ಕಬ್ಬು ದರ ನಿಗದಿ ಹೋರಾಟಕ್ಕೆ ಸಿದ್ಧತೆ

Team Udayavani, Nov 12, 2017, 12:35 PM IST

Ban121.jpg

ಬೆಳಗಾವಿ: ನಗರದಲ್ಲಿ ನಡೆಯುವ ಅಧಿವೇಶನ ಎಂದಾಕ್ಷಣ ಮೊದಲಿಗೆ ಚರ್ಚೆಗೆ ಬರುವುದೇ ಕಬ್ಬು ಬೆಳೆಗಾರರ ಸಮಸ್ಯೆ. ಆದರೆ, ನಾಲ್ಕು ವರ್ಷಗಳಲ್ಲಿ ಇದ್ದ ತೀವ್ರತೆ ಈ ಬಾರಿ ಇರಲಿಕ್ಕಿಲ್ಲ.

ಏಕೆಂದರೆ, ಪ್ರತಿ ಬಾರಿ ಸಕ್ಕರೆ ಕಾರ್ಖಾನೆಗಳಿಂದ ರೈತರಿಗೆ ಬರಬೇಕಾದ ಬಾಕಿ ಹಣದ ವಿಷಯವೇ ಗಲಾಟೆಗೆ ಕಾರಣವಾಗುತ್ತಿತ್ತು. ಈಗ ದೊಡ್ಡ ಮೊತ್ತದ ಬಾಕಿ ಉಳಿದಿಲ್ಲ. 2013-14ರಿಂದ 2015-16ರವರೆಗೆ ಎಲ್ಲ ಕಾರ್ಖಾನೆಗಳಿಂದ ಕಬ್ಬು ಬೆಳೆಗಾರರಿಗೆ ಬರಬೇಕಾದ ಬಾಕಿ 87 ಕೋಟಿ ರೂ. ಮಾತ್ರ. 

ಕಳೆದ ಮೂರು ವರ್ಷಗಳ 87 ಕೋಟಿ ರೂ. ಬರಬೇಕಾಗಿರುವುದು ನಿಜ. 2016-17ರ ಅಷ್ಟೊಂದು ಇಲ್ಲ. ಎಫ್ಆರ್‌ಪಿ ದರದ ಮೇಲೆ ನಿಗದಿಪಡಿಸಿದ್ದ ಹೆಚ್ಚುವರಿ ಹಣದ ಬಾಕಿ 18 ಕಾರ್ಖಾನೆಗಳಿಂದಷ್ಟೇ ಬರಲಿಕ್ಕಿದೆ. ಈ ಬಾರಿ ನಮ್ಮ ಒತ್ತಾಯ ಇರುವುದು ದರ ನಿಗದಿ ಬಗ್ಗೆ. ಏಕೆಂದರೆ, ಕೇಂದ್ರ ನಿಗದಿಪಡಿಸಿರುವ ಎಫನ್ಯಾಯಸಮ್ಮತವಾಗಿಲ್ಲ. ಹಾಗಾಗಿ, ರೈತರಿಗೆ ನ್ಯಾಯ ಒದಗಿಸುವ ದೃಷ್ಟಿಯಿಂದ ರಾಜ್ಯ ಸರ್ಕಾರ ಒಂದು ದರ ನಿಗದಿಪಡಿಸಬೇಕು ಎಂಬುದು ಕಬ್ಬು
ಬೆಳೆಗಾರರ ಸಂಘದ ಒತ್ತಾಯ.

