ಬಸ್ ಸೌಲಭ್ಯ ಕಲ್ಪಿಸುವಂತೆ ಪ್ರತಿಭಟನೆ
•ರಸ್ತೆ ತಡೆ ನಡೆಸಿದ ವಿದ್ಯಾರ್ಥಿಗಳು•ಸಮಸ್ಯೆಗೆ ಸ್ಪಂದಿಸದ ಅಧಿಕಾರಿಗಳ ವಿರುದ್ಧ ಆಕ್ರೋಶ
Team Udayavani, Jul 24, 2019, 4:22 PM IST
ಮೂಡಲಗಿ: ಸಮರ್ಪಕ ಬಸ್ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ವಿದ್ಯಾರ್ಥಿಗಳು ಹಳ್ಳೂರು ಗ್ರಾಮದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.
ಮೂಡಲಗಿ: ಸಮರ್ಪಕ ಬಸ್ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ವಿದ್ಯಾರ್ಥಿಗಳು ಹಳ್ಳೂರು ಗ್ರಾಮದಲ್ಲಿ ರಸ್ತೆ ತಡೆ ನಡೆಸಿ ಮಂಗಳವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾ ಸಂಚಾಲಕ ಶ್ರೀಶೈಲ ಅಂಗಡಿ ಮಾತನಾಡಿ, ಮೂಡಲಗಿ ತಾಲೂಕಿನ ಹಳ್ಳೂರ, ಶಿವಾಪುರ, ಖಾನಟ್ಟಿ, ಮುನ್ಯಾಳ, ಕಪ್ಪಲಗುದ್ದಿ ಹಾಗೂ ಸೈದಾಪುರ ಗ್ರಾಮದ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಮೂಡಲಗಿ ಹಾಗೂ ಮಹಾಲಿಂಗಪೂರಕ್ಕೆ ಹೋಗಲು ಸಮರ್ಪಕ ಬಸ್ ಸೌಲಭ್ಯ ಇಲ್ಲದರಿಂದ ನಿತ್ಯ ಸಮಸ್ಯೆಯಾಗುತ್ತಿದೆ. ಇಲ್ಲಿರುವ ಸಮಸ್ಯೆ ಕುರಿತು ಸಾರಿಗೆ ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಸಲ್ಲಿಸಿದರೂ ಯಾವುದೇ ರೀತಿ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಹಳ್ಳೂರ ಸುತ್ತಮುತ್ತಿನ ಗ್ರಾಮಗಳ ವಿದ್ಯಾರ್ಥಿಗಳಿಗೆ ಸಮರ್ಪಕ ಬಸ್ ಇಲ್ಲದರಿಂದ ವಿದ್ಯಾರ್ಥಿಗಳು ಶಾಲೆ -ಕಾಲೇಜಿಗಳಿಗೆ ಹೋಗದೆ ಮನಗೆ ವಾಪಸ್ ಬರುತ್ತಿದ್ದಾರೆ. ಶೀಘ್ರವೇ ವಿದ್ಯಾರ್ಥಿಗಳ ವಿದ್ಯಾಭ್ಯಾಸ ದೃಷ್ಟಿಯಿಂದ ಗ್ರಾಮಗಳಿಗೆ ಬಸ್ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಯುವ ಸಂಘಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಸಿದ್ದಣ್ಣ ದುರದುಂಡಿ ಮಾತನಾಡಿ, ಮೂಡಲಗಿಯಿಂದ ಹಳ್ಳೂರ ಮಾರ್ಗವಾಗಿ ಮಹಾಲಿಂಗಪುರಕ್ಕೆ ದಿನನಿತ್ಯ 3 ಬಸ್ 12 ಬಾರಿ ಸಂಚರಿಸುತ್ತಿದ್ದವು. ಮೂಡಲಗಿ ಮುನ್ಯಾಳ ದಿನನಿತ್ಯ 1 ಬಸ್ 5 ಬಾರಿ ಸಂಚರಿಸುತ್ತಿತ್ತು ಹಾಗೂ ಗೋಕಾಕ-ಜಮಖಂಡಿ ದಿನನಿತ್ಯ 2 ಬಸ್ 4 ಬಾರಿ ಸಂಚರಿಸುತ್ತಿದ್ದವು. ಆದರೆ ಕೆಲವು ದಿನಗಳ ಹಿಂದೆ ಈ ಬಸುಗಳು ಖಡಿತಗೊಳಿಸಿರುವದರಿಂದ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ತೊಂದರೆ ಅನುಭವಿಸುವಂತಾಗಿದೆ ಎಂದು ಆರೋಪಿಸಿದರು.
