ಮುಂಗಾರು ಬಿತ್ತನೆಗೆ ಸಕಲ ಸಿದ್ಧತೆ

|17,000 ಕ್ವಿಂಟಲ್‌ ಸೋಯಾಬಿನ್‌ ಬೀಜ ಸಂಗ್ರಹ

Team Udayavani, May 30, 2020, 12:13 PM IST

ಮುಂಗಾರು ಬಿತ್ತನೆಗೆ ಸಕಲ ಸಿದ್ಧತೆ

ಸಾಂದರ್ಭಿಕ ಚಿತ್ರ

ಬೈಲಹೊಂಗಲ: ಮುಂಗಾರು ಮಳೆ ಬೇಗ ಸುರಿದರೆ ತನ್ನ ಬದುಕು ಹಸನಾದಿತು ಎಂದು ತಾಲೂಕಿನ ಅನ್ನದಾತರು ಕಾಯುತ್ತಿದ್ದಾರೆ. ಜತೆಗೆಬಿತ್ತನೆಗೆ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಇಂದು, ನಾಳೆ ಮಳೆಯಾದರೆ ಭೂಮಿಗೆ ಬೀಜ ಹಾಕಿ ಉತ್ತಮ ಬೆಳೆ ತೆಗೆಯಬೇಕೆಂದು ಕಳೆದ ತಿಂಗಳಿನಿಂದ ಹೊಲಗಳನ್ನು ಉಳುಮೆ ಮಾಡಿ ಬಿತ್ತನೆಗೆ ಸಜ್ಜುಗೊಳಿಸಿದ್ದಾರೆ.

ಕಳೆದ ಬಾರಿ ಮುಂಗಾರು ಹಾಗೂ ಹಿಂಗಾರು ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಬಂದಿತ್ತು. ಈ ಬಾರಿ ಕೂಡಾ ರೈತರು ರೋಹಿಣಿ ಮಳೆ ಪ್ರಾರಂಭವಾದರೆ ಹೊಲ ಹದವಾಗಿರಬೇಕೆನ್ನುವ ನಿಟ್ಟಿನಲ್ಲಿ ಟ್ರಾಕ್ಟರ್‌, ಎತ್ತಿನಿಂದ ಹದಗೊಳಿಸಿದ್ದಾರೆ. ತಾಲೂಕಿನಲ್ಲಿ ಒಟ್ಟಾರೆ ಸೋಯಾಬಿನ್‌ ಮುಖ್ಯ ಬೆಳೆಯಾಗಿದ್ದು, ಇದರೊಂದಿಗೆ ತೊಗರಿ, ಹೆಸರು, ಉದ್ದು ಕೂಡಾ ಬೆಳೆಯಲಾಗುತ್ತದೆ. ಇನ್ನು ಬೈಲಹೊಂಗಲ ಮತ್ತು ಕಿತ್ತೂರ ತಾಲೂಕಿನಲ್ಲಿ ಹೆಚ್ಚು ಸೋಯಾಬಿನ್‌ ಬಿತ್ತನೆಗೆ ರೈತರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಬೀಜ ಸಂಗ್ರಹಣೆ ವ್ಯವಸ್ಥೆ: ಕೃಷಿ ಇಲಾಖೆ ಹೇಳುತ್ತಿದ್ದರೂ ಸಕಾಲದಲ್ಲಿ ಮಳೆಯಾದರೆ ಬೀಜಮತ್ತು ಗೊಬ್ಬರದ ಅಭಾವ ಉಂಟಾಗುತ್ತದೆ. ಹೀಗಾಗದಂತೆ ಮುಂಚಿತವಾಗಿಯೇ ಶೀಘ್ರ ಸುವ್ಯವಸ್ಥೆ ಮಾಡಬೇಕಾಗಿರುವುದು ತಮ್ಮ ಕರ್ತವ್ಯವಾಗಿದೆ ಎಂದು ಜಿಲ್ಲಾ ಕೃಷಿಕ ಸಮಾಜ ಅಧ್ಯಕ್ಷ ಎಸ್‌.ಎಫ್‌. ದೊಡಗೌಡರ ಹೇಳುತ್ತಾರೆ.

