ಸಾವಯವ ಕೃಷಿ ಸದೃಢ ಸಮಾಜಕ್ಕೆ ದಾರಿ
ಕ್ರಿಯಾಜೆನ್ ಸಂಸ್ಥೆ ಪ್ರತಿನಿಧಿ ಅವರ ಉತ್ಪನ್ನಗಳು ಹಾಗೂ ಬಳಕೆ ಬಗ್ಗೆ ಮಾಹಿತಿ ನೀಡಿದರು.
Team Udayavani, Feb 12, 2022, 3:35 PM IST
ಚಿಕ್ಕೋಡಿ: ಮಾನವ ಸಂಕುಲದ ಉಳಿವಿಗೆ ಆಧುನಿಕ ಯಂತ್ರೋಪಕರಣಗಳ ಬಳಕೆಯೊಂದಿಗೆ ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಳ್ಳುವ ಅನಿವಾರ್ಯತೆ ಮತ್ತು ಸದೃಢ ಸಮಾಜದ ನಿರ್ಮಾಣಕ್ಕೆ ಏಕೈಕ ದಾರಿಯಾಗಿದೆ ಎಂದು ರಾಜ್ಯಸಭೆ ಮಾಜಿ ಸದಸ್ಯ ಡಾ| ಪ್ರಭಾಕರ ಕೋರೆ ಹೇಳಿದರು.
ಚಿದಾನಂದ ಬಸಪ್ರಭು ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆ ನಿಯಮಿತ, ಚಿಕ್ಕೋಡಿ, ಮೇ| ಶಿವಶಕ್ತಿ ಶುಗರ್ಸ್ ಲಿ., ಯಡ್ರಾವ ಹಾಗೂ ಕ್ರಿಯಾಜೆನ್ ಸಂಸ್ಥೆ, ಕೃಷಿ ವಿಶ್ವವಿದ್ಯಾಲಯ ಬೆಂಗಳೂರು ಸಹಯೋಗದಲ್ಲಿ ಡಾ| ಪ್ರಭಾಕರ ಕೋರೆ, ಫಾರ್ಮ್ಹೌಸ್‌ನಲ್ಲಿ ಸಾವಯವ ಕಬ್ಬು ಬೆಳೆ ಕುರಿತು ಹಮ್ಮಿಕೊಂಡಿದ್ದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
ಚಿದಾನಂದ ಬಸಪ್ರಭು ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಭರತೇಶ ಬನವನೆ ಮಾತನಾಡಿ, ಸಾವಯವ ಕೃಷಿ ಮತ್ತು ರಾಸಾಯನಿಕ ಗೊಬ್ಬರ ಬಳಕೆ ಕೃಷಿಯಿಂದ ಬೆಳೆದ ಆಹಾರ ಧಾನ್ಯಗಳ ಸೇವನೆಯಿಂದ ಆಗುವ ಪರಿಣಾಮಗಳ ಬಗ್ಗೆ ಹಿರಿಯರು ಮತ್ತು ನಮ್ಮ ಆರೋಗ್ಯದ ಸ್ಥಿತಿ ಹೋಲಿಸಿ ಸಾವಯವ ಕೃಷಿ ಪದ್ಧತಿ ಮಹತ್ವ ತಿಳಿದುಕೊಳ್ಳಬಹುದು. ಬರುವ ದಿನಗಳಲ್ಲಿ ಕಾರ್ಖಾನೆಯಿಂದ ಸಾವಯವ ಕಬ್ಬು ಕೃಷಿಗೆ ಒತ್ತು ನೀಡಿ ರೈತರಿಗೆ ಬೇಕಾದ ಅಗತ್ಯ ಮಾಹಿತಿ ಒದಗಿಸಲು ಕಾರ್ಖಾನೆ ಈ ರೀತಿಯ ವಿಚಾರ ಸಂಕಿರಣ ಆಯೋಜಿಸುವ ಹಾಗೂ ಕಾರ್ಖಾನೆ ಕಬ್ಬು ಅಭಿವೃದ್ಧಿ ಸಿಬ್ಬಂದಿ ಮೂಲಕ ಮಾಹಿತಿ ನೀಡಲು ಕ್ರಮ ವಹಿಸುವುದಾಗಿ ತಿಳಿಸಿದರು.