ಕೇಂದ್ರ ಸರ್ಕಾರ ಪ್ರಸಕ್ತ ಸಾಲಿಗೆ ಶೇ.9.5ರಷ್ಟು ಇಳುವರಿ ಇರುವ ಪ್ರತಿ ಟನ್‌ ಕಬ್ಬಿಗೆ 2,550 ರೂ. ಎಫ್ಆರ್‌ಪಿ ನಿಗದಿಪಡಿಸಿದೆ. ರಾಜ್ಯದ ಸರಾಸರಿ ಇಳುವರಿ ಶೇ.10.3 ಆಗಿರುವುದರಿಂದ ರೈತರಿಗೆ ಪ್ರತಿ ಟನ್‌ ಕಬ್ಬಿಗೆ 3 ಸಾವಿರ ರೂ. ಸಿಗಲಿದೆ ಎಂದು ಅಂದಾಜಿಸಲಾಗಿದೆ. ಇದರ ಮೇಲೆ ಸಕ್ಕರೆ ಕಾರ್ಖಾನೆ ನೀಡಬೇಕಾದ ಹೆಚ್ಚುವರಿ ದರವನ್ನು ರಾಜ್ಯ ಸರ್ಕಾರ ನಿರ್ಧರಿಸಬೇಕು. ಅದರಂತೆ, ಎಫ್ಆರ್‌ಪಿ ದರದ ಮೇಲೆ ಪ್ರತಿ ರೂ. ಕೊಡಲು ಉತ್ತರ ಕರ್ನಾಟಕ ಸಕ್ಕರೆ ಕಾರ್ಖಾನೆ ಮಾಲೀಕರು ಮುಂದೆರೆ. ಆದರೆ, ದಕ್ಷಿಣ ಕರ್ನಾಟಕ ಭಾಗದ ಕಾರ್ಖಾನೆ ಮಾಲೀಕರು ಈ ಬಗ್ಗೆ ಇನ್ನೂಮ ತೀರ್ಮಾನಕ್ಕೆ ಬಂದಿಲ್ಲ. ಇದಕ್ಕಾಗಿ ಸರ್ಕಾರ ಏಳು ದಿನಗಳ ಗಡುವು ನೀಡಿದೆ.‌ ರಾಜ್ಯ ಸರ್ಕಾರವೇ ಏಕಪ್ರಕಾರವಾಗಿರ ನಿಗದಿಪಡಿಸಬೇಕು ಎನ್ನುವುದು ರೈತರ ವಾದ.

87 ಕೋಟಿ ರೂ. ಬಾಕಿ: ಸಕ್ಕರೆ ಕಾರ್ಖಾನೆ ಮಾಲೀಕರು 2013-14, 2014-15 ಹಾಗೂ 2015-16ನೇ ಸಾಲಿನಲ್ಲಿ ಕಬ್ಬು ಬೆಳೆಗಾರರಿಗೆ ಒಟ್ಟು 31,170.84 ಕೋಟಿ ರೂ. ಬಾಕಿ ಕೊಡಬೇಕಿತ್ತು. ಈ ಪೈಕಿ 2017ರ ಅಕ್ಟೋಬರ್‌ವರೆಗಿನ ಮಾಹಿತಿ ಪ್ರಕಾರ 31,083.27 ಕೋಟಿ ರೂ. ಬಾಕಿ ಪಾವತಿ ಮಾಡಲಾಗಿದ್ದು, ಈಗ ಕೇವಲ 87.27 ಕೋಟಿ ರೂ. ಬಾಕಿ ಉಳಿದಿದೆ. ಇದು ಮೂರು ವರ್ಷಗಳಲ್ಲಿ ರಾಜ್ಯದ ಸಕ್ಕರೆ ಕಾರ್ಖಾನೆಗಳು ರೈತರಿಗೆ ಪಾವತಿಸಬೇಕಾದ ಒಟ್ಟು ಶೇ.0.28 ಮಾತ್ರ. ಬಾಕಿ ಉಳಿಸಿಕೊಂಡಿರುವ ಕಾರ್ಖಾನೆಗಳಿಗೆ ಕಬ್ಬು(ನಿಯಂತ್ರಣ) ಆದೇಶ-1966ರ ಪ್ರಕಾರ ವಸೂಲಾತಿ ಪ್ರಮಾಣಪತ್ರ ಹೊರಡಿಸಲಾಗಿದೆ. ಕಾರ್ಖಾನೆಗಳು ವಿವಿಧ ನ್ಯಾಯಾಲಯಗಳಲ್ಲಿ ತಡೆಯಾಜ್ಞೆ ಪಡೆದುಕೊಂಡಿದ್ದು, ಅದನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಕಬ್ಬು ಅಭಿವೃದ್ಧಿ ಆಯುಕ್ತರು ಹಾಗೂ ಸಕ್ಕರೆ ನಿರ್ದೇಶಕರು ಮಾಹಿತಿ ನೀಡಿದ್ದಾರೆ.

ಈ ಮಧ್ಯೆ, ಕಬ್ಬಿನ ವಿಚಾರದಲ್ಲಿ ಅಧಿವೇಶನದಲ್ಲಿ ಯಾವ ನೀತಿ ಅನುಸರಿಸಬೇಕು ಅನ್ನುವ ಬಗ್ಗೆ ಪ್ರತಿಪಕ್ಷಗಳು ಇನ್ನೂ ತೀರ್ಮಾನಿಸಿಲ್ಲ.

