Rain: 5 ವಿದ್ಯುತ್ ನಿಗಮ ವ್ಯಾಪ್ತಿಯಲ್ಲಿ 156 ಕೋಟಿರೂ. ಸೌಕರ್ಯ ಹಾನಿ: ಕೆ.ಜೆ. ಜಾರ್ಜ್
Team Udayavani, Dec 16, 2024, 8:21 PM IST
ಸುವರ್ಣ ವಿಧಾನಸೌಧ: ರಾಜ್ಯದಲ್ಲಿ ಪ್ರಸಕ್ತ ಸಾಲಿನಲ್ಲಿ ಬಿದ್ದ ಭಾರೀ ಮಳೆಯಿಂದ ಬೆಸ್ಕಾಂ, ಹೆಸ್ಕಾಂ ಸೇರಿದಂತೆ ಐದು ವಿದ್ಯುತ್ ನಿಗಮಗಳಲ್ಲಿ 156 ಕೋಟಿ ರೂ. ಗಳ ವಿದ್ಯುತ್ ಕಂಬಗಳು, ಪರಿವರ್ತಕಗಳು ಸೇರಿ ಮೂಲಸೌಕರ್ಯಗಳ ಹಾನಿಯಾಗಿದೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಹೇಳಿದರು.
ವಿಧಾನಪರಿಷತ್‌ನಲ್ಲಿ ಬಿಜೆಪಿ ಭಾರತಿ ಶೆಟ್ಟಿ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, ಬೆಂಗಳೂರು ವಿದ್ಯುತ್ ಕಂಪನಿಯಲ್ಲಿ ಒಟ್ಟು 2653 ಲಕ್ಷ ರೂ., ಸೆಸ್ಕ್ ನಲ್ಲಿ 1967 ಲಕ್ಷ, ಹೆಸ್ಕಾಂನಲ್ಲಿ 6039 ಲಕ್ಷ, ಮೆಸ್ಕಾಂನಲ್ಲಿ 4008 ಲಕ್ಷ ರೂ. ಹಾಗೂ ಜೆಸ್ಕಾಂನಲ್ಲಿ 943 ಲಕ್ಷ ರೂ. ಹಾನಿಯಾಗಿದೆ ಎಂದರು.
ಒಟ್ಟು ಹಾನಿಯಾದ ವಿದ್ಯುತ್ ಮೂಲಸೌಕರ್ಯ ಮರುಸ್ಥಾಪನೆಗೆ ಇದುವರೆಗೆ 146.65 ಕೋಟಿ ರೂ ವೆಚ್ಚ ಮಾಡಲಾಗಿದೆ. ಇದರಲ್ಲಿ ಬೆಸ್ಕಾಂನಲ್ಲಿ 26 ಕೋಟಿ, ಸೆಸ್ಕ್ ನಲ್ಲಿ 19 ಕೋಟಿ, ಹೆಸ್ಕಾಂನಲ್ಲಿ 45.77 ಕೋಟಿ, ಮೆಸ್ಕಾಂನಲ್ಲಿ 40 ಕೋಟಿ ಮತ್ತು ಜೆಸ್ಕಾಂನಲ್ಲಿ 9.25 ಕೋಟಿ ರೂ. ವೆಚ್ಚಮಾಡಲಾಗಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಇದು 0 ಪರ್ಸೆಂಟ್ ಅಭಿವೃದ್ಧಿ,100 ಪರ್ಸೆಂಟ್ ಭ್ರಷ್ಟಾಚಾರದ ಸರಕಾರ: ಸುನಿಲ್
ಠೇವಣಿದಾರರ ಹಿತ ಕಾಯಲು ಸರ್ಕಾರ ಬದ್ಧ: ಸಚಿವ ಕೃಷ್ಣ ಬೈರೇಗೌಡ
Belagavi, ಮಂಡ್ಯ, ಶಿವಮೊಗ್ಗ ಸೇರಿ 6 ಕಡೆ ಕ್ಯಾನ್ಸರ್ ಆಸ್ಪತ್ರೆ: ಶರಣಪ್ರಕಾಶ್ ಪಾಟೀಲ್
Online Gaming: ಪ್ರತ್ಯೇಕ ಚರ್ಚೆಗೆ ಪಕ್ಷಾತೀತವಾಗಿ ಒತ್ತಾಯ
Almatti ಡ್ಯಾಂ ವಿಸ್ತರಣೆಗೆ ಸರ್ಕಾರ ಬದ್ಧ: ಸಿಎಂ ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.