ನೂತನ ಕಾಯ್ದೆಯಿಂದ ದುಸ್ಥಿತಿ ತಲುಪಿದ ಎಪಿಎಂಸಿ


Team Udayavani, Feb 28, 2021, 4:04 PM IST

ನೂತನ ಕಾಯ್ದೆಯಿಂದ ದುಸ್ಥಿತಿ ತಲುಪಿದ ಎಪಿಎಂಸಿ

ರಾಯಬಾಗ: ರೈತರ ಮತ್ತು ವರ್ತಕರ ನಡುವಿನ ಸೇತುವೆಯಾಗಿದ್ದ ಎಪಿಎಂಸಿಗಳು ಇಂದು ಸರಕಾರ ಜಾರಿಗೆ ತರುತ್ತಿರುವ ಹೊಸ ಕಾಯ್ದೆಯಿಂದ ಮುಚ್ಚುವ ಪರಿಸ್ಥಿತಿ ನಿರ್ಮಾಣಗೊಂಡಿವೆ. ಮುಂದೊಂದು ದಿನ ಎಪಿಎಂಸಿಗಳು ದಾಖಲೆಗಳಲ್ಲಿ ಮಾತ್ರ ಕಾಣುವಂತೆ ಆಗಲು ಸರಕಾರವೇ ಕಾರಣವಾಗಿರುವುದು ಮಾತ್ರ ವಿಪರ್ಯಾಸ.

ತಾಲೂಕು ಕೇಂದ್ರದಲ್ಲಿ ಸ್ಥಾಪನೆಯಾಗಬೇಕಿದ್ದ ತಾಲೂಕಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಸ್ಥಳದ ಅಭಾವದಿಂದ ಕುಡಚಿಯಲ್ಲಿ 1961 ರಲ್ಲಿ 6 ಎಕರೆಯಲ್ಲಿ ಸ್ಥಾಪಿಸಲಾಗಿದೆ. ಅಂದಿನ ದಿನಗಳಲ್ಲಿ ಹತ್ತಿಯನ್ನು ಹೆಚ್ಚಾಗಿ ಬೆಳೆಯುತ್ತಿದ್ದರಿಂದ ವರ್ತಕರು ಹತ್ತಿ ಖರೀದಿಸಲುಕುಡಚಿ ಎಪಿಎಂಸಿಗೆ ಬರುತ್ತಿದ್ದರು. ಜತೆಗೆ ಶೇಂಗಾ,ಜೋಳ, ಗೋಧಿ, ಗೋವಿನ ಜೋಳ ಬೆಳೆಗಳನ್ನು ಮಾರಾಟ ಮಾಡಲು ರೈತರು ಎಪಿಎಂಸಿಗೆ ಬರುತ್ತಿದ್ದರಿಂದ ವ್ಯಾಪಾರ, ವಹಿವಾಟು ಚೆನ್ನಾಗಿ ನಡೆದು, ಎಪಿಎಂಸಿಗೆ ಆದಾಯ ಬರುತ್ತಿತ್ತು. ಆದರೆ 1979-80ರ ನಂತರ ಈ ಭಾಗದಲ್ಲಿ ರೈತರು ಹೆಚ್ಚು ಕಬ್ಬು ಬೆಳೆಯಲು ಪ್ರಾರಂಭಿಸಿದ್ದರಿಂದ ದಿನೇ ದಿನೇ ಎಪಿಎಂಸಿಗೆಬರುವ ಆದಾಯ ಕಡಿಮೆಯಾಗತೊಡಗಿತು. ಎಪಿಎಂಸಿಯವರ ಅನುಮತಿಯಿಲ್ಲದೇನೇರವಾಗಿ ವರ್ತಕರಿಗೆ ಮಾರಾಟ ಮಾಡಲುಅವಕಾಶ ಇಲ್ಲದ್ದರಿಂದ ಎಪಿಎಂಸಿಗೆ ಸೆಸ್‌ ಮೂಲಕ ಆದಾಯ ಬರುತ್ತಿತ್ತು. ಆದರೆ ಸರಕಾರದ ಹೊಸ ಕಾಯ್ದೆಯಿಂದ ಎಪಿಎಂಸಿಗೆ ಬರುವ ಆದಾಯ ಕಡಿಮೆಯಾಗುತ್ತಿದೆ ಎಂದು ಅ ಧಿಕಾರಿಗಳು ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ.

