ಗರ್ಭಪಾತ ಬೇಕೋ, ಬೇಡವೋ ಐರ್ಲೆಂಡ್‌ನಲ್ಲಿಂದು ಜನಮತ ಸಂಗ್ರಹ
Team Udayavani, May 25, 2018, 7:15 AM IST
ಬೆಳಗಾವಿ: ಬೆಳಗಾವಿ ಮೂಲದ ಡಾ.ಸವಿತಾ ಹಾಲಪ್ಪನವರ ಅವರು ಐರ್ಲೆಂಡ್‌ನಲ್ಲಿ ಗರ್ಭಪಾತಕ್ಕೆ ಬಲಿಯಾಗಿ ಆರು ವರ್ಷಗಳು ಕಳೆದಿದ್ದು, ಮೇ 25ರಂದು ಐರ್ಲೆಂಡ್ ಸರಕಾರ ಗರ್ಭಪಾತ ಬೇಕೋ, ಬೇಡವೋ ಎಂಬ ಬಗ್ಗೆ ಜನಾದೇಶ ಪಡೆಯಲಿದೆ.
ಡಾ.ಸವಿತಾ ಹಾಲಪ್ಪನವರ ಸಾವಿನ ಪ್ರಕರಣ ಇಡೀ ವಿಶ್ವದಲ್ಲಿ ತೀವ್ರ ಚರ್ಚೆಗೆ ಎಡೆಮಾಡಿಕೊಟ್ಟಿತ್ತು.ಇದು ಐರ್ಲೆಂಡ್ ದೇಶದ ಕಾನೂನು ವಿರುದ್ಧ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಆ ದೇಶದ ಮಾನವೀಯತೆ ಹಾಗೂ
ಸಂಪ್ರದಾಯದ ಬಗ್ಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು. ಮಗಳ ಸಾವಿನಿಂದ ತೀವ್ರ ಆಘಾತಕ್ಕೊಳಗಾಗಿದ್ದ ಕುಟುಂಬ ಸದಸ್ಯರು ಸಹ ಕಾನೂನು ಹೋರಾಟ ನಡೆಸಿದ್ದರು.
ಈ ಎಲ್ಲ ಟೀಕೆ, ಕಾನೂನು ಹೋರಾಟ ಹಾಗೂ ಪ್ರತಿಭಟನೆಗಳಿಗೆ ಸ್ಪಂದಿಸಿ, ಐರ್ಲೆಂಡ್ ಸರಕಾರ ಗರ್ಭಪಾತ ನಿಷೇಧ ಕಾನೂನಿಗೆ ತಿದ್ದುಪಡಿ ತರಲು ಜನಾದೇಶ ಪಡೆಯುಲು ಮುಂದಾಗಿದೆ. ಇದಕ್ಕೆ ಅನುಗುಣವಾಗಿ ಮೇ 25ರಂದು ಜನಮತ ಸಂಗ್ರಹ ನಡೆಯಲಿದೆ.
ಈ ಕುರಿತು “ಉದಯವಾಣಿ’ ಜತೆ ಮಾತ ನಾಡಿದ ಸವಿತಾ ಹಾಲಪ್ಪನವರ ತಂದೆ ಅಂದಾನಪ್ಪ ಯಾಳಗಿ, ಗರ್ಭಪಾತ ನಿಷೇಧ ಕಾನೂನಿಗೆ ತಿದ್ದುಪಡಿಯಾಗಬೇಕು. ಅಲ್ಲಿನ ಜನರು ಈಗಿನ ಕಾನೂನಿಗೆ ವಿರುದಟಛಿವಾಗಿ
ಮತ ಚಲಾಯಿಸಬೇಕು. ನನ್ನ ಮಗಳಿಗೆ ಆಗಿರುವ ಅನ್ಯಾಯ ಬೇರೆಯವರಿಗೆ ಆಗ ದಂತೆ ತಡೆಯಬೇಕು. ಶುಕ್ರವಾರ ನಡೆಯುವ ಜನಾದೇಶದಲ್ಲಿ ಕಾನೂನು ತಿದ್ದುಪಡಿ ಆಗಬೇಕು ಎಂದು ಐರ್ಲೆಂಡ್ ಜನರಿಗೆ ವಾಟ್ಸ್‌ಅಪ್ ಮೂಲಕ
ಮನವಿ ಮಾಡಿಕೊಂಡಿದ್ದೇವೆ.
