ಜನಮನ ಸೆಳೆದ ಜಾನಪದ ಮೆರವಣಿಗೆ
Team Udayavani, Mar 22, 2022, 2:51 PM IST
ರಾಮದುರ್ಗ: ಪಟ್ಟಣದಲ್ಲಿ ಮಾ. 21 ರಿಂದ 23 ರವರೆಗೆ ನಡೆಯಲಿರುವ ಶಿವರಾತ್ರಿ ಶಿವಜಾತ್ರಿ ರಾಜ್ಯ ಮಟ್ಟದ 7 ನೇ ಜಾನಪದ ಮಹಾಸಮ್ಮೇಳನದ ಜಾನಪದ ಕಲಾ ಮೆರವಣಿಗೆಯನ್ನು ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ರಾಜ್ಯ ಅಧ್ಯಕ್ಷ ಶರಣು ತಳ್ಳಿಗೇರಿ ಅವರು ಉದ್ಘಾಟಿಸಿ ಚಾಲನೆ ನೀಡಿದರು.
ತಾಲೂಕಿನ ಅವರಾದಿ ಶಿವಪೇಟೆಯ ಓಂ ಶಿವ ಮೇಳದ ಆಶ್ರಯದಲ್ಲಿ ನಡೆಯುತ್ತಿರುವ ಜಾನಪದ ಮಹಾಸಮ್ಮೇಳನ ಮೆರವಣಿಗೆ ಪಟ್ಟಣದ ವಿದ್ಯಾಚೇತನ ಶಾಲಾ ಆವರಣದಿಂದ ಹೊರಟು, ಜುನಿಪೇಟ ಮಾರ್ಗವಾಗಿ ಹಳೆ ಪೊಲೀಸ್ ಠಾಣೆ, ತೇರ ಬಝಾರ್, ನೇಕಾರ ಪೇಟೆ, ರಾಧಾಪೂರ ಪೇಟೆಯಿಂದ ಮಾರ್ಕೆಟ್ ಗೇಟ್ ಮೂಲಕ ಹಾಯ್ದು ವಿದ್ಯಾ ಚೇತನ ಶಾಲೆಯಲ್ಲಿ ಕೊನೆಗೊಂಡಿತು.
ಮೆರವಣಿಗೆಯಲ್ಲಿ ಮಹಿಳೆಯರ ಕುಂಭ ಮೇಳ, ಡೊಳ್ಳು ಕುಣಿತ, ಗಾರುಡಿ ಗೊಂಬೆ, ಹೆಜ್ಜೆ ಮೇಳ, ಕಹಳೆ ಓಲಗ, ಖಣಿ ಸಂಬಾಳ, ಜಗ್ಗಲಿಗೆ ಮೇಳ, ಪುರವಂತಿಕೆ ನೃತ್ಯ, ಜೋಗತಿ ನೃತ್ಯ ಹೀಗೆ 15ಕ್ಕೂ ಹೆಚ್ಚು ಜಾನಪದ ತಂಡಗಳು ಬೆಳಗಾವಿ, ವಿಜಯನಗರ, ವಿಜಯಪುರ, ಬಳ್ಳಾರಿ, ಹಾವೇರಿ, ದಾವಣಗೇರಿ, ಉತ್ತರ ಕನ್ನಡ, ಬಾಗಲಕೋಟೆ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದವು.
