ರಾಜಿ ಸಂಧಾನದಿಂದ ಪ್ರತಿಭಟನೆ ವಾಪಸ್
•ತಹಶೀಲ್ದಾರ್ ವರ್ತನೆಗೆ ವಕೀಲರ ಅಸಮಾಧಾನ
Team Udayavani, Jul 17, 2019, 2:10 PM IST
ಹುಕ್ಕೇರಿ: ವಕೀಲರ ಸಭಾಭವದಲ್ಲಿ ತಹಶೀಲ್ದಾರ್ ರೇಷ್ಮಾ ತಾಳಿಕೋಟಿ ಮಾತನಾಡಿದರು.
ಹುಕ್ಕೇರಿ: ಹುಕ್ಕೇರಿ ತಹಶೀಲ್ದಾರ್ ವರ್ತನೆ ಖಂಡಿಸಿ ನ್ಯಾಯವಾದಿಗಳು ಹಮ್ಮಿಕೊಂಡಿದ್ದ ಪ್ರತಿಭಟನೆ ಹಿರಿಯ ವಕೀಲರ ಸಂಧಾನದ ಮೂಲಕ ಬಗೆಹರಿದಿದೆ.
ಹಲವಾರು ತಿಂಗಳಿನಿಂದ ಹುಕ್ಕೇರಿ ತಹಶೀಲ್ದಾರರಾಗಿ ಕಾರ್ಯನಿರ್ವಹಿಸುತ್ತಿರುವ ರೇಷ್ಮಾ ತಾಳಿಕೋಟಿ ವಕೀಲರ ಜತೆಗೆ ಸರಿಯಾಗಿ ಸ್ಪಂದಿಸದೇ ಗಂಟೆಗಟ್ಟಲೇ ಬಾಗಿಲಲ್ಲಿ ನಿಲ್ಲಿಸುವುದು, ಕಕ್ಷಿದಾರರ ಮುಂದೆ ವಕೀಲರಿಗೆ ಅವಮಾನ ಮಾಡುವ ರೀತಿಯಲ್ಲಿ ವರ್ತಿಸುವುದು ಸೇರಿದಂತೆ ಇನ್ನಿತರ ವಿಷಯಗಳ ಬಗ್ಗೆ ವಕೀಲರು ತಹಶೀಲ್ದಾರ್ ವಿರುದ್ಧ ಮಂಗಳವಾರ ಕೋರ್ಟ್ ಕಲಾಪ ಬಹಿಷ್ಕರಿಸಿ ಜಿಲ್ಲಾಧಿಕಾರಿಗೆ ಪ್ರತಿಭಟನೆ ಮೂಲಕ ಮನವಿ ಸಲ್ಲಿಸಲು ತೀರ್ಮಾನಿಸಿದ್ದರು. ಅದರೆ ಕೆಲಹಿರಿಯ ವಕೀಲರು ಮಧ್ಯಸ್ಥಿಕೆ ವಹಿಸಿ ತಹಶೀಲ್ದಾರ್ ಅವರನ್ನು ಸಂಘದ ಸಭಾಭವನದಲ್ಲಿ ಮಾತುಕತೆ ನಡೆಸುತ್ತಿರುವಾಗ ಕೆಲ ವಕೀಲರು ಆಕ್ರೋಶ ವ್ಯಕ್ತಪಡಿಸಿದರು.
ಹಿರಿಯ ನ್ಯಾಯವಾದಿಗಳಾದ ರಾಮಚಂದ್ರ ಜೋಶಿ, ಪ್ರಕಾಶ ಮುತಾಲಿಕ ಬಿ.ವಿ. ಪಾಸಪ್ಪಗೋಳ ಮಾತನಾಡಿ, ನಾವೂ ಕೂಡ ಸಾರ್ವಜನಿಕರ ಸೇವೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ತಹಶೀಲ್ದಾರರಿಗೆ ಗೌರವ ನೀಡಿದ್ದೇವೆ. ಆದರೆ ತಾವು ಈ ರೀತಿ ವಕೀಲರ ವೃತ್ತಿಗೆ ಅವಮಾನಿಸುತ್ತಿರುವುದು ಸರಿಯಲ್ಲ. ಜನತೆಗೆ ನ್ಯಾಯ ದೊರಕಿಸುವ ಬದಲು ಮುಂದಿನ ಹಂತಕ್ಕೆ ಮಾಡುತ್ತಿರುವುದರಿಂದ ಕಕ್ಷಿದಾರರಿಗೆ ತೊಂದರೆಯಾಗುತ್ತದೆ. ಅಲ್ಲದೆ ನ್ಯಾಯಾಲದ ಪ್ರಕರಣದಲ್ಲಿ ಕ್ಷಕಿದಾರೊಡನೆ ನೇರವಾಗಿ ಚರ್ಚಿಸುವುದು ತಪ್ಪು. ಇದು ಹಲವು ಅನುಮಾನಕ್ಕೆ ಆಸ್ಪದ ನೀಡುತ್ತದೆ ಎಂದು ಹೇಳಿದರು.
