Santosh Lad: ಒನ್ ನೇಶನ್ ಒನ್ ಎಲೆಕ್ಷನ್, ನೆಹರೂ ಕಾಲದಲ್ಲೇ ವಿಫಲ
ವೈಫಲ್ಯ ಮುಚ್ಚಿ ಹಾಕಲು ಪ್ರಧಾನಿಯಿಂದ ಹೊಸ ಚರ್ಚೆ: ಸಚಿವ ಪ್ರಿಯಾಂಕ್ ಖರ್ಗೆ
Team Udayavani, Dec 14, 2024, 1:14 AM IST
ಬೆಳಗಾವಿ: ಕೇಂದ್ರ ಸರಕಾರ ಜಾರಿಗೊಳಿಸಲು ಮುಂದಾಗಿರುವ “ಒಂದು ದೇಶ ಒಂದು ಚುನಾವಣೆ’ ಪರಿಕಲ್ಪನೆಗೆ ರಾಜ್ಯ ಸರಕಾರದ ಹಲವು ಸಚಿವರು ವಿರೋಧ ವ್ಯಕ್ತಪಡಿಸಿದ್ದು, ನೆಹರೂ ಕಾಲದಲ್ಲಿ ಈ ಕಲ್ಪನೆ ವಿಫಲವಾಗಿತ್ತು ಎಂದಿದ್ದಾರೆ.
ಬೆಳಗಾವಿ ಸುವರ್ಣಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಕಾರ್ಮಿಕ ಸಚಿವ ಸಂತೋಷ್ ಲಾಡ್, ಒನ್ ನೇಶನ್, ಒನ್ ಎಲೆಕ್ಷನ್’ ಪರಿಕಲ್ಪನೆಯನ್ನು ದೇಶದ ಮೊದಲ ಪ್ರಧಾನಿ ಜವಾಹರ್‌ಲಾಲ್ ನೆಹರು ಪ್ರಯೋ ಗ ಮಾಡಿ ವಿಫಲರಾಗಿದ್ದರು. ಕೇಂದ್ರ ಮತ್ತೆ ಅದನ್ನು ಜಾರಿಗೆ ತರಲು ಮುಂದಾಗಿದೆ. ಇದಕ್ಕೆ ಯಾವ ರೀತಿಯ ಮಾನದಂಡ, ಕಾನೂನು ತರುತ್ತಾರೋ ಗೊತ್ತಿಲ್ಲ ಎಂದರು.
ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿ, ಪ್ರಧಾನಿ ವೈಫಲ್ಯ ಮುಚ್ಚಿ ಹಾಕಲು ಈ ವ್ಯವಸ್ಥೆ ತರುತ್ತಿದ್ದಾರೆ ಎಂದು ಪ್ರಿಯಾಂಕ್ ಟೀಕಿಸಿದರು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಮಾತನಾಡಿ, ಬಿಜೆಪಿಯವರು ಪ್ರಜಾಪ್ರಭುತ್ವಕ್ಕೆ ವಿರುದ್ಧವಾದದ್ದನ್ನೇ ತರುತ್ತಾರೆ. ಈ ಬಗ್ಗೆ ಚರ್ಚೆ ಮಾಡಿ ನಿರ್ಧಾರ ಮಾಡಬೇಕಿತ್ತು. ಏಕಾಏಕಿ ಇಂತಹ ಕ್ರಮ ಜಾರಿಗೊಳಿಸುವುದು ಸರಿಯಲ್ಲ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Priyank Kharge: ಗ್ರಾ.ಪಂ. ಸದಸ್ಯರ ಗೌರವಧನ ಹೆಚ್ಚಳ ಸಿಎಂ ಗಮನಕ್ಕೆ
Assembly Session: ಭೂ ಕುಸಿತ ತಡೆಯಲು ಶಾಶ್ವತ ಯೋಜನೆ; 6 ಜಿಲ್ಲೆಗಳ 863 ಗ್ರಾ.ಪಂ. ಗುರುತು
Assembly Session: ಸದನದಲ್ಲಿ ಹೆಚ್ಚು ಕಾಲ ಕುಳಿತರೆ ಹೆಚ್ಚು ಬಾರಿ ಗೆಲುವು: ಖಾದರ್
Priyank Kharge: ಮಾಣಿಪ್ಪಾಡಿ ಬಾಯಿ ಮುಚ್ಚಿಸಲು 150 ಕೋಟಿ ರೂ. ಆಮಿಷ ಒಡ್ಡಿದ್ದ ವಿಜಯೇಂದ್ರ
Assembly Session: ನೀವೊಬ್ಬರೇ ಗೆದ್ದು ಬಂದವರಾ: ಆಶೋಕ್‌ಗೆ ಸಿಎಂ ತಿರುಗೇಟು
MUST WATCH
ಹೊಸ ಸೇರ್ಪಡೆ
Alvas: ವಿರಾಸತ್‌ನಲ್ಲಿ ನೀಲಾದ್ರಿ ಕುಮಾರ್ ಬೆರಳ ಮಾಂತ್ರಿಕತೆಗೆ ಜನಸ್ತೋಮ ನಿಬ್ಬೆರಗು
Navy: ಪಶ್ಚಿಮ ಕಮಾಂಡ್‌ನ ಮೆಡಿಕಲ್ ಮುಖಸ್ಥರಾಗಿ ಉಡುಪಿಯ ಡಾ.ಕೃಷ್ಣಮೂರ್ತಿ ಅಧಿಕಾರಿ ನೇಮಕ
Udupi: ಸಿಎಸ್‌ಆರ್ ನಿಧಿಗಳ ಸದುಪಯೋಗವಾಗಲಿ: ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ
Manipal Kasturba Hospital: ಶಿಶುವಿನ ಯಕೃತ್ ಗೆಡ್ಡೆ ಶಸ್ತ್ರಚಿಕಿತ್ಸೆ: ಕೆಎಂಸಿ ಸಾಧನೆ
Mangaluru: ಗ್ರಾಮೀಣ ಭಾಗದ ದಬ್ಬಾಳಿಕೆ ಕಥೆ ಹೇಳುವ ಸಿನೆಮಾಕ್ಕೆ ಉತ್ತಮ ಸ್ಪಂದನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.