ಮೋಟಾರು ವಾಹನ ಕಾಯ್ದೆಗೆ ವಿರೋಧ
Team Udayavani, Sep 25, 2019, 10:29 AM IST
ಬೈಲಹೊಂಗಲ: ಕೇಂದ್ರ ಸರ್ಕಾರದ ನೂತನ ಮೋಟಾರು ವಾಹನ ಕಾಯ್ದೆ ವಿರೋಧಿಸಿ ಹಾಗೂ ವಿವಿಧ ಬೇಡಿಕೆ ಈಡೇರಿಕೆಗಾಗಿ ಆಗ್ರಹಿಸಿ ಉತ್ತರ ಕರ್ನಾಟಕ ಆಟೋ ಚಾಲಕರ ಒಕ್ಕೂಟದಿಂದ ಉಪವಿಭಾಗಾ ಧಿಕಾರಿ ಮೂಲಕ ಪ್ರಧಾನಮಂತ್ರಿಗೆ ಮನವಿ ಸಲ್ಲಿಸಲಾಯಿತು.
ಇದಕ್ಕೂ ಮೊದಲು ಕೇಂದ್ರ ಬಸ್‌ನಿಲ್ದಾಣದ ಕರೆಮ್ಮದೇವಿ ದೇವಸ್ಥಾನದಿಂದ ಆರಂಭವಾದ ಬೃಹತ್ ಪ್ರತಿಭಟನಾ ಮೆರವಣಿಗೆ ಸಂಗೊಳ್ಳಿ ರಾಯಣ್ಣ ವೃತ್ತದ ಮೂಲಕ ಎಸಿ ಕಚೇರಿಗೆ ತೆರಳಿತು. ನಂತರ ಉಕ ಅಟೋ ಚಾಲಕರ ಒಕ್ಕೂಟದ ಗೌರವಾಧ್ಯಕ್ಷ ರಫೀಕ ಬಡೇಘರ ಮಾತನಾಡಿ, ಕೇಂದ್ರ ಸರ್ಕಾರ ನೂತನವಾಗಿ ಜಾರಿಗೆ ತಂದಿರುವ ಮೋಟಾರು ವಾಹನ ಕಾಯ್ದೆಯು ಅವಿಜ್ಞಾನಿಕವಾಗಿದ್ದು, ಮೀತಿ ಮೀರಿದ ದಂಡದಿಂದ ಜನಸಾಮಾನ್ಯರು ಪರಿತಪಿಸುವಂತಾಗಿದೆ ಎಂದರು.
ಕರವೇ ಜಿಲ್ಲಾ ಸಂಚಾಲಕ ಶಿವಾನಂದ ಕೋಲಕಾರ, ಜಯ ಕರ್ನಾಟಕ ತಾಲೂಕಾಧ್ಯಕ್ಷ ವಿಠuಲ ಹಂಪಿಹೊಳಿ ಮಾತನಾಡಿ, ವಾಹನ ಸವಾರರಿಗೆ ಗುಣಮಟ್ಟದ ರಸ್ತೆಗಳನ್ನು ಒದಗಿಸಿ ಕಾನೂನು ರೂಪಿಸಬೇಕಾದ ಸರ್ಕಾರ ಬೇಕಾಬಿಟ್ಟಿ ಮಿತಿ ಮೀರಿದ ದಂಡ ವಸೂಲಾತಿ ಕಾನೂನು ಜಾರಿಗೆ ತಂದಿರುವದರಿಂದ ಜನಸಾಮಾನ್ಯ ನರಳುವಂತಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಸುರಿದ ಅಕಾಲಿಕ ಮಳೆಗೆ ಪ್ರಾಣ, ಆಸ್ತಿಪಾಸ್ತಿ ಕಳೆದುಕೊಂಡ ಜನರಿಗೆ ಸರ್ಕಾರದಿಂದ
ಇನ್ನೂ ಯಾವುದೇ ಹಣ ಬಿಡುಗಡೆಗೊಂಡಿಲ್ಲ. ಅಲ್ಲದೆ ಮಳೆಯಲ್ಲಿ ಮನೆ ಕಳೆದುಕೊಂಡು ನಿರಾಶ್ರಿತರರಾದವರ ಬಳಿ ಯಾವುದೇ ವಾಹನ ದಾಖಲೆ ಪತ್ರಗಳು ಇಲ್ಲ. ಇಂತಹ ಸಂದರ್ಭದಲ್ಲಿ ಮಿತಿಮೀರಿದ ದಂಡ ಆಕರಣೆಗೆ ಸರ್ಕಾರ ಮುಂದಾಗಿರುವ ಕ್ರಮ ಸರಿಯಾದುದಲ್ಲ ಎಂದು ಆರೋಪಿಸಿದರು.
ಈ ವೇಳೆ ಎನ್.ಬಿ.ಪಾಟೀಲ, ಪಕ್ರುಸಾಬ ಕುಸಲಾಪೂರ, ಶ್ರೀಶೈಲ ಹಂಪಿಹೊಳಿ, ಮಡಿವಾಳಪ್ಪ ಹೋಟಿ, ರಾಜು ಬೋಳಣ್ಣವರ, ಪರಶುರಾಮ ರಾಯಭಾಗ, ಇಸ್ಮಾಯಿಲ್ ಬಡೇಘರ, ಹನೀಪ ಮುಜಾವರ, ಮಹ್ಮದಲಿ ಬಾಗೇವಾಡಿ, ಈರಯ್ಯ ತಿಪ್ಪಯ್ಯನ್ನವರ, ಉಳವಪ್ಪ ಅಂಗಡಿ, ಮೆಹತಾಬ ಕುದ್ದನ್ನವರ, ಶಿವಾನಂದ ಕುಲಕರ್ಣಿ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!
ಬೆಳಗಾವಿ: ಮಾನವ ಕಳ್ಳ ಸಾಗಾಣಿಕೆ-ಜೀತ ಪದ್ಧತಿ ದೊಡ್ಡ ಸಮಸ್ಯೆ
Belagavi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ
Belagavi: ಎಸ್‌ಡಿಎ ರುದ್ರಣ್ಣ ಕೇಸ್: ಮೂವರು ಆರೋಪಿಗಳಿಗೆ ನಿರೀಕ್ಷಣಾ ಜಾಮೀನು
Belagavi: ಸಿಎಂ ಮುಟ್ಟೋಕೆ ಆಗುತ್ತಾ…: ಸಿದ್ದರಾಮಯ್ಯ ಹೇಳಿಕೆಗೆ ವ್ಯಂಗ್ಯವಾಡಿದ ಸೋಮಣ್ಣ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.