ಮತಾಂತರ ವಿರುದ್ಧ ಸಿಡಿದೇಳಿ: ದಿಲೀಪ ವೇರ್ಣೇಕರ
ಛತ್ರಪತಿ ಶಿವಾಜಿ ಮಹಾರಾಜರ ಕನಸು ಹಿಂದವಿ ಸ್ವರಾಜ್ಯ ನಿರ್ಮಾಣವಾಗುತ್ತಿದೆ
Team Udayavani, Dec 26, 2022, 7:05 PM IST
ಬೆಳಗಾವಿ: ಅಖಂಡ ಹಿಂದೂ ಧರ್ಮದ ಪರಿಕಲ್ಪನೆ ಇಟ್ಟುಕೊಂಡು ನಾವೆಲ್ಲರೂ ಮುಂದೆ ಸಾಗಬೇಕಿದೆ. “ಲವ್ ಜಿಹಾದ್’ ಮೂಲಕ ನಡೆಯುತ್ತಿರುವ ಮತಾಂತರ ವಿರುದ್ಧ ಎಲ್ಲರೂ ಸಿಡಿದೇಳಬೇಕಿದೆ. ಹಿಂದೂಗಳು ಶಸ್ತ್ರಸಜ್ಜಿತರಾಗಿ ಹೊರ ಬರಬೇಕಾಗಿದೆ ಎಂದು ಧರ್ಮ ಜಾಗರಣ ಉತ್ತರ ಪ್ರಾಂತ ಸಂಯೋಜಕ ದಿಲೀಪ ವೇರ್ಣೇಕರ ಹೇಳಿದರು.
ಬೆಳಗಾವಿ ಬಿಜೆಪಿ ಗ್ರಾಮೀಣ ಮಂಡಲ ಅಧ್ಯಕ್ಷ ಧನಂಜಯ ಜಾಧವ ಮಿತ್ರ ಪರಿವಾರ ವತಿಯಿಂದ ರವಿ ವಾ ರ ಹಮ್ಮಿಕೊಂಡಿದ್ದ 26ನೇ ವರ್ಷದ ಹಿಂದೂ ಬಾಂಧವರ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರತಿ ವರ್ಷ ಐದು ಲಕ್ಷ ಹಿಂದೂಗಳು ಮತಾಂತರ ಆಗುತ್ತಿದ್ದಾರೆ. ಯಾರನ್ನೂ ನಾವು ಮುಸ್ಲಿಮರಾಗಲು ಬಿಡಲ್ಲ. ಮತಾಂತರಕ್ಕೆ ವಿರುದ್ಧ ನಾವೇ ಮುಸ್ಲಿಮರನ್ನು ಹಿಂದೂಗಳಾಗಿ ಘರ್ ವಾಪಸಿ ಮಾಡಿಕೊಳ್ಳಬೇಕು. ಇದಕ್ಕೆ ಸಂಕಲ್ಪ ಮಾಡೋಣ ಎಂದರು.
ಅಹಿಂಸೆಯಿಂದ ಸ್ವಾತಂತ್ರ್ಯ ಸಿಕ್ಕಿದೆ ಎಂಬುದು ಸುಳ್ಳು. ಅಹಿಂಸೆಯಿಂದ ಭಾರತ ವಿಭಜನೆ ಆಗಿದೆ. ಸುಭಾಶ್ಚಂದ್ರ ಬೋಸ್ ಅವರ ಆಕ್ರಮಣಕ್ಕೆ ಮಣಿದು ಸ್ವಾತಂತ್ರ್ಯ ಸಿಕ್ಕಿದೆ ಎಂಬುದಾಗಿ ಬ್ರಿಟಿಷ ಪ್ರಧಾನಿ ಹೇಳಿದ್ದಾರೆ. ವೀರ ಸಾವರ್ಕರ್ ಪ್ರೇರಣೆಯಿಂದ ಬೋಸ್ ಸೈನ್ಯ ಕಟ್ಟಿದ್ದರು. 50 ವರ್ಷ ಕ್ರೂರ ಶಿಕ್ಷೆ ಅನುಭವಿಸಿದವರು ಸಾವರ್ಕರ್. ಇಂಥ ಕಠಿಣ ಶಿಕ್ಷೆ ಯಾವೊಬ್ಬ ಕಾಂಗ್ರೆಸ್ ನಾಯಕರು ಅನುಭವಿಸಿಲ್ಲ ಎಂದರು.
