ಉದಾಸೀನತೆ-ಮೊಂಡುತನಕ್ಕೆಕೃಷ್ಣಾ ತೀರದ ಜನರು ಹೈರಾಣ
|ಮಹಾರಾಷ್ಟ್ರದ ರಾಜಾಪುರ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಬಿಡುಗಡೆ
Team Udayavani, Jun 17, 2019, 9:44 AM IST
ಬೆಳಗಾವಿ: ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್‌ದಿಂದ ಕೃಷ್ಣಾ ನದಿಗೆ ನೀರು ಬಿಡುಗಡೆ.
ಬೆಳಗಾವಿ: ಕೃಷ್ಣಾ ನದಿಗೆ ನೀರು ಬಿಡುಗಡೆ ವಿಚಾರದಲ್ಲಿ ಕರ್ನಾಟಕ ಸರಕಾರದ ಉದಾಶೀನ ಮನೋಭಾವ ಹಾಗೂ ಮಹಾರಾಷ್ಟ್ರದ ಮೊಂಡವಾದ ಕೃಷ್ಣಾ ನದಿ ತೀರದ ನೂರಾರು ಹಳ್ಳಿಗಳ ಜನರಿಗೆ ಬೇಸಿಗೆ ಸಮಯದಲ್ಲಿ ನೀರು ಸಿಗದಂತೆ ಮಾಡಿತು. ನಿಯೋಗದ ಮಾತುಕತೆ. ಪತ್ರ ಬರೆದ ನಾಟಕ, ನದಿ ತೀರದ ಜನರಿಗೆ ಸಮಾಧಾನ ಉಂಟು ಮಾಡಲು ದೂರವಾಣಿಯಲ್ಲಿ ಕಾಟಾಚಾರಕ್ಕೆ ನಡೆಸಿದ ಮಾತುಕತೆ ಎಲ್ಲವೂ ನಿರರ್ಥಕವಾದವು.
ಎರಡೂ ಸರಕಾರಗಳು ತಮ್ಮ ರಾಜಕೀಯ ಇಚ್ಛಾಶಕ್ತಿಯಿಂದ ಹೊರ ಬರಲಿಲ್ಲ. ಮಾನವೀಯತೆ ಆಧಾರದ ಮೇಲೆ ಎಂಬ ಶಬ್ದ ಅರ್ಥ ಕಳೆದುಕೊಂಡಿತು. ಜನರ ಹೋರಾಟಗಳು ಕೊಯ್ನಾ, ವಾರಣಾ ಜಲಾಶಯದಿಂದ ಕೃಷ್ಣಾ ನದಿಗೆ ನೀರು ತರಲಿಲ್ಲ. ಸರಕಾರದಿಂದ ಮಹಾರಾಷ್ಟ್ರಕ್ಕೆ ಸರ್ವಪಕ್ಷಗಳ ನಿಯೋಗ ಒಯ್ಯಬೇಕೆಂಬ ಒತ್ತಾಯ ಸಹ ಬಲವಾಗಲಿಲ್ಲ.
ತನ್ನ ಜಲಾಶಯಗಳಿಂದ ನೀರು ಬಿಡಲ್ಲ ಎಂದು ಸ್ಪಷ್ಟವಾಗಿ ಹೇಳುತ್ತಲೇ ಬಂದ ಮಹಾರಾಷ್ಟ್ರ ಈಗ ಮುಂಗಾರು ಮಳೆ ಆರಂಭವಾಗಿರುವ ಮಧ್ಯೆಯೇ ಮುಂಜಾಗ್ರತಾ ಕ್ರಮವಾಗಿ ಬ್ಯಾರೇಜ್‌ಗಳಲ್ಲಿ ಸಂಗ್ರಹ ಮಾಡಿಕೊಂಡಿದ್ದ ನೀರನ್ನು ಅನಿವಾರ್ಯವಾಗಿ ಬಿಡಲೇಬೇಕಾದ ಪರಿಸ್ಥಿತಿ ಬಂದಿದೆ. ಬ್ಯಾರೇಜ್‌ಗಳಲ್ಲಿ ಸಂಗ್ರಹಗೊಂಡ ನೀರನ್ನು ರಾಜಾಪುರ ಜಲಾಶಯದಿಂದ ಕೃಷ್ಣಾ ನದಿಗೆ ಬಿಡುಗಡೆ ಮಾಡುವ ಕಾರ್ಯ ಆರಂಭವಾಗಿದ್ದು, ಇದು ಮಹಾರಾಷ್ಟ್ರದ ದುರ್ಬುದ್ಧಿಯೇ ಎಂಬ ಅಭಿಪ್ರಾಯ ಮೂಡಲು ಕಾರಣವಾಗಿದೆ.
