ಸಭೆ ಬಹಿಷ್ಕರಿಸಿ ಪ್ರತಿಭಟನೆ
Team Udayavani, Jan 10, 2020, 3:54 PM IST
ಗೋಕಾಕ: ತಹಶೀಲ್ದಾರ್ ಕಚೇರಿ ಅಧಿಕಾರಿಗಳು ಸವರ್ಣೀಯರಿಗೆ ಎಸ್‌ಸಿ ಜಾತಿ ಸರ್ಟಿಫಿಕೇಟ್ ನೀಡುತ್ತಿದ್ದಾರೆ ಎಂದು ಆರೋಪಿಸಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಜನರ ಯೋಗಕ್ಷೇಮ ಹಾಗೂ ಹಿತರಕ್ಷಣಾ ಕುಂದು-ಕೊರತೆ ಸಭೆ ಬಹಿಷ್ಕರಿಸಿ ದಲಿತ ಸಮುದಾಯದ ಮುಖಂಡರು ತಾಪಂ ಸಭಾಭವನ ಎದುರು ಪ್ರತಿಭಟನೆ ನಡೆಸಿದರು.
ನಗರದ ತಾಪಂ ಸಭಾ ಭವನದಲ್ಲಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಜನರ ಯೋಗಕ್ಷೇಮ ಹಾಗೂ ಹಿತರಕ್ಷಣಾ ಕುಂದು-ಕೊರತೆ ಸಭೆ ತಹಶೀಲ್ದಾರ್ ಪ್ರಕಾಶ ಹೊಳೆಪ್ಪಗೋಳ ಅವರ ಅಧ್ಯಕ್ಷತೆಯಲ್ಲಿ ಗುರುವಾರದಂದು ಕರೆಯಲಾಗಿತ್ತು. ಸಭೆಪ್ರಾರಂಭವಾಗುತ್ತಲೇ ಸವರ್ಣೀಯ ಲಿಂಗಾಯತ ಜಂಗಮ ಜನಾಂಗದ ಜನರಿಗೆ ಬೇಡ ಜಂಗಮ ಎಸ್‌ಸಿ ಕೆಟಗೇರಿಯಲ್ಲಿ ತಹಶೀಲ್ದಾರ್ ಕಚೇರಿಯಿಂದ ಸರ್ಟಿಫಿಕೇಟ್ ನೀಡಲಾಗುತ್ತಿದೆ. ಬೆಳಗಾವಿ ಜಿಲ್ಲೆಯಲ್ಲಿ ಬೇಡ ಜಂಗಮ ಜನಾಂಗದವರು ಇಲ್ಲವೇ ಇಲ್ಲ. ಇಂಥ ಪರಿಸ್ಥಿತಿಯಲ್ಲಿ ಬೇಡ ಜಂಗಮ ಸರ್ಟಿಫಿಕೇಟ್ ನೀಡುವದರಿಂದ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಜನಾಂಗದವರ ಹಕ್ಕನ್ನು ಕಸಿದುಕೊಂಡಂತಾಗುತ್ತಿದೆ. ಈ ಬಗ್ಗೆ ಮೂಡಲಗಿ ಹಾಗೂ ಗೋಕಾಕ ತಹಶೀಲ್ದಾರ್‌ಗೆ ಸರ್ಟಿಫಿಕೇಟ್ ನೀಡದಂತೆ ಮನವಿ ಮಾಡಿಕೊಂಡರೂ ಲಂಚ ಪಡೆದು ಸರ್ಟಿಫಿಕೇಟಗಳನ್ನು ನೀಡಲಾಗುತ್ತಿದೆ ಎಂದು ಆರೋಪಿಸಿ ಸಭೆ ಬಹಿಷ್ಕರಿಸಿ ಹೊರ ನಡೆದರು.
ನಂತರ ತಾಪಂ ಕಾರ್ಯಾಲಯದ ಮುಂದೆ ಕುಳಿತು ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ದಲಿತ ಮುಖಂಡರಾದ ರಮೇಶ ಮಾದರ, ಲಕ್ಷ್ಮಣ ತೆಳಗಡೆ, ರಮೇಶ ಸಣ್ಣಕ್ಕಿ, ಮನೋಹರ ಅಜ್ಜನಕಟ್ಟಿ,ಸುಧಾ ಮುರಕುಂಬಿ, ಸುಂದ್ರವ್ವ ಕಟ್ಟಿಮನಿ, ದೊಡ್ಡವ್ವ ತೆಳಗೇರಿ, ಶಾಬು ಸಣ್ಣಕ್ಕಿ, ಬಬಲೆಪ್ಪ ಮಾದರ, ಹೊಸಮನಿ ಸೇರಿದಂತೆ ಅನೇಕರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Liquor: ಮದ್ಯ ಬಂದ್ ಗೆ ಬೆಂಬಲವಿಲ್ಲ: ಪ್ರವಾಸೋದ್ಯಮ ಹೋಟೆಲ್ ಮಾಲೀಕರ ಸಂಘ
Belgavi; ವೇಶ್ಯಾವಾಟಿಕೆ ಆರೋಪ: ತಾಯಿ, ಮಗಳನ್ನು ರಸ್ತೆಗೆ ಎಳೆದು ಹಲ್ಲೆ!
Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!
ಬೆಳಗಾವಿ: ಮಾನವ ಕಳ್ಳ ಸಾಗಾಣಿಕೆ-ಜೀತ ಪದ್ಧತಿ ದೊಡ್ಡ ಸಮಸ್ಯೆ
Belagavi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.