ಕರ್ನಾಟಕ ಜರ್ಮನಿ ತಾಂತ್ರಿಕ ತರಬೇತಿ ಸಂಸ್ಥೆಗೆ ಸ್ವಂತ ಕಟ್ಟಡ ಭಾಗ್ಯ
ಕಟ್ಟಡ ನಿರ್ಮಿಸಲು 16.43 ಕೋಟಿ ರೂ.-2 ಎಕರೆ ಜಮೀನು ಮಂಜೂರು
Team Udayavani, Aug 2, 2021, 7:09 PM IST
ವರದಿ: ಕೇಶವ ಆದಿ
ಬೆಳಗಾವಿ: ಜಾಗತಿಕ ಮಟ್ಟದಲ್ಲಿ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಉದ್ಯೋಗಾವಕಾಶಗಳನ್ನು ಹುಡುಕಲು ಮತ್ತು ಯುವಕರಲ್ಲಿ ಉದ್ಯಮಶೀಲತೆ ಯನ್ನು ಉತ್ತೇಜಿಸಲು ಸಹಾಯ ಮಾಡುವ ಮಹತ್ವಾಕಾಂಕ್ಷೆ ಹೊಂದಿರುವ ಸುಸಜ್ಜಿತ ತಾಂತ್ರಿಕ ತರಬೇತಿ ಸಂಸ್ಥೆಯ ನೂತನ ಕಟ್ಟಡ ಸದ್ಯದಲ್ಲೇ ಬೆಳಗಾವಿಯಲ್ಲಿ ತಲೆ ಎತ್ತಲಿದೆ.
ಕೌಶಲ್ಯ-ನಿರ್ದಿಷ್ಟ ತರಬೇತಿಯನ್ನು ನೀಡುವುದು ಇದರ ಮುಖ್ಯ ಉದ್ದೇಶ. ಬೆಳಗಾವಿ ಸೇರಿದಂತೆ ರಾಜ್ಯದ ಐದು ಕಡೆಗಳಲ್ಲಿ ಕರ್ನಾಟಕ ಜರ್ಮನಿ ತಾಂತ್ರಿಕ ತರಬೇತಿ ಸಂಸ್ಥೆಗಳು (ಕೆಜಿಟಿಟಿಐ) ಕಾರ್ಯ ನಿರ್ವಹಿಸುತ್ತಿದ್ದು ಬೆಳಗಾವಿಯಲ್ಲಿ 16.43 ಕೋಟಿ ರೂ. ವೆಚ್ಚದಲ್ಲಿ ನೂತನ ಸುಸಜ್ಜಿತ ಕಟ್ಟಡ ನಿರ್ಮಾಣವಾಗಲಿದೆ. ಇದಕ್ಕೆ ಜಿಲ್ಲಾಡಳಿತ ಉದ್ಯಮಬಾಗ್ ಕೈಗಾರಿಕಾ ಪ್ರದೇಶದಲ್ಲಿ ಎರಡು ಎಕರೆ ಜಮೀನು ಮಂಜೂರು ಮಾಡಿದ್ದು ಲೋಕೋಪಯೋಗಿ ಇಲಾಖೆಯಿಂದ ಮೂರು ತಿಂಗಳಲ್ಲಿ ಕಾಮಗಾರಿ ಆರಂಭವಾಗಲಿದೆ. ರಾಜ್ಯ ಸರಕಾರ ಈಗಾಗಲೇ ಬೆಳಗಾವಿ ಮತ್ತು ಮಂಗಳೂರಿನಲ್ಲಿ ಹೊಸ ಕಟ್ಟಡ ನಿರ್ಮಾಣಕ್ಕೆ ಅನುಮೋದನೆ ನೀಡಿದೆ. ಜರ್ಮನ್ ಸಹಭಾಗಿತ್ವದ ಅಂತರರಾಷ್ಟ್ರೀಯ ಸಂಸ್ಥೆ ಕರ್ನಾಟಕದ ಐದು ಸ್ಥಳಗಳಲ್ಲಿ ಯುವಕರಿಗೆ ವೃತ್ತಿಪರ ತರಬೇತಿ ಕೋರ್ಸ್‌ಗಳನ್ನು ಒದಗಿಸುತ್ತಿದ್ದು ಸುಮಾರು 4,000 ಯುವಕರಿಗೆ ವಿವಿಧ ಕೌಶಲ್ಯಗಳಲ್ಲಿ ತರಬೇತಿ ನೀಡಲಾಗುತ್ತದೆ.