ಸಾವಯವ ಕೃಷಿಕರು ಮತ್ತು ಕೃಷಿ ಪಂಡಿತ ಪುರಸ್ಕೃತ ಶೇಗುಣಸಿ ಕಲ್ಮೇಶ ಯಲ್ಲಡಗಿ ಉಪನ್ಯಾಸಕರಾಗಿ ಮಾತನಾಡಿ, ಸಾವಯವ ಕೃಷಿ ಪದ್ಧತಿಯಲ್ಲಿ ಎರೆಹುಳು ಗೊಬ್ಬರ, ಘನಜೀವಾಮೃತ ಮತ್ತು ಇತರ ಉಪಯೋಗದ ಬಗ್ಗೆ ಹಾಗೂ ಬೇಡಕಿಹಾಳ ಗ್ರಾಮದ ಸುರೇಶ ದೇಸಾಯಿ ಸಾವಯವ ಕೃಷಿ ಮಾಡುವ ವಿಧಾನ ಹಾಗೂ ಅದರಿಂದ ಉತ್ಪಾದಿಸುವ ಆಹಾರ ಧಾನ್ಯಗಳಿಗೆ ವಿಶೇಷ ಮಾರುಕಟ್ಟೆ ಲಭ್ಯವಾಗಿಸುವ ಅವಶ್ಯಕತೆ ಇರುವ ಬಗ್ಗೆ ವಿವರಿಸಿದರು.
ಪ್ರಗತಿಪರ ರೈತರಾದ ರುದ್ರಕುಮಾರ ಹಾಲಪ್ಪನವರ ಎಕರೆಗೆ 100 ಟನ್ ಇಳುವರಿ ಪಡೆಯಲು ಕಬ್ಬು ಬೆಳೆ ನಾಟಿ ಮಹತ್ವ ಮತ್ತು ನಿರ್ವಹಣೆ ಬಗ್ಗೆ ವಿವರಿಸಿದರು. ಬೆಲ್ಲದ ಸ್ವರಾಜ, ಬಾಗಲಕೋಟೆ ತಯಾರಿಸಿದ ಹೊಸ ಕೃಷಿ ಉಳುಮೆ ಯಂತ್ರದ ಪ್ರಾತ್ಯಕ್ಷಿಕೆ ತೋರಿಸಿ ಬಿಜಿನೆಸ್ ಹೆಡ್ ಪ್ರಶಾಂತ ಗಾಲಿಮಠ ಅದರ ಉಪಯೋಗದ ಮಾಹಿತಿ ನೀಡಿದರು.
ಚಿಕ್ಕೋಡಿ ಅರಣ್ಯ ವಲಯ ಅಧಿಕಾರಿ ಪ್ರಶಾಂತ ಗಂಗಾಧರ ಬಾಂಬೂ ಬೆಳೆ ಪದ್ಧತಿ, ಮಾರುಕಟ್ಟೆ ಲಭ್ಯತೆ ಮತ್ತು ಲಾಭಗಳ ಬಗ್ಗೆ ಮಾಹಿತಿ ನೀಡಿದರು. ಕ್ರಿಯಾಜೆನ್ ಸಂಸ್ಥೆ ಪ್ರತಿನಿಧಿ ಅವರ ಉತ್ಪನ್ನಗಳು ಹಾಗೂ ಬಳಕೆ ಬಗ್ಗೆ ಮಾಹಿತಿ ನೀಡಿದರು. ಈ ವೇಳೆ ಚಿದಾನಂದ ಬಸಪ್ರಭು ಕೋರೆ ಕಾರ್ಖಾನೆ ಉಪಾಧ್ಯಕ್ಷ ಮಲ್ಲಿಕಾರ್ಜುನ ಕೋರೆ, ನಿರ್ದೇಶಕರಾದ ಅಜೀತ್ ದೇಸಾಯಿ, ತಾತ್ಯಾಸಾಹೇಬ ಕಾಟೆ, ಬಾಳಗೌಡಾ ರೇಂದಾಳೆ, ರಾಮಚಂದ್ರ ನಿಶಾನದಾರ, ಚೇತನ ಪಾಟೀಲ, ಚಿದಾನಂದ ಬಸಪ್ರಭು ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆ ಮತ್ತು ಶಿವಶಕ್ತಿ ಶುಗರ್ಸ್ ಒಕ್ಕಲುತನ ವಿಭಾಗದ ಅಧಿಕಾರಿಗಳು, ಸಿಬ್ಬಂದಿ ಮತ್ತು ರೈತ ಸದಸ್ಯರು ಇದ್ದರು.
