ಅಜ್ಞಾನ,ದೌರ್ಜನ್ಯದಿಂದ ಪಾರು ಮಾಡಿ, ಕಷ್ಟಕ್ಕೆ ಅನುಕೂಲವಾಗುವುದೇ ಶಿಕ್ಷಣ
Team Udayavani, Oct 2, 2021, 7:05 PM IST
ಬೈಲಹೊಂಗಲ: ಜನರನ್ನು ಅಜ್ಞಾನದಿಂದ, ದೌರ್ಜನ್ಯದಿಂದ ಪಾರು ಮಾಡಿ, ಕಷ್ಟ ಕಾಲಕ್ಕೆ ಅನುಕೂಲ ಕಲಿಸುವದೇ ಶಿಕ್ಷಣವಾಗಿದೆ ಎಂದು ಹಿರಿಯ ಐಪಿಎಸ್ ಅಧಿಕಾರಿ ರವಿ ಚನ್ನಣ್ಣವರ್ ಹೇಳಿದರು.
ಚಚಡಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಮಾದರಿ ಶಾಲೆಯಲ್ಲಿ ಶನಿವಾರ ನಡೆದ ಉಚಿತ ಸ್ಪರ್ಧಾತ್ಮಕ ಪುಸ್ತಕ ವಿತರಣೆ, ಪ್ರತಿಭಾ ಪುರಸ್ಕಾರ, ಗಣ್ಯರ ಸತ್ಕಾರ ಸಮಾರಂಭದಲ್ಲಿ ಮಾತನಾಡಿ, ನಾವು ಸರಕಾರಿ ಹುದ್ದೆ ಸೇರಿದ ಮೇಲೆ ಇತರರು ನಮ್ಮಂತೆ ಮುಂದೆ ಒಳ್ಳೆಯ ಅಧಿಕಾರಿಯಾಗಲು ಮಾರ್ಗದರ್ಶನ ಮಾಡುವುದು ಒಬ್ಬ ಒಳ್ಳೆಯ ವ್ಯಕ್ತಿಯ ಆದ್ಯ ಜವಾಬ್ದಾರಿಯಾಗಿದೆ.ನಮಗೆ ಸಿಗುವ ಸೌಲಭ್ಯಗಳು ಎಲ್ಲರಿಗೂ ಸಿಗಬೇಕೆಂಬ ಕನಸನ್ನು ಪ್ರತಿಯೊಬ್ಬ ಅಧಿಕಾರಿಯ ಕರ್ತವ್ಯವೆಂದು ತಿಳಿಯಬೇಕು. ಜನರನ್ನು ಕಚೇರಿಯಿಂದ ಕಚೇರಿಗೆ ಅಲೆಯುವದನ್ನು ತಪ್ಪಿಸಲು ಮನೆಬಾಗಿಲಿಗೆ ಹೋಗಿ ಅವರ ಕೆಲಸಗಳನ್ನು ಮಾಡಿಕೊಡಬೇಕೆಂದು ತಿಳಿಸಿದರು.
ನಾವಷ್ಟೇ ಓದುವಂತಾಗಬಾರದು. ನೂರಾರು ಜನರಿಗೆ ಬೆಳಕಾಗುವ ನಿಟ್ಟಿನಲ್ಲಿ ನಾವು ಪಡೆದ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವ ಕೆಲಸವನ್ನು ಪ್ರತಿಯೊಬ್ಬರು ಮಾಡಬೇಕು. ಬಡವರು ಅವಕಾಶ ಕೊರತೆಯಿಂದ ದೊಡ್ಡ ಹುದ್ದೆಗೆ ಹೋಗಲು ಸಾಧ್ಯವಾಗುವದಿಲ್ಲ. ಅಂತಹವರಿಗೆ ಸ್ಪರ್ಧಾತ್ಮಕ ಪರೀಕ್ಷೆಯನ್ನು ಎದುರಿಸುವ ಸಾಮರ್ಥ್ಯವನ್ನು ಒದಗಿಸುವ ಸ್ಪರ್ಧಾ ಪರೀಕ್ಷೆ ಪುಸ್ತಕಗಳನ್ನು ಸ್ಪರ್ಧಾಳುಗಳಿಗೆ ಹಂಚುವ ಮೂಲಕ ಸಮಾಜಿಕ ಕಾರ್ಯಕರ್ತ ನಾಗಪ್ಪ ಮೇಟಿಯವರು ಉತ್ತಮ ಕಾರ್ಯ ಮಾಡುತ್ತಿದ್ದಾರೆ ಎಂದರು.
