![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Nov 14, 2018, 5:00 PM IST
ಬೆಳಗಾವಿ: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಪ್ರಾಂಗಣದಲ್ಲಿರುವ ದಲ್ಲಾಳಿ ಅಂಗಡಿಗಳ ತರಕಾರಿ ಚೀಲಗಳಲ್ಲಿ 50 ಕೆಜಿಗಿಂತ ಹೆಚ್ಚು ತೂಕ ಹಾಕಬಾರದು ಎಂದು ಆಗ್ರಹಿಸಿ ಇಲ್ಲಿಯ ಹಮಾಲರು ಮಂಗಳವಾರ ಪ್ರತಿಭಟನೆ ನಡೆಸಿದರು. ಎಪಿಎಂಸಿ ಪ್ರಾಂಗಣದಲ್ಲಿ ಕೆಲಸ ನಿಲ್ಲಿಸಿ ಪ್ರತಿಭಟನೆ ನಡೆಸಿದ ಹಮಾಲರು, 50 ಕೆ.ಜಿಗಿಂತ ಹೆಚ್ಚು ಭಾರದ ಚೀಲಗಳನ್ನು ಮಾಡದಂತೆ ಅನೇಕ ಸಲ ಅಂಗಡಿ ಮಾಲೀಕರ ಗಮನಕ್ಕೆ ತಂದರೂ ಸ್ಪಂದಿಸಿಲ್ಲ. 60, 70, 80 ಕೆ.ಜಿ.ವರೆಗೂ ಹೆಚ್ಚಿನ ಭಾರದ ಚೀಲಗಳಿಂದ ಸಮಸ್ಯೆಯಾಗುತ್ತಿದೆ ಎಂದು ಆರೋಪಿಸಿದರು.
50 ಕೆ.ಜಿಯ ಚೀಲಗಳನ್ನು ತಯಾರಿಸಿ ಬೇರೆ ಕಡೆ ಪೂರೈಸಬೇಕು. ಇಂಥ ಚೀಲಗಳನ್ನು ವಾಹನಕ್ಕೆ ತುಂಬಿಸಲು ಅನುಕೂಲವಾಗುತ್ತದೆ. ಹೆಚ್ಚಿನ ಭಾರದ ಚೀಲಗಳಿದ್ದರೆ ವಾಹನಗಳ ಮೇಲೆ ಹತ್ತಲು ಸಮಸ್ಯೆಯಾಗುತ್ತಿದೆ. ಜೊತೆಗೆ ನಮ್ಮ ಕೂಲಿ ಸಂಬಳವೂ ಕಡಿಮೆಯಾಗುತ್ತದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ನ್ಯಾಯ ಒದಗಿಸಿ ಕೊಡಬೇಕು ಎಂದು ಆಗ್ರಹಿಸಿದರು.
ಹಮಾಲರ ಪ್ರತಿಭಟನೆಗೆ ಸ್ಪಂದಿಸಿದ ಅಂಗಡಿಕಾರರು, ಮುಂದಿನ ತಿಂಗಳಿಂದ 50 ಕೆ.ಜಿ. ತೂಕದ ಚೀಲಗಳನ್ನೇ ತಯಾರಿಸಲಾಗುವುದು. ಈ ಬಗ್ಗೆ ರೈತರಿಗೂ ಮನವರಿಕೆ ಮಾಡಿ 50 ಕೆಜಿವರೆಗೆ ಮಾತ್ರ ಚೀಲಗಳನ್ನು ತರುವಂತೆ ಹೇಳಲಾಗುವುದು ಎಂದು ಭರವಸೆ ನೀಡಿದ ಬಳಿಕ ಹಮಾಲರು ಪ್ರತಿಭಟನೆ ಹಿಂಪಡೆದರು. ಹಮಾಲರ ಪ್ರತಿಭಟನೆಯಿಂದಾಗಿ ಬೇರೆ ಬೇರೆ ರಾಜ್ಯಗಳಿಗೆ ಹಾಗೂ ಜಿಲ್ಲೆಗಳಿಗೆ ತೆರಳಬೇಕಿದ್ದ ವಾಹನಗಳು ಅಲ್ಲಿಯೇ ನಿಂತಿದ್ದವು. ಸುಮಾರು ಮೂರು ತಾಸಿಗೂ ಹೆಚ್ಚು ಪ್ರತಿಭಟನೆ ನಡೆಯಿತು. ಪ್ರತಿಭಟನೆ ಹಿಂಪಡೆದ ಬಳಿಕ ಲಾರಿಗಳನ್ನು ಅಲ್ಲಿಂದ ಬಿಡಲಾಯಿತು.
Belagavai: ಆಟೋ ಚಾಲಕನ ಜತೆ ಜಗಳ ಬೆನ್ನಲ್ಲೇ ಗೋವಾ ಮಾಜಿ ಶಾಸಕ ಸಾವು!
Belgavi: ಬೆಳಗಾವಿ ಪ್ರಾದೇಶಿಕ ಆಯುಕ್ತರ ವಿರುದ್ಧ ರಾಜ್ಯಪಾಲರಿಗೆ ಶಾಸಕ ಅಭಯ ದೂರು
Belegavi: ಗದ್ದೆಗೆ ಹೊತ್ತಿದ್ದ ಬೆಂಕಿ ಆರಿಸಲುಹೋಗಿ ಸುಟ್ಟು ಕರಕಲಾದ ರೈತ
Belagavi: ನ್ಯಾಯಾಲಯ ವ್ಯವಸ್ಥೆಯಿಂದಲೇ ಅತ್ಯಾ*ಚಾರ, ಕೊ*ಲೆ ಹೆಚ್ಚಾಗಿದೆ: ಮುತಾಲಿಕ್
Belagavi: ಎರಡು ವಾರಗಳಲ್ಲಿ ಸಾರ್ವಜನಿಕ ಜೀವನಕ್ಕೆ ವಾಪಸ್: ಸಚಿವೆ ಲಕ್ಷ್ಮೀ ಹೆಬ್ಬಾಳಕರ್
You seem to have an Ad Blocker on.
To continue reading, please turn it off or whitelist Udayavani.