ದಶಕದ ಕೂಗಿಗೆ ಇನ್ನೂ ಸಿಕ್ಕಿಲ್ಲ ಅನುಷ್ಠಾನ ಬಲ; ಎಲ್ಲ ನಿಲ್ದಾಣಗಳ ಆಧುನೀಕರಣ

ಈಡೇರದ ಧಾರವಾಡ-ಕಿತ್ತೂರ-ಬೆಳಗಾವಿ ಮಾರ್ಗ ; ಭೂಸ್ವಾಧೀನ ವಿಳಂಬವೇ ಯೋಜನೆಗಳಿಗೆ ಅಡ್ಡಿ |

Team Udayavani, Oct 7, 2022, 4:00 PM IST

23

ಬೆಳಗಾವಿ: ಉತ್ತರ ಕರ್ನಾಟಕದ ರೈಲ್ವೆ ಯೋಜನೆ, ನಿಲ್ದಾಣಗಳ ಆಧುನೀಕರಣ ಮತ್ತು ಸೌಲಭ್ಯಗಳಿಗೆ ಜೀವಕಳೆ ಬಂದಿದ್ದು ಕೇಂದ್ರ ರೈಲ್ವೆ ಸಚಿವರಾಗಿದ್ದ ಸುರೇಶ ಅಂಗಡಿ ಅವರ ಅವಧಿಯಲ್ಲಿ ಎಂದರೆ ತಪ್ಪಿಲ್ಲ. ಸುರೇಶ ಅಂಗಡಿ ಅವರ ಶ್ರಮ ಮತ್ತು ಪ್ರಾಮಾಣಿಕ ಪ್ರಯತ್ನದಿಂದ ಕಳೆದ ಒಂದು ದಶಕದ ಅವಧಿಯಲ್ಲಿ ರೈಲ್ವೆ ಇಲಾಖೆಯ ಭೂಪಟದಲ್ಲಿ ಗಡಿ ಜಿಲ್ಲೆ ಬೆಳಗಾವಿಯ ಹೆಸರು ಎದ್ದುಕಾಣುತ್ತಿದೆ. ಬೆಳಗಾವಿ ಜಿಲ್ಲೆಯಲ್ಲಿ ಒಂದು ದಶಕದಿಂದ ಗಟ್ಟಿಯಾಗಿ ಕೇಳಿಬರುತ್ತಿರುವದು ಒಂದೇ ಒಂದು ಯೋಜನೆ, ಅದು ಧಾರವಾಡ-ಕಿತ್ತೂರ-ಬೆಳಗಾವಿ ನೂತನ ಮಾರ್ಗ ನಿರ್ಮಾಣ. ಈಗ ಈ ಯೋಜನೆ ಸಾಕಾರಗೊಳ್ಳುವತ್ತ ಹೆಜ್ಜೆ ಇಟ್ಟಿದೆ. ಉಳಿದಂತೆ ಬಾಗಲಕೋಟೆ-ಕುಡಚಿ ಮಾರ್ಗ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು ಖಜ್ಜಿಡೋಣಿಯಿಂದ ಕುಡಚಿ ವರೆಗಿನ ಸುಮಾರು 108 ಕಿ ಮೀ ಮಾರ್ಗ ನಿರ್ಮಾಣ ಬಾಕಿ ಇದೆ.

