Assembly Session: ಭೂ ಕುಸಿತ ತಡೆಯಲು ಶಾಶ್ವತ ಯೋಜನೆ; 6 ಜಿಲ್ಲೆಗಳ 863 ಗ್ರಾ.ಪಂ. ಗುರುತು


Team Udayavani, Dec 14, 2024, 12:51 AM IST

ಭೂ ಕುಸಿತ ತಡೆಯಲು ಶಾಶ್ವತ ಯೋಜನೆ; 6 ಜಿಲ್ಲೆಗಳ 863 ಗ್ರಾ.ಪಂ. ಗುರುತು

ಬೆಳಗಾವಿ: ವಿಶ್ವಬ್ಯಾಂಕ್‌ ನೆರವಿನೊಂದಿಗೆ ರಾಜ್ಯದ 6 ಜಿಲ್ಲೆಗಳ 863 ಗ್ರಾಮ ಪಂಚಾಯತ್‌ಗಳ ವ್ಯಾಪ್ತಿಯಲ್ಲಿ ಭೂ ಕುಸಿತ ತಡೆಯಲು ಶಾಶ್ವತ ಯೋಜನೆ ಹಾಗೂ ಬೆಂಗಳೂರಿನ 1,150 ಕಿ.ಮೀ. ವ್ಯಾಪ್ತಿಯ ರಾಜಕಾಲುವೆ ಹಾಗೂ ಕಿರುಗಾಲುವೆಗಳ ಅಭಿವೃದ್ಧಿಗೆ 5,000 ಕೋಟಿ ರೂ. ಯೋಜನೆಯನ್ನು ರಾಜ್ಯ ಸರಕಾರ ರೂಪಿಸಿದೆ.

ವಿಧಾನಸಭೆಯಲ್ಲಿ ಕಂದಾಯ ಸಚಿವ ಕೃಷ್ಣಬೈರೇಗೌಡ ಮಳೆಹಾನಿ ಸಂಬಂಧ ರಾಜ್ಯ ಸರಕಾರ ಕೈಗೊಂಡ ಕ್ರಮಗಳ ಬಗ್ಗೆ ಸರಕಾರದಿಂದ ಸ್ವಯಂಪ್ರೇರಿತ ನೀಡಿದ ಹೇಳಿಕೆ ವೇಳೆ ಈ ವಿಷಯ ಪ್ರಸ್ತಾವಿಸಿದ್ದು, ಬೆಂಗಳೂರು ಸೇರಿದಂತೆ ನಗರ ಪ್ರದೇಶಗಳಲ್ಲಿ ಮಳೆ ಹಾನಿ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಭೂಕುಸಿತ ಸಂಭವಿಸದಂತೆ ತಡೆಯುವುದಕ್ಕಾಗಿ ಶಾಶ್ವತ ಯೋಜನೆ ರೂಪಿಸುವುದಕ್ಕಾಗಿ ವಿಶ್ವ ಬ್ಯಾಂಕ್‌ ಸಾಲ ಹಾಗೂ ಪ್ರಾಕೃತಿಕ ವಿಕೋಪ ನಿಧಿಯ ಹಣವನ್ನು ಬಳಸಿಕೊಳ್ಳಲಾಗುತ್ತದೆ ಎಂದರು.

ಎಲ್ಲೆಲ್ಲಿ ಎಷ್ಟು?
ಉತ್ತರ ಕನ್ನಡ ಜಿಲ್ಲೆಯ ಶಿರೂರು ಗುಡ್ಡ ಸೇರಿದಂತೆ ವಿವಿಧೆಡೆ ಈ ವರ್ಷ ಭೂಕುಸಿತವಾಗಿದೆ. ಈ ಹಿನ್ನೆಲೆಯಲ್ಲಿ ನ್ಯಾಶನಲ್‌ ಜಿಯಾಗ್ರಾಫಿಕ್‌ ಸರ್ವೇ ಸಂಸ್ಥೆ ವರದಿ ನೀಡಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು ಜಿಲ್ಲೆ 863 ಗ್ರಾಪಂ ವ್ಯಾಪ್ತಿಯಲ್ಲಿ ಭೂ ಕುಸಿತ ಸಂಭವಿಸುವ ಸಂಭಾವ್ಯ ಸ್ಥಳಗಳನ್ನು ಗುರುತಿಸಲಾಗಿದೆ. ಇಲ್ಲಿ ಮುಂದಿನ ಎರಡೂವರೆ ವರ್ಷದಲ್ಲಿ ಶಾಶ್ವತ ಕಾಮಗಾರಿ ನಡೆಸುವುದಕ್ಕಾಗಿ 400 ಕೋಟಿ ರೂ.ನ್ನು ರಾಜ್ಯ ಸರಕಾರ ಬಿಡುಗಡೆ ಮಾಡಿದೆ ಎಂದರು.

