ಮಳೆ ಆರ್ಭಟ: ಮನೆಗಳಿಗೆ ನೀರು
|ಹೊಲಗದ್ದೆಗಳಲ್ಲಿ ನೀರೋನೀರು-ಜನಜೀವನ ಅಸ್ತವ್ಯಸ್ತ |ತುಂಬಿ ಹರಿಯುತ್ತಿದೆ ಬಳ್ಳಾರಿ ನಾಲಾ
Team Udayavani, Jul 1, 2019, 9:53 AM IST
ಬೆಳಗಾವಿ: ನಗರದಲ್ಲಿ ಸುರಿದ ಧಾರಾಕಾರ ಮಳೆಯಿಂದ ಮನೆಗಳಿಗೆ ನುಗ್ಗಿದ ನೀರನ್ನು ಹೊರ ಚೆಲ್ಲುತ್ತಿರುವ ಜನ.
ಬೆಳಗಾವಿ: ನಗರ ಸೇರಿದಂತೆ ಸುತ್ತಲಿನ ಹಳ್ಳಿಗಳಲ್ಲಿ ಶನಿವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆ ರವಿವಾರವೂ ಮುಂದುವರಿದಿದ್ದು, ನಗರದ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಯಿತು. ಜತೆಗೆ ಜಿಲ್ಲಾಸ್ಪತ್ರೆಯಲ್ಲಿ ನೀರು ನುಗ್ಗಿ ರೋಗಿಗಳು ಪರದಾಡುವಂತಾಯಿತು.
ಭಾರೀ ಪ್ರಮಾಣದಲ್ಲಿ ಸುರಿಯುತ್ತಿರುವ ಮಳೆಯಿಂದ ರೈತರು ಮೊಗದಲ್ಲಿ ಸಂತಸ ಮೂಡಿದ್ದು, ಹೊಲಕ್ಕೂ ಕಾಲಿಡದಂಥ ಸ್ಥಿತಿ ನಿರ್ಮಾಣವಾಗಿದೆ. ಶನಿವಾರ ಮಧ್ಯರಾತ್ರಿಯಿಂದಲೂ ಮಳೆ ಶುರುವಾಗಿದ್ದು, ಎಡೆಬಿಡದೇ ಮಳೆ ಆಗುತ್ತಿದೆ. ಜಿಲ್ಲೆಯ ಬಹುತೇಕ ಹಳ್ಳಿಗಳಲ್ಲಿ ಜೋರಾಗಿ ಮಳೆ ಸುರಿಯುತ್ತಿದೆ.
ನಗರದ ಜಿಲ್ಲಾಸ್ಪತ್ತೆಯ ಹೊರ ರೋಗಿಗಳ ವಿಭಾಗದಲ್ಲಿ ನೀರು ನುಗ್ಗಿ ರೋಗಿಗಳು ಪರದಾಡುವಂತಾಯಿತು. ನೀರು ನುಗ್ಗಿದ್ದರಿಂದ ರೋಗಿಗಳು ಹಾಗೂ ವೈದ್ಯರು ಒಳ ಹೋಗಲು ಕಸರತ್ತು ನಡೆಸಬೇಕಾಗಿದೆ. ಒಳ ಭಾಗದಲ್ಲಿ ನೀರು ನಿಂತಿದ್ದರಿಂದ ರೋಗಿಗಳ ಸಂಬಂಧಿಕರು ಹಾಗೂ ಸಿಬ್ಬಂದಿ ಕೆಲವು ಕಲ್ಲುಗಳನ್ನು ಇಟ್ಟಿದ್ದಾರೆ. ಅದರ ಮೇಲೆಯೇ ನಡೆದುಕೊಂಡು ಒಳ ಹೋಗುತ್ತಿದ್ದಾರೆ.