ಸದ್ಯ ಬೆಳಗಾವಿ ಮತ್ತು ಮಂಗಳೂರಿನಲ್ಲಿ ಎರಡೂ ಸಂಸ್ಥೆಗಳು ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿವೆ. ಉಳಿದಂತೆ ಬೆಂಗಳೂರು, ಹುಬ್ಬಳ್ಳಿ ಹಾಗೂ ಕಲಬುರಗಿಯಲ್ಲಿ ಈ ಸಂಸ್ಥೆಯು ಯುವಕರಿಗೆ ತಾಂತ್ರಿಕ ತರಬೇತಿ ನೀಡುತ್ತಿವೆ. ಕರ್ನಾಟಕ-ಜರ್ಮನ್ ಬಹುಪಯೋಗಿ ಅಭಿವೃದ್ಧಿ ಕೇಂದ್ರದ ಸಹಯೋಗದಲ್ಲಿ ತಾಂತ್ರಿಕ ತರಬೇತಿ, ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ನೆರವು ನೀಡಲು ಅಂತರರಾಷ್ಟ್ರೀಯ ಕರ್ನಾಟಕ ಜರ್ಮನ್ ಬಹುಪಯೋಗಿ ಅಭಿವೃದ್ಧಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಕರ್ನಾಟಕ ಜರ್ಮನ್ ತಾಂತ್ರಿಕ ತರಬೇತಿ ಸಂಸ್ಥೆ (ಕೆಜಿಟಿಟಿಐ) ಯನ್ನು ಕರ್ನಾಟಕ ಜರ್ಮನ್ ಮಲ್ಟಿ ಸ್ಕಿಲ್ ಡೆವಲಪ್‌ಮೆಂಟ್ ಸೆಂಟರ್ (ಕೆಜಿಎಂಎಸ್‌ಡಿಸಿ) ಸೊಸೆ„ಟಿ ಸ್ಥಾಪಿಸಿದೆ.
ವಿವಿಧ ಕೈಗಾರಿಕಾ ತಾಂತ್ರಿಕ ಕ್ಷೇತ್ರಗಳಲ್ಲಿ ವಿಶಾಲ ಆಧಾರಿತ ಶಿಸ್ತುಬದ್ಧ ವೃತ್ತಿಪರ ತರಬೇತಿ, ಕೌಶಲ್ಯ ಮತ್ತು ವಹಿವಾಟಿನ ಅಭಿವೃದ್ಧಿಗೆ ನಿರ್ದೇಶನ ನೀಡುವುದು ಅಲ್ಲದೆ ಕೈಗಾರಿಕಾ ಅಗತ್ಯತೆಗಳಿಗೆ ಅನುಗುಣವಾಗಿ ವಿಶೇಷ ವ್ಯಾಪಾರ ತರಬೇತಿ ಕಾರ್ಯಕ್ರಮಗಳನ್ನು ಪ್ರತಿನಿಧಿಸುವ ವಿಶ್ವ ದರ್ಜೆಯ ತರಬೇತಿ ಕೇಂದ್ರವಾಗುವುದು ಇದರ ಪ್ರಾಥಮಿಕ ಧ್ಯೇಯ. ಸಂಸ್ಥೆಯ ಎಲ್ಲ ಕಾರ್ಯಕ್ರಮಗಳು ಜರ್ಮನ್ ವೃತ್ತಿಪರ ಶಿಕ್ಷಣ ಮತ್ತು ತರಬೇತಿ ಮಾನದಂಡಗಳನ್ನು ಅನುಸರಿಸುತ್ತವೆ, ಅದು ಬೇಡಿಕೆ ಆಧಾರಿತವಾಗಿದೆ ಮತ್ತು ಉದ್ಯಮದೊಂದಿಗೆ ನಿಕಟ ಸಂಬಂಧವನ್ನು ನೇರವಾಗಿ ಸೂಚಿಸುತ್ತದೆ. ಅಂತರರಾಷ್ಟಿÅàಯ ಗುಣಮಟ್ಟ ಮತ್ತು ಹ್ಯಾಂಡ್ಸ್-ಆನ್ ತರಬೇತಿ ಯನ್ನು ಒದಗಿಸಲು ಕೇಂದ್ರವು ವ್ಯಾಪಕವಾದ ಅತ್ಯಾಧುನಿಕ ತರಬೇತಿ ಸೌಲಭ್ಯಗಳನ್ನು ಹೊಂದಿ ದೆ ಎಂಬುದು ಕರ್ನಾಟಕ ಜರ್ಮನಿ ಕೌಶಲ್ಯ ತರಬೇತಿ ಸಂಸ್ಥೆಯ ನಿರ್ದೇಶಕರ ಹೇಳಿಕೆ.
