ಪರಂಪರೆ ಉಳಿಸಿ-ಬೆಳೆಸುತ್ತಿರುವ ಸರ್ಕಾರ
ಪ್ರಧಾನಿ ಮೋದಿ ನೇತೃತ್ವದಲ್ಲಿ ವಿಶ್ವಗುರುವಾಗುತ್ತಿದೆ ಭಾರತ
Team Udayavani, Apr 4, 2022, 4:47 PM IST
ಸವದತ್ತಿ: ವಿವಿಧ ಇಲಾಖೆಗಳಿಗೆ 125 ಕೋಟಿ ಅನುದಾನ ಮಂಜೂರಾಗಿದ್ದು, ಕ್ಷೇತ್ರದ ಅಭಿವೃದ್ಧಿ ನಡೆಸಲಾಗುವುದು. ಬಹುದಿನಗಳ ಬೇಡಿಕೆಯಾದ 24×7 ಕುಡಿಯುವ ನೀರು ಯೋಜನೆ ಶೀಘ್ರದಲ್ಲಿ ಆರಂಭಿಸಲಾಗುವುದೆಂದು ವಿಧಾನಸಭಾ ಉಪಸಭಾಧ್ಯಕ್ಷ ಆನಂದ ಮಾಮನಿ ಹೇಳಿದರು.
ರಾಮಾಪೂರ ಸೈಟಿನಲ್ಲಿರುವ ತಾಲೂಕಾ ಕ್ರೀಡಾಂಗಣದಲ್ಲಿ ಜರುಗಿದ ಯುಗಾದಿ ಸಂಭ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ದೇಶದ ಉದ್ದಗಲಕ್ಕೂ ಧಾರ್ಮಿಕ ಪರಂಪರೆ ಉಳಿಸಿ, ಧರ್ಮವನ್ನು ಬೆಳಸಿ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ನಡೆಸಿದೆ. ಸ್ವಾತಂತ್ರ್ಯ ಹೋರಾಟಗಾರರು, ಸಮಾಜ ಸುಧಾಕರರು ಹಾಗೂ ಸಂತ ಮಹಾತ್ಮರ ದಿನಾಚರಣೆಗಳಿಂದ ಅವರ ತತ್ವಾದರ್ಶಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಕಾರ್ಯ ನಡೆದಿದೆ. ಡಾ| ಬಾಬಾಸಾಹೇಬ ಅಂಬೇಡ್ಕರರಿಂದ ರಚಿತ ಭಾರತ ಸಂವಿಧಾನವನ್ನು ಭಾರತೀಯರಾದ ನಾವು ಅಷ್ಟೇ ಅಲ್ಲದೆ ಇಡೀ ಜಗತ್ತೇ ಒಪ್ಪಿಕೊಂಡಿದೆ.
ಪ್ರಧಾನಿ ಮೋದಿ ನೇತೃತ್ವದಲ್ಲಿ ಭಾರತ ವಿಶ್ವ ಗುರುವಾಗಿ ಹೊಮ್ಮಿದೆ. ಭಾರತೀಯ ಕ್ಯಾಲೆಂಡರ್‌ನಂತೆ ಯುಗಾದಿಯಂದು ಹೊಸ ವರ್ಷಾರಂಭ. ಪ್ರಕೃತಿಯಲ್ಲಿ ಬದಲಾವಣೆಯನ್ನು ಹೊಸ ವರ್ಷವಾಗಿ ಆಚರಿಸುವ ಸಂಸ್ಕೃತಿ ನಮ್ಮದು ಎಂದ ಅವರು, ನರೇಗಾದಡಿ 289 ಇದ್ದ ದಿನಗೂಲಿಯನ್ನು 309 ಕ್ಕೆ ಏರಿಕೆ ಮಾಡಿದೆ. ಸಕಾಲಕ್ಕೆ ಮಳೆ ಸುರಿದು ಅನ್ನದಾತ ನಗುಮೊಗದಿಂದರಲು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದರು.