ಸುರೇಶ ಅಂಗಡಿ ರೈಲ್ವೆ ಸಚಿವರಾಗಿದ್ದ ಅವಧಿಯಲ್ಲಿ ಅಂದುಕೊಂಡಂತೆ ಎಲ್ಲ ಕನಸುಗಳು ತಕ್ಷಣ ಈಡೇರಲಿಲ್ಲ. ಈಗ ಒಂದೊಂದೇ ಯೋಜನೆಗಳು ನಿಧಾನವಾಗಿ ಕಾರ್ಯಗತವಾಗುತ್ತಿವೆ. ತಾವು ಸಂಸದರಾಗಿದ್ದ ಸಂದರ್ಭದಲ್ಲಿ ಕೇಂದ್ರ ರೈಲ್ವೆ ಸಚಿವರಿಗೆ ಮನವಿಗಳ ಮೇಲೆ ಮನವಿ ಕೊಟ್ಟಿದ್ದ ಸುರೇಶ ಅಂಗಡಿ ತಾವು ರೈಲ್ವೆ ಸಚಿವರಾದ ನಂತರ ಈ ಮನವಿಗಳಿಗೆ ಸ್ಪಂದಿಸುವ ಕೆಲಸ ಮಾಡಿದ್ದರು. ಅದರಲ್ಲಿ ಕಿತ್ತೂರು ಮಾರ್ಗವಾಗಿ ಧಾರವಾಡ- ಬೆಳಗಾವಿ ಹೊಸ ರೈಲು ಮಾರ್ಗ ಅಂಗಡಿ ಅವರ ಪ್ರಮುಖ ಕನಸುಗಳಲ್ಲಿ ಒಂದು.

ಹಾಗೆ ನೋಡಿದರೆ ಕಳೆದ ಒಂದು ದಶಕದ ಅವಧಿಯಲ್ಲಿ ಜಿಲ್ಲೆಯಲ್ಲಿ ಹಲವಾರು ಹೊಸ ಯೋಜನೆಗಳ ಪ್ರಸ್ತಾಪವಾಗುತ್ತ ಬಂದಿದ್ದರೂ ಕಾರ್ಯರೂಪಕ್ಕೆ ಬಂದಿದ್ದು ಬಹಳ ಅಪರೂಪ. ಬೆಳಗಾವಿಯಿಂದ ನಿಪ್ಪಾಣಿ ಮಾರ್ಗವಾಗಿ ಕರಾಡವರೆಗೆ ಹೊಸ ಮಾರ್ಗ ನಿರ್ಮಾಣ, ಬೆಳಗಾವಿಯಿಂದ ಸಾವಂತವಾಡಿ ಮೂಲಕ ಕೊಂಕಣ ಮಾರ್ಗಕ್ಕೆ ಜೋಡಣೆ ಯೋಜನೆ ಕಳೆದ ಹಲವಾರು ವರ್ಷಗಳಿಂದ ಕೇಳಿಬರುತ್ತಲೇ ಇವೆ.

ಬೆಳಗಾವಿಯಿಂದ ಪುಣೆಗೆ ಪುಶ್‌ಪುಲ್‌ ರೈಲು, ಮೈಸೂರು-ಧಾರವಾಡ ರೈಲು ಸಂಚಾರವನ್ನು ಮೀರಜ ಇಲ್ಲವೇ ಕೊಲ್ಲಾಪುರದವರೆಗೆ ವಿಸ್ತರಣೆ ಮಾಡುವದು ಸೇರಿದಂತೆ ಈ ಭಾಗದ ಅಭಿವೃದ್ಧಿಗೆ ಸಹಾಯವಾಗುವ ಹಲವಾರು ಯೋಜನೆಗಳನ್ನು ಕೈಗೊಳ್ಳುವ ಬಗ್ಗೆ ಸುರೇಶ ಅಂಗಡಿ ಚಿಂತನೆ ನಡೆಸಿದ್ದರು. ಬೆಂಗಳೂರಿಗೆ ನೇರ ರೈಲು ಬೇಕು ಎಂಬುದು ಬೆಳಗಾವಿ ಜಿಲ್ಲೆಯ ಜನರ ದಶಕಗಳ ಕನಸಾಗಿತ್ತು. ಇದಕ್ಕಾಗಿ ಹೋರಾಟ ಮಾಡದವರೇ ಇಲ್ಲ. ಸುರೇಶ ಅಂಗಡಿ ರೈಲ್ವ ಸಚಿವರಾಗಿ ಬಂದ ತಕ್ಷಣ ಜನರ ಈ ಆಸೆ ಪೂರೈಸಿದರು. ಇದರ ಜೊತೆಗೆ ಈ ಭಾಗದ ಜನರ ಬಹಳ ದಿನಗಳ ಬೇಡಿಕೆಯಾಗಿದ್ದ ಬೆಳಗಾವಿ-ವಾಸ್ಕೋ ರೈಲು ಸೌಲಭ್ಯ ಸಹ ಬಡ ಹಾಗೂ ಕಾರ್ಮಿಕ ವರ್ಗದ ಜನರಿಗೆ ಸಾಕಷ್ಟು ಅನುಕೂಲ ಕಲ್ಪಿಸಿದೆ.

