ಇಟ್ಟಿಗೆ ಭಟ್ಟಿ ಬಂದ್‌ಗೆ ತಹಶೀಲ್ದಾರ್ ಆದೇಶ
ಕ್ರಮಕ್ಕೆ ಆಗ್ರಹಿಸಿ ಸ್ಥಳೀಯರಿಂದ ಮನವಿ ಭಟ್ಟಿ ಧೂಳಿನಿಂದ ಆರೋಗ್ಯದಲ್ಲಿ ಸಮಸ್ಯೆ: ಭಜಂತ್ರಿ
Team Udayavani, Mar 5, 2020, 3:41 PM IST
ರಾಯಬಾಗ: ತಾಲೂಕಿನ ಜಲಾಲಪುರ ಗ್ರಾಮದ ಜನವಸತಿ ಪ್ರದೇಶದಲ್ಲಿ ಅನಧಿಕೃತವಾಗಿ ನಡೆಸುತ್ತಿದ್ದ ಇಟ್ಟಂಗಿ ಭಟ್ಟಿಗೆ ತಹಶೀಲ್ದಾರ್ ಚಂದ್ರಕಾಂತ ಭಜಂತ್ರಿ ಭೇಟಿ ನೀಡಿ ಇಟ್ಟಿಗೆ ತಯಾರಿಕೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿಲು ಆದೇಶಿಸಿದರು.
ಈ ವೇಳೆ ಮಾತನಾಡಿದ ಅವರು, ಜನಪ್ರದೇಶದಲ್ಲಿರುವ ಈ ಇಟ್ಟಂಗಿ ಭಟ್ಟಿಯಿಂದ ಸ್ಥಳೀಯರಿಗೆ ಚರ್ಮ ರೋಗ ಮತ್ತು ಉಸಿರಾಟದ ತೊಂದರೆಗಳಿಂದ ಬಳಲುವಂತಾಗಿದೆ. ಸುತ್ತಮುತ್ತ ಇರುವ ಬೆಳೆಗಳ ಮೇಲೆ ಬೂದಿ ಕೂಡುವದರಿಂದ ಬೆಳೆ ಸರಿಯಾಗಿ ಬರುತ್ತಿಲ್ಲ. ಕೊಳವೆ ಬಾವಿ ನೀರು ಕಲುಷತಗೊಂಡಿದ್ದರಿಂದ ನೀರು ಕುಡಿಯಲು ಯೋಗ್ಯವಾಗಿರುವುದಿಲ್ಲವೆಂದು ಆರೋಪಿಸಿದ ಸ್ಥಳೀಯರು, ಕೂಡಲೇ ಇಟ್ಟಿಗೆ ಭಟ್ಟಿಯನ್ನು ಬಂದ್ ಮಾಡಿಸಬೇಕು ಎಂದರು.
ಪ್ರಕರಣ ಹಿನ್ನಲೆ: ತಾಲೂಕಿನ ಜಲಾಲಪುರ ಗ್ರಾಮದಲ್ಲಿ ಕಲ್ಲಪ್ಪ ಕಾಡಾಪೂರೆ ಎಂಬುವರು ತಮ್ಮ ಜಮೀನದಲ್ಲಿ ಅನಧಿಕೃತವಾಗಿ ಇಟ್ಟಂಗಿ ಭಟ್ಟಿ ನಡೆಸುತ್ತಿದ್ದರು. ಇದು ಜನವಸತಿ ಪ್ರದೇಶವಾಗಿದ್ದರಿಂದ ಮತ್ತು ಸುತ್ತಮುತ್ತ ಸುಮಾರು 40 ಕುಟುಂಬಗಳು ವಾಸಿಸುತ್ತಿರುವುದರಿಂದ, ಇಟ್ಟಿಂಗಿ ಭಟ್ಟಿಯಿಂದ ಹಾರುವ ಧೂಳು ಮತ್ತು ಹೊಗೆಯಿಂದ ಇಲ್ಲಿನ ನಿವಾಸಿಗಳಿಗೆ ನೀರಿನ ಮತ್ತು ಆರೋಗ್ಯ ಸಮಸ್ಯೆ ಸೇರಿದಂತೆ ನಾನಾ ರೀತಿಯ ತೊಂದರೆ ಅನುಭವಿಸುತ್ತಿದ್ದರು. ಇಟ್ಟಂಗಿ ಭಟ್ಟಿ ನಡೆಸುತ್ತಿದ್ದ ಮಾಲೀಕರ ವಿರುದ್ಧ ಗ್ರಾಮದ ಸರ್ಜೇರಾವ್ ಕಾಂಬಳೆ ಹಾಗೂ ಸ್ಥಳೀಯರು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ, ಜಿಲ್ಲಾ ಧಿಕಾರಿಗಳಿಗೆ ಮತ್ತು ತಹಶೀಲ್ದಾರ್‌ಗೆ ಲಿಖೀತವಾಗಿ ಮನವಿ ಸಲ್ಲಿಸಿದ್ದರು.