ಆರ್‌ಎಸ್‌ಎಸ್ ಉತ್ತರ ಕರ್ನಾಟಕ ಸಹಪ್ರಾಂತ ಸೇವಾ ಪ್ರಮುಖ ಡಾ. ನರಸಿಂಹ ಕುಲಕರ್ಣಿ ಮಾತನಾಡಿ, ಪರಕೀಯರ ಆಕ್ರಮಣದಿಂದ ನಮ್ಮ ದೇಶದ ಸಂಸ್ಕೃತಿ, ಸಂಪತ್ತು ನಾಶವಾಯಿತು. 1835ರಲ್ಲಿ ಲಾರ್ಡ ಮೆಕಾಲೆ ನಮ್ಮ ಸಂಸ್ಕೃತಿಯನ್ನೇ ತಿರುಚಿ, ಹಬ್ಬವನ್ನು ಮೂಢ ನಂಬಿಕೆ ಎಂದು ಬಿಂಬಿಸಿದನು.
ಅಂದಿನ ಬುದ್ದಿ ಜೀವಿಗಳು ಬ್ರಿಟಿಷರ ಹೇಳಿಕೆ ಒಪ್ಪಿ, ಸ್ವಾತಂತ್ರ್ಯಾ ನಂತರದ ಕಾಂಗ್ರೆಸ್ಸಿಗರು ಅದನ್ನೇ ಅನುಸರಿಸಿದರು. ಜ.1 ರಂದು ಹೊಸ ವರ್ಷಾಚರಣೆ ಮಾಡುವ ಬದಲು ಸಂಸ್ಕೃತಿ ಉಳಿಸುವ ಕಾರ್ಯಕ್ಕೆ ಸ್ವಯಂಪ್ರೇರಿತರಾಗಿ ಇಂದಿನ ಪೀಳಿಗೆ ಮುಂದೆ ಬರಬೇಕಿದೆ. ನಮ್ಮ ಆಚರಣೆಗೆ ವೈಜ್ಞಾನಿಕ ಕಾರಣಗಳಿವೆ ಎಂದರು.
ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯರಿಗಳು ಆಧುನಿಕ ಬದಲಾವಣೆಗಳಿಂದ ಹಳೆ ಸಂಸ್ಕೃತಿಗೆ ಕುಂದು ಬಂದಿದೆ ಎಂದರು.
ಯುಗಾದಿ ಸಂಭ್ರಮದಲ್ಲಿ ನಡೆದ ಮನರಂಜನೆಗಳು ಜನರನ್ನು ರಂಜಿಸಿದವು. ಈ ವೇಳೆ ಸ್ವಾದಿಮಠದ ಶಿವಬಸವ ಶ್ರೀ, ಕಲ್ಮಠದ ಶಿವಲಿಂಗ ಶ್ರೀ, ಮುನವಳ್ಳಿ ಮುರಘೇಂದ್ರ ಶ್ರೀ, ಬೈಲಹೊಂಗಲ ಆರಾದ್ರಿಮಠದ ಮಹಾಂತಯ್ಯ ಶಾಸ್ತ್ರಿಗಳು ಸೇರಿ ಪ್ರಮುಖ ಶ್ರೀಗಳು ಇದ್ದರು. ತಾಪಂ ಇಓ ಯಶವಂತಕುಮಾರ, ತಹಶೀಲ್ದಾರ್ ಪ್ರಶಾಂತ ಪಾಟೀಲ, ಶಿವಾನಂದ ಹೂಗಾರ, ಲಕ್ಷ್ಮಣರಾವ ಕುಲಕರ್ಣಿ, ಜಿ.ಎಸ್. ಶಿಂತ್ರಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಮರಕ್ಕೆ ಕ್ರೂಸರ್ ಢಿಕ್ಕಿ: ಸ್ಥಳದಲ್ಲೇ ಮೂವರ ಸಾವು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Belagavi: ಪೂರ್ಣಾವಧಿ ಅಧಿವೇಶನದಲ್ಲಿ ಸಮಸ್ಯೆಗಳ ಪೂರ್ಣ ಚರ್ಚೆಯಾಗಲಿ: ಡಾ.ಪ್ರಭಾಕರ್ ಕೋರೆ
Belagavi: ಗೆಳೆಯರ ಜೊತೆ ಪಾರ್ಟಿಗೆಂದು ಹೋದ ವ್ಯಕ್ತಿ ಅನುಮಾನಾಸ್ಪದವಾಗಿ ಸಾ*ವು
Belagavi: ಬಾಲಕಿ ಮೇಲೆ ಅತ್ಯಾಚಾರ… ಆರೋಪಿಗೆ 20 ವರ್ಷ ಜೈಲು ಶಿಕ್ಷೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.