ಎಂಇಎಸ್‌ನಿಂದ ಶಿವಾಜಿ ಶುದ್ಧೀಕರಣ; ಶಿವಾಜಿ ಮಹಾರಾಜರಿಗಾಗಿ ರಾಜಕೀಯ ಯುದ್ಧ
ಬೆಳಗಾವಿಯಲ್ಲಿ ಎಂಇಎಸ್ ನಾಯಕರು ಒಂದಿಲ್ಲೊಂದು ಕಿತಾಪತಿ ಮಾಡಿಕೊಂಡೇ ಬರುತ್ತಾರೆ.
Team Udayavani, Mar 11, 2023, 6:26 PM IST
ಬೆಳಗಾವಿ: ರಾಜಹಂಸಗಡ ಕೋಟೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿ ನಿರ್ಮಾಣ ಹಲವು ರಾಜಕೀಯ ಕಿತ್ತಾಟಕ್ಕೆ ಕಾರಣವಾಗಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ಪ್ರತ್ಯೇಕವಾಗಿ ಉದ್ಘಾಟನೆ ಮಾಡಿದ ಬೆನ್ನಲ್ಲೇ ಈಗ ಮಹಾರಾಷ್ಟ್ರ ಏಕೀಕರಣ ಸಮಿತಿ ಮೂರ್ತಿ ಶುದ್ಧೀಕರಣ ಮಾಡಲು ಹೊರಟಿದ್ದು, ಮತ್ತೂಂದು ಸಂಘರ್ಷಕ್ಕೆ ಎಡೆ ಮಾಡಿಕೊಟ್ಟಿದೆ.
ಬೆಳಗಾವಿ ಗ್ರಾಮೀಣ ಕ್ಷೇತ್ರದ ರಾಜಹಂಸಗಡ ಕೋಟೆ ಆವರಣದಲ್ಲಿ ನಿರ್ಮಿಸಿರುವ ಛತ್ರಪತಿ ಶಿವಾಜಿ ಮಹಾರಾಜರ ಕರ್ನಾಟಕದ ಅತಿ ಎತ್ತರದ 50 ಅಡಿ ಪ್ರತಿಮೆ ನಿರ್ಮಾಣ ವಿಷಯಕ್ಕೆ ಸಂಬಂಧಿಸಿದಂತೆ ಈಗ ಎಂಇಎಸ್ ಎಂಟ್ರಿ ಆಗಿದೆ. ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವುದರಿಂದ ಶಿವಾಜಿ ಮಹಾರಾಜರ ಮೂರ್ತಿ ಬಳಸಿಕೊಂಡು ವೋಟು ಗಳಿಸುವ ಹುನ್ನಾರ ಇದರಲ್ಲಿ ಅಡಗಿದ್ದು, ಮತ ಗಳಿಕೆ ಲೆಕ್ಕಾಚಾರದಲ್ಲಿ ಮೂರೂ ಪಕ್ಷಗಳು ತೊಡಗಿಕೊಂಡಿವೆ. ಈಗ ಎಂಇಎಸ್ ಮಾ. 19ರಂದು ರಾಜಹಂಸಗಡದಲ್ಲಿ ಮೂರ್ತಿ ಶುದ್ಧೀಕರಣ ಮಾಡುತ್ತಿದೆ.
ಎರಡೆರಡು ಬಾರಿ ಅನಾವರಣ: ಸರ್ಕಾರದ ಅನುದಾನದಲ್ಲಿ ಮೂರ್ತಿ ನಿರ್ಮಾಣವಾಗಿದೆ ಎಂಬ ಕಾರಣಕ್ಕೆ ಮಾ.2ರಂದು ಸಿಎಂ ಬಸವರಾಜ ಬೊಮ್ಮಾಯಿ ಲೋಕಾರ್ಪಣೆಗೊಳಿಸಿದರು. ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಜಿದ್ದಿಗೆ ಬಿದ್ದು ಮುಖ್ಯಮಂತ್ರಿ ಅವರನ್ನು ಕರೆಸಿ ಉದ್ಘಾಟನೆ ಮಾಡಿಸಿದರು. ಈ ಕಾರ್ಯಕ್ರಮಕ್ಕೆ ಶಾಸಕಿ ಹೆಬ್ಬಾಳಕರ ಗೈರು ಹಾಜರಾಗಿದ್ದರು.
