Manjunath Bhandary: ಇನ್ನಾದಲ್ಲಿ ಭೂಗತವಾಗಿ ವಿದ್ಯುತ್ ಲೈನ್ ಹಾಕಿ
Team Udayavani, Dec 13, 2024, 12:40 AM IST
ಬೆಳಗಾವಿ: ನೆರೆಯ ಕೇರಳ ರಾಜ್ಯಕ್ಕೆ ಉಡುಪಿ ಜಿಲ್ಲೆಯ ನಂದಿಕೂರು ಉಷ್ಣ ವಿದ್ಯುತ್ ಸ್ಥಾವರದಿಂದ ಕಾರ್ಕಳ ತಾಲೂಕಿನ ಇನ್ನಾ ಗ್ರಾಮದ ಮೂಲಕ 440 ಕೆ.ವಿ. ವಿದ್ಯುತ್ ತಂತಿಯಲ್ಲಿ ವಿದ್ಯುತ್ ಹರಿಸಬಾರದು ಎಂದು ವಿಧಾನ ಪರಿಷತ್ತಿನ ಕಾಂಗ್ರೆಸ್ ಸದಸ್ಯ ಮಂಜುನಾಥ ಭಂಡಾರಿ ಆಗ್ರಹಿಸಿದ್ದಾರೆ.
ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾವಿಸಿದ ಅವರು, ಕೇರಳಕ್ಕೆ ವಿದ್ಯುತ್ ಪೂರೈಕೆಗಾಗಿ ವಿದ್ಯುತ್ ಲೈನ್ ಅಳವಡಿಸುವುದನ್ನು ವಿರೋಧಿಸಿ ಇನ್ನಾದ ಗ್ರಾಮಸ್ಥರು ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಈ ವಿದ್ಯುತ್ ಲೈನ್‌ನಿಂದಾಗಿ ಜನರು ಮನೆ-ಮಠ, ಕೃಷಿ ಭೂಮಿ ಕಳೆದುಕೊಳ್ಳಲಿದ್ದು ಸಂಕಷ್ಟಕ್ಕೆ ಈಡಾಗಲಿದ್ದಾರೆ. ಆದ್ದರಿಂದ ವಿದ್ಯುತ್ ಲೈನ್‌ಗೆ ಅವಕಾಶ ನೀಡಲಾರೆವು ಎಂದು ಪ್ರತಿಭಟನ ನಿರತ ಗ್ರಾಮಸ್ಥರು ಹೇಳುತ್ತಿದ್ದಾರೆ.
ಆದರೆ ಭೂಗತ ಲೈನ್‌ಗೆ ಜನರ ವಿರೋಧವಿಲ್ಲ; ಆದ್ದರಿಂದ ಆ ಭಾಗದಲ್ಲಿ ವಿದ್ಯುತ್ ಲೈನ್ ಅನ್ನು ಭೂಮಿಯ ಒಳಗೆ ಹಾಕುವಂತೆ ಕಂಪೆನಿಗೆ ಸೂಚನೆ ನೀಡಬೇಕು ಎಂದು ಭಂಡಾರಿ ಒತ್ತಾಯಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kambala Kalarava: 400 ವರ್ಷ ಇತಿಹಾಸವಿರುವ ಮಂಡಾಡಿ ಹೋರ್ವರಮನೆ ಕಂಬಳ
Putturu: ದೇಗುಲ: ನಿಯಮಾನುಸಾರ ಮೀಸಲಾತಿ ನೀಡಿ ಸಮಿತಿ ರಚಿಸಲು ಹೈಕೋರ್ಟ್ ಆದೇಶ
Congress Gurantee: ಎಲ್ಲ ಅರ್ಹರಿಗೂ ಗ್ಯಾರಂಟಿ ಯೋಜನೆ ಸೌಲಭ್ಯ ತಲುಪಿಸಿ: ರಮೇಶ್ ಕಾಂಚನ್
Udupi: ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠ: ಆನ್‌ಲೈನ್ ಭಗವದ್ಗೀತೆ ರಸಪ್ರಶ್ನೆ ಸ್ಪರ್ಧೆ
Udupi: ಬೈಲೂರು ಶ್ರೀಮಹಿಷಮರ್ದಿನಿ ದೇವಸ್ಥಾನ; ಡಿ.14ಕ್ಕೆ ಶತಚಂಡಿಕಾಯಾಗ, ಬ್ರಹ್ಮಮಂಡಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.