ನಕಲಿ ಪತ್ರಕರ್ತರ ವಿರುದ್ಧ ಆಕ್ರೋಶ
Team Udayavani, Dec 18, 2019, 12:24 PM IST
ಕಾಗವಾಡ/ಉಗಾರ ಬಿಕೆ: ನಕಲಿ ಪತ್ರಕರ್ತರ ಹಾವಳಿ ಎಲ್ಲೆಡೆ ಹೆಚ್ಚಿದ್ದು, ಅವರ ಮೇಲೆ ಕ್ರಮ ಕೈಗೊಳ್ಳುವಂತೆ ಕಾಗವಾಡ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರು ಪೊಲೀಸ್ ಇಲಾಖೆ, ತಹಶೀಲ್ದಾರ್, ಬಿಇಒ ಇತರ ಇಲಾಖೆಗೆ ಮನವಿ ಸಲ್ಲಿಸಿದರು.
ಮಂಗಳವಾರ ಕಾಗವಾಡ ಪೊಲೀಸ್ ಠಾಣಾ ಮುಖ್ಯಸ್ಥ ಎಂ.ಎಸ್. ಕರಜಿಮಠ, ಕಾಗವಾಡ ಉಪ ತಹಶೀಲ್ದಾರ್ ವಿಜಯ ಚೌಗುಲೆ, ಕಾಗವಾಡ ಬಿಇಒ ಎ.ಎಸ್. ಜೋಡಗೇರಿ ಸೇರಿದಂತೆ ಇತರ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಕ್ರಮ ಕೈಗೊಳ್ಳು ವಂತೆ ಒತ್ತಾಯಿಸಿದರು. ತಾಲೂಕಿನಲ್ಲಿ ಕನ್ನಡ, ಮರಾಠಿ ಪತ್ರಿಕೆಗಳ ವರದಿಗಾರರು, ಟಿವಿ ಮಾಧ್ಯಮದ ವರದಿಗಾರರು ಸೇವೆ ನೀಡುತ್ತಿದ್ದಾರೆ. ಆದರೆ ಕೆಲವರು ತಾವು ವರದಿಗಾರರು, ಟಿವಿ ಚಾನಲ್ ಪತ್ರಕರ್ತರೆಂದು ಹೇಳುತ್ತ, ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರಿಗೆ ತೊಂದರೆ ನೀಡುವುದು, ಮೋಸ ಮಾಡುತ್ತಿರುವ ಮಾಹಿತಿ ತಿಳಿದು ಬಂದಿದೆ. ಯಾವುದೇ ದಾಖಲೆ ಇಲ್ಲದ ಅಥವಾ ಸುಳ್ಳು ದಾಖಲೆ ಪಡೆದು ಪತ್ರಕರ್ತರೆಂದು ಹೇಳಿ ವಂಚಿಸುವವರ ವಿರುದ್ಧ ಕ್ರಮ ಜರುಗಿಸ ಬೇಕೆಂದು ಮನವಿಯಲ್ಲಿ ಆಕ್ರೋಶ-ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ವೇಳೆ ಸುಕುಮಾರ ಬನ್ನೂರೆ, ಪ್ರಭಾಕರ ಗೊಂಧಳಿ, ಕುಮಾರ ಪಾಟೀಲ, ರಾಜು ಇಂಗಳಗಾಂವೆ, ಸುರೇಶ ಕಾಗಲಿ, ರಂಗನಾಥ ದೇಶಿಂಗಕರ, ಲಕ್ಷ್ಮಣ ಸೂರ್ಯವಂಶಿ, ಮುರಗೇಶ ಗಸ್ತಿ, ಶಿವಾಜಿ ಪಾಟೀಲ, ರಾಜಕುಮಾರ ಚೋಳಕೆ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬೆಳಗಾವಿ: ಮಾನವ ಕಳ್ಳ ಸಾಗಾಣಿಕೆ-ಜೀತ ಪದ್ಧತಿ ದೊಡ್ಡ ಸಮಸ್ಯೆ
Belagavi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ
Belagavi: ಎಸ್‌ಡಿಎ ರುದ್ರಣ್ಣ ಕೇಸ್: ಮೂವರು ಆರೋಪಿಗಳಿಗೆ ನಿರೀಕ್ಷಣಾ ಜಾಮೀನು
Belagavi: ಸಿಎಂ ಮುಟ್ಟೋಕೆ ಆಗುತ್ತಾ…: ಸಿದ್ದರಾಮಯ್ಯ ಹೇಳಿಕೆಗೆ ವ್ಯಂಗ್ಯವಾಡಿದ ಸೋಮಣ್ಣ
Assembly Election: “ಮಹಾ’ ಅಖಾಡದಲ್ಲಿ ಕರುನಾಡ ನಾಯಕರ ಹವಾ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.