕು ಎಂಬುದು ನೆರೆ ಪ್ರದೇಶಗಳಲ್ಲಿ ಸಮೀಕ್ಷೆ ಕೈಗೊಂಡ ಸ್ವಯಂ ಸೇವಾ ಸಂಸ್ಥೆಗಳ ಪದಾಧಿಕಾರಿಗಳ ಆಭಿಪ್ರಾಯ.
ನೆರೆ ಪೀಡಿತ ಜಿಲ್ಲೆಗಳಲ್ಲಿ ಜಿಲ್ಲಾ ವಿಕೋಪ ನಿರ್ವಹಣಾ ಕಾರ್ಯತಂತ್ರ ರಚನೆಯಾಗಬೇಕುಎಂಬ ಕಾನೂನು ಇದೆ. ಆದರೆ ಯಾವ ಜಿಲ್ಲೆಯಲ್ಲೂ ಇದು ಕಾಣುತ್ತಿಲ್ಲ. ಪ್ರವಾಹದಿಂದ ಅನೇಕ ಕಡೆ ಶಾಲಾ ಕೊಠಡಿಗಳು ಶಿಥಿಲಗೊಂಡಿವೆ. ಕೆಲವು ಕಡೆ ಸಂಪೂರ್ಣ ಬಿದ್ದಿವೆ. ಕೆಲವು ಕಡೆ ಒಂದೇ ಕೊಠಡಿಯಲ್ಲಿ ಎರಡೆರಡು ತರಗತಿಗಳನ್ನು ನಡೆಸಲಾಗುತ್ತಿದ್ದು ಇದರಿಂದ ಮಕ್ಕಳ ಕಲಿಕೆಯ ಮೇಲೆ ಬಹಳ ಗಂಭೀರ ಪರಿಣಾಮ ಬೀರುತ್ತಿದೆ. ಇದಕ್ಕೆ ಸರಕಾರದಿಂದ ಖಚಿತ ಉತ್ತರ ಇಲ್ಲ. ಶಾಲಾ ಕೊಠಡಿಗಳ ದುರಸ್ತಿ ಹಾಗೂ ನಿರ್ಮಾಣ ಕಾರ್ಯ ತ್ವರಿತಗತಿಯಲ್ಲಿ ಆಗಬೇಕು ಎಂಬುದು ಗ್ರಾಮೀಣ ಕೂಲಿ ಕಾರ್ಮಿಕ ಸಂಘಟನೆ ಹಾಗೂ ಜಾಗೃತಿ ಮಹಿಳಾ ಒಕ್ಕೂಟದ ಸದಸ್ಯರ ಆಗ್ರಹ.
-ಕೇಶವ ಆದಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress; ಔತಣಕೂಟದ ಸಭೆಗೆ ರಾಜಕೀಯ ಮಹತ್ವ ಬೇಕಿಲ್ಲ: ಸತೀಶ್ ಜಾರಕಿಹೊಳಿ
President ಮುರ್ಮು ಅವರಿಂದ ಇಂದು ಬೆಳಗಾವಿಯಲ್ಲಿ ಕೆಎಲ್‌ಇ ಕ್ಯಾನ್ಸರ್ ಆಸ್ಪತ್ರೆ ಉದ್ಘಾಟನೆ
ಮಗಳ ಮೇಲೆ ಎರಗಲು ಹೋದ ಪತಿಯನ್ನೇ ಹತ್ಯೆಗೈದು ದೇಹವನ್ನು ತುಂಡರಿಸಿ ವಿಲೇವಾರಿ ಮಾಡಿದ ಪತ್ನಿ
Butterfly Park: ಬೆಳಗಾವಿಯ ಹಿಡಕಲ್ ಡ್ಯಾಂ ಬಳಿ ಅತಿ ದೊಡ್ಡ ತೆರೆದ ಚಿಟ್ಟೆ ಪಾರ್ಕ್
Belagavi: ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಯ್ಕೆ ವಿಚಾರದ ಬಗ್ಗೆ ಸತೀಶ ಜಾರಕಿಹೊಳಿ ಹೇಳಿದ್ದೇನು?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಗದಗ: ಮಾವು ಬಂಪರ್ ಬೆಳೆ ನಿರೀಕ್ಷೆ- ಬೆಳೆಗಾರರಿಗೆ ಸಂತಸ
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Test Cricket; ರೋಹಿತ್ ಆಯ್ತು, ಈಗ ವಿರಾಟ್..: ಬಿಸಿಸಿಐ ಕಳಿಸಿದ ʼಆʼ ಸಂದೇಶದಲ್ಲಿ ಏನಿದೆ?
Gangolli: ಪಂಚಾಯತ್‌ನೊಳಗೆ ನಮಾಜ್; ಹಿಂದೂ ಹಿತರಕ್ಷಣಾ ಸಮಿತಿ ಪ್ರತಿಭಟನೆ
Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.