ಬೀಜ ಸಂಗ್ರಹ: ಕೃಷಿ ಇಲಾಖೆಯು ರೈತರಿಗೆ ಅಗತ್ಯ ಬೀಜ ಪೂರೈಸುವುದಕ್ಕಾಗಿ ಸರಕಾರದ ಪರವಾನಗಿ ಹೊಂದಿರುವ ವಿವಿಧ ಕಂಪನಿ ಹಾಗೂ ಬೀಜ ನಿಗಮದೊಂದಿಗೆ ರೈತ ಸಂಪರ್ಕ ಕೇಂದ್ರಗಳಾದ ಬೈಲಹೊಂಗಲ, ನೇಸರಗಿ, ಕಿತ್ತೂರದಿಂದ ಪಿಕೆಪಿಎಸ್‌ದಲ್ಲಿ ಬೀಜ ವಿತರಣೆ ನಡೆದಿದೆ. ಬೈಲಹೊಂಗಲ ಆರ್‌ಎಸ್‌ಕೆ ಸಂಬಂಧಿಸಿದ ಬೈಲಹೊಂಗಲ ಟಿಎಪಿಎಂಸಿ, ಬೆಳವಡಿ, ಶಿಗಿಹಳ್ಳಿ, ಪಟ್ಟಿಹಾಳ, ದೊಡವಾಡ, ಸಾನಿಕೊಪ್ಪ, ಬುಡರಕಟ್ಟಿ, ಹೊಳಿನಾಗಲಾಪುರ, ನೇಸರಗಿ ಆರ್‌ಎಸ್‌ಕೆ ಸಂಬಂಧಿ ಸಿದ ನೇಸರಗಿ ಪಿಕೆಪಿಎಸ್‌, ಹಣ್ಣಿಕೇರಿ, ಸಂಪಗಾಂವ, ನೇಗಿನಹಾಳ, ಬಾವಿಹಾಳ, ನಾಗನೂರ,ದೇಶನೂರ, ತಿಗಡಿ, ಚಿಕ್ಕಬಾಗೇವಾಡಿ, ಮರಕಟ್ಟಿ, ಕಿತ್ತೂರ ಆರ್‌ಎಸ್‌ಕೆ ಸಂಬಂಧಿಸಿದ ಕಿತ್ತೂರ, ಎಂ.ಕೆ. ಹುಬ್ಬಳ್ಳಿ,ನಿಚ್ಚಣಕಿ, ಹಿರೆನಂದಿಹಳ್ಳಿ, ಕಾದ್ರೋಳ್ಳಿ, ಹುಣಸಿಕಟ್ಟಿ, ಅವರಾದಿ, ತುರಮರಿ, ಅಂಬಡಗಟ್ಟಿ, ಕಲಬಾಂವಿ, ಕೋದಾನಪುರ ಹೀಗೆ 31 ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಬೀಜ ವಿತರಣೆ ನಡೆದಿದೆ. ಹೆಚ್ಚುವರಿ ಕೇಂದ್ರಗಳಲ್ಲೂ ತಾಲೂಕಿನ ರೈತರಿಗೆ ಬೇಕಾಗುವಷ್ಟು ಬಿತ್ತನೆ ಬೀಜ ಸಂಗ್ರಹಿಸುವ ಕಾರ್ಯದಲ್ಲಿ ಕೃಷಿ ಇಲಾಖೆ ತೊಡಗಿದೆ.

ರೈತರ ಬೇಡಿಕೆಗೆ ಅನುಗುಣವಾಗಿ ಈಗಾಗಲೇ ಗೊಬ್ಬರ ಮತ್ತು ಬೀಜಗಳನ್ನು ತಾಲೂಕಿನಲ್ಲಿ ದಾಸ್ತಾನು ಮಾಡಲಾಗಿದ್ದು,
ಅನ್ನದಾತರು ಆತಂಕ ಪಡಬೇಕಾಗಿಲ್ಲ. ಮುಂಗಾರು ಪ್ರವೇಶಕ್ಕಾಗಿ ಕಾಯುತ್ತಿದ್ದೇವೆ. ಪ್ರತಿಭಾ ಹೂಗಾರ, ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ

 