ಶೇ. 20 ಅಧಿಕ ಮಳೆ
ಪೂರ್ವ ಮುಂಗಾರು, ಮುಂಗಾರು ಹಾಗೂ ಹಿಂಗಾರಿನಲ್ಲಿ ಈ ವರ್ಷ ಒಟ್ಟು ಶೇ. 20 ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. 133 ಜನರು ಪ್ರಾಣ ಕಳೆದುಕೊಂಡಿದ್ದು, ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ.ಗಳಂತೆ 6.64 ಕೋಟಿ ರೂ. ಪರಿಹಾರ ನೀಡಲಾಗಿದೆ. ಜಾನುವಾರು ಹಾನಿಗೆ 1.20 ಕೋಟಿ ರೂ., ಮನೆಹಾನಿಗೆ 82.20 ಕೋಟಿ ರೂ. ಪರಿಹಾರ ನೀಡಲಾಗಿದೆ. ಮುಂಗಾರಿನಲ್ಲಿ 1,59,718 ಹೆಕ್ಟೇರ್‌ ಬೆಳೆ ಹಾನಿಯಾಗಿದ್ದು, 94.94 ಕೋಟಿ ರೂ. ಹಿಂಗಾರಿನಲ್ಲಿ 1,45,254 ಹೆಕ್ಟೇರ್‌ ಬೆಳೆ ಹಾನಿಯಾಗಿದ್ದು 112 ಕೋಟಿ ರೂ. ಪರಿಹಾರ ನೀಡಲಾಗಿದೆ. ಒಟ್ಟಾರೆ ಮಳೆಹಾನಿ ಸಂಬಂಧ 297 ಕೋಟಿ ರೂ. ಪರಿಹಾರ ಕಲ್ಪಿಸಲಾಗಿದೆ ಎಂದು ವಿವರಿಸಿದರು.

ವಿಪಕ್ಷಗಳ ಸಭಾತ್ಯಾಗ
ಕಂದಾಯ ಸಚಿವರು ಈ ಹೇಳಿಕೆ ನೀಡುವುದಕ್ಕೆ ಆರಂಭದಲ್ಲಿ ವಿಪಕ್ಷಗಳು ಒಪ್ಪಿಗೆ ನೀಡಿದ್ದವು. ಆದರೆ ತಮಗೂ ಸ್ಪಷ್ಟೀಕರಣ ಕೇಳುವುದಕ್ಕೆ ಅವಕಾಶ ನೀಡಬೇಕು. ಹೇಳಿಕೆ ಕೊಡುವುದಾದರೆ ವಕ್ಫ್ ಚರ್ಚೆಯ ಬಳಿಕ ನೀಡಲಿ ಎಂದು ವಿಪಕ್ಷ ನಾಯಕ ಆರ್‌. ಅಶೋಕ್‌ ಮನವಿ ಮಾಡಿದ್ದರು. ಆದರೆ ಸರಕಾರ ಇದಕ್ಕೆ ಸ್ಪಂದಿಸದೇ ಇದ್ದ ಹಿನ್ನೆಲೆಯಲ್ಲಿ ಬಿಜೆಪಿ ಸಭಾತ್ಯಾಗ ನಡೆಸಿತು. ಆದರೆ ವಿಪಕ್ಷದ ಅನುಪಸ್ಥಿತಿಯಲ್ಲೇ ಕೃಷ್ಣಬೈರೇಗೌಡ ಉತ್ತರ ನೀಡಿದರು.