ಹಿಂದೂಗಳ ಮೇಲೆ ಬಹಳಷ್ಟು ಅತ್ಯಾಚಾರ ಆಗಿದೆ. ಇನ್ನು ಏಸು ನಿಮ್ಮನ್ನು ಕಾಪಾಡುತ್ತಾನೆ ಎಂದು ಹೇಳುತ್ತಾರೆ. ಅಮೆರಿಕ, ಇಟಲಿಯಲ್ಲಿ ಹೆಚ್ಚು ಜನ ಸತ್ತಾಗ ಏಸು ಏಕೆ ಕಾಪಾಡಲಿಲ್ಲ. ಭಾರತವನ್ನು ಮೂರ್ಖರನ್ನಾಗಿ ಮಾಡಿ ದೇಶವನ್ನು ಇಸ್ಲಾಂ, ಕ್ರೈಸ್ತಮಯ ಮಾಡುವ ಪ್ರಯತ್ನ ನಡೆದಿದೆ. ದೇಶದಲ್ಲಿ ಮುಸ್ಲಿಂ, ಕ್ರೈಸ್ತರ ಸಂಖ್ಯೆ ಹೆಚ್ಚಾಗುತ್ತಿದೆ. 50 ವರ್ಷಗಳ ನಂತರ ಹಿಂದೂ ಅಲ್ಪಸಂಖ್ಯಾತ ರಾಷ್ಟ್ರ ಆಗುತ್ತದೆ.ಕುಟುಂಬ ಕಲ್ಯಾಣ ಯೋಜನೆಯನ್ನು ಹಿಂದೂಗಳು ಯಾರೂ ಪಾಲಿಸಬಾರದು.ಹಿಂದೂಗಳು ಕನಿಷ್ಠ 3-4-5 ಮಕ್ಕಳನ್ನು ಹೆರಬೇಕು ಎಂದು ಹೇಳಿದರು.
ಭಾರತದಂಥ ಜೀವನ ಪದ್ಧತಿ ಜಗತ್ತಿನ ಎಲ್ಲಿಯೂ ಇಲ್ಲ. ವಿದೇಶದಲ್ಲಿ ಐದಾರು ವಿವಾಹವಾಗಿ ಮಕ್ಕಳನ್ನು ಅನಾಥಾಶ್ರಮಗಳಲ್ಲಿ ಓದಿಸುವ ಪದ್ಧತಿ ಇದೆ. ನಮ್ಮ ಮಕ್ಕಳು ತಂದೆ-ತಾಯಿ ಮಡಿಲಲ್ಲಿ ಓದುತ್ತಿದ್ದಾರೆ. ಜಗತ್ತಿನಲ್ಲಿ ಅತ್ಯಂತ ಸಂತೋಷ ಕುಟುಂಬ ಇರುವುದು ಭಾರತದಲ್ಲಿ ಮಾತ್ರ. ಮುಸ್ಲಿಮರು-ಕ್ರೈಸ್ತರು ಭಾರತವನ್ನು ಪ್ರೀತಿಸಲ್ಲ, ದ್ವೇಷಿಸುತ್ತಾರೆ ಎಂದು ಕಿಡಿಕಾರಿದರು.
ಪೂನಾದ ಹಿಂದೂತ್ವ ಶೌರ್ಯ ಪ್ರಶಸ್ತಿ ಪುರಸ್ಕೃತ ಶರದ್ ಭಾವು ಮೋಹೊಳ ಮಾತನಾಡಿ, ಹಿಂದೂ ರಾಷ್ಟ್ರ ನಿರ್ಮಾಣದತ್ತ ಭಾರತ ಮುನ್ನುಗ್ಗುತ್ತಿದೆ. ಅಖಂಡ ಭಾರತದ ಕಲ್ಪನೆ ಸಾಕಾರಗೊಳ್ಳುವ ಕಾಲ ಬಂದಿದೆ. ಛತ್ರಪತಿ ಶಿವಾಜಿ ಮಹಾರಾಜರ ಕನಸು ಹಿಂದವಿ ಸ್ವರಾಜ್ಯ ನಿರ್ಮಾಣವಾಗುತ್ತಿದೆ ಎಂದರು.
ಬೆಳಗಾವಿ ಗ್ರಾಮೀಣ ಮಂಡಲ ಅಧ್ಯಕ್ಷ ಧನಂಜಯ ಜಾಧವ ಮಾತನಾಡಿ, ಹಿಂದೂ ರಾಷ್ಟ್ರ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು. ಹಲವಾರು ವರ್ಷಗಳಿಂದ ಹಿಂದೂಗಳ ಮೇಲೆ ನಡೆಯುತ್ತಿದ್ದ ಅತ್ಯಾಚಾರ, ದಬ್ಟಾಳಿಕೆ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ತಕ್ಕ ಉತ್ತರ ನೀಡುತ್ತಿದ್ದಾರೆ. ಶ್ರೀರಾಮಮಂದಿರ ನಿರ್ಮಾಣ ಕನಸು ನನಸಾಗಿದೆ. ದೇಶದಲ್ಲಿ ಹೇಗೆ ಕಮಲ ಅರಳಿದೆಯೋ ಅದೇ ರೀತಿ ಕರ್ನಾಟಕದಲ್ಲಿ ಮತ್ತೂಮ್ಮೆ ಬಿಜೆಪಿ ಅಧಿಕಾರಕ್ಕೆ ಬರಬೇಕಾದರೆ
ಬೆಳಗಾವಿ ಗ್ರಾಮೀಣ ಸೇರಿದಂತೆ ಎಲ್ಲ ಕಡೆ ಕಾಂಗ್ರೆಸ್ ಸೋಲಿಸಬೇಕೆಂದು ಹೇಳಿದರು.
