ರಾಮದುರ್ಗ: ಯುವಕರಿಗೆ ಶ್ರೀರಾಮನ ಮಹತ್ವ ತಿಳಿಸಲು ಯಾತ್ರೆ
ಶಬರಿಕೊಳ್ಳಕ್ಕೆ ಮಧ್ಯಪ್ರದೇಶದ ವಾನರ ಸೇನಾ ಭೇಟಿ
Team Udayavani, Jan 29, 2024, 4:23 PM IST
ಉದಯವಾಣಿ ಸಮಾಚಾರ
ರಾಮದುರ್ಗ: ಸನಾತನ ಧರ್ಮದ ಹಾಗೂ ಶ್ರೀ ರಾಮನು ಭೇಟಿ ನೀಡಿದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಸ್ಥಳಗಳಿಗೆ ಭೇಟಿ ಅವುಗಳನ್ನು ದೇಶದ ಯುವ ಸಮುದಾಯಕ್ಕೆ ತಿಳಿಸುವ ಕಾರ್ಯ ಮಾಡುತ್ತಿರುವ ಮಧ್ಯಪ್ರದೇಶದ 100 ಕ್ಕೂ ಅಧಿಕ ಜನರ “ವಾನರ ಸೇನಾ’ ತಂಡವು ರವಿವಾರ ತಾಲೂಕಿನ ಐತಿಹಾಸಿಕ ಸುರೇಬಾನದ ಶಬರಿ ಕೊಳ್ಳಕ್ಕೆ ಭೇಟಿ ನೀಡಿತು.
ಸುರೇಬಾನ ಗ್ರಾಮ ಪ್ರವೇಶಿಸುತ್ತಿದ್ದಂತೆ ಬಿಜೆಪಿ ಮುಖಂಡರು, ಶಬರಿದೇವಿ ಸಮಿತಿ ಸದಸ್ಯರು, ವಿವಿಧ ಮಹಿಳಾ ಭಜನಾ ಮಂಡಳಿಗಳು ಹಾಗೂ ಸಂತರು ತಂಡವನ್ನು ಅದ್ಧೂರಿಯಾಗಿ ಸ್ವಾಗತಿಸಿ ಸುರೇಬಾನದಿಂದ ಶಬರಿಕೊಳ್ಳದವರೆಗೆ
ಮೆರವಣೆಗೆಯಲ್ಲಿ ಕರೆತಂದರು.
ತಂಡ ಶ್ರೀರಾಮ ಮಂದಿರದಲ್ಲಿ ಹಾಗೂ ಶಬರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಕೆಲ ಸಮಯ ಶ್ರೀರಾಮನ ನಾಮ ಸ್ಮರಣೆ ಮಾಡಿತು. ನಂತರ ಶಬರಿ ದೇವಸ್ಥಾನ, ಪುಷ್ಕರಣಿ, ಬಾರೆ ಹಣ್ಣಿನ ಗಿಡ ಅಲ್ಲದೇ ಶ್ರೀರಾಮ ವಿಶ್ರಮಸಿದ ಸ್ಥಳ ವೀಕ್ಷಿಸಿ ಸಮಿತಿಯ ಸದಸ್ಯರಿಂದ ಸಂಪೂರ್ಣ ಮಾಹಿತಿ ಪಡೆದರು.
ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ‘ವಾನರ ಸೇನಾ’ ಮುಖ್ಯಸ್ಥೆ ಸ್ವಪ್ನಾ ಸಿಂಗ್, ತಂಡದ ಸಂಚಾಲಕ ಅಪೂರ್ವಸಿಂಗ್ ಹಾಗೂ ವ್ಯವಸ್ಥಾಪಕ ನಿರ್ದೇಶಕ ಮಲಯ ಸಿಂಗ್, ತಮಿಳನಾಡು, ಕರ್ನಾಟಕ, ಮಹಾರಾಷ್ಟ್ರ, ಮಧ್ಯಪ್ರದೇಶ, ಉತ್ತರ ಪ್ರದೇಶ ಸೇರಿದಂತೆ 5 ರಾಜ್ಯಗಳಲ್ಲಿ ಸಂಚರಿಸಿ ಪ್ರಭು ಶ್ರೀರಾಮನು ತಮ್ಮ ಕಾಲದಲ್ಲಿ ಸಂಚರಿಸಿ, ನೆಲೆಸಿದ ಸ್ಥಳಗಳಿಗೆ ಭೇಟಿ ನೀಡುತ್ತಿದ್ದೇವೆ. ದೇಶದ 250 ಕ್ಕೂ ಅಧಿಕ ಇನ್ಸ್ಟಾಗ್ರಾಮ್, ಯೂಟೂಬರ್, ಬ್ಲಾಗರ್ ಗಳನ್ನು ಜೊತೆಯಾಗಿಸಿಕೊಂಡು ಸಂಚಾರ ಮಾಡಲಾಗುತ್ತಿದೆ ಎಂದರು.
