ಪಿಒಪಿ ಗಣೇಶ ಮೂರ್ತಿ ತಯಾರಿಸದಿರಲು ಸೂಚನೆ
Team Udayavani, Jul 12, 2019, 2:25 PM IST
ಗೋಕಾಕ: ಕೊಣ್ಣೂರ ಪುರಸಭೆ ಸಭಾ ಭವನದಲ್ಲಿ ಮೂರ್ತಿಕಾರರ ಪೂರ್ವಭಾವಿ ಸಭೆಯಲ್ಲಿ ಪುರಸಭೆ ಮುಖ್ಯಾಧಿಕಾರಿ ಶಿವಾನಂದ ಹಿರೇಮಠ ಮಾತನಾಡಿದರು.
ಗೋಕಾಕ: ರಸಾಯನಿಕ ಮಿಶ್ರಿತ ಬಣ್ಣದ ಗಣಪನ ಮೂರ್ತಿ ಹಾಗೂ ಪಿಒಪಿ ನಿರ್ಮಿತ ಗಣಪ ಮೂರ್ತಿಗಳನ್ನು ತಯಾರಿಸಿದರೇ ಪರಿಸರ ಸಂರಕ್ಷಣೆ ಕಾಯ್ದೆ-1976ರ ಅನ್ವಯ ಶಿಕ್ಷೆ ವಿಧಿಸಲಾಗುವುದು ಎಂದು ಕೊಣ್ಣೂರ ಪುರಸಭೆಯ ಮುಖ್ಯಾಧಿಕಾರಿ ಶಿವಾನಂದ ಹಿರೇಮಠ ಹೇಳಿದರು.
ಗುರುವಾರ ತಾಲೂಕಿನ ಕೊಣ್ಣೂರ ಪುರಸಭೆಯ ಸಭಾಭವನದಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ ಹಾಗೂ ರಾಸಾಯಿನಿಕ ಬಣ್ಣದಿಂದ ಸಿದ್ದಪಡಿಸಿದ ಗಣೇಶ ಮೂರ್ತಿ ತಯಾರಿಸದಂತೆ ಗಣೇಶ ಮೂರ್ತಿಕಾರರ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಾರ್ವಜನಿಕರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಗಣೇಶ ಮೂರ್ತಿಕಾರರು ಪರಿಸರ ಗಣೇಶ ಮೂರ್ತಿ ತಯಾರಿಸಿ ಸರ್ಕಾರದ ಆದೇಶ ಪಾಲನೆ ಮಾಡಬೇಕು. ಇದಕ್ಕೆ ಮೂರ್ತಿ ತಯಾರಕರು ಮತ್ತು ಮೂರ್ತಿಗಳ ಬಳಕೆದಾರರು ಸಹಕರಿಸಬೇಕು. ತಪ್ಪಿದಲ್ಲಿ ಪುರಸಭೆಯಿಂದ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.
ಗೋಕಾಕ ನಗರಸಭೆ ಪರಿಸರ ಅಭಿಯಂತ ಮಂಜುನಾಥ ಗಜಾಕೋಶ ಮಾತನಾಡಿ, ಪಿ.ಒಪಿ. ಮತ್ತು ಹಾನಿಕಾರಕ ರಸಾಯನಗಳಿಂದ ತಯಾರಿಸಿದ ಗಣಪತಿ ಮೂರ್ತಿಗಳನ್ನು ಕುಡಿಯುವ ಜಲಮೂಲಗಳಲ್ಲಿ ವಿಸರ್ಜನೆ ಮಾಡಿದಲ್ಲಿ ನೀರು ಮಾಲಿನ್ಯಗೊಳ್ಳುತ್ತದೆ. ಆದ್ದರಿಂದ ಗಣಪತಿ ಉತ್ಸವವನ್ನು ಮಣ್ಣಿನ ಮತ್ತು ಬಣ್ಣ ರಹಿತ ವಿಗ್ರಹಗಳನ್ನು ಪ್ರತಿಷ್ಠಾಪಿಸುದರೊಂದಿಗೆ ಮುಂದಿನ ಪೀಳಿಗೆಗೆ ಒಳ್ಳೆಯ ನೀರು ಮತ್ತು ಪರಿಸರವನ್ನು ನೀಡಬೇಕು ಎಂದರು.