ಕರ್ನಾಟಕ ಕೃಷಿ ಉತ್ಪನ್ನಗಳ ಮಾರಾಟ ಕಾಯ್ದೆಗೆ ತಿದ್ದುಪಡಿ ತರುವುದಕ್ಕೂ ಮೊದಲು ಎಪಿಎಂಸಿಗೆಮಾರುಕಟ್ಟೆ ಪ್ರಾಂಗಣದೊಳಗೆ ಮತ್ತು ಹೊರಗೆನಡೆಯುವ ಕೃಷಿ ಉತ್ಪನ್ನಗಳ ಸಗಟು ವಹಿವಾಟಿಗೆ ಅವಕಾಶ ಮಾಡಿಕೊಟ್ಟು ಅದರಿಂದ ಸೆಸ್‌ಸಂಗ್ರಹಿಸಲು ಅವಕಾಶವಿತ್ತು. ಕಾಯ್ದೆ ತಿದ್ದುಪಡಿ ನಂತರ ಎಪಿಎಂಸಿಗೆ ಪ್ರಾಂಗಣದ ಹೊರಗೆ ನಡೆಯುವ ವಹಿವಾಟಿಗೆ ಸೆಸ್‌ ಸಂಗ್ರಹಿಸುವ ಮತ್ತು ಕೇಸ್‌ ಹಾಕುವ ಅವಕಾಶ ಇಲ್ಲ. ಇದು ಎಪಿಎಂಸಿ ಆದಾಯದಲ್ಲಿ ಇಳಿಕೆಯಾಗಲುಕಾರಣವಾಗಿದೆ ಎಂದು ಸಿಬ್ಬಂದಿ ಹೇಳುತ್ತಾರೆ. 2019-20 ನೇ ಸಾಲಿನಲ್ಲಿ ಸುಮಾರು 54 ಲಕ್ಷ 98 ಸಾವಿರ ರೂ. ದಷ್ಟು ಆದಾಯ ಎಪಿಎಂಸಿಗೆ ಬಂದಿತ್ತು. 2020ರ ಏಪ್ರಿಲ್‌ದಿಂದ ಜನವರಿ ಅಂತ್ಯದವರೆಗೆ ಕೇವಲ 5 ಲಕ್ಷ ರೂ. ದಷ್ಟು ಮಾತ್ರಆದಾಯ ಬಂದಿದೆ. ಕೊರೊನಾ, ಅತಿವೃಷ್ಟಿ ಮತ್ತು ಹೊಸ ಕಾಯ್ದೆಯಿಂದಾಗಿ ಎಪಿಎಂಸಿ ಆದಾಯ ಕಡಿಮೆ ಆಗಲು ಇನ್ನೊಂದು ಕಾರಣವಾಗಿದೆ. ಕುಡಚಿ ಎಪಿಎಂಸಿಯಲ್ಲಿ ಎರಡು ಚಿಕ್ಕ ಮಳಿಗೆಗಳಿದ್ದು, ಅವು ಖಾಲಿ ಇರುವುದರಿಂದ ಯಾವುದೇ ಆದಾಯವಿರುವುದಿಲ್ಲ. ಇನ್ನು ಮೂರು ಗೋದಾಮುಗಳಿದ್ದು, ಅವುಗಳನ್ನು ಆಹಾರ ಮತ್ತುಸರಬರಾಜು ಇಲಾಖೆಗೆ ನೀಡಿದ್ದರಿಂದ ಇವುಗಳಿಂದಬರುವ ಆದಾಯ ಮೇಲೆ ಎಪಿಎಂಸಿ ಖರ್ಚು ನಿಭಾಯಿಸುವಂತಾಗಿದೆ.

ಅವರಿಂದ ಸುಮಾರು 12 ಲಕ್ಷ ರೂ. ಬಾಕಿ ಬರಬೇಕಾಗಿದೆ ಎಂದು ಅಕೌಂಟೆಂಟ್‌ ಸಿಬ್ಬಂದಿ ಹೇಳುತ್ತಾರೆ. ಇದಲ್ಲದೇಎರಡು ಎಪಿಎಂಸಿ ಪ್ರಾಂಗಣ ನಿರ್ಮಿಸಿದ್ದು, ಇವುಗಳ ಬಳಕೆ ಮಾಡಿಕೊಳ್ಳಬೇಕಾಗಿದೆ. ಎಪಿಎಂಸಿ ಆವರಣದಲ್ಲಿರುವ ಎರಡು ಗೋದಾ ಮಗಳು ಶಿಥಿಲಾವಸ್ಥೆಯಲ್ಲಿವೆ. ಇನ್ನು ಕಚೇರಿ ಕೂಡ ಬೀಳುವ ಸ್ಥಿತಿಯಲ್ಲಿದ್ದು, ಅದರಲ್ಲಿಯೇಸಿಬ್ಬಂದಿ ಕಾರ್ಯನಿರ್ವಹಿಸುವಂತಾಗಿದೆ.