ತಹಶೀಲ್ದಾರ್ ರೇಷ್ಮಾ ತಾಳಿಕೋಟಿ ಮಾತನಾಡಿ, ತಾವು ಉದ್ದೇಶಪೂರ್ವಕವಾಗಿ ವಕೀಲರನ್ನು ಅವಮಾನಿಸುವುದಾಗಲಿ ಅಥವಾ ಸಾರ್ವಜನಿರ ಮುಂದೆ ಅಸಭ್ಯವಾಗಿ ವರ್ತಿಸಿ ಮಾತನಾಡಿಲ್ಲ ಎಂದ ಅವರು, ಇನ್ನು ಮುಂದೆ ಹೀಗಾಗದಂತೆ ಎಚ್ಚರ ವಹಿಸುತ್ತೇನೆಂದು ಕ್ಷಮೆಯಾಚಿಸಿದರು.
ವಕೀಲರ ಸಂಘದ ಅಧ್ಯಕ್ಷ ಡಿ.ಕೆ. ಅವರಗೋಳ, ಉಪಾಧ್ಯಕ್ಷ ಎ.ಕೆ. ಹುಲಿಕಟ್ಟಿ, ಕಾರ್ಯದರ್ಶಿ ಎಚ್.ಎಲ್. ಪಾಟೀಲ, ಸದಸ್ಯ ಡಿ.ಐ. ಅಲಗುರಿ, ಎಸ್.ಎ. ಪಾಟೀಲ, ಆರ್.ಪಿ. ಜಳಕಿ, ಎಂ.ಎಂ. ಪಾಟೀಲ, ಎಸ್.ಎಸ್. ನಾಗನೂರಿ, ಲಿಂಗರಾಜ ನಾಯಿಕ, ಮಂಜು ಗಸ್ತಿ, ಶಿವಾನಂದ ಮರಿನಾಯಕ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mrinal Hebbalkar: ನನ್ನ ತಾಯಿಗೆ ರವಿ ಬಳಸಿದ ಪದದಿಂದ ನೋವಾಗಿದೆ: ಮೃಣಾಲ್
Belgavi: ಸಿ.ಟಿ.ರವಿ ಪ್ರಕರಣ ಮುಂದುವರಿಸುವಲ್ಲಿ ಅರ್ಥವೇ ಇಲ್ಲ: ಸಚಿವ ಸತೀಶ್ ಜಾರಕಿಹೊಳಿ
Belagavi: ನ್ಯಾಯಾಧೀಶರ ಮುಂದೆ ಪೊಲೀಸ್ ದೌರ್ಜನ್ಯ ಬಿಚ್ಚಿಟ್ಟ ಸಿ.ಟಿ. ರವಿ
Belagavi: ಎಲ್ಲದಕ್ಕೂ ಪೂರ್ಣವಿರಾಮ ಬೀಳಲಿದೆ, ನನಗೂ ಒಂದು ಕಾಲ ಬರುತ್ತದೆ….. : ಸಿ.ಟಿ.ರವಿ
Belagavi: ಸಿ.ಟಿ.ರವಿ ಬಂಧನ ಪ್ರಕರಣ ಬೆಂಗಳೂರಿಗೆ ಸ್ಥಳಾಂತರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ
Puttur: ತೆಂಕಿಲದಲ್ಲಿ ರಿಕ್ಷಾ ಅಪಘಾತ: ಚಾಲಕ ಸಾವು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.