ಧಾರವಾಡ-ಬೆಳಗಾವಿ ಹೊಸ ಮಾರ್ಗ: ಮೊದಲಿಂದಲೂ ಗಟ್ಟಿಯಾಗಿ ಕೇಳುತ್ತಿದ್ದ ಧಾರವಾಡ-ಬೆಳಗಾವಿ ಹೊಸ ಮಾರ್ಗ ನಿರ್ಮಾಣ ಯೋಜನೆ ಕೊನೆಗೂ ಕೇಂದ್ರ ಸರಕಾರದ ಗಮನಕ್ಕೆ ಬಿತ್ತು. ನನೆಗುದಿಯಲ್ಲೇ ಕಳೆದಿದ್ದ ಪ್ರಸ್ತಾವನೆಗೆ ಹೊಸ ಜೀವ ಸಿಕ್ಕಿತು. ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ಸುರೇಶ ಅಂಗಡಿ ಈ ವಿಷಯದಲ್ಲಿ ವಿಶೇಷ ಮುತುವರ್ಜಿ ವಹಿಸಿ ಯೋಜನೆಗೆ ಹಸಿರು ನಿಶಾನೆ ತೋರಿಸಿದರು.

ಒಟ್ಟು 924 ಕೋಟಿ ರೂ ವೆಚ್ಚದ 73 ಕಿಲೋಮೀಟರ್‌ ವ್ಯಾಪ್ತಿಯ ಈ ಮಹತ್ವಾಕಾಂಕ್ಷೆಯ ಯೋಜನೆಗೆ 825 ಎಕರೆ ಪ್ರದೇಶವನ್ನು ಸ್ವಾಧೀನಪಡಿಸಿಕೊಳ್ಳಲು ಯೋಜನೆ ರೂಪಿಸಲಾಗಿದೆ. ಅದರಲ್ಲಿ ಈಗಾಗಲೇ 650 ಎಕರೆ ಸ್ವಾಧೀನಪಡಿಸಿಕೊಳ್ಳಲು ಸರಕಾರ ಅಧಿಸೂಚನೆ ಸಹ ಹೊರಡಿಸಿದೆ. ಬೆಳಗಾವಿ ತಾಲೂಕಿನ ಕೆ ಕೆ ಕೊಪ್ಪ ಗ್ರಾಮದಿಂದ ದೇಸೂರವರೆಗಿನ 144 ಎಕರೆ ಪ್ರದೇಶದ ಅಧಿಸೂಚನೆ ಮಾತ್ರ ಬಾಕಿ ಉಳಿದಿದೆ.