ಇದರ ಬೆನ್ನಲ್ಲೇ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಮಾ.4 ಹಾಗೂ 5ರಂದು ಅದ್ಧೂರಿಯಾಗಿ ಮೂರ್ತಿ ಅನಾವರಣ ಮಾಡುವ ಮೂಲಕ ಬಿಜೆಪಿಗೆ ಸೆಡ್ಡು ಹೊಡೆದರು. ಕೋಟೆ ತುಂಬೆಲ್ಲ ವಿದ್ಯುತ್ ಅಲಂಕಾರ, ವರ್ಣರಂಜಿತ ಸಮಾರಂಭ ಕಾಂಗ್ರೆಸ್ ನಾಯಕರಿಂದ ಅಪಾರ ಶಿವಭಕ್ತರ ಸಮ್ಮುಖದಲ್ಲಿ ಉದ್ಘಾಟನೆ ಮಾಡಿದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ವಿಪಕ್ಷ ನಾಯಕ ಸಿದ್ದರಾಮಯ್ಯ ಗೈರು ಉಳಿದರು. ರಾಜಕೀಯ ಕೆಸರೆರಚಾಟ ಗರಿಗೆದರುತ್ತಿದ್ದಂತೆ ನಾವೂ ಯಾರಿಗೂ ಕಮ್ಮಿ ಇಲ್ಲ ಎಂಬಂತೆ ಎಂಇಎಸ್ ನಾಯಕರು ಮೊನ್ನೆಯಷ್ಟೇ ಸಭೆ ನಡೆಸಿ ಮಾ.19ರಂದು ಶಿವಾಜಿ ಮಹಾರಾಜ ಮೂರ್ತಿ ಶುದ್ಧೀಕರಣ ಮಾಡಲು ಹೊರಟಿದೆ. ಬಿಜೆಪಿ-ಕಾಂಗ್ರೆಸ್‌ನವರು ಎರಡೆರಡು ಬಾರಿ ಪ್ರತಿ ಉದ್ಘಾಟಿಸುವ ಮೂಲಕ ಶಿವಾಜಿ ಮಹಾರಾಜರಿಗೆ ಅವಮಾನ ಮಾಡಿದ್ದು, ಗೋ ಮೂತ್ರ ಸೇರಿದಂತೆ ಧಾರ್ಮಿಕ ವಿಧಿ ವಿಧಾನ ನಡೆಸಿ ಶುದ್ಧೀಕರಣ ಮಾಡಲಿದ್ದಾರೆ.
ಮರಾಠಿಗರ ಓಲೈಕೆಗೆ ಕಸರತ್ತು: ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಮರಾಠಾ ಸಮುದಾಯದ ಮತಗಳು ನಿರ್ಣಾಯಕವಾಗಿದ್ದು, ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿ ಮೂಲಕ ಈ ಮತ ಸೆಳೆಯುವ ತಂತ್ರ ಬಿಜೆಪಿ-ಕಾಂಗ್ರೆಸ್ ಹಾಗೂ ಎಂಇಎಸ್ ಲೆಕ್ಕಾಚಾರ ನಡೆಸಿವೆ. ಈ ನಿಟ್ಟಿನಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಕ್ಷೇತ್ರದಲ್ಲಿ ಬರುವ ಈ ಕೋಟೆ ನಿರ್ಮಾಣದ ಹೊಣೆ ಹೊತ್ತುಕೊಂಡು ಹೆಬ್ಟಾಳಕರ ಸರ್ಕಾರದಿಂದ ಹಣ ತಂದು ಅಭಿವೃದ್ಧಿ ಮಾಡಿಸಿದ್ದಾರೆ. ಇಡೀ ಕೋಟೆಯ ಜೀರ್ಣೋದ್ಧಾರ ಮಾಡಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಅನುದಾನ ತಂದಿದ್ದಾರೆ. ಇದೆಲ್ಲದರ ಶ್ರೇಯಸ್ಸು ತಮಗೇ ಹೋಗಬೇಕೆಂಬ ಉದ್ದೇಶದಿಂದ ಹೆಬ್ಟಾಳಕರ ಅಪಾರ ಜನಸ್ತೋಮ ಸೇರಿಸಿ ಪ್ರತಿಮೆ ಲೋಕಾರ್ಪಣೆಗೊಳಿಸಿದ್ದಾರೆ.
ಹೆಬ್ಬಾಳಕರ ಬದ್ಧ ವೈರಿ ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಅವರಿಗೆ ಈ ವಿಷಯ ಗೊತ್ತಾಗುತ್ತಿದ್ದಂತೆ ಸರ್ಕಾರದ ಶಿಷ್ಟಾಚಾರ ಪ್ರಕಾರವೇ ಮೂರ್ತಿ ಲೋಕಾರ್ಪಣೆಗೆ ಸಿದ್ಧತೆ ಮಾಡಿಕೊಂಡು ಸಿಎಂ ಬೊಮ್ಮಾಯಿ ಮನವೊಲಿಸಿ ಕರೆಸುವ ಮೂಲಕ ಹಠ ಸಾ ಧಿಸಿದರು. ಹೆಬ್ಟಾಳಕರ ಅವರೂ ಶಿವಾಜಿ ಮಹಾರಾಜರ ವಂಶಸ್ಥ ಸಂಭಾಜಿ ರಾಜೇ ಭೋಸಲೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ, ಮಹಾರಾಷ್ಟ್ರದ ಕಾಂಗ್ರೆಸ್ ಶಾಸಕರಾದ ಸತೇಜ್(ಬಂಟಿ) ಪಾಟೀಲ
ಹಾಗೂ ಧೀರಜ್ ದೇಶಮುಖ ಅವರನ್ನು ಕರೆಸಿ ಅಭೂತಪೂರ್ವ ಕಾರ್ಯಕ್ರಮ ನಡೆಸಿದ್ದರು.