ಜೊತೆಗೆ ಯಾವ ವಿಷಯ ಮುಂದಿಟ್ಟುಕೊಂಡು ಹೋರಾಟ ಮಾಡಬೇಕು ಅನ್ನುವ ಬಗ್ಗೆ ಕಬ್ಬು ಬೆಳೆಗಾರರಲ್ಲಿ ಸ್ಪಷ್ಟತೆ ಇಲ್ಲ. ಬಾಕಿ ಹಣಕ್ಕಿಂತ ಹೆಚ್ಚಾಗಿ ಪ್ರಸಕ್ತ ಸಾಲಿನ ದರ ನಿಗದಿ ವಿಚಾರ ಇಟ್ಟುಕೊಂಡು ಹೋರಾಡುವ ಮಾತುಗಳು ಕಬ್ಬು ಬೆಳೆಗಾರರಲ್ಲಿ ಕೇಳಿ ಬರುತ್ತಿವೆ .

3 ಕೋಟಿ ಮೆಟ್ರಿಕ್‌ ಟನ್‌ ಕಬ್ಬು ಅರೆಯುವ ನಿರೀಕ್ಷೆ ಮೂರು ವರ್ಷಗಳಲ್ಲಿ ಕಬ್ಬು ಅರೆದ ಕಾರ್ಖಾನೆಗಳು, ಅರೆದ ಕಬ್ಬಿನ ಪ್ರಮಾಣ, ಪಾವತಿಸಬೇಕಾಗದ ಹಣ, ಪಾವತಿಸಿರುವ ಮೊತ್ತ ಹಾಗೂ ಬಾಕಿ ಉಳಿಸಿಕೊಂಡಿರುವುದು ಇಂತಿದೆ. 2017-18ರಲ್ಲಿ ಈವರೆಗೆ 16 ಕಾರ್ಖಾನೆಗಳು ಕಬ್ಬು ಅರೆಯುವುದನ್ನು ಪ್ರಾರಂಭಿಸಿದ್ದು, ಅಕ್ಟೋಬರ್‌ 31ರವರೆಗೆ 2.5 ಕೋಟಿ ಮೆಟ್ರಿಕ್‌ ಟನ್‌ ಕಬ್ಬು ಅರೆಯಲಾಗಿದೆ. ಈ ಹಂಗಾಮಿನಲ್ಲಿ ಒಟ್ಟು 3 ಕೋಟಿ ಮೆಟ್ರಿಕ್‌ ಟನ್‌ ಕಬ್ಬು ಅರೆಯುವ ನಿರೀಕ್ಷೆಯಿದೆ.

ರಾಜ್ಯ ಸರ್ಕಾರ ದರ ನಿಗದಿಪಡಿಸಬೇಕು ಎಂಬುದು ನಮ್ಮ ಪ್ರಮುಖ ಬೇಡಿಕೆ. ಕೇಂದ್ರ ಸರ್ಕಾರದ ಎಫ್ಆರ್‌ಪಿ ದರ ನ್ಯಾಯಸಮ್ಮತವಾಗಿಲ್ಲ. ಉತ್ತರ ಪ್ರದೇಶದಲ್ಲಿ ಅಲ್ಲಿನ ಸರ್ಕಾರದ ಪ್ರತಿ ಟನ್‌ ಕಬ್ಬಿಗೆ 3,250 ರೂ. ಇದೆ. ಗುಜರಾತಿನಲ್ಲಿ 4 ಸಾವಿರ ರೂ. ಇದೆ. ಮಹಾರಾಷ್ಟ್ರದಲ್ಲಿ ಎಫ್ಆರ್‌ಪಿ ದರದ ಮೇಲೆ 200 ರೂ. ನಿಗದಿಪಡಿಸಿದೆ. ಆದರೆ, ಕರ್ನಾಟಕದಲ್ಲಿ ಮಾತ್ರ ರಾಜ್ಯ ಸರ್ಕಾರ ನಿಗದಿ ಮಾಡುತ್ತಿಲ್ಲ. ಕೇಂದ್ರದ ಎಫ್ಆರ್‌ಪಿ ಮೇಲೆ ಉತ್ತರ
ಕರ್ನಾಟಕದ ಕಾರ್ಖಾನೆಗಳು ಪ್ರತಿ ಟನ್‌ಗೆ 200 ರೂ. ಕೊಡಬೇಕು ಎಂದು ಸರ್ಕಾರ ಹೇಳಿದೆ.