ಧಾರವಾಡ ಕಿತ್ತೂರ ಬೆಳಗಾವಿ ಮಾರ್ಗ ನಿರ್ಮಾಣದಿಂದ ಸಾಕಷ್ಟು ಅನುಕೂಲಗಳಿವೆ. ಮುಖ್ಯವಾಗಿ ಈ ಮಾರ್ಗದಿಂದ ಸಾಕಷ್ಟು ಸಮಯದ ಉಳಿತಾಯವಾಗಲಿದೆ. ಈಗಿನ ಮಾರ್ಗದಲ್ಲಿ ಧಾರವಾಡದಿಂದ ಬೆಳಗಾವಿಗೆ ಬರಲು ಎರಡರಿಂದ ಎರಡೂವರೆ ಗಂಟೆ ಬೇಕು. ಮೇಲಾಗಿ ಈ ಮಾರ್ಗದಲ್ಲಿ ದಟ್ಟ ಅರಣ್ಯ ಪ್ರದೇಶ ಬರುವದರಿಂದ ಮಾರ್ಗ ವ್ಯಾಪ್ತಿಯಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿ ಸಾಧ್ಯವಿಲ್ಲ. ಅದೇ ಕಿತ್ತೂರ ಮೂಲಕ ಹೊಸ ಮಾರ್ಗ ನಿರ್ಮಾಣ ಮಾಡಿದರೆ ಹುಬ್ಬಳ್ಳಿ-ಧಾರವಾಡಕ್ಕೆ ಹೋಗುವ ಪ್ರಯಾಣಿಕರಿಗೆ ಅನುಕೂಲವಾಗುವುದಲ್ಲದೆ ಈ ಪ್ರದೇಶದಲ್ಲಿ ಕೈಗಾರಿಕೆ ಸೇರಿದಂತೆ ಹೊಸ ಹೊಸ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸಹಾಯವಾಗಲಿದೆ.

ಭೂ ಸ್ವಾಧೀನ ವಿಳಂಬ: ಇನ್ನು 12 ವರ್ಷಗಳ ಹಿಂದೆ ಮಂಜೂರಾಗಿದ್ದ ಮಹತ್ವದ ಕುಡಚಿ ಮತ್ತು ಬಾಗಲಕೋಟೆ ಮಾರ್ಗ ನಿರ್ಮಾಣ ಇನ್ನೂ ಅಮೆಗತಿಯಲ್ಲೇ ಸಾಗಿದೆ. ಇದರ ವ್ಯಾಪ್ತಿಯಲ್ಲಿ ಬರುವ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯ ಪರಿಣಾಮ ಭೂ ಸ್ವಾಧೀನ ಪ್ರಕ್ರಿಯೆ ಇನ್ನೂ ಕಗ್ಗಂಟಾಗಿದೆ.

2010 ಮಂಜೂರಾಗಿದ್ದ ಈ ಯೋಜನೆಗೆ ಆಗ ನಿಗದಿ ಮಾಡಿದ್ದು 816 ಕೋಟಿ. ಆದರೆ‌ ಜನಪ್ರತಿನಿಧಿಗಳ ನಿರ್ಲಕ್ಷ ಮತ್ತು ಸರಕಾರದ ಉದಾಸೀನದ ಪರಿಣಾಮ ಒಟ್ಟು 141 ಕಿಲೋಮೀಟರ್‌ ಉದ್ದದ ಈ ಮಾರ್ಗದ ವೆಚ್ಚ 3000 ಕೋಟಿ ದಾಟಿದೆ. ಇದಕ್ಕೆ ಒಟ್ಟು 2200 ಎಕರೆ ಭೂಮಿ ಬೇಕಿದೆ. ಬಾಗಲಕೋಟೆಯಿಂದ ಖಜ್ಜಿಡೋಣಿಯವರೆಗೆ ಅಂದರೆ ಸುಮಾರು 33 ಕಿ ಮೀ ಮಾರ್ಗ ಮಾತ್ರ ನಿರ್ಮಾಣವಾಗಿ ರೈಲು ಸೇವೆ ಸಹ ಆರಂಭವಾಗಿದೆ. ಆದರೆ ಉಳಿದ 108 ಕಿ ಮೀ ಮಾರ್ಗದಲ್ಲಿ ಸುಮಾರು 2200 ಎಕರೆ ಭೂ ಸ್ವಾಧೀನ ಸಮಸ್ಯೆಯಾಗಿದೆ ಎಂಬುದು ರಾಜ್ಯ ರೈಲ್ವೆ ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಕುತುಬುದ್ದೀನ ಖಾಜಿ ಆರೋಪ.