– ಸಿ.ವೈ. ಮೆಣಶಿನಕಾಯಿ

ಟಾಪ್ ನ್ಯೂಸ್

Priyank-Kharghe

Inquiry Report: ಬಿಜೆಪಿಗೆ ’40 ಪರ್ಸೆಂಟ್‌’ ಕ್ಲೀನ್‌ಚಿಟ್‌ ಸಿಕ್ಕಿಲ್ಲ: ಸಚಿವ ಪ್ರಿಯಾಂಕ್‌

nelamangala

Leopard Attack: ನೆಲಮಂಗಲ ಸಮೀಪ ಚಿರತೆ ದಾಳಿಗೆ ರೈತ ಮಹಿಳೆ ಬಲಿ

World Cup; ಖೋ ಖೋ ಪಂದ್ಯಾವಳಿಗೆ ಐಒಎ ಬೆಂಬಲ

World Cup; ಖೋ ಖೋ ಪಂದ್ಯಾವಳಿಗೆ ಐಒಎ ಬೆಂಬಲ

ATP Finals : ಜಾನಿಕ್‌ ಸಿನ್ನರ್‌ಗೆ ಮೊದಲ ಪ್ರಶಸ್ತಿ

ATP Finals : ಜಾನಿಕ್‌ ಸಿನ್ನರ್‌ಗೆ ಮೊದಲ ಪ್ರಶಸ್ತಿ

Women’s Asian Hockey Semi-Finals: ಜಪಾನ್‌ ವಿರುದ್ಧ ಭಾರತ ಫೇವರಿಟ್‌

Women’s Asian Hockey Semi-Finals: ಜಪಾನ್‌ ವಿರುದ್ಧ ಭಾರತ ಫೇವರಿಟ್‌

China Master Badminton: ಸಾತ್ವಿಕ್‌-ಚಿರಾಗ್‌ ಜೋಡಿ ಮರಳಿ ಕಣಕ್ಕೆ

China Master Badminton: ಸಾತ್ವಿಕ್‌-ಚಿರಾಗ್‌ ಜೋಡಿ ಮರಳಿ ಕಣಕ್ಕೆ

WI vs ENG, 5th T20I: ಅಂತಿಮ ಟಿ20 ರದ್ದು ಇಂಗ್ಲೆಂಡ್‌ಗೆ 3-1 ಸರಣಿ

WI vs ENG, 5th T20I: ಅಂತಿಮ ಟಿ20 ರದ್ದು ಇಂಗ್ಲೆಂಡ್‌ಗೆ 3-1 ಸರಣಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸವದತ್ತಿ:ರೈಲು ಮಾರ್ಗ- ಸವದತ್ತಿಗೇ ಜಾಸ್ತಿ ಲಾಭ! ಆರ್ಥಿಕ ಅಭಿವೃದ್ಧಿಗೆ ನೆರವು…

ಸವದತ್ತಿ:ರೈಲು ಮಾರ್ಗ- ಸವದತ್ತಿಗೇ ಜಾಸ್ತಿ ಲಾಭ! ಆರ್ಥಿಕ ಅಭಿವೃದ್ಧಿಗೆ ನೆರವು…

Belagavi: ವರ್ಷದ ಹಿಂದೆ ಪಕ್ಷಕ್ಕೆ ಬರುವಂತೆ ಬಿಜೆಪಿ ಆಹ್ವಾನಿಸಿತ್ತು: ಬಾಬಾಸಾಹೇಬ ಪಾಟೀಲ್

Belagavi: ಹೊಸಬರು, ಹಳಬರನ್ನೂ ಬಿಜೆಪಿಯವರು ಟಚ್ ಮಾಡ್ತಿದ್ದಾರೆ: ಶಾಸಕ ಬಾಬಾಸಾಹೇಬ ಪಾಟೀಲ್

Father and children who went to fishing went missing in hukkeri

Hukkeri: ಮೀನು ಹಿಡಿಯಲು ಹೋಗಿದ್ದ ತಂದೆ, ಇಬ್ಬರು ಮಕ್ಕಳು ನೀರುಪಾಲು

Youth assaulted near Belagavi airport compound

Belagavi ವಿಮಾನ ನಿಲ್ದಾಣ ಕಂಪೌಂಡ್ ಬಳಿ ಯುವಕನ ಹತ್ಯೆ; ಕಾರಣ ನಿಗೂಢ

police crime

Belgavi:ಸಚಿವೆ ಲಕ್ಷ್ಮೀ ಹೆಬ್ಬಾಳಕ‌ರ್ ಆಪ್ತನ ಮೇಲೆ ದುಷ್ಕರ್ಮಿಗಳ ತಂಡದಿಂದ ದಾಳಿ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

CN-Manjunath

Mysuru: ಕೋವಿಡ್‌ ವೇಳೆ ಔಷಧ ಖರೀದಿಯಲ್ಲಿ ನನ್ನ ಪಾತ್ರವಿಲ್ಲ: ಡಾ.ಸಿ.ಎನ್‌.ಮಂಜುನಾಥ್‌

Priyank-Kharghe

Inquiry Report: ಬಿಜೆಪಿಗೆ ’40 ಪರ್ಸೆಂಟ್‌’ ಕ್ಲೀನ್‌ಚಿಟ್‌ ಸಿಕ್ಕಿಲ್ಲ: ಸಚಿವ ಪ್ರಿಯಾಂಕ್‌

4

Udupi: ಚಿನ್ನ, ವಜ್ರಾಭರಣ ಕದ್ದು ಹೋಂ ನರ್ಸ್‌ ಪರಾರಿ!

nelamangala

Leopard Attack: ನೆಲಮಂಗಲ ಸಮೀಪ ಚಿರತೆ ದಾಳಿಗೆ ರೈತ ಮಹಿಳೆ ಬಲಿ

World Cup; ಖೋ ಖೋ ಪಂದ್ಯಾವಳಿಗೆ ಐಒಎ ಬೆಂಬಲ

World Cup; ಖೋ ಖೋ ಪಂದ್ಯಾವಳಿಗೆ ಐಒಎ ಬೆಂಬಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.