ಓಂ ಶಿವ ಮೇಳದ ಸಂಸ್ಥಾಪಕ ಜಾನಪದ ಕಲಾವಿದ ಸಿದ್ದು ಮೋಟೆ, ನಿವೃತ್ತ ಯೋಧ ಪುಂಡಲೀಕ ನಡಗಡ್ಡಿ ಮತ್ತು ಇತರರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಮಾ. 22 ರಂದು ಮಂಗಳವಾರ ಬಸಲಿಂಗಯ್ಯ ಹಾಗೂ ಕೌಜಲಗಿ ವಿಠ್ಠಲ ವೇದಿಕೆಯಲ್ಲಿ ಜರುಗುವ ಜಾನಪದ ಶಿವರಾತ್ರಿ ಸಮಾರಂಭದ ಸಾನಿಧ್ಯವನ್ನು ರಬಕವಿ ಬ್ರಹ್ಮಾನಂದ ಆಶ್ರಮದ ಗುರು ಸಿದ್ಧೇಶ್ವರ ಸ್ವಾಮೀಜಿ ವಹಿಸಲಿದ್ದು, ಮಾಜಿ ಶಾಸಕ ಅಶೋಕ ಪಟ್ಟಣ ಅಧ್ಯಕ್ಷತೆ ವಹಿಸುವರು. ಉದ್ಯಮಿ ವಿಜಯ ಶೆಟ್ಟಿ, ಪ್ರದೀಪ ಪಟ್ಟಣ, ರಾಜೇಶ್ವರಿ ಮೆಟಗುಡ್ಡ, ಮುತ್ತುರಾಜ ಕೊಂಡಾ, ಮುಖ್ಯಾಕಾರಿ ರವಿ ಬಾಗಲಕೋಟೆ, ಸಿಪಿಐ ಐ.ಆರ್. ಪಟ್ಟಣಶೆಟ್ಟಿ, ಆಗಮಿಸುವರು. ಬೆಂಬಳಗಿ ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕ ಪ್ರಕಾಶ ತೆಗ್ಗಿಹಳ್ಳಿ ಉಪನ್ಯಾಸ ನೀಡುವರು. ಡಾ| ಎಂ.ಎನ್. ಸಿದ್ಧಗಿರಿ ಪ್ರಾಸ್ತಾವಿಕ ಮಾತನಾಡುವರು.
ಇದೇ ಸಂದರ್ಭದಲ್ಲಿ ಜಾನಪದ ಶಿವಶ್ರೀ ಪ್ರಶಸ್ತಿ ಪ್ರದಾನ, ಜಾನಪದ ಕಲಾ ಪ್ರೋತ್ಸಾಹಿಗಳ ಸಮ್ಮಾನ, ಸಮ್ಮೇಳನಕ್ಕೆ ಸಹಾಯ ನೀಡಿದ ಸನ್ಮಾನ್ಯರ ಸತ್ಕಾರ ನಡೆಯುವದು. ನಂತರ ಜಾನಪದ ಕಲಾ ಸಂಭ್ರಮ ಜರುಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mrinal Hebbalkar: ನನ್ನ ತಾಯಿಗೆ ರವಿ ಬಳಸಿದ ಪದದಿಂದ ನೋವಾಗಿದೆ: ಮೃಣಾಲ್
Belgavi: ಸಿ.ಟಿ.ರವಿ ಪ್ರಕರಣ ಮುಂದುವರಿಸುವಲ್ಲಿ ಅರ್ಥವೇ ಇಲ್ಲ: ಸಚಿವ ಸತೀಶ್ ಜಾರಕಿಹೊಳಿ
Belagavi: ನ್ಯಾಯಾಧೀಶರ ಮುಂದೆ ಪೊಲೀಸ್ ದೌರ್ಜನ್ಯ ಬಿಚ್ಚಿಟ್ಟ ಸಿ.ಟಿ. ರವಿ
Belagavi: ಎಲ್ಲದಕ್ಕೂ ಪೂರ್ಣವಿರಾಮ ಬೀಳಲಿದೆ, ನನಗೂ ಒಂದು ಕಾಲ ಬರುತ್ತದೆ….. : ಸಿ.ಟಿ.ರವಿ
Belagavi: ಸಿ.ಟಿ.ರವಿ ಬಂಧನ ಪ್ರಕರಣ ಬೆಂಗಳೂರಿಗೆ ಸ್ಥಳಾಂತರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.