ಇನ್ನೊಂದು ಕಡೆ ಸವದತ್ತಿ ಯಲ್ಲಮ್ಮ ದೇವಸ್ಥಾನಕ್ಕೆ ಹೋಗಲು ಹೊಸ ಮಾರ್ಗದ ಸಮೀಕ್ಷೆ ಕಾರ್ಯ ಆರಂಭಿಸಬೇಕು ಎಂದು 20 ವರ್ಷಗಳಿಂದ ಹೋರಾಟ ನಡೆದಿದೆ. ಆದರೆ ಯಾವ ಸರಕಾರವೂ ಇದಕ್ಕೆ ಸ್ಪಂದಿಸಿಲ್ಲ. ಸವದತ್ತಿಗೆ ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ ಸೇರಿದಂತೆ ದೇಶದ ವಿವಿಧ ಕಡೆಗಳಿಂದ ಲಕ್ಷಾಂತರ ಜನ ಬರುತ್ತಾರೆ. ಅದರೆ ಯಾವುದೇ ರೈಲು ಸೌಲಭ್ಯ ಇಲ್ಲದಿರುವದರಿಂದ ಭಕ್ತರಿಗೆ ತೊಂದರೆಯಾಗುತ್ತಿದೆ. ಇದರ ಬಗ್ಗೆ ಕೇಂದ್ರ ಸರಕಾರ ಗಮನಹರಿಸುತ್ತಿಲ್ಲ ಎಂಬ ಅಸಮಾಧಾನ ರೈಲ್ವೆ ಹೋರಾಟಗಾರರಲ್ಲಿದೆ.

ಕ‌ಳೆದ 10 ವರ್ಷಗಳ ಅವಧಿಯಲ್ಲಿ ಬೆಳಗಾವಿ ರೈಲ್ವೆ ಕ್ಷೇತ್ರ ಸಾಕಷ್ಟು ಬದಲಾಗಿದೆ. ಇಲ್ಲಿನ ಜನರ ಬೇಡಿಕೆಯಂತೆ ಬೆಂಗಳೂರಿಗೆ ನೇರ ರೈಲು ಸಂಪರ್ಕ ಆರಂಭವಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಬಹಳ ವರ್ಷಗಳ ಬೇಡಿಕೆಯಾಗಿದ್ದ ಧಾರವಾಡ-ಬೆಳಗಾವಿ ನೂತನ ರೈಲು ಮಾರ್ಗ ನಿರ್ಮಾಣ ಸಧ್ಯದಲ್ಲೇ ಆರಂಭವಾಗಲಿದೆ. ಇದಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರಕಾರ ಹಣ ಮೀಸಲಿಟ್ಟಿದೆ. ಒಮ್ಮೆ ಈ ಮಾರ್ಗ ಆರಂಭವಾದರೆ ಬೆಳಗಾವಿಯ ಅಭಿವೃದ್ಧಿಯಲ್ಲಿ ಹೊಸ ಅಧ್ಯಾಯ ತೆರೆದುಕೊಳ್ಳಲಿದೆ.  –ಮಂಗಲಾ ಸುರೇಶ ಅಂಗಡಿ, ಬೆಳಗಾವಿ ಸಂಸದರು