ಕೃಷ್ಣಾ ನದಿ ತೀರದ ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಉಂಟಾಗಿದ್ದು, ಕೊಯ್ನಾ ಅಥವಾ ವಾರಣಾ ಜಲಾಶಯಗಳಿಂದ ಕೃಷ್ಣಾ ನದಿಗೆ ನೀರು ಬಿಡುಗಡೆ ಮಾಡುವಂತೆ ಕರ್ನಾಟಕ ಸರಕಾರ ಕಳೆದ ಮೂರು ತಿಂಗಳಿಂದ ಪ್ರಯತ್ನ ನಡೆಸಿತ್ತು. ರಾಜಕೀಯ ನಾಯಕರು ನಿಯೋಗ ಮೂಲಕ ಮಹಾರಾಷ್ಟ್ರ ಮುಖ್ಯಮಂತ್ರಿಗಳನ್ನು ಕಂಡು ಮನವಿ ಮಾಡಿದ್ದರು. ಕರ್ನಾಟಕ ಸರಕಾರ ಪತ್ರ ಸಹ ಬರೆದಿತ್ತು. ಆದರೆ ಇದಾವುದಕ್ಕೂ ಸಮ್ಮತಿಸದ ಮಹಾರಾಷ್ಟ್ರ ಉಭಯ ರಾಜ್ಯಗಳ ನಡುವೆ ನೀರು ವಿನಿಮಯ ಒಪ್ಪಂದ ಏರ್ಪಟ್ಟ ನಂತರವೇ ನೀರು ಬಿಡುಗಡೆ ಮಾಡುವುದಾಗಿ ಹೇಳಿ ನೀರಿನ ಸಮಸ್ಯೆ ಬಿಗಡಾಯಿಸುವಂತೆ ಮಾಡಿತ್ತು.
ಆದರೀಗ ಮಳೆಗಾಲ ಆರಂಭವಾಗುವ ಸಂದರ್ಭದಲ್ಲಿ ತನ್ನ ಬ್ಯಾರೇಜ್‌ಗಳಲ್ಲಿನ ನೀರನ್ನು ಬಿಡುಗಡೆ ಮಾಡುತ್ತಿರುವ ಮಹಾರಾಷ್ಟ್ರ ಕ್ರಮ ಚರ್ಚೆಗೆ ಎಡೆಮಾಡಿಕೊಟ್ಟಿದೆ. ಇಲ್ಲಿ ಗೆದ್ದವರು ಯಾರು? ಹಾಗೂ ಹಿನ್ನಡೆ ಆಗಿದ್ದು ಯಾರಿಗೆ? ಎಂಬ ಪ್ರಶ್ನೆ ಹುಟ್ಟಿದೆ. ಕರ್ನಾಟಕ ಸರಕಾರದ ನಿರ್ಲಕ್ಷ್ಯ ಮನೋಭಾವ ಹಾಗೂ ಮಹಾರಾಷ್ಟ್ರದ ನೀರು ವಿನಿಮಯ ಪಟ್ಟು ಕೃಷ್ಣಾ ತೀರ ಹೈರಾಣಾಗುವಂತೆ ಮಾಡಿತು.