ಧನ ವಿನಿಯೋಗ, ಲೆಕ್ಕ ಪರಿಶೋಧಕರ 9 ವರದಿ ಪರಿಷತ್ತಿನಲ್ಲೂ ಮಂಡನೆ
ಬೆಳಗಾವಿ: ಕಳೆದ ಸಾಲಿನ ಧನ ವಿನಿಯೋಗ ಲೆಕ್ಕಗಳು ಮತ್ತು ಹಣಕಾಸಿನ ಲೆಕ್ಕಗಳು ಸೇರಿದಂತೆ ಲೆಕ್ಕ ನಿಯಂತ್ರಕರು ಮತ್ತು ಮಹಾ ಲೆಕ್ಕಪರಿಶೋಧಕರ ಒಟ್ಟು 9 ವರದಿಗಳನ್ನು ಶುಕ್ರವಾರ ವಿಧಾನ ಪರಿಷತ್ತಿನಲ್ಲಿ ಮಂಡಿಸಲಾಯಿತು. ಮಾರ್ಚ್‌ 2022ಕ್ಕೆ ಕೊನೆಗೊಂಡ ಸಾರ್ವಜನಿಕ ವಿತರಣೆ ವ್ಯವಸ್ಥೆ ಸರಬರಾಜು ನಿರ್ವಹಣೆ ಮೇಲಿನ ಕಾರ್ಯನಿರ್ವಹಣೆ ಲೆಕ್ಕಪರಿಶೋಧನ ವರದಿ, ಕರ್ನಾಟಕ ಪ್ರಾಥಮಿಕ ಶಿಕ್ಷಣ ಸಂಸ್ಥೆಗಳ ಕಾರ್ಯವೈಖರಿ ವರದಿ, ಸಾರ್ವಜನಿಕ ಆರೋಗ್ಯ ಮೂಲಸೌಕರ್ಯ ಮತ್ತು ಆರೋಗ್ಯ ಸೇವೆಗಳ ನಿರ್ವಹಣೆ ವರದಿ ಮಂಡಿಸಲಾಯಿತು.

ಮುನಿರತ್ನ ಪ್ರಕರಣ ಚರ್ಚೆಗೆ ಶಾಸಕರ ಪಟ್ಟು
ಬೆಳಗಾವಿ: ಜಾತಿ ನಿಂದನೆ, ಅತ್ಯಾಚಾರ ಪ್ರಕರಣದ ಆರೋಪ ಎದುರಿಸುತ್ತಿರುವ ಬಿಜೆಪಿ ಸದಸ್ಯ ಎಂ. ಮುನಿರತ್ನ ಪ್ರಕರಣದ ಬಗ್ಗೆ ನಿಯಮ 69ರನ್ವಯ ಚರ್ಚೆಗೆ ಅವಕಾಶ ನೀಡಬೇಕೆಂದು ಕಾಂಗ್ರೆಸ್‌ ಶಾಸಕರೇ ಆಗ್ರಹಿಸಿದ್ದರಿಂದ ವಿಧಾನಸಭೆಯಲ್ಲಿ ತೀವ್ರ ಗದ್ದಲದ ವಾತಾವರಣ ನಿರ್ಮಾಣವಾಯಿತು.

ಆಡಳಿತ ಪಕ್ಷದ ಶಾಸಕರಾದ ನರೇಂದ್ರಸ್ವಾಮಿ, ಪ್ರಸಾದ್‌ ಅಬ್ಬಯ್ಯ, ರವಿ ಗಣಿಗ, ನಯನಾ ಮೋಟಮ್ಮ ಈ ಬಗ್ಗೆ ಚರ್ಚೆಗೆ ಅವಕಾಶ ನೀಡಬೇಕು ಎಂದು ಏರು ಸ್ವರದಲ್ಲಿ ಆಗ್ರಹಿಸಿದರು. ಆಡಳಿತ ಪಕ್ಷದ ಸದಸ್ಯರೇ ಈ ರೀತಿ ವರ್ತಿಸಿದರೆ ಹೇಗೆ ಎಂದು ಸ್ಪೀಕರ್‌ ಖಾದರ್‌ ಆಕ್ಷೇಪ ವ್ಯಕ್ತಪಡಿಸಿದರು. ಪಟ್ಟು ಸಡಿಲಿಸದೆ ಇದ್ದಾಗ ವಿಪಕ್ಷ ನಾಯಕ ಆರ್‌. ಅಶೋಕ್‌ ಆಕ್ಷೇಪ ವ್ಯಕ್ತಪಡಿಸಿ ದರು. ಸಮಯ ಕೇಳುತ್ತಿದ್ದಾರೆ. ಇದು ಸದಸ್ಯರ ಭಾವನೆಗೆ ಘಾಸಿ ಮಾಡಿದೆ ಎಂದು ಡಿಸಿಎಂ ಮನವಿ ಮಾಡಿದ ಬಳಿಕ ವಿವಾದ ತಣ್ಣಗಾಯಿತು.

