
ಮನೆ ಹಂಚಿಕೆಗೆ ನಿರಾಶ್ರಿತರ ಮನವಿ
Team Udayavani, May 14, 2019, 1:08 PM IST

ಬೆಳಗಾವಿ: ಇಲ್ಲಿಯ ಶ್ರೀನಗರ ಬಳಿ ರಾಜು ಆವಾಸ್ ಯೋಜನೆಯಡಿ ನಿರ್ಮಿಸಿದ 272 ಬಹುಮಹಡಿ ಕಟ್ಟಡಗಳನ್ನು ವಂಟಮೂರಿ ಜೋಪಡಪಟ್ಟಿ ನಿರಾಶ್ರಿತರಿಗೆ ಹಂಚಿಕೆ ಮಾಡುವಂತೆ ಆಗ್ರಹಿಸಿ ನಿವಾಸಿಗಳು ಸೋಮವಾರ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ವಂಟಮೂರಿ ಕಾಲೋನಿ ಜೋಪಡಪಟ್ಟಿಯಲ್ಲಿ ಸುಮಾರು 20-25 ವರ್ಷಗಳಿಂದ ನಿರಾಶ್ರಿತರಾಗಿ ವಾಸವಾಗಿದ್ದು, ಈವರೆಗೆ ಯಾವುದೇ ಆಶ್ರಯವಿಲ್ಲದೇ ಜೀವನ ಸಾಗಿಸುತ್ತಿದ್ದೇವೆ. ರಾಜು ಆವಾಸ್ ಯೋಜನೆಯಡಿ ಜಿ ಪ್ಲಸ್ 3 ಯೋಜನೆಯಡಿ ಅರ್ಜಿ ತುಂಬಿ ಎಲ್ಲ ದಾಖಲಾತಿಗಳನ್ನು ಲಗತ್ತಿಸಿ ಕೊಡಲಾಗಿದೆ. ಆಗಿನ ಜಿಲ್ಲಾಧಿಕಾರಿ ಎನ್. ಜಯರಾಮ್ ಅವರು ಶ್ರೀನಗರ ಗಾರ್ಡನ್ ಬಳಿಯ ಆಶ್ರಯ ಮನೆ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ಈಗ ಅಧಿಕಾರಿಗಳು ಸರಿಯಾಗಿ ಮಾಹಿತಿ ನೀಡುತ್ತಿಲ್ಲ ಎಂದು ದೂರಿದರು.
ಆಶ್ರಯ ಮನೆಗಳಿಗೆ ಹಣ ತುಂಬಲು ಸಿದ್ಧರಿದ್ದರೂ ನಮಗೆ ಚಲನ್ ನೀಡದೇ, ನಮ್ಮ ಅಹವಾಲು ಸ್ವೀಕರಿಸದೇ, ಅರ್ಹ ಫಲಾನುಭವಿಗಳನ್ನು ಬದಿಗಿಟ್ಟು ತರಾತುರಿಯಲ್ಲಿ ಬೇರೆಯವರಿಂದ ಅರ್ಜಿ ತುಂಬಿಸಿಕೊಂಡಿದ್ದಾರೆ. ಮಹಾನಗರ ಪಾಲಿಕೆಯವರು ಸರಿಯಾದ ಮಾಹಿತಿ ನೀಡುತ್ತಿಲ್ಲ. ಜನಪ್ರತಿನಿಧಿಗಳನ್ನು ಕೇಳಿದರೆ ಚುನಾವಣಾ ನೀತಿ ಸಂಹಿತಿ ಎಂದು ಹೇಳುತ್ತಿದ್ದಾರೆ. ಈಗ ನೋಡಿದರೆ ಲಾಟರಿ ಮೂಲಕ ಆಯ್ಕೆ ಪ್ರಕ್ರಿಯೆ ನಡೆಸುವುದಾಗಿ ಅಧಿಕಾರಿಗಳು ಹೇಳುತ್ತಿದ್ದಾರೆ ಎಂದು ಅಳಲು ತೋಡಿಕೊಂಡರು.
ನಮ್ಮ ಕಾಲೋನಿಗೆ ಜಿಲ್ಲಾಧಿಕಾರಿಗಳು ಇತರೆ ಅಧಿಕಾರಿಗಳೊಂದಿಗೆ ಬಂದು ಭೇಟಿ ನೀಡಬೇಕು. ಆಶ್ರಯ ಮನೆಗಳಿಗಾಗಿ ಜನಪ್ರತಿನಿಧಿಗಳು ಹಾಗೂ ಮಹಾನಗರ ಪಾಲಿಕೆ ಸದಸ್ಯರ ಕಡೆಗೆ ತಿರುಗಾಡಿ ಸಾಕಾಗಿ ಹೋಗಿದೆ. ನಮ್ಮ ಜೀವನ ಸ್ಥಿತಿಗತಿ ನೋಡಿ ಮುಂದಿನ ಕ್ರಮ ಕೈಗೊಳ್ಳಬೇಕು. ಝೋಪಡಪಟ್ಟಿ ನಿವಾಸಿಗಳಿಗೆ ಆಶ್ರಯ ಒದಗಿಸಿ ನ್ಯಾಯ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿದರು.
ನಿವಾಸಿಗಳಾದ ಮಾರುತಿ ಗೊಡಚಿ, ಬಸಪ್ಪ ಕರಡಿಗುಡ್ಡ, ಶಿವಪ್ಪ ಬೆಡಸೂರ, ರಮೇಶ ಮಾದರ, ಕರಿಯಪ್ಪ ಮಾದರ, ರಮೇಶ ಪ್ಯಾಟಿ, ಬೀರಪ್ಪ ಚೌಡಕಿ ಸೇರಿದಂತೆ ಇತರರು ಇದ್ದರು.
ಟಾಪ್ ನ್ಯೂಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

Winter Session: ಬಾಣಂತಿ ಸಾವು: ನ್ಯಾಯಾಂಗ ತನಿಖೆಗೆ ಬಿಜೆಪಿ ಪಟ್ಟು

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ
MUST WATCH

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.