ಮುಂಗಾರು ಮಳೆ ಆರಂಭವಾಗುವ ಸಂದರ್ಭದಲ್ಲೇ ರಾಜಾಪುರ ಬ್ಯಾರೇಜ್‌ನ 14 ಗೇಟ್‌ಗಳನ್ನು ತೆರೆಯಲಾಗಿದ್ದು ಅಂದಾಜು 1200 ರಿಂದ 1500 ಕ್ಯೂಸೆಕ್ ನೀರು ಬಿಡುಗಡೆಯಾಗಿದೆ. ಕೆಲದಿನಗಳ ಹಿಂದೆಯೂ ಇದೇ ಬ್ಯಾರೇಜ್‌ನಿಂದ 9 ಗೇಟುಗಳನ್ನು ತೆರೆದು ಬಿಡುಗಡೆ ಮಾಡಿದ ನೀರು ಚಿಕ್ಕೋಡಿ ತಾಲೂಕಿನ ಮಾಂಜರಿ, ಅಂಕಲಿ, ಚಂದೂರು, ಎಡೂರು, ಕಲ್ಲೋಳ ಗ್ರಾಮಗಳನ್ನು ತಲುಪಿತ್ತು.
ಈ ಹಿಂದೆ ಅಂದರೆ 2005-06ರಲ್ಲಿ ಇದೇ ರೀತಿ ತನ್ನ ಜಲಾಶಯಗಳಲ್ಲಿ ನೀರನ್ನು ಸಂಗ್ರಹಿಸಿಟ್ಟುಕೊಂಡಿದ್ದ ಮಹಾರಾಷ್ಟ್ರ ಅನಂತರ ವ್ಯಾಪಕ ಮಳೆಯಾಗಿ ಎಲ್ಲ ಜಲಾಶಯಗಳು ಭರ್ತಿಯಾಗಿದ್ದರಿಂದ ಕೃಷ್ಣಾ ನದಿಗೆ ಐದು ಲಕ್ಷಕ್ಕೂ ಅಧಿಕ ಟಿಎಂಸಿ ಅಡಿ ನೀರನ್ನು ಬಿಡುಗಡೆ ಮಾಡಿತ್ತು. ಇದರಿಂದ ಅಥಣಿ, ಚಿಕ್ಕೋಡಿ, ರಾಯಬಾಗ ತಾಲೂಕುಗಳಲ್ಲಿ ಹಲವಾರು ಹಳ್ಳಿಗಳು ಸಂಪೂರ್ಣ ನೀರಿನಲ್ಲಿ ಮುಳುಗಿ ಅಪಾರ ಹಾನಿ ಸಂಭವಿಸಿತ್ತು.
ಮಹಾರಾಷ್ಟ್ರ ಸರಕಾರ ನೀರಿಗೆ ಬದಲಾಗಿ ನೀರು ಷರತ್ತು ಇಟ್ಟಿದ್ದು ಹೊಸದೇನಲ್ಲ. ಮೂರು ವರ್ಷಗಳ ಹಿಂದೆಯೇ ಕರ್ನಾಟಕ ಸರಕಾರದ ಮುಂದೆ ಈ ಪ್ರಸ್ತಾಪ ಬಂದಿತ್ತು. ಈ ಪ್ರಸ್ತಾವನೆಯಂತೆ ಜೂನ್, ಜುಲೈ ಹಾಗೂ ಆಗಸ್ಟ್ ತಿಂಗಳಲ್ಲಿ ನಾಲ್ಕು ಟಿಎಂಸಿ ಅಡಿ ನೀರನ್ನು ಕರ್ನಾಟಕ ಆಲಮಟ್ಟಿ ಜಲಾಶಯದ ಹಿನ್ನೀರಿನಿಂದ ಮಹಾರಾಷ್ಟ್ರದ ಜತ್ತ ಹಾಗೂ ಅಕ್ಕಲಕೋಟೆಗೆ ಬಿಡಬೇಕು. ಇದಕ್ಕೆ ಪ್ರತಿಯಾಗಿ ಮಹಾರಾಷ್ಟ್ರ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ತನ್ನ ಜಲಾಶಯದಿಂದ ಕರ್ನಾಟಕಕ್ಕೆ ನಾಲ್ಕು ಟಿಎಂಸಿ ನೀರನ್ನು ಬಿಡುವ ಪ್ರಸ್ತಾವನೆ ಇತ್ತು. ಆದರೆ ಇದಾವುದೂ ಅನುಷ್ಠಾನಕ್ಕೆ ಬರಲೇ ಇಲ್ಲ.