ಸ್ಥಳಕ್ಕೆ ಭೇಟಿ ನೀಡಿ ವರದಿ ಸಲ್ಲಿಸುವಂತೆ ಕಂದಾಯ ಇಲಾಖೆಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸೂಚನೆ ನೀಡಿದ್ದರಿಂದ ಕಳೆದ ವಾರ ರಾಯಬಾಗ ಕಂದಾಯ ನಿರೀಕ್ಷಕರು ಮತ್ತು ಸಿಬ್ಬಂದಿ ಭೇಟಿ ನೀಡಿ ಇಟ್ಟಂಗಿ ಭಟ್ಟಿ ಸ್ಥಗಿತಗೊಳಿಸುವಂತೆ ತಿಳಿಸಿದ್ದರು. ಆದರೆ ಇದಕ್ಕೆ ಜಗ್ಗದ ಅದರ ಮಾಲೀಕ ನಿರಂತರವಾಗಿ ಇಟ್ಟಿಗೆ ತಯಾರಿಕೆ ಮಾಡುವುದನ್ನು ಮುಂದುವರೆಸಿದ್ದರು.
ಬುಧವಾರ ರಾಯಬಾಗ ತಹಶೀಲ್ದಾರ್ ಚಂದ್ರಕಾಂತ ಭಜಂತ್ರಿ ಹಾಗೂ ಕಂದಾಯ ಇಲಾಖೆ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ, ಸ್ಥಳೀಯರ ದೂರುಗಳನ್ನು ಆಲಿಸಿ, ಅನಧಿ ಕೃತವಾಗಿ ನಡೆಸುತ್ತಿರುವ ಇಟ್ಟಂಗಿ ಭಟ್ಟಿಯನ್ನು ಕೂಡಲೇ ಸ್ಥಗೀತಗೊಳಿಸುವಂತೆ ಆದೇಶಿಸಿದರು. ಈ ವೇಳೆ ಕಂದಾಯ ನಿರೀಕ್ಷಕ ಆರ್.ಎಂ. ಡಬ್ಬಗೋಳ, ಗ್ರಾಮಲೆಕ್ಕಾಧಿಕಾರಿ ಪದ್ಮಾಚಲೇಕರ, ಸರ್ಜೇರಾವ ಕಾಂಬಳೆ, ದಿನಕರ ಪೋಕಳೆ, ಸದಾಶಿವ ಕಾಂಬಳೆ, ಮಹಾವೀರ ಕಾಂಬಳೆ, ದಯಾನಂದ ಕಾಂಬಳೆ ಸೇರಿದಂತೆ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!
ಬೆಳಗಾವಿ-ಐಫೋನ್‌ಗಾಗಿ ನಡೆಯಿತಾ ಯುವಕನ ಹತ್ಯೆ? ಪೊಲೀಸರಿಂದ ತೀವ್ರ ತನಿಖೆ
ಬೆಳಗಾವಿ: ಸಿಎಂ ಸಿದ್ದರಾಮಯ್ಯಗೆ ಬೆಳಗಾವಿ ಅಧಿವೇಶನವೇ ಕೊನೆ-ಬಿ.ವೈ ವಿಜಯೇಂದ್ರ
Belagavi: ಮರಕ್ಕೆ ಕ್ರೂಸರ್ ಢಿಕ್ಕಿ: ಸ್ಥಳದಲ್ಲೇ ಮೂವರ ಸಾವು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.