ಸುವರ್ಣಸೌಧಕ್ಕೆ ಶೀಘ್ರ ಕಚೇರಿ: ಮಹೇಶ
ಉಕ ಅಭಿವೃದ್ಧಿಗೆ ಸರ್ಕಾರ ಬದ್ಧ; ಬಿಜೆಪಿ ಬೆಳವಣಿಗೆಯಲ್ಲಿ ಮಾಧ್ಯಮ ವಿಭಾಗದ ಕೊಡುಗೆ ಪ್ರಮುಖ
Team Udayavani, Jul 4, 2022, 4:12 PM IST
ಬೆಳಗಾವಿ: ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಬಿಜೆಪಿ ಸರ್ಕಾರ ಬದ್ಧವಾಗಿದ್ದು ಯಾವುದೆ ಅಹಿತಕರ ಘಟನೆಗಳಿಗೆ ರಾಜ್ಯದಲ್ಲಿ ಅವಕಾಶವಿಲ್ಲ. ಬರುವ ದಿನಗಳಲ್ಲಿ ಸರಕಾರದ ಹಲವಾರು ಮುಖ್ಯ ಕಚೇರಿಗಳು ಸುವರ್ಣವಿಧಾನಸೌಧಕ್ಕೆ ಬರಲಿದ್ದು ಈ ಭಾಗದ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದು ರಾಜ್ಯ ಬಿಜೆಪಿ ಮುಖ್ಯ ವಕ್ತಾರ ಎಮ್.ಜಿ. ಮಹೇಶ ಹೇಳಿದರು.
ನಗರದ ಗ್ರಾಮಾಂತರ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಜಿಲ್ಲೆಯ ಬಿಜೆಪಿ ಮಾಧ್ಯಮ ಸದಸ್ಯರ ಸಂಘಟನಾ ಸಭೆಯಲ್ಲಿ ಮಾತನಾಡಿದ ಅವರು, ಈ ಬಗ್ಗೆ ಯಾವುದೇ ಗೊಂದಲಗಳಿಗೆ ಯಾರೂ ಅವಕಾಶ ನೀಡಬಾರದು. ಪಕ್ಷದ ಮಾಧ್ಯಮ ಸದಸ್ಯರು ಬರುವ ದಿನಗಳಲ್ಲಿ ಇನ್ನಷ್ಟು ಕಾರ್ಯ ಚಟುವಟಿಕೆ ಮಾಡಬೇಕು ಎಂದರು.
ರಾಜ್ಯದ ಬಿಜೆಪಿಯಲ್ಲಿ ಎಲ್ಲಾ ವಿಭಾಗದಲ್ಲಿ ಮಾಧ್ಯಮ ಅತ್ಯಂತ ಪ್ರಬಲವಾಗಿದ್ದು ಪಕ್ಷದ ಬೆಳವಣಿಗೆಯಲ್ಲಿ ಮಾಧ್ಯಮ ಪ್ರಮುಖ ಪಾತ್ರವಹಿಸಿದೆ ಎಂದ ಅವರು, ಪ್ರಪಂಚದಲ್ಲಿ ಬಿಜೆಪಿ ಅತ್ಯಂತ ದೊಡ್ಡದಾದ ಬಲಿಷ್ಠ ರಾಜಕೀಯ ಪಕ್ಷವಾಗಿದ್ದು 19 ರಾಜ್ಯಗಳಲ್ಲಿ ಹಾಗೂ ಕೇಂದ್ರದಲ್ಲಿ ಸುಸ್ಥಿರ ಸರ್ಕಾರ ನೀಡಿದ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದರು.
ಭಾವಿಗೆ ಜಲವೆ ಸಾಕ್ಷಿ. ಬಿಜೆಪಿ ಕಾರ್ಯ ಪದ್ಧತಿಗೆ ಜನರೇ ಸಾಕ್ಷಿ ಎನ್ನುವಂತೆ ಅಭೂತಪೂರ್ವ ಬೆಂಬಲ ನೀಡುತ್ತಿರುವ ಮತದಾರರಿಗೆ ಸರ್ಕಾರದ ಸಾಧನೆಗಳು, ಯೋಜನೆಗಳು ಹಾಗೂ ಬಿಜೆಪಿಯ ಸದ್ವಿಚಾರಗಳನ್ನು ಬಿತ್ತರಿಸುವ ಕಾರ್ಯವು ಎಲ್ಲ ಮಾಧ್ಯಮಗಳ ಸಹಕಾರದಿಂದ ಅವ್ಯಾಹತವಾಗಿ ನಡೆಯುತ್ತಿರುವುದು ಸಂತಸದ ವಿಷಯವಾಗಿದೆ ಎಂದು ಹೇಳಿದರು.