ಆದರೆ, ಹೈದರಾಬಾದ್‌ ಕರ್ನಾಟಕ ಭಾಗದ ಕಾರ್ಖಾನೆಗಳು ಇದನ್ನು ಒಪ್ಪಿಲ್ಲ. ದಕ್ಷಿಣ ಕರ್ನಾಟಕ ಕಾರ್ಖಾನೆಗಳು ಇನ್ನೂ ನಿರ್ಧಾರವೇ ಮಾಡಿಲ್ಲ. ಶುಕ್ರವಾರ (ನ.10ರಂದು) ಹುಬ್ಬಳ್ಳಿಯಲ್ಲಿ ಸಭೆ ಕರೆಯಲಾಗಿದ್ದು, ಅಧಿವೇಶನದ ವೇಳೆ ಯಾವ ರೀತಿ ಹೋರಾಡಬೇಕೆಂಬ ಬಗ್ಗೆ ತೀರ್ಮಾನಿಸಲಾಗುವುದು.
– ಕುರುಬೂರು ಶಾಂತಕುಮಾರ್‌,
ಅಧ್ಯಕ್ಷರು, ರಾಜ್ಯ ಕಬ್ಬು ಬೆಳೆಗಾರರ ಸಂಘ

– ರಫೀಕ್‌ ಅಹಮದ್‌

ಟಾಪ್ ನ್ಯೂಸ್

Kollywood: ಬಹಿರಂಗ ಪತ್ರ ಬರೆದು ಧನುಷ್‌ ಮೇಲೆ ರೇಗಾಡಿದ ನಟಿ ನಯನತಾರಾ; ಆಗಿರುವುದೇನು?

Kollywood: ಬಹಿರಂಗ ಪತ್ರ ಬರೆದು ಧನುಷ್‌ ಮೇಲೆ ರೇಗಾಡಿದ ನಟಿ ನಯನತಾರಾ; ಆಗಿರುವುದೇನು?

Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ

Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ

13-notes-1

Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Maharashtra Election: Focus on winning the booth: Modi’s Mantra to Workers

Maharashtra Election: ಬೂತ್‌ ಗೆಲ್ಲುವತ್ತ ಗಮನ ಹರಿಸಿ: ಕಾರ್ಯಕರ್ತರಿಗೆ ಮೋದಿ ಕರೆ

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

1

Lawyer Jagadish: ಮತ್ತೆ ಬಿಗ್‌ ಬಾಸ್‌ಗೆ ಕಾರ್ಯಕ್ರಮಕ್ಕೆ ಲಾಯರ್‌ ಜಗದೀಶ್‌ ಎಂಟ್ರಿ..!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Hubli: ವಿದ್ಯಾರ್ಥಿನಿಗೆ ಚುಡಾಯಿಸಿದ ಇಬ್ಬರು, ಸಹಕರಿಸಿದ ಮೂವರ ಬಂಧನ

Hubli: ವಿದ್ಯಾರ್ಥಿನಿಗೆ ಚುಡಾಯಿಸಿದ ಇಬ್ಬರು, ಸಹಕರಿಸಿದ ಮೂವರ ಬಂಧನ

Siraguppa: ಮುಂಜಾನೆ ತಾಲೂಕಿನಲ್ಲಿ ದಟ್ಟ ಮಂಜು… ವಾಹನ ಸವಾರರ ಪರದಾಟ

Siraguppa: ಮುಂಜಾನೆ ತಾಲೂಕಿನಲ್ಲಿ ದಟ್ಟ ಮಂಜು… ವಾಹನ ಸವಾರರ ಪರದಾಟ

Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!

yathanal-jarakiholi

Waqf Notice: ಬಸನಗೌಡ ಪಾಟೀಲ್‌ ಯತ್ನಾಳ್‌ ತಂಡದಿಂದ 1 ತಿಂಗಳು ಜನ ಜಾಗೃತಿ

BYV-yathnal

Waqf Issue: ಕಾಂಗ್ರೆಸ್‌ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Kollywood: ಬಹಿರಂಗ ಪತ್ರ ಬರೆದು ಧನುಷ್‌ ಮೇಲೆ ರೇಗಾಡಿದ ನಟಿ ನಯನತಾರಾ; ಆಗಿರುವುದೇನು?

Kollywood: ಬಹಿರಂಗ ಪತ್ರ ಬರೆದು ಧನುಷ್‌ ಮೇಲೆ ರೇಗಾಡಿದ ನಟಿ ನಯನತಾರಾ; ಆಗಿರುವುದೇನು?

Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ

Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ

14-darshan

Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್‌

13-notes-1

Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.