ಈ ವೇಳೆ ಗಣೇಶ ಮೂರ್ತಿಕಾರರು ಮಾತನಾಡಿ, ನಮ್ಮ ಉದ್ಯೋಗ ಗುಡಿ ಕೈಗಾರಿಕೆಯಾಗಿದ್ದು ರಾಜ್ಯದಲ್ಲಿಯೇ ಮಾದರಿ ಮೂರ್ತಿಗಳ ತಯಾರಿಕೆ ನಮ್ಮ ಕೊಣ್ಣೂರಿನಲ್ಲಿ ಆಗುತ್ತಿವೆ. ಮೂರ್ತಿ ತಯಾರಿಕೆ ಸಂಘಗಳಿದ್ದು, ಸಹಾಯಧನದ ಅವಶ್ಯಕತೆಯಿದೆ. ನಮಗೆ ಸರಕಾರದ ಸಹಾಯಧನ ನೀಡಿಬೇಕು ಎಂದು ಮನವಿ ಮಾಡಿದರು. ಸಭೆಯಲ್ಲಿ ಪುರಸಭೆ ಸದಸ್ಯರಾದ ವಿನೋದ ಕರನಿಂಗ, ಮಾರುತಿ ಪೂಜೇರಿ, ಆರ್.ಎಸ್. ಕಡಲಗಿ, ಇಮ್ರಾನ ಜಮಾದಾರ, ರಾಮಲಿಂಗ ಮಗದುಮ್, ಬಿ.ಬಿ. ಹುಕ್ಕೇರಿ, ಸಾವಂತ ತಳವಾರ, ಸಾಯರಾಬಾನು ಜಮಾದಾರ, ರಜಿಯಾಬೇಗಂ ಹೊರಕೇರಿ, ಮಂಗಲಾ ತೇಲಿ, ಸಿಬ್ಬಂದಿಗಳಾದ ಬಿ.ಡಿ ಕುಮರೇಶಿ, ವೈ.ಎನ್. ಚಲವಾದಿ ಹಾಗೂ ಗಣಪತಿ ಮೂರ್ತಿಕಾರರು, ಸರ್ವ ಸದಸ್ಯರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗಾಂಧಿ ಭಾರತ್ ಕಾರ್ಯಕ್ರಮದ ಬಗ್ಗೆ ಶೆಟ್ಟರ್ ಅಪಸ್ವರ ತೆಗೆದಿದ್ದು ದುರ್ದೈವ – ಎಚ್ ಕೆ ಪಾಟೀಲ
Congress ಅಧಿವೇಶನದ ಶತಮಾನೋತ್ಸವ ಕಾರ್ಯಕ್ರಮ ದೇಶದ ಇತಿಹಾಸದ ಒಂದು ಐತಿಹಾಸಿಕ ಕಾರ್ಯಕ್ರಮ
Belagavi: ಗಾಂಧಿ ಭಾರತ ಹಿನ್ನೆಲೆ ಡಿ. 26, 27 ರಂದು ಕೆಲ ಶಾಲೆಗಳಿಗೆ ರಜೆ
Suspension: ಸಿ.ಟಿ. ರವಿ ಪ್ರಕರಣ; ಖಾನಾಪುರ ಸಿಪಿಐ ಅಮಾನತು
Belagavi: ಕಾಶ್ಮೀರದಲ್ಲಿ 300 ಅಡಿ ಆಳದ ಕಂದಕಕ್ಕೆ ಬಿದ್ದ ಸೇನಾ ವಾಹನ; ಯೋಧರು ಹುತಾತ್ಮ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು
Manipal: ಹಿರಿಯ ವೈದ್ಯೆ ಡಾ. ಆಶಾ ಭಟ್ ನಿಧನ
Banahatti: ತಾಂತ್ರಿಕ ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ಬದ್ಧಳಾಗಿದ್ದೇನೆ: ಉಮಾಶ್ರೀ
Road Mishap; ದ್ವಿಚಕ್ರ ವಾಹನ-ಲಾರಿ ನಡುವೆ ಅಪಘಾತ: ದಂಪತಿ ಸಾವು
ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.