ರಾಜ್ಯ ಬಿಜೆಪಿ ಮಾಧ್ಯಮ ಸಂಚಾಲಕ ಕರುಣಾಕರ ಖಾಸಲೆ ಮಾತನಾಡಿ, ಪ್ರತಿ ಜಿಲ್ಲೆಗೆ ಮಾಧ್ಯಮ ಸಂಚಾಲಕರು ಮತ್ತು ಸಹಸಂಚಾಲಕರಿದ್ದು ಮಂಡಲ ಸ್ತರಕ್ಕೆ ಮಾಧ್ಯಮ ಸದಸ್ಯ ಹಾಗೂ ಸಹ ಸದಸ್ಯರನ್ನು ನೇಮಕ ಮಾಡಿದೆ. ಬಿಜೆಪಿಗೆ ಸಂಬಂಧಿಸಿದ ವಿಷಯವನ್ನು ಮಾಧ್ಯಮಗಳಿಗೆ ನೀಡುವುದು, ಪಕ್ಷದ ಮುಖ್ಯವಾಹಿನಿಯ ಪ್ರತಿರೂಪವಾಗಿ ಜಿಲ್ಲಾ ವಕ್ತಾರರು ಇರುವುದರಿಂದ ಅವರ ಪ್ರತಿ ಹೇಳಿಕೆಗಳು ಪಕ್ಷದ ನಿಲುವಾಗಿರುತ್ತವೆ. ಹೀಗಾಗಿ ಹೇಳಿಕೆ ನೀಡುವಾಗ ಬಹಳ ಎಚ್ಚರದಿಂದ ಹಾಗೂ ವಿಷಯದ ಆಳವನ್ನರಿತು ನೀಡುವುದಾಗಬೇಕು ಎಂದರು.
ಬೆಳಗಾವಿ ವಿಭಾಗದ ಮಾಧ್ಯಮ ಪ್ರಭಾರಿ ಹಾಗೂ ರಾಜ್ಯ ಮಾಧ್ಯಮ ಸದಸ್ಯ ಸಿದ್ದು ಮೊಗಲಿಶೆಟ್ಟರ ಮಾತನಾಡಿ, ರಾಜ್ಯದಲ್ಲಿ ಅತ್ಯಂತ ಸಕ್ರಿಯವಾದ ತಂಡ ಬೆಳಗಾವಿ ಜಿಲ್ಲೆಯಲ್ಲಿದ್ದು ಅನೇಕ ಚುನಾವಣಾ ಗೆಲುವಿನಲ್ಲಿ ಈ ಮಾಧ್ಯಮ ವಿಭಾಗ ಪ್ರಮುಖ ಪಾತ್ರವಹಿಸಿದೆ. ಜನಸಾಮಾನ್ಯರಿಗೆ ಬಿಜೆಪಿ ಸರ್ಕಾರದ ಅನೇಕ ಯೋಜನೆಯ ವಿಷಯ ಮುಟ್ಟಿಸುವ ಮೂಲಕ ಜನಪರ ಕಾರ್ಯಗಳನ್ನು ಮಾಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಬೆಳಗಾವಿ ಗ್ರಾಮಾಂತರ ಜಿಲ್ಲಾ ಮಾಧ್ಯಮ ಸಂಚಾಲಕ ಎಫ್.ಎಸ್.ಸಿದ್ದನಗೌಡರ ಜಿಲ್ಲೆಯ ವರದಿ ನೀಡಿದರು. ಮಹಾನಗರ ಜಿಲ್ಲೆಯ ಸಂಚಾಲಕ ಶರದ್ ಪಾಟೀಲ ಮಾತನಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ವಕ್ತಾರರಾದ ಸಂಜಯ ಕಂಚಿ, ಪ್ರಭು ಹೂಗಾರ, ಪ್ರಧಾನ ಕಾರ್ಯದರ್ಶಿಗಳಾದ ಸುಭಾಷ ಪಾಟೀಲ, ಸಂದೀಪ್ ದೇಶಪಾಂಡೆ, ಜಿಲ್ಲಾ ಮಾಧ್ಯಮ ಪ್ರಭಾರಿ ಮಲ್ಲಿಕಾರ್ಜುನ ಮಾದಮ್ಮನವರ, ಜಿಲ್ಲಾ ಮೋರ್ಚಾಗಳ ಅಧ್ಯಕ್ಷರಾದ ಯಲ್ಲೇಶ್ ಕೊಲಕಾರ, ಉಮೇಶ್ ಪೂರಿ ಉಪಸ್ಥಿತರಿದ್ದರು. ಶಶಿ ಬಾಡಕರ ಸ್ವಾಗತಿಸಿದರು, ಪ್ರವೀಣ ಕೊಪ್ಪದ ವಂದಿಸಿದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Mrinal Hebbalkar: ನನ್ನ ತಾಯಿಗೆ ರವಿ ಬಳಸಿದ ಪದದಿಂದ ನೋವಾಗಿದೆ: ಮೃಣಾಲ್
Belgavi: ಸಿ.ಟಿ.ರವಿ ಪ್ರಕರಣ ಮುಂದುವರಿಸುವಲ್ಲಿ ಅರ್ಥವೇ ಇಲ್ಲ: ಸಚಿವ ಸತೀಶ್ ಜಾರಕಿಹೊಳಿ
Belagavi: ನ್ಯಾಯಾಧೀಶರ ಮುಂದೆ ಪೊಲೀಸ್ ದೌರ್ಜನ್ಯ ಬಿಚ್ಚಿಟ್ಟ ಸಿ.ಟಿ. ರವಿ
Belagavi: ಎಲ್ಲದಕ್ಕೂ ಪೂರ್ಣವಿರಾಮ ಬೀಳಲಿದೆ, ನನಗೂ ಒಂದು ಕಾಲ ಬರುತ್ತದೆ….. : ಸಿ.ಟಿ.ರವಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Cricket: ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಅಂತಿಮ; ಭಾರತದ ಪಂದ್ಯಗಳಿಗೆ ಯುಎಇ ಆತಿಥ್ಯ
Arrested: ನಟ ಸುನಿಲ್ ಪಾಲ್, ಮುಸ್ತಾಕ್ ಅಪಹರಣ; ಎನ್‌ಕೌಂಟರ್ ಮೂಲಕ ಪ್ರಮುಖ ಆರೋಪಿ ಬಂಧನ
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.