ಚಿಕ್ಕೋಡಿ: 13 ನಾಮಪತ್ರ ಕ್ರಮಬದ್ಧ ಬೆಳಗಾವಿ: ಎರಡು ತಿರಸ್ಕೃತ
Team Udayavani, Apr 7, 2019, 6:35 AM IST
ಬೆಳಗಾವಿ: ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದ ನಾಮಪತ್ರಗಳ ಪರಿಶೀಲನೆ ಶುಕ್ರವಾರ ನಡೆದಿದ್ದು, ಒಟ್ಟಾರೆ 13 ಅಭ್ಯರ್ಥಿಗಳ ನಾಮಪತ್ರಗಳು ಕ್ರಮ ಬದ್ಧವಾಗಿವೆ ಎಂದು ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದ ಚುನಾವಣಾಧಿಕಾರಿ, ಜಿಪಂ ಸಿಇಒ ಡಾ| ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ.
ಬಿಜೆಪಿಯಿಂದ ಪಕ್ಷದಿಂದ ಅಣ್ಣಾಸಾಹೇಬ ಶಂಕರ ಜೊಲ್ಲೆ, ಕಾಂಗ್ರೆಸ್‌ದಿಂದ ಪ್ರಕಾಶ ಬಾಬಣ್ಣಾ ಹುಕ್ಕೇರಿ ಹಾಗೂ ಬಹುಜನ ಸಮಾಜ ಪಕ್ಷದಿಂದ ಮಚ್ಚೇಂದ್ರ ದವಲು ಕಾಡಾಪುರೆ, ಭಾರಿಫ್ ಬಹುಜನ ಮಹಾಸಂಘ ಪಕ್ಷದಿಂದ
ಅಪ್ಪಾಸಾಹೇಬ ಕುರಣೆ, ಉತ್ತಮ ಪ್ರಜಾಕೀಯ ಪಕ್ಷದಿಂದ ಬಾಳಿಗಟ್ಟಿ ಪ್ರವೀಣಕುಮಾರ ಹಾಗೂ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ(ಎ) ಪಕ್ಷದಿಂದ ಮುಗದುಮ್ ಇಸ್ಮಾಯಿಲ್ ಮಗದುಮ್, ಕಲ್ಲಪ್ಪ ಅಡಿವೆಪ್ಪ ಗುಡಸಿ, ಜಿತೇಂದ್ರ ಸುಭಾಷ. ನೇರ್ಲೆ, ಮಲ್ಲಪ್ಪಾ ಮಾರುತಿ ಖಟಾಂವೆ, ಮೋಹನ ಗುರಪ್ಪಾ ಮೋಟನ್ನವರ, ವಿಶ್ವನಾಥ ವಾಜಂತ್ರಿ, ಶೈಲಾ ಸುರೇಶ ಕೋಳಿ ಹಾಗೂ ಶ್ರೀಣಿಕ ಅಣ್ಣಾಸಾಹೇಬ ಜಂಗಟೆ ಅವರ ನಾಮಪತ್ರಗಳು ಕ್ರಮಬದ್ಧವಾಗಿವೆ ಎಂದು ತಿಳಿಸಿದ್ದಾರೆ
ನಾಮಪತ್ರ ತಿರಸ್ಕೃತ: ನ್ಯಾಯಾಲಯದ ಮೊರೆ
ಕಾರವಾರ: ಶಿವಸೇನೆಯಿಂದ ನಾಮಪತ್ರ ಸಲ್ಲಿಸಿದ್ದೆ. ಹತ್ತು ಸೂಚಕರು ಇರಲಿಲ್ಲ ಎಂಬ ಕಾರಣದಿಂದ ನಾಮಪತ್ರ ತಿರಸ್ಕರಿಸಲಾಗಿದೆ. ನಾಮಪತ್ರ ಸಲ್ಲಿಸುವ ಮುನ್ನ ಅಗತ್ಯ ದಾಖಲೆಗಳ ಪಟ್ಟಿಯನ್ನು ಜಿಲ್ಲಾ ಚುನಾವಣಾ ಶಾಖೆ ನೀಡಿತ್ತು. ಆದರೆ ಹತ್ತು ಸೂಚಕರ ಬಗ್ಗೆ ಅದರಲ್ಲಿ ತಿಳಿಸಿರಲಿಲ್ಲ ಎಂದು ಶಿವಸೇನೆಯಿಂದ ನಾಮಪತ್ರ ಸಲ್ಲಿಸಿದ್ದ ಖಾನಾಪುರದ ಕೃಷ್ಣಾಜೀ ಪಾಟೀಲ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಮಪತ್ರ ಸಲ್ಲಿಸುವಾಗ ನನಗೆ ಹತ್ತು ಸೂಚಕರ ಬಗ್ಗೆ ಮಾಹಿತಿ ಇರಲಿಲ್ಲ. ಚುನಾವಣಾಧಿ ಕಾರಿಗಳು ಹೇಳಿರಲಿಲ್ಲ ಎಂದು ದೂರಿದರು. ಈ ಸಂಬಂಧ ನ್ಯಾಯಾಲಯದ ಮೊರೆ ಹೋಗುವುದಾಗಿ ಕೃಷ್ಣಾಜೀ ಪಾಟೀಲ ಹೇಳಿದ್ದಾರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Winter Session: ಬಾಣಂತಿ ಸಾವು: ನ್ಯಾಯಾಂಗ ತನಿಖೆಗೆ ಬಿಜೆಪಿ ಪಟ್ಟು
Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ
“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ
Council Session: ಪವರ್ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ
Fake Gold: ಎಚ್ಚರ ವಹಿಸಲು ಡಿಸಿಸಿ ಬ್ಯಾಂಕ್‌ಗಳಿಗೆ ಸೂಚನೆ: ಸಚಿವ ಕೆ.ಎನ್. ರಾಜಣ್ಣ
MUST WATCH
ಹೊಸ ಸೇರ್ಪಡೆ
Belthangady: ಕುತ್ಲೂರು ನಿವಾಸಿಗಳ ಕೂಗು ಅರಣ್ಯರೋದನ!
Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್
Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ
Hunsur: ಬಸ್ ಡಿಕ್ಕಿಯಾಗಿ ಪಾದಾಚಾರಿ ಸಾವು
Upendra: ʼಯುಐʼಗೆ ಸ್ಯಾಂಡಲ್‌ವುಡ್ ಸಾಥ್; ಉಪೇಂದ್ರ ಚಿತ್ರ ನೋಡಲು ಕಾತುರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.