ರಾಜಕೀಯ ಲಾಭಕ್ಕಾಗಿ ಎಂಇಎಸ್ ಹುನ್ನಾರ
ಬೆಳಗಾವಿಯಲ್ಲಿ ಎಂಇಎಸ್ ನಾಯಕರು ಒಂದಿಲ್ಲೊಂದು ಕಿತಾಪತಿ ಮಾಡಿಕೊಂಡೇ ಬರುತ್ತಾರೆ. ಚುನಾವಣೆ ಸಮೀಪಿಸಿದಾಗಲಂತೂ ಕನ್ನಡ-ಮರಾಠಿ ಭಾಷಿಕರ ಸೌಹಾರ್ದತೆ ಹಾಳು ಮಾಡಿ ರಾಜಕೀಯ ಲಾಭ ಪಡೆಯುವುದು ಎಂಇಎಸ್‌ನ ಅಜೆಂಡಾ. ರಾಜಕೀಯವಾಗಿ ಸಂಪೂರ್ಣ ನೆಲಕಚ್ಚಿರುವ ಎಂಇಎಸ್ ವಿಧಾನಸಭೆಯಲ್ಲಿ ಗೆಲ್ಲಬೇಕೆಂಬ ದುರಾಸೆಯಿಂದ ವಿಷ ಬೀಜ ಬಿತ್ತುತ್ತಿದೆ. ಹೀಗಾಗಿ ಮೂರ್ತಿ ಶುದ್ಧೀಕರಣ ನೆಪದಲ್ಲಿ ರಾಜಕೀಯ ಸಂಘರ್ಷಕ್ಕೆ ಮುಂದಾಗಿದೆ.
ಎಂಇಎಸ್ ನಾಯಕರು ಶಿವಾಜಿ ಮಹಾರಾಜರನ್ನು ಶುದ್ಧೀಕರಣ ಮಾಡುವ ಬದಲು ತಮ್ಮ ಮನಸ್ಸು ಶುದ್ಧ ಮಾಡಿಕೊಳ್ಳಲಿ. ರಾಜಹಂಸಗಡ ಶಿವಾಜಿ ಮಹಾರಾಜರ ಪ್ರತಿಮೆಯನ್ನು ಶಿವಾಜಿ ವಂಶಸ್ಥರಾದ ಸಂಭಾಜಿರಾಜೇ ಭೋಸಲೆ ಶಾಸ್ತ್ರೋಕ್ತವಾಗಿ ಅನಾವರಣ ಮಾಡಿದ್ದಕ್ಕೆ ಶುದ್ಧೀಕರಣ
ಮಾಡುತ್ತಿದ್ದಾರಾ?. ಕ್ಷೇತ್ರದಲ್ಲಿ ನಾನು 103 ಮಂದಿರ ಜೀಣೋದ್ಧಾರ ಮಾಡಿದ್ದನ್ನೂ ಶುದ್ಧೀಕರಣ ಮಾಡುತ್ತಾರಾ?, ಶುದ್ಧೀಕರಣ ಮಾಡಲು ಇವರಿಗೆ ನೈತಿಕತೆ ಏನಿದೆ?
ಲಕ್ಷ್ಮೀ ಹೆಬ್ಬಾಳಕರ,
ಶಾಸಕರು, ಬೆಳಗಾವಿ ಗ್ರಾಮೀಣ
*ಭೈರೋಬಾ ಕಾಂಬಳೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mrinal Hebbalkar: ನನ್ನ ತಾಯಿಗೆ ರವಿ ಬಳಸಿದ ಪದದಿಂದ ನೋವಾಗಿದೆ: ಮೃಣಾಲ್
Belgavi: ಸಿ.ಟಿ.ರವಿ ಪ್ರಕರಣ ಮುಂದುವರಿಸುವಲ್ಲಿ ಅರ್ಥವೇ ಇಲ್ಲ: ಸಚಿವ ಸತೀಶ್ ಜಾರಕಿಹೊಳಿ
Belagavi: ನ್ಯಾಯಾಧೀಶರ ಮುಂದೆ ಪೊಲೀಸ್ ದೌರ್ಜನ್ಯ ಬಿಚ್ಚಿಟ್ಟ ಸಿ.ಟಿ. ರವಿ
Belagavi: ಎಲ್ಲದಕ್ಕೂ ಪೂರ್ಣವಿರಾಮ ಬೀಳಲಿದೆ, ನನಗೂ ಒಂದು ಕಾಲ ಬರುತ್ತದೆ….. : ಸಿ.ಟಿ.ರವಿ
Belagavi: ಸಿ.ಟಿ.ರವಿ ಬಂಧನ ಪ್ರಕರಣ ಬೆಂಗಳೂರಿಗೆ ಸ್ಥಳಾಂತರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.