ಮನೆಗಳಿಗೆ ನುಗ್ಗಿದ ನೀರು: ನಗರದ ಬಹುತೇಕ ತಗ್ಗು ಪ್ರದೇಶಗಳಲ್ಲಿರುವ ಮನೆಗಳಿಗೆ ನೀರು ನುಗ್ಗಿ ತೊಂದರೆಯನ್ನುಂಟು ಮಾಡಿದೆ. ಮಳೆ ನೀರು ಒಳಗೆ ಬಂದಿದ್ದರಿಂದ ಜನರು ನೀರು ಹೊರ ತೆಗೆಯಲು ಹರಸಾಹಸ ಪಡುತ್ತಿದ್ದಾರೆ. ಗಾಂಧೀ ನಗರ, ಮಾರುತಿ ನಗರ, ಎಸ್‌ಸಿ ಮೋಟರ್ ಹಿಂಭಾಗ ಸೇರಿದಂತೆ ಅನೇಕ ಕಡೆಗೆ ನೀರು ನಿಂತಿದೆ. ಮುಖ್ಯ ರಸ್ತೆಯಿಂದ ಮನೆಗಳಿಗೆ ಹೋಗುವ ಮಾಗ್‌ದಲ್ಲಿಯೂ ನೀರು ನಿಂತಿದೆ. ಮಲಪ್ರಭಾ ನಗರ, ಶಾಸ್ತ್ರಿ ನಗರದ ಮನೆಗಳಿಗೂ ನೀರು ನುಗ್ಗಿದೆ.
ಧರೆಗುರುಳಿದ ಮರಗಳು: ಟಿಳಕವಾಡಿಯಲ್ಲಿರುವ ಜ್ಞಾನೇಶ ಕಾಮತ ಅವರಿಗೆ ಸೇರಿದ ಶಾಂತಾದುರ್ಗ ಟ್ರೇಡರ್ ಅಂಗಡಿ ಮೇಲೆ ಮರ ಬಿದ್ದಿದೆ. ಹೀಗಾಗಿ ಅಂಗಡಿಯ ಬಿಡಿ ಭಾಗಗಳು, ಗಾಜು ಒಡೆದು ತೊಂದರೆಯಾಗಿದೆ. ಜತೆಗೆ ಕ್ಲಬ್ ರಸ್ತೆಯಲ್ಲಿರುವ ಗಿರಿಯಾಜ್ ಮಳಿಗೆ ಎದುರಿನ ಬೃಹತ್ ಮರ ಧರೆಗುರುಳಿದೆ.
ಬೆಳಗಾವಿ ತಾಲೂಕಿನ ಬಸವನ ಕುಡಚಿ, ಸಾಂಬ್ರಾ, ನಿಲಜಿ, ಬಾಳೇಕುಂದ್ರಿ, ಮಾರಿಹಾಳ, ಸುಳೇಭಾವಿ, ಮೋದಗಾ, ಮುಚ್ಚಂಡಿ, ಕಣಬರ್ಗಿ, ಚಂದಗಡ, ಕಣಬರ್ಗಿ, ಚಂದೂರ, ಕಬಲಾಪುರ, ತುಮ್ಮರಗುದ್ದಿ ಸೇರಿದಂತೆ ಸುತ್ತಲಿನ ಹಳ್ಳಿಗಳಲ್ಲಿ ಎರಡು ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದೆ. ಬಳ್ಳಾರಿ ನಾಲಾ ತುಂಬಿ ಹರಿಯುತ್ತಿದೆ. ಖಾನಾಪುರ ತಾಲೂಕಿನಲ್ಲಿಯೂ ಎರಡು ದಿನದಿಂದ ಸತತ ಮಳೆ ಆಗುತ್ತಿದೆ. ಮಲಪ್ರಭಾ ನದಿ ತುಂಬಿ ಹರಿಯುತ್ತಿದ್ದು, ತಾಲೂಕಿನ ಹಳ್ಳ-ಕೊಳ್ಳಗಳಲ್ಲಿಯೂ ನೀರು ತುಂಬಿಕೊಂಡಿದೆ. ಹೊರಗೆ ಬರಲಾರದಷ್ಟು ಮಲೆ ಆಗುತ್ತಿರುವುದರಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಕೆಲವು ಶಿಥಿಲಗೊಂಡಿರುವ ಮನೆಗಳ ಗೋಡೆಗೂ ಕುಸಿದಿರುವ ವರದಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!
ಅಂತಾರಾಜ್ಯ ಮಕ್ಕಳ ಮಾರಾಟ ಜಾಲ ಪತ್ತೆ… 4.50 ಲಕ್ಷಕ್ಕೆ ಗೋವಾಕ್ಕೆ ಮಾರಿದ್ದ ಮಗುವಿನ ರಕ್ಷಣೆ
Belagavi: ತಹಶೀಲ್ದಾರ್ ಮನೆ ಮೇಲೆ ಲೋಕಾಯುಕ್ತ ದಾಳಿ
Belagavi; ಸಂಘದ ಹೆಸರಲ್ಲಿ ಮಹಿಳೆಯರಿಗೆ 19.35 ಕೋಟಿ ರೂ. ಮಹಾ ವಂಚನೆ!
Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.