ಪ್ರತಿಭಟಣಾ ಸ್ಥಳಕ್ಕೆ ಆಗಮಿಸಿದ ಸಾರಿಗೆ ಇಲಾಖೆಯ ಗೋಕಾಕ ಘಟಕದ ಡಿಎಂಇ ಭಾರತಿ ಲಮಾಣಿ ಮಾತನಾಡಿ, ಇಲ್ಲಿರುವ ಗ್ರಾಮಗಳಿಗೆ ಶೀಘ್ರವೇ ಬಸ್ ಸೌಲಭ್ಯ ಕಲ್ಪಿಸಲಾಗುವುದು ಎಂದು ಹೇಳಿದ ಬಳಿಕವೇ ಪ್ರತಿಭಟನೆ ಹಿಂಪಡೆಯಲಾಯಿತು.
ಪ್ರತಿಭಟನೆಯಲ್ಲಿ ಮಲ್ಲು ಬೋಳನವರ ಸೇರಿದಂತೆ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥತರು ಇದ್ದರು.
ವೇಳೆ ಯುವ ಧುರೀಣ ಭೀಮಶಿ ಭರಮಣ್ಣವರ ಮಾತನಾಡಿ, ತಪಸಿ, ಕೆಮ್ಮನಕೂಳ್ಳ, ಸಜ್ಜಿಹಾಳ ಹಾಗೂ ನಿಂಗಾಪೂರ ಗ್ರಾಮಗಳಿಗೆ ಸಮರ್ಪಕ ಬಸ್ ಇಲ್ಲದರಿಂದ ನಿತ್ಯ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತಿದೆ. ಬಸ್ ಇಲ್ಲದರಿಂದ ಖಾಸಗಿ ವಾಹನಗಳತ್ತ ಮುಖ ಮಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ಪ್ರಭುದೇವ ಮಡಿವಾಳರ, ಈ ಕುರಿತು ಈಗಾಗಲೇ ನಮ್ಮ ಸಿಬ್ಬಂದಿಯೊಂದಿಗೆ ಚರ್ಚೆ ಮಾಡಲಾಗಿದ್ದು, ಅತಿ ಶೀಘ್ರದಲ್ಲಿ ತಪಸಿ, ಕೆಮ್ಮನಕೂಳ್ಳ ಹಾಗೂ ನಿಂಗಾಪೂರ ಗ್ರಾಮಗಳ ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಕಲ್ಪಿಸುವದಾಗಿ ಹೇಳಿದರು.
ಈ ವೇಳೆ ಪವನ ಮಹಾಲಿಂಗಪುರ, ಶಂಕರ ಭರಮನ್ನವರ, ಲಕ್ಷ್ಮಣ ನಾಯಕ, ಮಲ್ಲಪ್ಪ ದಂಡಿನ, ಮಂಜು ಪಾಟೀಲ, ಮದಗೊಂಡ ಬಡಿಗೇರ, ದುಂಡಪ್ಪ ಕಿಚಡಿ, ಸಿದ್ದಣ್ಣ ನಾಯಕ, ಬಸು ಕುರೇರ, ವಿಠuಲ ನಾಯಕ, ಭೀಮಪ್ಪ ಕುಲಗೋಡ, ರಮೇಶ ಕೊಪ್ಪದ ಸೇರಿದಂತೆ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಮರಕ್ಕೆ ಕ್ರೂಸರ್ ಢಿಕ್ಕಿ: ಸ್ಥಳದಲ್ಲೇ ಮೂವರ ಸಾವು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Belagavi: ಪೂರ್ಣಾವಧಿ ಅಧಿವೇಶನದಲ್ಲಿ ಸಮಸ್ಯೆಗಳ ಪೂರ್ಣ ಚರ್ಚೆಯಾಗಲಿ: ಡಾ.ಪ್ರಭಾಕರ್ ಕೋರೆ
Belagavi: ಗೆಳೆಯರ ಜೊತೆ ಪಾರ್ಟಿಗೆಂದು ಹೋದ ವ್ಯಕ್ತಿ ಅನುಮಾನಾಸ್ಪದವಾಗಿ ಸಾ*ವು
Belagavi: ಬಾಲಕಿ ಮೇಲೆ ಅತ್ಯಾಚಾರ… ಆರೋಪಿಗೆ 20 ವರ್ಷ ಜೈಲು ಶಿಕ್ಷೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.