ಟಾಪ್ ನ್ಯೂಸ್

ALVAS-1

Alvas: ವಿರಾಸತ್‌ನಲ್ಲಿ ನೀಲಾದ್ರಿ ಕುಮಾರ್‌ ಬೆರಳ ಮಾಂತ್ರಿಕತೆಗೆ ಜನಸ್ತೋಮ ನಿಬ್ಬೆರಗು

Navy-Udupi

Navy: ಪಶ್ಚಿಮ ಕಮಾಂಡ್‌ನ‌ ಮೆಡಿಕಲ್‌ ಮುಖಸ್ಥರಾಗಿ ಉಡುಪಿಯ ಡಾ.ಕೃಷ್ಣಮೂರ್ತಿ ಅಧಿಕಾರಿ ನೇಮಕ

DC-Vidya-CSR

Udupi: ಸಿಎಸ್‌ಆರ್‌ ನಿಧಿಗಳ ಸದುಪಯೋಗವಾಗಲಿ: ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ

MH

Manipal Kasturba Hospital: ಶಿಶುವಿನ ಯಕೃತ್‌ ಗೆಡ್ಡೆ ಶಸ್ತ್ರಚಿಕಿತ್ಸೆ: ಕೆಎಂಸಿ ಸಾಧನೆ

Daskath

Mangaluru: ಗ್ರಾಮೀಣ ಭಾಗದ ದಬ್ಬಾಳಿಕೆ ಕಥೆ ಹೇಳುವ ಸಿನೆಮಾಕ್ಕೆ ಉತ್ತಮ ಸ್ಪಂದನೆ

UV-Office-Chigru

Manipal: ಬಾಲ್ಯದಿಂದಲೇ ಉತ್ತಮ ಸಂಸ್ಕಾರ ನೀಡಿದ್ರೆ ಉನ್ನತ ಸ್ಥಾನ ಲಭ್ಯ: ಡಾ| ಸುಧಾಕರ ಶೆಟ್ಟಿ

Udupi: ಗೀತಾರ್ಥ ಚಿಂತನೆ-123: ಸರಣಿಯಂತೆ ಹುಟ್ಟು ಸಾವು, ಸುಖದುಃಖ

Udupi: ಗೀತಾರ್ಥ ಚಿಂತನೆ-123: ಸರಣಿಯಂತೆ ಹುಟ್ಟು ಸಾವು, ಸುಖದುಃಖ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Santosh Lad: ಒನ್‌ ನೇಶನ್‌ ಒನ್‌ ಎಲೆಕ್ಷನ್‌, ನೆಹರೂ ಕಾಲದಲ್ಲೇ ವಿಫ‌ಲ

