ಆತ್ಮವಿಶ್ವಾಸದಿಂದ ಸಾಧನೆ
•ಪೊಲೀಸ್ ಉಪ ನಿರೀಕ್ಷಕ ವೀರಭದ್ರಗೆ ದೇವಾಂಗ ರತ್ನ ಪ್ರಶಸ್ತಿ
Team Udayavani, May 17, 2019, 3:39 PM IST
ಬೆಳಗಾವಿ: ದೇವಾಂಗ ಸಮಾಜ ಸೇವಾ ಪ್ರತಿಷ್ಠಾನದ ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ನಾನಿಸಲಾಯಿತು.
ಬೆಳಗಾವಿ: ಮಕ್ಕಳಲ್ಲಿ ಆತ್ಮವಿಶ್ವಾಸವಿರಬೇಕು. ಅದರಿಂದ ಏನನ್ನಾದರೂ ಸಾಧಿಸಬಹುದು. ಇಂತಹ ಆತ್ಮವಿಶ್ವಾಸವನ್ನು ಮೂಡಿಸುವ ತಳಪಾಯವನ್ನು ಶಿಕ್ಷಕರು, ಪಾಲಕರು ಹಾಕಬೇಕು ಎಂದು ಹೈದರಾಬಾದದ ಉಪಜಿಲ್ಲಾಧಿಕಾರಿ ವೆಂಕಟೇಶ ಧೋತ್ರೆ ಹೇಳಿದರು.
ನಗರದ ಸಾಲೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಡೆದ ಖಾಸಬಾಗ ತಾಳುಕರ ಚಿತ್ರಕಲಾ ಹಾಗೂ ದೇವಾಂಗ ಸಮಾಜ ಸೇವಾ ಪ್ರತಿಷ್ಠಾನದ 9ನೇ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.
ಪೊಲೀಸ್ ವೃತ್ತ ನಿರೀಕ್ಷಕ ವಿಜಯ ಶಿನ್ನೂರ ಮಾತನಾಡಿ, ಸಾಧನೆಯ ಛಲ ಹೊಂದಿದವನಿಗೆ ಅವಕಾಶಗಳು ಹುಡುಕಿಕೊಂಡು ಬರುತ್ತವೆ ಎಂದರು. ಉಪನ್ಯಾಸಕ ಪ್ರವೀಣ್ ದೇವಾಂಗ ಅವರು ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ನಂತರದ ಉಪಯುಕ್ತ ಕೋರ್ಸ್‌ಗಳು ಹಾಗೂ ಉದ್ಯೋಗಾವಕಾಶಗಳ ಬಗ್ಗೆ ಮಾಹಿತಿ ನೀಡಿದರು.
ವಸತಿ ನಿಲಯ ಮೇಲ್ವಿಚಾರಕರಾದ ಅಜಯ ಹಜೇರಿ ಮಾತನಾಡಿ, ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನಗಳ ಬಗ್ಗೆ ಮಾಹಿತಿ ನೀಡಿದರು. ಸಮಾರಂಭದಲ್ಲಿ ಮುಖ್ಯಮಂತ್ರಿಗಳ ಚಿನ್ನದ ಪದಕ ವಿಜೇತ ಪೊಲೀಸ್ ಉಪ ನಿರೀಕ್ಷಕ ವೀರಭದ್ರ ಕಾಮಕರ ಅವರಿಗೆ ದೇವಾಂಗ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪುಲಕೇಶಿ ತಾಳೂಕರ ಅಧ್ಯಕ್ಷತೆ ವಹಿಸಿದ್ದರು. ತಾಳೂಕರ ಪ್ರತಿಷ್ಠಾನದ ಲಕ್ಷ್ಮಣ ತಾಳೂಕರ, ಪಾಂಡುರಂಗ ಕಾನಡೆ, ಚಂದ್ರಶೇಖರ ತಾಳೂಕರ, ರಾಘವೇಂದ್ರ ತಾಳೂಕರ, ಅಮೃತ ತಾಳೂಕರ. ಶ್ರೀನಿವಾಸ ತಾಳೂಕರ, ಪ್ರವಿಣ ಕಾಮಕರ, ವಿಶ್ವನಾಥ ತಾಳೂಕರ, ಸಂಜು ಹಜೇರಿ, ಅಮರ ಢವಳೆ ಇದ್ದರು. ಕೃಷ್ಣರಾಜೇಂದ್ರ ತಾಳೂಕರ ಸ್ವಾಗತಿಸಿದರು. ಚಂದ್ರಗುಪ್ತ. ತಾಳೂಕರ ನಿರೂಪಿಸಿದರು. ಕಾರ್ಯದರ್ಶಿ ಸುಭಾಷ್ ತಾಳೂಕರ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mrinal Hebbalkar: ನನ್ನ ತಾಯಿಗೆ ರವಿ ಬಳಸಿದ ಪದದಿಂದ ನೋವಾಗಿದೆ: ಮೃಣಾಲ್
Belgavi: ಸಿ.ಟಿ.ರವಿ ಪ್ರಕರಣ ಮುಂದುವರಿಸುವಲ್ಲಿ ಅರ್ಥವೇ ಇಲ್ಲ: ಸಚಿವ ಸತೀಶ್ ಜಾರಕಿಹೊಳಿ
Belagavi: ನ್ಯಾಯಾಧೀಶರ ಮುಂದೆ ಪೊಲೀಸ್ ದೌರ್ಜನ್ಯ ಬಿಚ್ಚಿಟ್ಟ ಸಿ.ಟಿ. ರವಿ
Belagavi: ಎಲ್ಲದಕ್ಕೂ ಪೂರ್ಣವಿರಾಮ ಬೀಳಲಿದೆ, ನನಗೂ ಒಂದು ಕಾಲ ಬರುತ್ತದೆ….. : ಸಿ.ಟಿ.ರವಿ
Belagavi: ಸಿ.ಟಿ.ರವಿ ಬಂಧನ ಪ್ರಕರಣ ಬೆಂಗಳೂರಿಗೆ ಸ್ಥಳಾಂತರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.