ಪಂಚಲಿಂಗೇಶ್ವರ ರಥೋತ್ಸವ
Team Udayavani, Mar 13, 2021, 3:54 PM IST
ಮುನವಳ್ಳಿ: ಮಹಾಶಿವರಾತ್ರಿ ಅಂಗವಾಗಿ ಪಟ್ಟಣದ ಆರಾಧ್ಯದೆ„ವ ಹಾಗೂ ಪುರಾಣ ಪ್ರಸಿದ್ದ ಶ್ರೀ ಪಂಚಲಿಂಗೇಶ್ವರ ಮಹಾರಥೋತ್ಸವಸಂಭ್ರಮ-ಸಡಗರ ಹಾಗೂ ಹರಹರ ಮಹಾದೇವ, ಓಂ ನಮ: ಶಿವಾಯ ಎಂಬ ಜಯಘೋಷಗಳು,ವಿವಿಧ ಮಂಗಲ ವಾದ್ಯ ವೈಭವಗಳೊಂದಿಗೆ ಜರುಗಿತು.ಭಕ್ತರು ಬಾಳೆ ಹಣ್ಣು, ಉತ್ತತ್ತಿ ರಥಕ್ಕೆ ಹಾರಿಸಿ ಭಕ್ತಿ ಭಾವ ಮೆರೆದರು.
ಪಟ್ಟಣದ ಶ್ರೀ ಸೋಮಶೇಖರಮಠದ ಶ್ರೀ ಮುರುಘೇಂದ್ರ ಸ್ವಾಮಿಗಳು ರಥ ಪೂಜೆ ನೆರವೇರಿಸುವ ಮೂಲಕ ಮಹಾರಥೋತ್ಸವಕ್ಕೆ ಚಾಲನೆ ನೀಡಿದರು. ವೀರಪುರವಂತರ ಒಡಪುಗಳು ಹಾಗೂ ನೂರಾರುಮೀಟರ ಉದ್ದದ ದಾರದೊಂದಿಗೆ ವೀರಪುರವಂತರು ಹಾಗೂ ಭಕ್ತರು ನಾಲಿಗೆಗೆ ಹಾಗೂ ಗಲ್ಲಕ್ಕೆ ಶಸ್ತ್ರ ಚುಚ್ಚಿಕೊಳ್ಳುವ ದೃಶ್ಯ ಮೈನವಿರೇಳಿಸುವಂತಿತ್ತು. ರಥೋತ್ಸವಕ್ಕೂ ಮೊದಲು ಬಣಗಾರ ಓಣಿಯಿಂದ ನಂದಿಕೋಲುಗಳು ಪೂಜೆಗೊಂಡು ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ತಲುಪಿದವು. ಶ್ರೀ ಪಂಚಲಿಂಗೇಶ್ವರದೇವಸ್ಥಾನ ಟ್ರಸ್ಟ ಕಮೀಟಿ, ಜಾತ್ರಾ ಉತ್ಸವ ಕಮೀಟಿ ಸದಸ್ಯರು, ಭಕ್ತರು ಪಾಲ್ಗೊಂಡಿದ್ದರು. ದೇವಸ್ಥಾನದಸಮುತ್ಛಯದಲ್ಲಿರುವ ಮೂರುಲಿಂಗ ದೇವರಿಗೆಬುತ್ತಿಪೂಜೆ ಕಟ್ಟಲಾಗಿತ್ತು. ಶ್ರೀ ಮಲ್ಲಿಕಾರ್ಜುನ,ಶ್ರೀ ಬೊರಮ್ಮ, ಶ್ರೀ ತ್ರ್ಯಂಬಕೇಶ್ವರ, ಶ್ರೀ ಬನಶಂಕರಿ, ನಾಗದೇವತೆ, ಶ್ರೀ ರುದ್ರಮುನೀಶ್ವರ, ಶ್ರೀ ರೇಣುಕಾಶ್ರೀ ಕಾಲಭೆ„ರವ ದೇವರಿಗೆ ರುದ್ರಾಭಿಷೇಕ, ವಿವಿಧ ಅಲಂಕಾರ ಪೂಜೆ ನೆರವೇರಿಸಲಾಗಿತ್ತು. ದೇವಸ್ಥಾನ ವಿದ್ಯುದ್ದೀಪಗಳ ಅಲಂಕಾರದಿಂದ ಕಂಗೊಳಿಸುತ್ತಿತ್ತು.
ನಿಡಸೋಸಿ ಬೆಳ್ಳಿ ರಥೋತ್ಸವ :
ಸಂಕೇಶ್ವರ: ಇಲ್ಲಿಗೆ ಸಮೀಪದ ನಿಡಸೋಸಿಯ ದುರದುಂಡೀಶ್ವರ ಮಹಾಶಿವರಾತ್ರಿ ಜಾತ್ರಾಮಹೋತ್ಸವದ ನಿಮಿತ್ತ ಗುರುವಾರ ಸಾಯಂಕಾಲಬೆಳ್ಳಿ ರಥದ ಭವ್ಯ ಮೆರವಣಿಗೆ ನಡೆಯಿತು.ಪೂಜ್ಯರ ರಜತ ಮಹೋತ್ಸವದ ಸಂದರ್ಭದಲ್ಲಿಶ್ರೀಮಠಕ್ಕೆ ಕಾಣಿಕೆ ರೂಪದಲ್ಲಿ ಬಂದ ಬೆಳ್ಳಿಒಟ್ಟುಗೂಡಿಸಿ ಭಕ್ತರ ಆಶಯದಂತೆ ಬೆಳ್ಳಿರಥವೊಂದನ್ನು ನಿರ್ಮಿಸಲಾಗಿದ್ದು, ಶಿವಲಿಂಗೇಶ್ವರಸ್ವಾಮಿಗಳಿಂದ ಶ್ರೀಮಠದ ರಥೋತ್ಸವಕ್ಕೆ ಚಾಲನೆ ದೊರೆಯಿತು.
