ಕುಡಚಿ ಜನರ ಮೇಲೆ ಡ್ರೋಣ ಹದ್ದಿನ ಕಣ್ಣು
ರಾಯಬಾಗ ಪಟ್ಟಣದಲ್ಲಿ 19,900 ಜನರಿಗೆ ಥರ್ಮಾ ಮೀಟರ್ ಮೂಲಕ ಪರೀಕ್ಷೆ
Team Udayavani, Apr 13, 2020, 5:00 PM IST
ರಾಯಬಾಗ: ಕುಡಚಿ ಪಟ್ಟಣದಲ್ಲಿ ಸೀಲ್ ಡೌನ್ ಮಾಡಲಾಗಿದ್ದು, ಡ್ರೋಣ ಕ್ಯಾಮೆರಾ ಮೂಲಕ ಮನೆಯಿಂದ ಹೊರಗೆ ಬಂದವರ ಮೇಲೆ ನಿಗಾ ಇಡಲಾಗಿದೆ.
ರಾಯಬಾಗ: ಕುಡಚಿ ಪಟ್ಟಣದಲ್ಲಿ ರವಿವಾರ ಮತ್ತೆ 3 ಜನರಿಗೆ ಸೋಂಕು ದೃಢಪಟ್ಟಿದ್ದರಿಂದ ಪಟ್ಟಣದಲ್ಲಿ ಹೈ-ಅಲರ್ಟ್ ಘೋಷಿಸಲಾಗಿದೆ. ಮನೆಯಿಂದ ಹೊರಗೆ ಬರುವವರ ಮೇಲೆ ಡ್ರೋಣ ಕ್ಯಾಮೆರಾ ಮೂಲಕ ಹದ್ದಿನ ಕಣ್ಣು ಇಡಲಾಗಿದೆ ಎಂದು ತಹಶೀಲ್ದಾರ್ ಚಂದ್ರಕಾಂತ ಭಜಂತ್ರಿ ತಿಳಿಸಿದರು.
ಕುಡಚಿ ಪಟ್ಟಣದಲ್ಲಿ ರವಿವಾರದ ವರೆಗೆ ಒಟ್ಟು ಏಳು ಜನರಿಗೆ ಕೋವಿಡ್ ಸೋಂಕು ತಗುಲಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗಿದೆ. ಪೊಲೀಸ್ ಬಂದೋಬಸ್ತ್ ಇನ್ನಷ್ಟು ಕಠಿಣವಾಗಿ ಜಾರಿ ಮಾಡಲಾಗಿದ್ದು, ಪೊಲೀಸರ ಕಣ್ಣು ತಪ್ಪಿಸಿ ಹೊರಗಡೆ ತಿರುಗಾಡುವವರ ಮೇಲೆ ನಿಗಾ ಇಡಲು ಡ್ರೋಣ ಕ್ಯಾಮೆರಾ ಬಳಸಲಾಗುತ್ತಿದೆ. ಕ್ಯಾಮೆರಾದಲ್ಲಿ ಸೆರೆ ಸಿಕ್ಕವರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.
ಡಿವೈಎಸ್‌ಪಿ ಗಿರೀಶ ನೇತೃತ್ವದಲ್ಲಿ ಕುಡಚಿ ಪಟ್ಟಣಕ್ಕೆ ಸೇರುವ ಎಲ್ಲ ರಸ್ತೆಗಳನ್ನು ಮತ್ತು ಪಟ್ಟಣವನ್ನು ಸಂಪೂರ್ಣ ಬಂದ್ ಮಾಡಲಾಗಿದೆ. ಜನರು ಹೊರಗೆ ಬಾರದಂತೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಮೈಕ್ ಮೂಲಕ ಎಚ್ಚರಿಸಲಾಗುತ್ತಿದೆ. ಹಾಲು, ತರಕಾರಿಗಳನ್ನು ಮನೆ ಮನೆಗೆ ತಲುಪಿಸಲಾಗುತ್ತಿದೆ. ಶನಿವಾರದವರೆಗೆ ಪಟ್ಟಣದ 19,900 ಜನರನ್ನು ಥರ್ಮಾ ಮೀಟರ್ ಮೂಲಕ ಪರೀಕ್ಷೆ ಮಾಡಲಾಗಿದೆ ಎಂದು ಕುಡಚಿ ಪುರಸಭೆ ಮುಖ್ಯಾ ಧಿಕಾರಿ ಎಸ್.ಎ. ಮಹಾಜನ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!
ಬೆಳಗಾವಿ-ಐಫೋನ್‌ಗಾಗಿ ನಡೆಯಿತಾ ಯುವಕನ ಹತ್ಯೆ? ಪೊಲೀಸರಿಂದ ತೀವ್ರ ತನಿಖೆ
ಬೆಳಗಾವಿ: ಸಿಎಂ ಸಿದ್ದರಾಮಯ್ಯಗೆ ಬೆಳಗಾವಿ ಅಧಿವೇಶನವೇ ಕೊನೆ-ಬಿ.ವೈ ವಿಜಯೇಂದ್ರ
Belagavi: ಮರಕ್ಕೆ ಕ್ರೂಸರ್ ಢಿಕ್ಕಿ: ಸ್ಥಳದಲ್ಲೇ ಮೂವರ ಸಾವು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.