ವಿಶ್ವ ದರ್ಜೆಯ ವೃತ್ತಿಪರ ತರಬೇತಿ ಕೇಂದ್ರಗಳೊಂದಿಗೆ, ಕೆಜಿಟಿಟಿಐ ಕೌಶಲ್ಯ ಅಭಿವೃದ್ಧಿಯಲ್ಲಿ ಮಾನದಂಡವನ್ನು ನಿಗದಿ ಪಡಿಸಿದೆ. ಜಾಗತಿಕಮಟ್ಟದ ಕೆಲಸದ ಸ್ಥಳ ಗಳಲ್ಲಿ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಉದ್ಯೋಗಾ ವಕಾಶಗಳನ್ನು ಹುಡುಕಲು ಮತ್ತು ಯುವಕರಲ್ಲಿ ಉದ್ಯಮಶೀಲತೆಯನ್ನು ಉತ್ತೇಜಿಸಲು ಸಹಾಯ ಮಾಡುವ ಕೌಶಲ್ಯ-ನಿರ್ದಿಷ್ಟ ತರಬೇತಿಯನ್ನು ನೀಡುವುದು ಇದರ ಮುಖ್ಯ ಉದ್ದೇಶ ಎನ್ನುತ್ತಾರೆ ನಿರ್ದೇಶಕ ಚಿದಾನಂದ ಬಾಕೆ. ಜರ್ಮನ್ ಅಂತರರಾಷ್ಟ್ರೀಯ ಸೇವೆಗಳ ತಾಂತ್ರಿಕ ಬೆಂಬಲದೊಂದಿಗೆ ಕೇಂದ್ರ ಸರ್ಕಾರ ಮತ್ತು ಕರ್ನಾಟಕ ಸರ್ಕಾರ ಇದನ್ನು ಗುರುತಿಸಿದ್ದು ಕೆಜಿಎಂಎಸ್‌ಡಿಸಿ ಎನ್ನುವುದು ಸೊಸೈಟಿ ನೋಂದಣಿ ಕಾಯ್ದೆ 1960 ರ ಅಡಿಯಲ್ಲಿ ರೂಪುಗೊಂಡ ನೋಂದಾಯಿತ ಸಂಸ್ಥೆಯಾಗಿದೆ. ಇದು ಸ್ಥಳೀಯ ಮಧ್ಯಸ್ಥಗಾರರು ಮತ್ತು ಕೈಗಾರಿಕೆಗಳು ಮತ್ತು ಅಕಾಡೆಮಿಗಳ ಪ್ರತಿನಿಧಿಗಳಿಂದ ಕೂಡಿದೆ. ಬೆಳಗಾವಿಯಲ್ಲಿ ಸಂಸ್ಥೆಯು ವಿಶ್ವ ದರ್ಜೆಯ ಆಧುನಿಕ ಪ್ರಯೋಗಾಲಯಗಳನ್ನು ಸ್ಥಾಪಿಸಿದೆ. ಜೊತೆಗೆ ವಿಶ್ವ ದರ್ಜೆಯ ಮಟ್ಟದ ಎಲ್ಲಾ ಮೂಲಸೌಕರ್ಯಗಳೊಂದಿಗೆ ಗುಣಮಟ್ಟದ ತರಬೇತಿ ನೀಡಲಾಗುತ್ತಿದೆ ಎಂಬುದು ಸಂಸ್ಥೆಯ ಅಧಿಕಾರಿಗಳ ಹೇಳಿಕೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Udupi: ಮಂಗನಕಾಯಿಲೆ ಪ್ರಕರಣ: ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ: ಡಿಸಿ ಡಾ.ವಿದ್ಯಾಕುಮಾರಿ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.