ಖಾನಾಪುರ ಬಿಜೆಪಿ ಮಂಡಲ ಅಧ್ಯಕ್ಷ ಸಂಜಯ ಕುಬಲ್ ಮಾತನಾಡಿ , ಆಮಿಷಕ್ಕೊಳಗಾಗಿ ಯಾರೂ ತಮ್ಮ ಮತಗಳನ್ನು ಮಾರಿಕೊಳ್ಳಬಾರದು. ಹಿಂದೂಗಳು ಯಾರ ಬಳಿಯೂ ಕೈಯೊಡ್ಡುವ ಸಂಸ್ಕೃತಿಯವರಲ್ಲ. ಗ್ರಾಮೀಣ ಕ್ಷೇತ್ರದಲ್ಲಿ ಹಿಂದುತ್ವದ ಆಧಾರದ ಮೇಲೆ ಮತ ಚಲಾಯಿಸಿ ಬಿಜೆಪಿ ಗೆಲ್ಲಿಸಬೇಕು ಎಂದರು.
ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿರ್ದೇಶಕಿ ದೀಪಾ ಕುಡಚಿ ಮಾತನಾಡಿ, ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡಲು ಎಲ್ಲರೂ ಕೈಜೋಡಿಸಬೇಕು. ಜತೆಗೆ ಜಿಲ್ಲೆಯಲ್ಲೂ ಕಾಂಗ್ರೆಸ್ ಮುಕ್ತ ಮಾಡಿ ಕಮಲ ಅರಳಿಸಬೇಕು ಎಂದರು.ಹಿಂದೂ ರಾಷ್ಟ್ರ ಸೇನೆ ಜಿಲ್ಲಾಧ್ಯಕ್ಷ ರವಿ ಕೋಕಿತಕರ ಮಾತನಾಡಿದರು. ಉತ್ತರ ಕ್ಷೇತ್ರದ ಶಾಸಕ ಅನಿಲ್ ಬೆನಕೆ, ಮಹಾನಗರ ಪಾಲಿಕೆ ಸದಸ್ಯರಾದ ರೇಷ್ಮಾ ಪಾಟೀಲ, ವೀಣಾ ವಿಜಾಪುರೆ, ರಾಜು ಭಾತಖಾಂಡೆ, ಶಂಕರ ಪಾಟೀಲ, ಮುಖಂಡರಾದ ಬಾಬುರಾವ ದೇಸಾಯಿ, ರಮೇಶ ಕುರುಬಗಟ್ಟಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Controversy: ಕಾಂಗ್ರೆಸ್ ಪೋಸ್ಟರ್‌ನಲ್ಲಿ ಪಿಒಕೆ ತಪ್ಪಾಗಿ ಚಿತ್ರಣ; ಬಿಜೆಪಿ ತೀವ್ರ ಆಕ್ರೋಶ
Belagavi: ಪಿಒಕೆ ಬಗ್ಗೆ ಕಾಂಗ್ರೆಸ್ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್
Belagavi;ಕಾಂಗ್ರೆಸ್ ಕಾರ್ಯಕಾರಿಸಭೆಯಲ್ಲಿ ಖರ್ಗೆ,ರಾಹುಲ್ ಭಾಗಿ; ಸೋನಿಯಾ,ಪ್ರಿಯಾಂಕಾ ಗೈರು
Belagavi: ನಕಲಿ ಗಾಂಧಿಗಳನ್ನು ಮೆಚ್ಚಿಸಲು ಕನ್ನಡಿಗರ ತೆರಿಗೆ ಹಣ ಪೋಲು: ಜಗದೀಶ್ ಶೆಟ್ಟರ್
Belagavi: ಮಹಾತ್ಮ ಗಾಂಧಿ ಪುತ್ಥಳಿ ಅನಾವರಣಗೊಳಿಸಿದ ಸಿಎಂ ಸಿದ್ದರಾಮಯ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Controversy: ಕಾಂಗ್ರೆಸ್ ಪೋಸ್ಟರ್‌ನಲ್ಲಿ ಪಿಒಕೆ ತಪ್ಪಾಗಿ ಚಿತ್ರಣ; ಬಿಜೆಪಿ ತೀವ್ರ ಆಕ್ರೋಶ
Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್
Kambala: ಡಿ.28-29ರಂದು 8ನೇ ವರ್ಷದ ‘ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ
Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ
Ullala: ಗ್ಯಾಸ್ ಸಿಲಿಂಡರ್ ಸ್ಫೋ*ಟ ಪ್ರಕರಣ: ಸಾವಿನ ಸಂಖ್ಯೆ 2ಕ್ಕೆ ಏರಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.