ಚಿದಾನಂದ ಬಸಪ್ರಭು ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆ ಕಾರ್ಮಿಕ ಕಲ್ಯಾಣಾಧಿಕಾರಿ ಎಸ್.ಎಲ್. ಹಕಾರೆ ಸ್ವಾಗತಿಸಿದರು. ವ್ಯವಸ್ಥಾಪಕ ನಿರ್ದೇಶಕ ಆರ್.ಟಿ. ದೇಸಾಯಿ ಪ್ರಾಸ್ತಾವಿಕ ಮಾತನಾಡಿದರು. ಕಬ್ಬು ಅಭಿವೃದ್ಧಿ ಅಧಿಕಾರಿ ಎನ್.ಎಸ್. ಹಿರೇಮಠ ನಿರೂಪಿಸಿದರು.
ಸ್ವಂತ 2 ಎಕರೆ ಜಮೀನಿನಲ್ಲಿ ಸಂಪೂರ್ಣ ಸಾವಯವ ಕೃಷಿ ಪದ್ಧತಿಯಲ್ಲಿ ಬೆಳೆದ ಕಬ್ಬನ್ನು ಕಂಡು ಸಂತೋಷವಾಗಿದೆ. ಹಲವು ವರ್ಷಗಳಿಂದ ರಾಸಾಯನಿಕ ಗೊಬ್ಬರ ಅವಲಂಬಿತ ಕೃಷಿ ಮಾಡುತ್ತಿರುವುದು ಹಾಗೂ ಇತ್ತೀಚಿನ ದಿನಗಳಲ್ಲಿ ರಾಸಾಯನಿಕ ಗೊಬ್ಬರದ ಅತಿಯಾದ ಬಳಕೆಯಿಂದ ಜಮೀನು, ನದಿ ನೀರು ಕಲುಷಿತಗೊಳ್ಳುತ್ತಿದೆ. ಅಲ್ಲದೇ ಅದರಿಂದ ಬೆಳೆದ ಆಹಾರ ಧಾನ್ಯ ಸೇವಿಸಿ ದೇಹಕ್ಕೆ ಹಾನಿ ಮಾಡಿಕೊಂಡು ಹಲವು ರೋಗಗಳ ಕಾರಣೀಭೂತರಾಗುತ್ತಿದ್ದೇವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mrinal Hebbalkar: ನನ್ನ ತಾಯಿಗೆ ರವಿ ಬಳಸಿದ ಪದದಿಂದ ನೋವಾಗಿದೆ: ಮೃಣಾಲ್
Belgavi: ಸಿ.ಟಿ.ರವಿ ಪ್ರಕರಣ ಮುಂದುವರಿಸುವಲ್ಲಿ ಅರ್ಥವೇ ಇಲ್ಲ: ಸಚಿವ ಸತೀಶ್ ಜಾರಕಿಹೊಳಿ
Belagavi: ನ್ಯಾಯಾಧೀಶರ ಮುಂದೆ ಪೊಲೀಸ್ ದೌರ್ಜನ್ಯ ಬಿಚ್ಚಿಟ್ಟ ಸಿ.ಟಿ. ರವಿ
Belagavi: ಎಲ್ಲದಕ್ಕೂ ಪೂರ್ಣವಿರಾಮ ಬೀಳಲಿದೆ, ನನಗೂ ಒಂದು ಕಾಲ ಬರುತ್ತದೆ….. : ಸಿ.ಟಿ.ರವಿ
Belagavi: ಸಿ.ಟಿ.ರವಿ ಬಂಧನ ಪ್ರಕರಣ ಬೆಂಗಳೂರಿಗೆ ಸ್ಥಳಾಂತರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.