Basavanna ನಾಡಿನ ಆರಾಧ್ಯ ದೈವ ಎಂದು ಮರುಘೋಷಿಸಲು ಒತ್ತಾಯ
ಸಾಂಸ್ಕೃತಿಕ ನಾಯಕ ಎಂದು ಘೋಷಿಸಲಾಗಿತ್ತು.. ಕಾನೂನಾತ್ಮಕವಾಗಿ ಹೋರಾಟ ಮಾಡುತ್ತೇವೆ
Team Udayavani, Jan 31, 2024, 7:26 PM IST
ಬೆಳಗಾವಿ : ಜಗಜ್ಯೋತಿ ಬಸವಣ್ಣನನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ರಾಜ್ಯ ಸರ್ಕಾರ ಘೋಷಿಸಿದೆ. ಅದನ್ನು ಮಾರ್ಪಡಿಸಿ ನಾಡಿನ ಆರಾಧ್ಯ ದೈವ ಬಸವಣ್ಣ ಎಂದು ಮರುಘೋಷಿಸಬೇಕು.
ಬೆಳಗಾವಿಯಲ್ಲಿ ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಪತ್ರಿಕಾಗೋಷ್ಠಿ ಯಲ್ಲಿ ಒತ್ತಾಯಿಸಿದ್ದು, ಹೈಕೋರ್ಟ್‌ನಲ್ಲಿ 2023ರಲ್ಲಿ ಪ್ರಕರಣವೊಂದರ ವಿಚಾರಣೆ ನಡೆಸಿದ ಪೀಠವು ತನ್ನ ತೀರ್ಪಿನಲ್ಲಿ, ‘ಬುದ್ಧ, ಬಸವ, ಅಂಬೇಡ್ಕರ್ ಅವರನ್ನು ದೈವ ಸ್ವರೂಪಿಗಳು ಎಂದು ಪರಿಗಣಿಸಲಾಗಿದೆ. ಸಂವಿಧಾನವು ‘ದೇವರು’ ಎಂಬ ಪದವನ್ನು ಸೂಚಿಸಲು ಬಳಸಿದ ಅರ್ಥವೂ ಇದೇ ಆಗಿದೆ ಎಂದು ಅಭಿಪ್ರಾಯಪಟ್ಟಿತ್ತು. ಹಾಗಾಗಿ ಬಸವಣ್ಣನನ್ನು ‘ನಾಡಿನ ಆರಾಧ್ಯ ದೈವ ಬಸವಣ್ಣ’ ಎಂದು ಮರುಘೋಷಿಸುವಂತೆ ಮನವಿ.
ಈ ನಿಟ್ಟಿನಲ್ಲಿ ರಾಜ್ಯಪಾಲರು, ಮುಖ್ಯಮಂತ್ರಿ, ಕಾನೂನು ಸಚಿವರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರು ಆಲೋಚನೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ನಮ್ಮ ಬೇಡಿಕೆ ಈಡೇರದಿದ್ದರೆ ಕಾನೂನಾತ್ಮಕವಾಗಿ ಹೋರಾಟ ಮಾಡುತ್ತೇವೆ ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.