ಕಾನೂನು ತಿದ್ದುಪಡಿಯಾದರೆ ಅದಕ್ಕೆ ತಮ್ಮ ಮಗಳ ಹೆಸರಿಡಬೇಕು ಎಂದು ಕೇಳಿದ್ದೇವೆ ಎಂದು ಹೇಳಿದರು.
ನನ್ನ ಪುತ್ರಿ ಸಾವಿಗೀಡಾದ ಮೊದಲ ದಿನದಿಂದಲೇ ನಾವು ಈಗಿನ ಐರ್ಲೆಂಡ್ ದೇಶದ ಕಾನೂನಿನ ವಿರುದಟಛಿ ಹೋರಾಟ ನಡೆಸಿದ್ದೇವೆ. ಈಗ ನಮ್ಮ ಹೋರಾಟ ಮಹತ್ವದ ಘಟ್ಟಕ್ಕೆ ಬಂದು ನಿಂತಿದೆ. ನಮ್ಮ ಹೋರಾಟ ಫಲಪ್ರದವಾಗಲಿದೆ ಎಂಬ ಆಶಯವಿದೆ ಎಂದು ಅಂದಾನಪ್ಪ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf: ಮುಸ್ಲಿಮರ ಗುರಿ ಮಾಡುವುದು ಬಿಟ್ಟರೆ ಬಿಜೆಪಿಗೆ ಬೇರೇನೂ ಇಲ್ಲ: ಸಚಿವ ದಿನೇಶ್
Gadaga: ಎಸ್ಪಿ ನೇಮಗೌಡ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ; ವ್ಯಕ್ತಿಗೆ 25 ಸಾವಿರ ರೂ. ವಂಚನೆ
Waqf Property: ಆಡು ಮುಟ್ಟದ ಸೊಪ್ಪಿಲ್ಲ, ವಕ್ಫ್ ಮುಟ್ಟದ ಸ್ವತ್ತಿಲ್ಲ: ತೇಜಸ್ವಿ ಸೂರ್ಯ
Waqf issue: ಬಿಜೆಪಿ ಅಧಿಕಾರದಲ್ಲಿದ್ದಾಗ ಕತ್ತೆ ಕಾಯಿತಿದ್ದರಾ?: ಪ್ರಿಯಾಂಕ್ ಖರ್ಗೆ
Bellary; ಲೂಟಿ ಮಾಡಿದ ರೆಡ್ಡಿಯನ್ನು ಯಾಕೆ ಪಕ್ಷಕ್ಕೆ ಸೇರಿಸಿದಿರಿ: ಮೋದಿಗೆ ಸಿಎಂ ಪ್ರಶ್ನೆ
MUST WATCH
ಹೊಸ ಸೇರ್ಪಡೆ
Waqf: ಮುಸ್ಲಿಮರ ಗುರಿ ಮಾಡುವುದು ಬಿಟ್ಟರೆ ಬಿಜೆಪಿಗೆ ಬೇರೇನೂ ಇಲ್ಲ: ಸಚಿವ ದಿನೇಶ್
Maharashtra: ಸ್ತ್ರೀಯರಿಗೆ ಮಾಸಿಕ 3000, ರೈತರ ಸಾಲ ಮನ್ನಾ: ಎಂವಿಎ
Jet Airways ಆಸ್ತಿ ಮಾರಾಟಕ್ಕೆ ಸುಪ್ರೀಂ ಕೋರ್ಟ್ ಅನುಮತಿ
Bengaluru; ಒಂದೇ ದಿನ ಚಿನ್ನದ ಬೆಲೆ 10 ಗ್ರಾಂಗೆ 1,790 ರೂ. ಇಳಿಕೆ
Delhi Pollution: ಕೃಷಿ ತ್ಯಾಜ್ಯ ಸುಟ್ಟರೆ ರೈತರಿಗೆ ಇನ್ನು ದುಪ್ಪಟ್ಟು ದಂಡ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.