ಈ ಹಿಂದೆ ಅಂದರೆ 2017ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ನೀರಿಗೆ ಬದಲಾಗಿ ನೀರು ಬೇಕೆಂಬ ಮಹಾರಾಷ್ಟ್ರದ ಷರತ್ತಿನ ಬಗ್ಗೆ ಚರ್ಚಿಸಲಾಗಿತ್ತು. ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಇದರ ಬಗ್ಗೆ ಗಂಭೀರ ಚರ್ಚೆ ಸಹ ನಡೆದಿತ್ತು. ಆನಂತರ ಬೆಳಗಾವಿ ಹಾಗೂ ಬೆಂಗಳೂರು ಅಧಿವೇಶನದಲ್ಲಿ ಸ್ವತಃ ನಾನೇ ಈ ವಿಷಯವನ್ನು ಪ್ರಸ್ತಾಪ ಮಾಡಿದ್ದೆ. ಆದರೆ ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಲೇ ಇಲ್ಲ. ಇದರ ಪರಿಣಾಮ ಈ ವರ್ಷ ಭೀಕರ ಬರದಲ್ಲಿ ನಮಗೆ ನೀರು ಸಿಗದಂತಾಯಿತೆಂದು ಮಾಜಿ ಶಾಸಕ ಲಕ್ಷ್ಮಣ ಸವದಿ ನೆನಪಿಸಿಕೊಂಡಿದ್ದಾರೆ.
ಈಗ ಕೃಷ್ಣಾ ನದಿಗೆ ಬಂದಿರುವ ನೀರು ಬ್ಯಾರೇಜ್‌ಗಳಲ್ಲಿ ಸಂಗ್ರಹವಾಗಿದ್ದು. ಕೊಯ್ನಾ ಜಲಾಶಯದಲ್ಲಿ ನೀರಿನ ಸಂಗ್ರಹ ಕಡಿಮೆ ಇದೆ. ಅಲ್ಲಿಂದ ನೀರು ಬಿಡುವ ಸ್ಥಿತಿ ಇಲ್ಲ. ಮಹಾಬಳೇಶ್ವರದಲ್ಲಿ ಇನ್ನೂ ಮಳೆ ಆರಂಭವಾಗಿಲ್ಲ. ರಾಜಾಪುರದಲ್ಲಿ ಮಳೆಯಿಂದ ಸಂಗ್ರಹ ನೀರನ್ನು ಹೊರಗಡೆ ಬಿಡಲಾಗುತ್ತಿದೆ ಎಂದು ಲಕ್ಷ್ಮಣ ಸವದಿ ಹೇಳಿದ್ದಾರೆ.
•ಕೇಶವ ಆದಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi; ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿದ್ದ ಹುಲಿ ಶೌರ್ಯ ಇನ್ನಿಲ್ಲ
Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ
Setback BJP: ಜನರಿಂದ ವಿಜಯೇಂದ್ರ ನಾಯಕತ್ವ ತಿರಸ್ಕಾರ, ರಾಜೀನಾಮೆ ನೀಡಲಿ: ಶಾಸಕ ಯತ್ನಾಳ್
ಮಹಾರಾಷ್ಟ್ರ ಸೋಲಿನ ಬೆನ್ನಲ್ಲೇ ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಸತೀಶ್ ಜಾರಕಿಹೊಳಿ
ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ
Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್’ಗೆ ಗುಡ್ ಬೈ
Result: ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಇವಿಎಂ ಹ್ಯಾಕ್ ಕಾರಣ: ಗೃಹ ಸಚಿವ ಡಾ.ಪರಮೇಶ್ವರ್
Fish Farming: ಲಾಭದಾಯಕ ಪಂಜರ ಮೀನು ಕೃಷಿ ಯೋಜನೆಯೇ ಸ್ತಬ್ಧ
India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್ ಪೂರೈಕೆ ಶುರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.