ಸಿಬ್ಬಂದಿ ಕೊರತೆ: ಕುಡಚಿ ಎಪಿಎಂಸಿ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸಲು ಸಿಬ್ಬಂದಿ ಕೊರತೆ ಇದ್ದು, ಎಪಿಎಂಸಿಯಲ್ಲಿ 8 ಜನ ಸಿಬ್ಬಂದಿಯಲ್ಲಿ ಕೇವಲ ಕಾರ್ಯದರ್ಶಿ ಮತ್ತು ಅಕೌಂಟೆಂಟ್‌ಇಬ್ಬರು ಮಾತ್ರ ಕಾಯಂ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇನ್ನುಳಿದ ಇಬ್ಬರು ಡೆಪ್ಟೆàಷನ್‌ ಮೇಲೆ ಕಾರ್ಯನಿರ್ವಹಿಸುತ್ತಿದ್ದರೆ, ಇನ್ನುಳಿದಕಂಪ್ಯೂಟರ್‌ ಮತ್ತು ಸೆಕ್ಯೂರಿಟಿ ಸಿಬ್ಬಂದಿ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದಾರೆ.

ಎಪಿಎಂಸಿ ತಿದ್ದುಪಡಿ ಕಾಯ್ದೆಯಿಂದ ಎಪಿಎಂಸಿಗೆ ಬರುವ ಆದಾಯ ಕುಂಠಿತಗೊಳ್ಳಲಿದೆ. ಮುಂದೊಂದುದಿನ ಎಪಿಎಂಸಿಗಳ ಬಾಗಿಲು ಮುಚ್ಚಿದರೆ ಅಚ್ಚರಿಯೇನಿಲ್ಲ. -ಮಲ್ಲಪ್ಪ ಮೇತ್ರಿ, ಮಾಜಿ ಅಧ್ಯಕ್ಷರು, ಎಪಿಎಂಸಿ ಕುಡಚಿ

ಎಪಿಎಂಸಿ ತಿದ್ದುಪಡಿ ಕಾಯ್ದೆಯಿಂದ ರೈತರ ಹಕ್ಕನ್ನು ಸರಕಾರ ಕಸಿದುಕೊಂಡಿದೆ. ವರ್ತಕರುಕೇಳಿದ ಬೆಲೆಗೆ ರೈತರು ಬೆಳೆದ ಬೆಳೆ ನೀಡುವಂತಾಗಿದೆ. ಸರಕಾರ ಘೋಷಣೆ ಮಾಡಿದ ಬೆಂಬಲ ಬೆಲೆ ನೀಡುವಂತೆ ಕೇಳಲು ಅಧಿಕಾರ ಇಲ್ಲದಂತಾಗಿದೆ. – ಮಲ್ಲಪ್ಪ ಅಂಗಡಿ, ರೈತ ಸಂಘ ತಾಲೂಕು ಅಧ್ಯಕ್ಷ, ರಾಯಬಾಗ

 

-ಸಂಭಾಜಿ ಚವ್ಹಾಣ

ಟಾಪ್ ನ್ಯೂಸ್

hdd

Government: ಮೀಸಲಾತಿ ಪರಾಮರ್ಶೆ ಮಾಜಿ ಪಿಎಂ ಸಲಹೆ ಚಿಂತನಾರ್ಹ

Kallabete

Udupi: ಕಳ್ಳಬೇಟೆ ನಿಗ್ರಹ ಸಿಬಂದಿಗೆ ಕತ್ತಿ ಕೋಲುಗಳೇ ಆಯುಧ!

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

Fake Gold: ಎಚ್ಚರ ವಹಿಸಲು ಡಿಸಿಸಿ ಬ್ಯಾಂಕ್‌ಗಳಿಗೆ ಸೂಚನೆ: ಸಚಿವ ಕೆ.ಎನ್‌. ರಾಜಣ್ಣ

Fake Gold: ಎಚ್ಚರ ವಹಿಸಲು ಡಿಸಿಸಿ ಬ್ಯಾಂಕ್‌ಗಳಿಗೆ ಸೂಚನೆ: ಸಚಿವ ಕೆ.ಎನ್‌. ರಾಜಣ್ಣ

ಮಂಗಳೂರಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆಗೆ ಮನವಿ

Karnataka Govt.,: ಮಂಗಳೂರಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆಗೆ ಮನವಿ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

hdd

Government: ಮೀಸಲಾತಿ ಪರಾಮರ್ಶೆ ಮಾಜಿ ಪಿಎಂ ಸಲಹೆ ಚಿಂತನಾರ್ಹ

Kallabete

Udupi: ಕಳ್ಳಬೇಟೆ ನಿಗ್ರಹ ಸಿಬಂದಿಗೆ ಕತ್ತಿ ಕೋಲುಗಳೇ ಆಯುಧ!

Fake-Gold

Mangaluru: ನಕಲಿ ಚಿನ್ನ ಅಡವಿಟ್ಟು ವಂಚನೆ; 7ನೇ ಸಲ ಬಂದಾಗ ಸಿಕ್ಕಿಬಿದ್ದ ಮಹಿಳೆ!

Suside-Boy

PaduBidri: ಬಸ್‌ ಢಿಕ್ಕಿ: ಪಾದಚಾರಿ ಸಾವು

Kallabatti

Bantwala: ಪಂಜಿಕಲ್ಲು: ಅಕ್ರಮ ಕಳ್ಳಬಟ್ಟಿ ಅಡ್ಡೆಗೆ ದಾಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.