ನಮ್ಮ ಯಾತ್ರೆಯ ಉದ್ದೇಶ ಪ್ರಭು ಶ್ರೀರಾಮನ ಮಹತ್ವವನ್ನು, ಸನಾತನ ಧರ್ಮದ ಮಹತ್ವವನ್ನು ನಮ್ಮ ಯುವಕರಿಗೆ ತಿಳಿಸುವುದಾಗಿದೆ ಎಂದರು. ಜ. 14 ರಂದು ಯಾತ್ರೆ ಆರಂಭಗೊಂಡಿದ್ದು, ಫೆ.14 ರಂದು ಅಯೋಧ್ಯೆ ತಲುಪಲಿದೆ ಎಂದು ತಿಳಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಸುಭಾಸ ಪಾಟೀಲ ಮಾತನಾಡಿ, ಪ್ರಭು ಶ್ರೀರಾಮನು ಭೇಟಿ ನೀಡಿದ ಶಬರಿಕೊಳ್ಳದ ಅಭಿವೃದ್ಧಿ ನಿಟ್ಟಿನಲ್ಲಿ ಈಗಾಗಲೇ ಚರ್ಚಿಸಲಾಗಿದ್ದು, ಕೇಂದ್ರದ ಪ್ರವಾಸೋದ್ಯಮ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು ಎಂದರು.
ಬಿಜೆಪಿ ಮುಖಂಡರಾದ ಡಾ| ಕೆ.ವಿ. ಪಾಟೀಲ, ಪಿ.ಎಫ್. ಪಾಟೀಲ, ಬಿಜೆಪಿ ಮಂಡಲ ಅಧ್ಯಕ್ಷ ರಾಜೇಶ ಬೀಳಗಿ, ರವಿ ಸೂರ್ಯ, ವಿಜಯ ಗುಡದಾರಿ, ನಿಂಗಪ್ಪ ಮೆಳ್ಳಿಕೇರಿ, ಐ.ಎಸ್. ಹರನಟ್ಟಿ, ಬಿ.ಎಸ್. ಬೆಳವಣಕಿ, ಈರನಗೌಡ ಹೊಸಗೌಡ್ರ, ರಸೂಲ ಖಾಜಿ, ಶ್ರೀಶೈಲ ಮೆಳ್ಳಿಕೇರಿ, ಸುನೀತಾ ತಿಮ್ಮನಗೌಡ್ರ, ಬಾಬುರಡ್ಡಿ ಹೆಬ್ಬಳ್ಳಿ, ಅಶೋಕ ಗಾಣಗೇರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ
Setback BJP: ಜನರಿಂದ ವಿಜಯೇಂದ್ರ ನಾಯಕತ್ವ ತಿರಸ್ಕಾರ, ರಾಜೀನಾಮೆ ನೀಡಲಿ: ಶಾಸಕ ಯತ್ನಾಳ್
ಮಹಾರಾಷ್ಟ್ರ ಸೋಲಿನ ಬೆನ್ನಲ್ಲೇ ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಸತೀಶ್ ಜಾರಕಿಹೊಳಿ
ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
Belagavi: ಗ್ಯಾರಂಟಿ ವಿರೋಧಿಸಿದ ವಿಪಕ್ಷಗಳಿಗೆ ಸ್ಪಷ್ಟ ಉತ್ತರ ನೀಡಿದ ಮತದಾರ: ಹೆಬ್ಬಾಳ್ಕರ್
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ ಒಂದು ವರ್ಷದ ಮರಿ ಚಿರತೆ ರಕ್ಷಣೆ
Maharashtra polls; ದೇಶ ಒಡೆಯುವ ಮಾತನಾಡುವವರಿಗೆ ತಕ್ಕ ಪಾಠ: ಕಂಗನಾ
IPL 2025 Auction: ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..
IPL Auction: ಡೆಲ್ಲಿ ಕ್ಯಾಪಿಟಲ್ಸ್ ಪಾಲಾದ ಕೆಎಲ್ ರಾಹುಲ್; ಖರೀದಿ ಆರಂಭಿಸಿದ ಆರ್ ಸಿಬಿ
Ex-CJI ಚಂದ್ರಚೂಡ್ ರಾಜಕಾರಣಿಗಳಿಗೆ ಕಾನೂನಿನ ಭಯ ತೆಗೆದುಹಾಕಿದ್ದಾರೆ : ರಾವತ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.