Santosh Lad: ಒನ್‌ ನೇಶನ್‌ ಒನ್‌ ಎಲೆಕ್ಷನ್‌, ನೆಹರೂ ಕಾಲದಲ್ಲೇ ವಿಫ‌ಲ

Priyank Kharge: ಗ್ರಾ.ಪಂ. ಸದಸ್ಯರ ಗೌರವಧನ ಹೆಚ್ಚಳ ಸಿಎಂ ಗಮನಕ್ಕೆ

Priyank Kharge: ಗ್ರಾ.ಪಂ. ಸದಸ್ಯರ ಗೌರವಧನ ಹೆಚ್ಚಳ ಸಿಎಂ ಗಮನಕ್ಕೆ

Assembly Session: ಸದನದಲ್ಲಿ ಹೆಚ್ಚು ಕಾಲ ಕುಳಿತರೆ ಹೆಚ್ಚು ಬಾರಿ ಗೆಲುವು: ಖಾದರ್‌

Assembly Session: ಸದನದಲ್ಲಿ ಹೆಚ್ಚು ಕಾಲ ಕುಳಿತರೆ ಹೆಚ್ಚು ಬಾರಿ ಗೆಲುವು: ಖಾದರ್‌

Priyank Kharge: ಮಾಣಿಪ್ಪಾಡಿ ಬಾಯಿ ಮುಚ್ಚಿಸಲು 150 ಕೋಟಿ ರೂ. ಆಮಿಷ ಒಡ್ಡಿದ್ದ ವಿಜಯೇಂದ್ರ

Priyank Kharge: ಮಾಣಿಪ್ಪಾಡಿ ಬಾಯಿ ಮುಚ್ಚಿಸಲು 150 ಕೋಟಿ ರೂ. ಆಮಿಷ ಒಡ್ಡಿದ್ದ ವಿಜಯೇಂದ್ರ

ನೀವೊಬ್ಬರೇ ಗೆದ್ದು ಬಂದವರಾ: ಆಶೋಕ್‌ಗೆ ಸಿಎಂ ತಿರುಗೇಟು

Assembly Session: ನೀವೊಬ್ಬರೇ ಗೆದ್ದು ಬಂದವರಾ: ಆಶೋಕ್‌ಗೆ ಸಿಎಂ ತಿರುಗೇಟು

MUST WATCH

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

udayavani youtube

ಅಯ್ಯಪ್ಪ ಸ್ವಾಮಿ ಪವಾಡ | ಮಾತು ಬಾರದ ಬಾಲಕನಿಗೆ ಮಾತು ಬಂತು!

udayavani youtube

CCTV Footage | Udupi; ಹೆದ್ದಾರಿಯಲ್ಲೇ ಶರವೇಗದಲ್ಲಿ ಬಂದು ಅಪ್ಪಳಿಸಿದ ಕಾರು.

udayavani youtube

ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಬೃಹತ್ ಪ್ರತಿಭಟನೆ

udayavani youtube

ಭಾರತ-ಆಸ್ಟ್ರೇಲಿಯಾ 2ನೇ ಟೆಸ್ಟ್‌ಗಾಗಿ ಅಡಿಲೇಡ್‌ಗೆ ಆಗಮಿಸಿದ ಟೀಮ್ ಇಂಡಿಯಾ

ಹೊಸ ಸೇರ್ಪಡೆ

ALVAS-1

Alvas: ವಿರಾಸತ್‌ನಲ್ಲಿ ನೀಲಾದ್ರಿ ಕುಮಾರ್‌ ಬೆರಳ ಮಾಂತ್ರಿಕತೆಗೆ ಜನಸ್ತೋಮ ನಿಬ್ಬೆರಗು

Navy-Udupi

Navy: ಪಶ್ಚಿಮ ಕಮಾಂಡ್‌ನ‌ ಮೆಡಿಕಲ್‌ ಮುಖಸ್ಥರಾಗಿ ಉಡುಪಿಯ ಡಾ.ಕೃಷ್ಣಮೂರ್ತಿ ಅಧಿಕಾರಿ ನೇಮಕ

DC-Vidya-CSR

Udupi: ಸಿಎಸ್‌ಆರ್‌ ನಿಧಿಗಳ ಸದುಪಯೋಗವಾಗಲಿ: ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ

MH

Manipal Kasturba Hospital: ಶಿಶುವಿನ ಯಕೃತ್‌ ಗೆಡ್ಡೆ ಶಸ್ತ್ರಚಿಕಿತ್ಸೆ: ಕೆಎಂಸಿ ಸಾಧನೆ

Daskath

Mangaluru: ಗ್ರಾಮೀಣ ಭಾಗದ ದಬ್ಬಾಳಿಕೆ ಕಥೆ ಹೇಳುವ ಸಿನೆಮಾಕ್ಕೆ ಉತ್ತಮ ಸ್ಪಂದನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.