ಪರಿಹಾರ ಕಲ್ಪಿಸಿ-ಇಲ್ಲವಾದ್ರೆ ವಿಷ ಕೊಡಿ
Team Udayavani, Oct 23, 2019, 8:59 AM IST
ರಾಮದುರ್ಗ: ತಾಲೂಕಿನಲ್ಲಿ ಸುರಿದ ಮೆಳೆಯಿಂದಾಗಿ ಹಾಗೂ ಮತ್ತೆ ಉಂಟಾದ ಮಲಪ್ರಭಾ ನದಿ ಪ್ರವಾಹದಿಂದ ಹಾನಿಗೊಳಗಾದ ಪ್ರದೇಶಗಳ ಪರಿಶೀಲನೆ ಸೇರಿದಂತೆ ತಾಲೂಕಿನ ಸುರೇಬಾನ ಹಾಗೂ ರೇವಡಿಕೊಪ್ಪ ಗ್ರಾಮದಲ್ಲಿ ನಿರಾಶ್ರಿತರಿಗೆ ತೆರೆಯಲಾದ ಕಾಳಜಿ ಕೇಂದ್ರಗಳಿಗೆ ಮಂಗಳವಾರ ಶಾಸಕ ಮಹದೇವಪ್ಪ ಯಾದವಾಡ ಭೇಟಿ ನೀಡಿ ಸಂತ್ರಸ್ತರ ಕುಂದು ಕೊರತೆಗಳನ್ನು ವಿಚಾರಿಸಿದರು.
ಸುರೇಬಾನ ಎಪಿಎಂಸಿ ಆವರಣದಲ್ಲಿ ಹಂಪಿಹೋಳಿ ಗ್ರಾಮದ ಸಂತ್ರಸ್ಥರಿಗೆ ತೆರೆಯಲಾದ ಕಾಳಜಿ ಕೇಂದ್ರಕ್ಕೆ ಶಾಸಕರು ಭೇಟಿ ನೀಡುತ್ತಿದ್ದಂತೆ ಅಲ್ಲಿನ ಸಂತ್ರಸ್ತರು ಮೂರು ತಿಂಗಳಲ್ಲಿ ಮೂರು ಬಾರಿ ಪ್ರವಾಹ ಉಂಟಾಗಿ ಚಿಕ್ಕ ಮಕ್ಕಳು, ವಯೋವೃದ್ಧರೊಂದಿಗೆ ಬೀದಿಯಲ್ಲಿ ಜೀವನ ನಡೆಸುವುದು ಕಷ್ಟಕರವಾಗಿದೆ. ಹೀಗಾದರೆ ನಮ್ಮ ಬದುಕು ಕಟ್ಟಿಕೊಳ್ಳುವುದು ಹೇಗೆ? ನಮಗೆ ಶೀಘ್ರ ಪರಿಹಾರ ಕಲ್ಪಿಸಿ, ಇಲ್ಲವಾದಲ್ಲಿ ವಿಷ ಕೊಡಿ ಎಂದು ಸಂತ್ರಸ್ತರು ಶಾಸಕ ಮಹದೇವಪ್ಪ ಯಾದವಾಡ ಎದುರು ತಮ್ಮ ಅಳಲು ತೊಡಿಕೊಂಡರು.
ಶಾಸಕ ಮಹದೇವಪ್ಪ ಯಾದವಾಡ ಮಾತನಾಡಿ, ಪ್ರವಾಹಕ್ಕೆ ತುತ್ತಾದ ಪ್ರದೇಶಗಳ ಜನತೆಗೆ ನೆರವಾಗಲು ಸರ್ಕಾರ ಸ್ಪಂದಿಸಿದೆ. ಸಂತ್ರಸ್ತರ ಬೆನ್ನಿಗೆ ರಾಜ್ಯ ಸರಕಾರವಿದೆ. ನಿರಾಶ್ರಿತರು ಭಯಪಡುವುದು ಬೇಡ ಎಂದರು. ಈ ವೇಳೆ ಜಿಪಂ ಸದಸ್ಯ ರೇಣಪ್ಪ ಸೋಮಗೊಂಡ,ದ್ಯಾವಪ್ಪ ಬೆಳವಡಿ, ಶಿವಪ್ಪ ಮೇಟಿ, ಸುರೇಬಾನ ಗ್ರಾಪಂ ಅಧ್ಯಕ್ಷ ಮಹಾದೇವಪ್ಪ ಮದಕಟ್ಟಿ, ಸಂಗನಗೌಡ ಪಾಟೀಲ, ತಹಶೀಲ್ದಾರ್ ಗಿರೀಶ ಸ್ವಾ ಧಿ, ತಾಪಂ ಇಒ ಬಸಪ್ಪ ಕುರ್ತಕೋಟಿ, ಪಶು ವೈದ್ಯಾಧಿ ಕಾರಿ ಗಿರೀಶ ಪಾಟೀಲ, ಪಿಎಸ್‌ಐ ಆನಂದ ಡೋಣಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಮರಕ್ಕೆ ಕ್ರೂಸರ್ ಢಿಕ್ಕಿ: ಸ್ಥಳದಲ್ಲೇ ಮೂವರ ಸಾವು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Belagavi: ಪೂರ್ಣಾವಧಿ ಅಧಿವೇಶನದಲ್ಲಿ ಸಮಸ್ಯೆಗಳ ಪೂರ್ಣ ಚರ್ಚೆಯಾಗಲಿ: ಡಾ.ಪ್ರಭಾಕರ್ ಕೋರೆ
Belagavi: ಗೆಳೆಯರ ಜೊತೆ ಪಾರ್ಟಿಗೆಂದು ಹೋದ ವ್ಯಕ್ತಿ ಅನುಮಾನಾಸ್ಪದವಾಗಿ ಸಾ*ವು
Belagavi: ಬಾಲಕಿ ಮೇಲೆ ಅತ್ಯಾಚಾರ… ಆರೋಪಿಗೆ 20 ವರ್ಷ ಜೈಲು ಶಿಕ್ಷೆ
MUST WATCH
ಹೊಸ ಸೇರ್ಪಡೆ
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
Chikkamagaluru: ಅಪರಿಚಿತ ವಾಹನ ಡಿಕ್ಕಿಯಾಗಿ ಕಂಡಕ್ಟರ್ ಸಾವು
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
ನವೆಂಬರ್ 26-30: ಧರ್ಮಸ್ಥಳ ಲಕ್ಷದೀಪೋತ್ಸವ ಸಂಭ್ರಮ
Waqf Protest: ರಾಜ್ಯ ಸರ್ಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ: ದಾವಣಗೆರೆಯಲ್ಲಿ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.