ಬೆಳಗಾವಿ ಜಿಲ್ಲೆಯಲ್ಲಿ ಬಹಳ ಹೊಸ ಯೋಜನೆಗಳು ಇರಲಿಲ್ಲ. ಮುಖ್ಯವಾಗಿ ಬೇಕಾಗಿದ್ದ ಧಾರವಾಡ-ಕಿತ್ತೂರು-ಬೆಳಗಾವಿ ಹೊಸ ಮಾರ್ಗ ನಿರ್ಮಾಣಕ್ಕೆ ಅನುಮೋದನೆ ಸಿಕ್ಕು ಹಣ ಮಂಜೂರಾಗಿದೆ. ಶೀಘ್ರದಲ್ಲೇ ಭೂ ಸ್ವಾಧೀನ ಪ್ರಕ್ರಿಯೆ ಆರಂಭವಾಗಲಿದೆ. ಇದರ ಜೊತೆಗೆ ಕಳೆದ 10 ವರ್ಷಗಳ ಅವಧಿಯಲ್ಲಿ ಎಲ್ಲ ರೈಲು ನಿಲ್ದಾಣಗಳ ಆಧುನೀಕರಣವಾಗಿದೆ. ದ್ವಿಪಥ ಮಾರ್ಗ ನಿರ್ಮಾಣ ಪ್ರಗತಿಯಲ್ಲಿದೆ.  –ಈರಣ್ಣ ಕಡಾಡಿ, ರಾಜ್ಯಸಭಾ ಸದಸ್ಯರು

ಈ ಯೋಜನೆ ಇನ್ನೂ ಪ್ರಾರಂಭಿಕ ಹಂತದಲ್ಲಿದೆ. ಜಿಲ್ಲೆಯಲ್ಲಿ 599 ಎಕರೆ ಪ್ರದೇಶದ ಪೈಕಿ ಈಗಾಗಲೇ 444 ಎಕರೆ ಪ್ರದೇಶದ ಅಧಿಸೂಚನೆ ಹೊರಡಿಸಲಾಗಿದೆ. ಅಧಿಸೂಚನೆಯ ನಂತರ ರೈತರಿಂದ ಆಕ್ಷೇಪಣೆಗೆ ಅರ್ಜಿ ಕರೆಯಲಾಗಿತ್ತು. ಆನೇಕ ರೈತರು ಆಕ್ಷೇಪಣೆ ಸಲ್ಲಿಸಿದ್ದಾರೆ. ಶೀಘ್ರದಲ್ಲೇ ರೈತರ ಸಭೆ ನಡೆಸಲಾಗುವದು. ಅಂತಿಮ ಸಭೆಯ ನಂತರ ದರ ನಿಗದಿ ಮಾಡಿ ಭೂ ಸ್ವಾಧೀನ ಪ್ರಕ್ರಿಯೆ ಆರಂಭವಾಗಲಿದೆ.  –ಮಮತಾ ಪಾಟೀಲ, ವಿಶೇಷ ಭೂ ಸ್ವಾಧೀನಾಧಿಕಾರಿ, ಕೆಐಎಡಿಬಿ

-ಕೇಶವ ಆದಿ

ಟಾಪ್ ನ್ಯೂಸ್

ಯಾತ್ರಾರ್ಥಿಯಿಂದ ಸೌತಡ್ಕ ಕ್ಷೇತ್ರದ ಸಿಬಂದಿ ಮೇಲೆ ಹಲ್ಲೆ

Kokkada: ಯಾತ್ರಾರ್ಥಿಯಿಂದ ಸೌತಡ್ಕ ಕ್ಷೇತ್ರದ ಸಿಬಂದಿ ಮೇಲೆ ಹಲ್ಲೆ

Udyavara: ಹೊಳೆಯಲ್ಲಿ ತೇಲಿ ಬಂದ ಅಪರಿಚಿತ ಶವ

Udyavara: ಹೊಳೆಯಲ್ಲಿ ತೇಲಿ ಬಂದ ಅಪರಿಚಿತ ಶವ

Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು

Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು

Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ

Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ

Puttur: ಸ್ಕೂಲ್‌ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್‌

Puttur: ಸ್ಕೂಲ್‌ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್‌

Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು

Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು

Kasaragod: ಫ್ಯಾಶನ್‌ ಗೋಲ್ಡ್‌ ವಂಚನೆ ಪ್ರಕರಣ: ಪೂಕೋಯ ತಂಙಳ್‌ ಮತ್ತೆ ಬಂಧನ

Kasaragod: ಫ್ಯಾಶನ್‌ ಗೋಲ್ಡ್‌ ವಂಚನೆ ಪ್ರಕರಣ: ಪೂಕೋಯ ತಂಙಳ್‌ ಮತ್ತೆ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

vij

Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ

Belagavi: Let there be a full discussion of issues in the plenary session: Dr. Prabhakar Kore