ರಥದಲ್ಲಿ ಶ್ರೀ ದುರದುಂಡೀಶ್ವರ ಉತ್ಸವಮೂರ್ತಿ ಪ್ರತಿಷ್ಠಾಪಿಸಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಪೂಜೆ ಸಲ್ಲಿಸಲಾಯಿತು.ವಾದ್ಯಮೇಳಗಳ ತಂಡ ರಥೋತ್ಸವಕ್ಕೆವಿಶೇಷ ಮೆರಗು ತಂದುಕೊಟ್ಟಿತು. ನಂತರರಾತ್ರಿಯಾಗುತ್ತಿದ್ದಂತೆ ಬಾನಂಗಳದಲ್ಲಿಸಿಡಿಮದ್ದುಗಳ ಬಣ್ಣ-ಬಣ್ಣದ ಚಿತ್ತಾರರಥೋತ್ಸವದ ಆಕರ್ಷಣೆ ಕೇಂದ್ರ ಬಿಂದುವಾಗಿತ್ತು.ಗ್ರಾಮದ ಹಿರೇಮಠಕ್ಕೆ ತೆರಳಿದ ರಥಕ್ಕೆ ಹಿರೇಮಠಮನೆತನದವರು ವಿಶೇಷ ಪೂಜೆ ಸಲ್ಲಿಸಿದರು.ನಂತರ ಅಲ್ಲಿಂದ ಲಕ್ಷ್ಮಿà ಓಣಿ, ಕುರುಬರ ಓಣಿ,ವಾಡೇದ ಓಣಿ, ಮಠದ ಓಣಿ ಮಾರ್ಗವಾಗಿಹನುಮಾನ ಗಲ್ಲಿ, ಬೋರಗಲ್ಲ ರೋಡವರೆಗೂ ಸಂಚರಿಸಿತು.
ಬಮ್ಮನಳ್ಳಿಯ ಶಿವಯೋಗಿ ಸ್ವಾಮೀಜಿ,ಚಿಕ್ಕೋಡಿ ಸಂಪಾದನಾ ಸ್ವಾಮೀಜಿ,ಹಾರನಹಳ್ಳಿಯ ಚೇತನ ದೇವರು, ಬಿಡಿಸಿಸಿಬ್ಯಾಂಕ ಅಧ್ಯಕ್ಷ ರಮೇಶ ಕತ್ತಿ, ಮಾಜಿ ಸಚಿವಎ.ಬಿ.ಪಾಟೀಲ, ಸಂಗಮ ಕಾರಖಾನೆ ಅಧ್ಯಕ್ಷ ರಾಜೇಂದ್ರ ಪಾಟೀಲ, ಸುರೇಶ ಬೆಲ್ಲದ, ಜಗದೀಶಕವಟಗಿಮಠ, ಸುನೀಲ ಪರ್ವತರಾವ, ಪವನಪಾಟೀಲ, ಶಿವಾನಂದ ಗಂಡ್ರೋಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ರಥೋತ್ಸವದ ನಿಮಿತ್ತ ಪಿಎಸ್‌ಐ ಗಣಪತಿ ಕೊಗನೊಳ್ಳಿ ಬಿಗಿ ಭದ್ರತೆ ಒದಗಿಸಿದ್ದರು.ರಥೋತ್ಸವದದಲ್ಲಿ ಗ್ರಾಮದ ಹಿರಿಯರುಸೇರಿದಂತೆ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಯುವಕನ ಮೇಲೆ ಗುಂಡಿನ ದಾಳಿ… ಸ್ಥಳದಲ್ಲಿ ಬಿಗುವಿನ ವಾತಾವರಣ
Belagavi; ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿದ್ದ ಹುಲಿ ಶೌರ್ಯ ಇನ್ನಿಲ್ಲ
Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ
Setback BJP: ಜನರಿಂದ ವಿಜಯೇಂದ್ರ ನಾಯಕತ್ವ ತಿರಸ್ಕಾರ, ರಾಜೀನಾಮೆ ನೀಡಲಿ: ಶಾಸಕ ಯತ್ನಾಳ್
ಮಹಾರಾಷ್ಟ್ರ ಸೋಲಿನ ಬೆನ್ನಲ್ಲೇ ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಸತೀಶ್ ಜಾರಕಿಹೊಳಿ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Pro Kabbaddi: ಅಗ್ರಸ್ಥಾನಿ ಹರಿಯಾಣ 11ನೇ ವಿಕ್ರಮ; ಪುಣೇರಿ ಪಲ್ಟಾನ್‌ಗೆ ಸೋಲು
Asia Cup Hockey: ಥಾಯ್ಲೆಂಡ್ ವಿರುದ್ಧ ಭಾರತಕ್ಕೆ 11-0 ಅಂತರದ ಜಯ
Syed Mushtaq Ali Trophy: ಸೌರಾಷ್ಟ್ರಕ್ಕೆ ಶರಣಾದ ಕರ್ನಾಟಕ
Singapore: ವಿಶ್ವ ಚೆಸ್ ಚಾಂಪಿಯನ್‌ಶಿಪ್: ಮೂರನೇ ಪಂದ್ಯದಲ್ಲಿ ಗುಕೇಶ್ ಗೆಲುವು
Badminton: ಸಯ್ಯದ್ ಮೋದಿ ಬ್ಯಾಡ್ಮಿಂಟನ್: ಎರಡನೇ ಸುತ್ತಿಗೆ ಸಿಂಧು, ಲಕ್ಷ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.