ನನ್ನಂತಹ ಅಧಿಕಾರಿಗಳು ದೇಶದಲ್ಲಿ ನೂರಾರು ಜನರಿದ್ದಾರೆ. ಯಾರಿಗೆ ಸಮಸ್ಯೆ ಇದೆ ಅಂಥವರ ಪರವಾಗಿ ಕೆಲಸ ಮಾಡುತ್ತಿದ್ದೇನೆ. ಪ್ರತಿಯೊಬ್ಬರು ನ್ಯಾಯ ಕೊಡಿಸುವ ಕೆಲಸವನ್ನು ಮಾಡಬೇಕು. ಸಮಾಜಕ್ಕೆ ಉತ್ತಮ ಕೊಡುಗೆ ನೀಡುವ ನಿಟ್ಟಿನಲ್ಲಿ ಪ್ರಯತ್ನಿಸಬೇಕು. ಪ್ರಾಮಾಣಿಕತೆಗೆ ಇನ್ನೊಂದು ಹೆಸರು ಲಾಲ್ ಬಹಾದ್ದೂರ ಶಾಸ್ತ್ರೀಯಾಗಿದ್ದಾರೆ ಅವರ ಜನ್ಮದಿನದ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಉತ್ತಮ ಕಾರ್ಯವಾಗಿದೆ. ರಾಮಕೃಷ್ಣ ಪರಮಹಂಸರು, ಭಗತ್‌ಸಿಂಗ್, ಮಹಾತ್ಮಾಗಾಂಧೀಜಿಯವರ ಲಾಲ್ ಬಹದ್ದೂರ ಅವರ ಬದುಕಿನ ಬಗ್ಗೆ ಅಧ್ಯಯನ ಮಾಡಿ ಅವರ ಆದರ್ಶದಲ್ಲಿ ಬದುಕು ಸಾಗಿಸಬೇಕೆಂದರು. 120ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪುಸ್ತಕಗಳನ್ನು ವಿತರಿಸಲಾಯಿತು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು, ಕಾಯಕಯೋಗಿಗಳು, ಮಾಜಿ ಸೈನಿಕರನ್ನು, ಆಶಾ ಕಾರ್ಯಕರ್ತೆಯರು, ಸಾಧಕರನ್ನು ಸನ್ಮಾನಿಸಲಾಯಿತು.
ಸರದಾರ ವಿ.ಗು.ದೇಸಾಯಿ ಪೌಂಡೇಶನ ಅಧ್ಯಕ್ಷ ನಾಗರಾಜ ದೇಸಾಯಿ ಅಧ್ಯಕ್ಷತೆ ವಹಿಸಿದ್ದರು.ಕಾರ್ಯಕ್ರಮದಲ್ಲಿ ವಾಣಿಜ್ಯ ತೆರಿಗೆ ಅಧಿಕಾರಿ ಅಶೋಕ ಮಿರ್ಜಿ, ಕೆಎಎಸ್ ಅಧಿಕಾರಿ ಎಸ್.ವೈ .ಮಾರಿಹಾಳ, ಅಶೋಕ ಮಾಲಬನ್ನವರ, ಯುವ ನಾಯಕ ನಾಗಪ್ಪ ಮೇಟಿ, ಸದೆಪ್ಪ ವಾರಿ, ಗ್ರಾ.ಪಂ ಅಧ್ಯಕ್ಷೆ ಗಂಗವ್ವ ಸಿಂಗಾರಿ, ಎಸ್‌ಡಿಎಂಸಿ ಅಧ್ಯಕ್ಷ ಪ್ರಕಾಶ ಗಡ್ಡಿ, ರಾವಸಾಹೇಬ ದೇಸಾಯಿ, ಗಂಗಪ್ಪ ವನ್ನೂರ, ಮಲ್ಲಿಕಾರ್ಜುನ ಗಾಣಗಿ, ಮಹಾಂತಯ್ಯ ಹಿರೇಮಠ, ಶ್ರೀಶೈಲ ಖನಗಾಂವಿ, ಶಿವಲಿಂಗಪ್ಪ ಮೇಟಿ, ನಿವೃತ್ತ ಶಿಕ್ಷಕ ಎಸ್.ಎನ್.ಪಾಟೀಲ, ಬಸವರಾಜ ಸಾವಳಗಿ, ಸಿದ್ದನಗೌಡ ಪಾಟೀಲ, ಬಸನಗೌಡ ಪಾಟೀಲ, ಬಿ.ಎಸ್.ವಾರಿ, ಮಹಾಂತೇಶ ಕಡಬಿ, ಬಸಪ್ಪ ಮುನವಳ್ಳಿ, ನಿಂಗಪ್ಪ ಗಿರಜಮ್ಮನವರ, ಶಂಕರ ಇಟಿ, ಇನ್ನಿತರರು ಪಾಲ್ಗೊಂಡಿದ್ದರು. ಬಾಳೇಶ ಸಿದ್ದಬಸನ್ನವರ ಸ್ವಾಗತಿಸಿದರು. ಚನಗೌಡ ಪಾಟೀಲ ನಿರೂಪಿಸಿ, ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi; ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿದ್ದ ಹುಲಿ ಶೌರ್ಯ ಇನ್ನಿಲ್ಲ
Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ
Setback BJP: ಜನರಿಂದ ವಿಜಯೇಂದ್ರ ನಾಯಕತ್ವ ತಿರಸ್ಕಾರ, ರಾಜೀನಾಮೆ ನೀಡಲಿ: ಶಾಸಕ ಯತ್ನಾಳ್
ಮಹಾರಾಷ್ಟ್ರ ಸೋಲಿನ ಬೆನ್ನಲ್ಲೇ ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಸತೀಶ್ ಜಾರಕಿಹೊಳಿ
ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.