Belagavi: ಪೂರ್ಣಾವಧಿ ಅಧಿವೇಶನದಲ್ಲಿ ಸಮಸ್ಯೆಗಳ ಪೂರ್ಣ ಚರ್ಚೆಯಾಗಲಿ: ಡಾ.ಪ್ರಭಾಕರ್‌ ಕೋರೆ

Belagavi: ಗೆಳೆಯ ಜೊತೆ ಪಾರ್ಟಿಗೆಂದು ಹೋದ ವ್ಯಕ್ತಿ ಅನುಮಾನಾಸ್ಪದವಾಗಿ ಸಾ*ವು

Belagavi: ಗೆಳೆಯರ ಜೊತೆ ಪಾರ್ಟಿಗೆಂದು ಹೋದ ವ್ಯಕ್ತಿ ಅನುಮಾನಾಸ್ಪದವಾಗಿ ಸಾ*ವು

Belagavi: ಬಾಲಕಿ ಮೇಲೆ ಅತ್ಯಾಚಾರ… ಆರೋಪಿಗೆ 20 ವರ್ಷ ಜೈಲು ಶಿಕ್ಷೆ

Belagavi: ಬಾಲಕಿ ಮೇಲೆ ಅತ್ಯಾಚಾರ… ಆರೋಪಿಗೆ 20 ವರ್ಷ ಜೈಲು ಶಿಕ್ಷೆ

Minister K. N. Rajanna: ಸದ್ಯಕ್ಕಂತೂ ಸಚಿವ ಸಂಪುಟ ಪುನಾರಚನೆ ಇಲ್ಲ

Minister K. N. Rajanna: ಸದ್ಯಕ್ಕಂತೂ ಸಚಿವ ಸಂಪುಟ ಪುನಾರಚನೆ ಇಲ್ಲ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

1-sehwag

Cooch Behar Trophy: ಸೆಹವಾಗ್‌ ಪುತ್ರನಿಂದ ದ್ವಿಶತಕ

1-tt

Pro Kabaddi; ವಿಜಯ್‌ ಮಲಿಕ್‌ ಅಮೋಘ ಆಟ: ತೆಲುಗು ಟೈಟಾನ್ಸ್‌ ಗೆ ಗೆಲುವು

ಯಾತ್ರಾರ್ಥಿಯಿಂದ ಸೌತಡ್ಕ ಕ್ಷೇತ್ರದ ಸಿಬಂದಿ ಮೇಲೆ ಹಲ್ಲೆ

Kokkada: ಯಾತ್ರಾರ್ಥಿಯಿಂದ ಸೌತಡ್ಕ ಕ್ಷೇತ್ರದ ಸಿಬಂದಿ ಮೇಲೆ ಹಲ್ಲೆ

Kumbhashi: ರಾ.ಹೆ.66 ಭೀಕರ ರಸ್ತೆ ಅಪಘಾತ : ಪ್ರಾಣಾಪಾಯದಿಂದ ಪಾರಾದ ಗಾಯಾಳುಗಳು !

Kumbhashi: ರಾ.ಹೆ.66 ಭೀಕರ ರಸ್ತೆ ಅಪಘಾತ: ಪ್ರಾಣಾಪಾಯದಿಂದ ಪಾರಾದ ಗಾಯಾಳುಗಳು !

Udyavara: ಹೊಳೆಯಲ್ಲಿ ತೇಲಿ ಬಂದ ಅಪರಿಚಿತ ಶವ

Udyavara: ಹೊಳೆಯಲ್ಲಿ ತೇಲಿ ಬಂದ ಅಪರಿಚಿತ ಶವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.